ETV Bharat / science-and-technology

ಮೆಟಾ ಸಂಸ್ಥಾಪಕನಿಗೆ ಲಿಗಮೆಂಟ್​ ಸಮಸ್ಯೆ; ಸರ್ಜರಿ ಮೊರೆ ಹೋದ ಜುಕರ್​ಬರ್ಗ್​​

author img

By ETV Bharat Karnataka Team

Published : Nov 4, 2023, 12:40 PM IST

Zuckerberg undergoes surgery: ಮುಂದಿನ ವರ್ಷ ನಡೆಯಲಿರುವ ಎಂಎಂಎ ಫೈಟ್​ ಸ್ಪರ್ಧೆಗೆ ತರಬೇತಿ ಪಡೆಯುತ್ತಿರುವ ವೇಳೆ ಜುಕರ್​ಬರ್ಗ್​​ ಗಾಯಗೊಂಡಿದ್ದಾರೆ.

Meta founder facing Ligament problem under goes surgery

ಸ್ಯಾನ್​ ಫ್ರಾನ್ಸಿಸ್ಕೋ: ಅನೇಕ ಮಂದಿ ಕಾಯುತ್ತಿದ್ದ ಮೆಟಾ ಸಂಸ್ಥಾಪಕ ಮಾರ್ಕ್​ ಜುಗರ್​ಬರ್ಗ್​ ಮತ್ತು ಎಕ್ಸ್​ ಮಾಲೀಕ ಎಲೋನ್​ ಮಸ್ಕ್​ ಅವರ ಕೇಜ್​ ಫೈಟ್​ ಸದ್ಯ ನಡೆಯುವುದಿಲ್ಲ. ಇದಕ್ಕೆ ಕಾರಣ ಮೆಟಾ ಸಂಸ್ಥಾಪಕ ತರಬೇತಿ ವೇಳೆ ಗಾಯಗೊಂಡಿದ್ದು, ಇದೀಗ ಸರ್ಜರಿಗೆ ಒಳಗಾಗುತ್ತಿದ್ದಾರೆ.

ಈ ಕುರಿತು ತಮ್ಮ ಇನ್ಸ್​ಟಾಗ್ರಾಂನಲ್ಲಿ ಮಾಹಿತಿ ಹಂಚಿಕೊಂಡಿರುವ ಮಾರ್ಕ್​ ಜುಗರ್​ಬರ್ಗ್​​, ತಮ್ಮ ಎಸಿಎಲ್​​ (ಅಂಟಿರಿಯರ್​ ಕ್ರೂಸಿಯೇಟ್​ ಲಿಗಮೆಂಟ್​​) ಹಾನಿಯಾಗಿದ್ದು, ಅದನ್ನು ಬದಲಾಯಿಸುವ ಅವಶ್ಯಕತೆ ಎದುರಾಗಿದೆ. ಈ ಹಿನ್ನೆಲೆ ಶಸ್ತ್ರ ಚಿಕಿತ್ಸೆ ಮೊರೆ ಹೋಗಿರುವುದಾಗಿ ಎಂದು ತಿಳಿಸಿದ್ದಾರೆ.

ಮಾರ್ಕ್​ ಅವರು ಮಿಶ್ರ ಮಾರ್ಷಲ್​ ಆರ್ಟ್ಸ್​​ (ಎಂಎಂಎ) ಪಂದ್ಯದ ಸ್ಪರ್ಧೆಗಾಗಿ ತಯಾರಿ ನಡೆಸುತ್ತಿರುವ ವೇಳೆ ಈ ಅನಾಹುತ ಸಂಭವಿಸಿದೆ.

ಈ ಕುರಿತು ಅವರು ತಮ್ಮ ಸಾಮಾಜಿಕ ಜಾಲತಾಣದಲ್ಲೂ ತಿಳಿಸಿದ್ದಾರೆ. ಮುಂದಿನ ವರ್ಷ ನಡೆಯಲಿರುವ ಎಂಎಂಎ ಫೈಟ್​ ಸ್ಪರ್ಧೆಗೆ ತರಬೇತಿ ಪಡೆಯುತ್ತಿದ್ದೆ. ಆದರೆ ಇದೀಗ ಅದು ವಿಳಂಬವಾಗಿದೆ. ಹುಷಾರಾದ ಬಳಿಕ ಮತ್ತೆ ತರಬೇತಿ ಆರಂಭಿಸುವ ನಿರೀಕ್ಷೆಯಲ್ಲಿದ್ದೇನೆ. ನನಗೆ ಪ್ರೀತಿ ಮತ್ತು ಬೆಂಬಲ ತೋರಿದ ಪ್ರತಿಯೊಬ್ಬರಿಗೂ ಧನ್ಯವಾದಗಳು ಎಂದು ಮೆಟಾ ಸಿಇಒ ತಿಳಿಸಿದ್ದಾರೆ.

ಅವರ ಈ ಪೋಸ್ಟ್​​ಗೆ ಬೆಂಬಲಿಗರು ಬೇಗ ಗುಣಮುಖರಾಗುವಂತೆ ಶುಭ ಹಾರೈಸಿದ್ದಾರೆ. ಈ ರೀತಿಯ ಗಂಭೀರ ಗಾಯಗಳಿಂದ ಗುಣಮುಖವಾಗಲು ವೃತ್ತಿಪರ ಅಥ್ಲೀಟ್​​ಗಳಿಗೆ ವರ್ಷಗಳ ಕಾಲ ಸಮಯ ಬೇಕಾಗುತ್ತದೆ.

ಸ್ಪರ್ಧೆಗಾಗಿ ನಿರಂತರ ತರಬೇತಿ ನಡೆಸಿರುವ ಜುಕರ್​ ಬರ್ಗ್​ ಕಳೆದ ತಿಂಗಳು ಕೂಡ ತಮ್ಮ ಉಬ್ಬಿದ ಮುಖ, ಕಣ್ಣು ಮತ್ತು ಮೂಗಿನ ಬಳಿ ಗಾಯಗೊಂಡಿರುವ ಸೆಲ್ಫಿಯನ್ನು ಇನ್ಸ್​ಟಾಗ್ರಾಂನಲ್ಲಿ ಹಂಚಿಕೊಂಡಿದ್ದರು. ಈ ಕುರಿತು ಬೆಂಬಲಿಗರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು ಯುದ್ಧ ಕ್ರೀಡೆಗಳಲ್ಲಿ ಸಾಮಾನ್ಯ ತರಬೇತಿ ವೇಳೆ ಈ ರೀತಿ ಆಗಿದೆ ಎಂದಿದ್ದರು. ಕೊಂಚ ಮೈಮರೆತ ಕ್ಷಣದಿಂದ ಆದ ಅವಾಂತರ. ಈ ಹಿನ್ನೆಲೆ ನನ್ನನ್ನು ಹೊಸ ಅವತಾರದಲ್ಲಿ ಕಾಣಬೇಕಿದೆ ಎಂದಿದ್ದರು.

ಜುಕರ್​​ಬರ್ಗ್​ ಎಂಎಂಎ ಮತ್ತು ಜಿಯು ಜಿಟ್ಸುನಂತಹ ಯುದ್ಧ ಕ್ರೀಡೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಎಕ್ಸ್​ ಮಾಲೀಕ ಮಸ್​​ ಕೇಜ್​ ಫೈಟ್​ ಸವಾಲಿನ ಬಳಿಕ ಇದರ ತರಬೇತಿಯನ್ನು ಹೆಚ್ಚಾಗಿ ಮಾಡುತ್ತಿದ್ದಾರೆ.

ಕಳೆದ ಜೂನ್​ನಲ್ಲಿ ಮೆಟಾ ಶೀಘ್ರದಲ್ಲೇ ಟ್ವಿಟರ್​​ಗೆ ಪ್ರತಿಸ್ಪರ್ಧಿ ನೀಡಲಿದೆ ಎಂಬ ವಿಷಯದಿಂದ ಟೆಕ್​ ದಿಗ್ಗಜರ ನಡುವೆ ಈ ಕೇಜ್​ ಫೈಟ್​ ಸುದ್ದಿ ಆರಂಭವಾಯಿತು. ಮಸ್ಕ್​​ ಜುಗರ್​ ಬರ್ಗ್​​ಗೆ ಕೇಜ್​ ಮ್ಯಾಚ್​ಗೆ ಆಹ್ವಾನಿಸಿದ್ದರು, ಇದಕ್ಕೆ ಸುಮ್ಮನಿರದ ಮೆಟಾ ಸಿಇಒ ಮಸ್ಕ್​ಗೆ ವಿಳಾಸವನ್ನು ಕಳುಹಿಸಿ ಎಂದು ಪೋಸ್ಟ್​ ಮಾಡಿದ್ದರು. ಅಲ್ಲದೇ ಆಗಸ್ಟ್​ನಲ್ಲಿ ಇಟಲಿಯಲ್ಲಿ ಈ ಕೇಜ್​ ಫೈಟ್​ ನೇರ ಪ್ರಸಾರ ಆಗಲಿದೆ ಎಂದು ಮಸ್ಕ್​ ತಿಳಿಸಿದ್ದರು.

ಪ್ರೊಫೆಸರ್ ಡೇವ್ ಕ್ಯಾಮರಿಲ್ಲೊ ಅವರಿಂದ ಜಿ ಜುಟ್ಸು ತರಬೇತಿ ಪಡೆಯುತ್ತಿರುವ ಜುಕರ್​ಬರ್ಗ್​ ಇತ್ತೀಚಿಗೆ ನೀಲಿ ಬೆಲ್ಟ್​ ಅನ್ನು ಪಡೆದಿದ್ದರು. (ಐಎಎನ್​ಎಸ್​)

ಇದನ್ನೂ ಓದಿ: ಕೃತಕ ಬುದ್ಧಿಮತ್ತೆ ಎಂಬ ವಿನಾಶಕಾರಿ ಶಕ್ತಿ ಎಲ್ಲಾ ಕೆಲಸಗಳನ್ನೂ ಕಸಿದುಕೊಳ್ಳಬಹುದು: ಎಲೋನ್ ಮಸ್ಕ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.