ETV Bharat / science-and-technology

Google Play Store ಆ್ಯಪ್​ಗಳ ಸಂಖ್ಯೆಯಲ್ಲಿ ಗಮನಾರ್ಹ ಕುಸಿತ; ಬಿಗಿ ನಿಯಮಗಳೇ ಕಾರಣ!

author img

By

Published : Jul 17, 2023, 6:01 PM IST

Google Play Store sees huge drop in apps amid tough policies
Google Play Store sees huge drop in apps amid tough policies

ಗೂಗಲ್​ನ ಬಿಗಿಯಾದ ನಿಯಮಗಳ ಕಾರಣದಿಂದ ಗೂಗಲ್ ಪ್ಲೇ ಸ್ಟೋರ್​ನಲ್ಲಿರುವ ಆ್ಯಪ್​ಗಳ ಸಂಖ್ಯೆಯಲ್ಲಿ ಗಮನಾರ್ಹ ಇಳಿಕೆಯಾಗಿದೆ.

ನವದೆಹಲಿ: ಗೂಗಲ್ ಪ್ಲೇ ಸ್ಟೋರ್​ನಲ್ಲಿ ಲಭ್ಯವಿರುವ ಆ್ಯಪ್​​ಗಳ ಸಂಖ್ಯೆಯಲ್ಲಿ ಗಮನಾರ್ಹ ಪ್ರಮಾಣದ ಇಳಿಕೆಯಾಗಿದೆ. ಗೂಗಲ್‌ನ ಬಿಗಿಯಾದ ನಿಯಂತ್ರಣ ನೀತಿಗಳ ಕಾರಣದಿಂದ ಪ್ಲೇ ಸ್ಟೋರ್​ನಲ್ಲಿನ ಒಟ್ಟು ಆ್ಯಪ್​ಗಳ ಸಂಖ್ಯೆ ಇತ್ತೀಚಿನ ವರ್ಷಗಳಲ್ಲೇ ಅತ್ಯಂತ ಕನಿಷ್ಠ ಮಟ್ಟಕ್ಕೆ ತಲುಪಿದೆ. ತಂತ್ರಜ್ಞಾನ ವಿಶ್ಲೇಷಕ ಸಂಸ್ಥೆಯೊಂದರ ಅಧ್ಯಯನದ ಪ್ರಕಾರ, ಕಳೆದ ಮೂರು ವರ್ಷಗಳಲ್ಲಿ ಗೂಗಲ್ ಪ್ಲೇ ಅಪ್ಲಿಕೇಶನ್‌ಗಳ ಒಟ್ಟು ಸಂಖ್ಯೆಯಲ್ಲಿ 3,60,000 ರಷ್ಟು ಆ್ಯಪ್​ಗಳು ಕಡಿಮೆಯಾಗಿವೆ.

ಸದ್ಯ ಪ್ಲೇ ಸ್ಟೋರ್​ನಲ್ಲಿ ಕಡಿಮೆ ಗುಣಮಟ್ಟದ ಅಪ್ಲಿಕೇಶನ್‌ಗಳ ಸಂಖ್ಯೆ ಸಾಕಷ್ಟು ಕಡಿಮೆಯಾಗಿದೆ. ಆದಾಗ್ಯೂ ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಇರುವ ಇನ್ನೂ ಶೇಕಡಾ 37 ರಷ್ಟು ಆ್ಯಪ್​ಗಳು ಕಳಪೆ ಗುಣಮಟ್ಟದ್ದಾಗಿವೆ ಎಂದು ವರದಿ ತಿಳಿಸಿದೆ. ಮೂರು ವರ್ಷಗಳ ಹಿಂದೆ ಆ್ಯಂಡ್ರಾಯ್ಡ್​ ಬಳಕೆದಾರರಿಗೆ ಪ್ಲೇ ಸ್ಟೋರ್​ನಲ್ಲಿ 2.95 ಮಿಲಿಯನ್ ಆ್ಯಪ್​ಗಳು ಲಭ್ಯವಿದ್ದವು. 2021 ರ ಅಂತ್ಯದ ವೇಳೆಗೆ ಈ ಸಂಖ್ಯೆ 2.7 ಮಿಲಿಯನ್‌ಗೆ ಇಳಿಯಿತು ಮತ್ತು ಇನ್ನೂ ಕಡಿಮೆಯಾಗುತ್ತಲೇ ಇದೆ.

ಜನವರಿ 2022 ರಲ್ಲಿ ಲಭ್ಯವಿರುವ ಅಪ್ಲಿಕೇಶನ್‌ಗಳ ಸಂಖ್ಯೆ 2.64 ಮಿಲಿಯನ್ ಆಗಿತ್ತು. ಅಂದರೆ ಎರಡು ವರ್ಷಗಳಲ್ಲಿ 2,60,000 ರಷ್ಟು ಭಾರಿ ಸಂಖ್ಯೆಯ ಆ್ಯಪ್​ಗಳು ಸ್ಟೋರ್​ನಿಂದ ಹೊರಗೆ ಹೋಗಿರುವುದನ್ನು ಸೂಚಿಸುತ್ತದೆ. ಅಂಕಿ - ಅಂಶಗಳ ಪ್ರಕಾರ ಗೂಗಲ್ ಪ್ಲೇ ಅಪ್ಲಿಕೇಶನ್‌ಗಳ ಒಟ್ಟು ಸಂಖ್ಯೆಯು 2022 ರ ಮಧ್ಯದ ವೇಳೆಗೆ 2.65 ಮಿಲಿಯನ್‌ಗಿಂತ ಸ್ವಲ್ಪ ಹೆಚ್ಚಾಗಿತ್ತು. ಆದರೆ, ಕಳೆದ ವರ್ಷದಲ್ಲಿ 60,000 ದಷ್ಟು ಕಡಿಮೆಯಾಗಿದೆ.

ಅದರಲ್ಲಿ ಶೇಕಡಾ 63 ರಷ್ಟು ನಿಯಮಿತ ಅಪ್ಲಿಕೇಶನ್‌ಗಳಿವೆ ಮತ್ತು ಕಡಿಮೆ ಗುಣಮಟ್ಟದ ಅಪ್ಲಿಕೇಶನ್‌ಗಳು ಉಳಿದ ಶೇಕಡಾ 37 ರಷ್ಟಿವೆ. ಕಡಿಮೆ ಗುಣಮಟ್ಟದ ಅಪ್ಲಿಕೇಶನ್‌ಗಳಿಂದ ಆ್ಯಂಡ್ರಾಯ್ಡ್​ ಬಳಕೆದಾರರನ್ನು ರಕ್ಷಿಸಲು ಮತ್ತು ಉತ್ತಮ ಗುಣಮಟ್ಟದ ಅಪ್ಲಿಕೇಶನ್‌ಗಳು ಸಿಗುವಂತಾಗಲು ಗೂಗಲ್ ಗಣನೀಯ ಪ್ರಯತ್ನ ಮಾಡುತ್ತಿದೆ.

ಆ್ಯಪ್ ಬ್ರೇನ್ ಡೇಟಾ ಪ್ರಕಾರ, ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಪಟ್ಟಿ ಮಾಡಲಾದ ಕಡಿಮೆ ಗುಣಮಟ್ಟದ ಅಪ್ಲಿಕೇಶನ್‌ಗಳ ಸಂಖ್ಯೆ ಕಳೆದ ವರ್ಷ ಜೂನ್‌ನಲ್ಲಿ ಸುಮಾರು 9,83,000 ಆಗಿತ್ತು. ಹೊಸ ಮೇಲ್ವಿಚಾರಣಾ ವ್ಯವಸ್ಥೆಯನ್ನು ಪ್ರಾರಂಭಿಸಿದ ಎಂಟು ತಿಂಗಳ ನಂತರ ಅವುಗಳ ಸಂಖ್ಯೆ ಸುಮಾರು 9,47,000 ಕ್ಕೆ ಇಳಿದಿದೆ.

ಲಭ್ಯವಿರುವ ಅಪ್ಲಿಕೇಶನ್‌ಗಳ ಸಂಖ್ಯೆಯಲ್ಲಿ ಭಾರಿ ಕುಸಿತದ ಜೊತೆಗೆ, ಗೂಗಲ್ ಆಂಡ್ರಾಯ್ಡ್ ಮಾರುಕಟ್ಟೆ ಪಾಲಿನಲ್ಲಿ ಏಳು ವರ್ಷಗಳಲ್ಲಿಯೇ ಅತ್ಯಂತ ಕನಿಷ್ಠ ಮಟ್ಟಕ್ಕಿಳಿದಿದೆ. ಮತ್ತೊಂದೆಡೆ ಆ್ಯಂಡ್ರಾಯ್ಡ್​ನ ಹತ್ತಿರದ ಪ್ರತಿಸ್ಪರ್ಧಿ, ಆ್ಯಪಲ್​ನ iOS ಕಳೆದ ಮೂರು ವರ್ಷಗಳಲ್ಲಿ ತನ್ನ ಮಾರುಕಟ್ಟೆ ಪಾಲನ್ನು ಶೇಕಡಾ 1 ರಷ್ಟು ಹೆಚ್ಚಿಸಿಕೊಂಡಿದೆ.

ಈ ಹಿಂದೆ ಗೂಗಲ್ ಮಾರ್ಕೆಟ್ ಎಂದು ಕರೆಯಲಾಗುತ್ತಿದ್ದ ಗೂಗಲ್ ಪ್ಲೇ ಇದು ಗೂಗಲ್​​ ಆ್ಯಪ್​ಗಳ ಅಧಿಕೃತ ಆನ್‌ಲೈನ್ ಸ್ಟೋರ್ ಆಗಿದೆ. ಆ್ಯಂಡ್ರಾಯ್ಡ್​ ಅಪ್ಲಿಕೇಶನ್‌ಗಳ ಜೊತೆಗೆ, ಗೂಗಲ್ ಪ್ಲೇ ಗೇಮ್ಸ್​, ಟಿವಿ ಕಾರ್ಯಕ್ರಮಗಳು, ಇ-ಪುಸ್ತಕಗಳು ಮತ್ತು ಆಡಿಯೊಬುಕ್‌ಗಳನ್ನು ಇದರಲ್ಲಿ ಪಡೆಯಬಹುದು.

ಇದನ್ನೂ ಓದಿ : ಮೆಟಾದ ಚಾಟ್​ಬಾಟ್​ CM3leon; ಪಠ್ಯ, ಚಿತ್ರ ವಿನ್ಯಾಸಕ್ಕೆ ಬಂದಿದೆ 'ಊಸರವಳ್ಳಿ'

ETV Bharat Logo

Copyright © 2024 Ushodaya Enterprises Pvt. Ltd., All Rights Reserved.