Kakinada GGH Doctors Brain Surgery to Patient: ಕ್ರಿಟಿಕಲ್ ಸರ್ಜರಿ ಎಂದರೆ ಎಲ್ಲರಿಗೂ ನೆನಪಾಗುವುದು ಖಾಸಗಿ ಆಸ್ಪತ್ರೆ. ಆದರೆ, ಸರ್ಕಾರಿ ಆಸ್ಪತ್ರೆಗಳಲ್ಲಿಯೂ ವೈದ್ಯರು ಅತ್ಯುತ್ತಮ ಕೆಲಸ ಮಾಡಿದ್ದಾರೆ. ಕಾಕಿನಾಡದ ಸರ್ಕಾರಿ ಆಸ್ಪತ್ರೆಯ ವೈದ್ಯಕೀಯ ತಂಡ ಇತ್ತೀಚಿನ ಶಸ್ತ್ರಚಿಕಿತ್ಸೆಯ ಮೂಲಕ ವಿಶೇಷ ಸಾಧನೆಯೊಂದನ್ನು ಮಾಡಿದ್ದಾರೆ. ಅಪರೂಪದ ಚಿಕಿತ್ಸೆ ಮಾಡಿ ವೈದ್ಯರು ಮೆಚ್ಚುಗೆಗೆ ಪಾತ್ರವಾಗಿದ್ದಾರೆ. ಮತ್ತೊಂದೆಡೆ, ಸಿನಿಮಾಗಳ ಎಫೆಕ್ಟ್ ಮಾಮೂಲಿಯಾಗಿಲ್ಲ ಎಂದು ನೆಟ್ಟಿಗರು ಅಚ್ಚರಿ ವ್ಯಕ್ತಪಡಿಸಿದ್ದಾರೆ.
ಆಂಧ್ರಪ್ರದೇಶ ರಾಜ್ಯ ಕಾಕಿನಾಡದ ಸರ್ಕಾರಿ ಆಸ್ಪತ್ರೆಯಲ್ಲಿ (ಜಿಜಿಎಚ್) ಮಂಗಳವಾರ (ಸೆ.17ರಂದು) ಮಧ್ಯಾಹ್ನ ಮಹಿಳಾ ರೋಗಿಯೊಬ್ಬರ ಕೈಯಲ್ಲಿ ಟ್ಯಾಬ್ ಇತ್ತು. ಆಕೆ ತನ್ನ ನೆಚ್ಚಿನ ಸಿನಿಮಾ 'ಅದುರ್ಸ್'ನಲ್ಲಿ ಜೂನಿಯರ್ ಎನ್ಟಿಆರ್ ಮತ್ತು ಬ್ರಹ್ಮಾನಂದ ಅವರ ನಡುವಿನ ಹಾಸ್ಯ ದೃಶ್ಯಗಳನ್ನು ನೋಡುತ್ತಿದ್ದಳು. ಈ ಚಿತ್ರ ವೀಕ್ಷಿಸುತ್ತಿರುವ ವೇಳೆಯಲ್ಲಿ ವೈದ್ಯಕೀಯ ತಂಡ ಆಕೆಯ ಮೆದುಳಿನಲ್ಲಿ ಉಂಟಾಗಿದ್ದ ಗಡ್ಡೆ ಹೊರಗೆ ತೆಗೆದು ಶಸ್ತ್ರಚಿಕಿತ್ಸೆ ಪೂರ್ಣಗೊಳಿಸಿದ್ದಾರೆ. ಈ ಮೂಲಕ ಯಶಸ್ವಿ ಚಿಕಿತ್ಸೆ ಮಾಡಿದ್ದಾರೆ. ಎಚ್ಚರವಾಗಿರುವಾಗಲೇ (ಅವೇಕ್ ಕ್ರಾನಿಯೊಟಮಿ) ಈ ಸಂಕೀರ್ಣ ಶಸ್ತ್ರಚಿಕಿತ್ಸೆಯನ್ನು ಪೂರ್ಣಗೊಳಿಸಿದ ಕೀರ್ತಿ ವೈದ್ಯರಿಗೆ ಸಲ್ಲುತ್ತದೆ.
ಕಾಕಿನಾಡದ ಸರ್ಕಾರಿ ಆಸ್ಪತ್ರೆಯ ಅಧೀಕ್ಷಕಿ ಡಾ.ಲಾವಣ್ಯಕುಮಾರಿ ಹಾಗೂ ನರಶಸ್ತ್ರಚಿಕಿತ್ಸಾ ವಿಭಾಗದ ತಜ್ಞರು ಮಾತನಾಡಿ, ತೊಂಡಂಗಿ ಮಂಡಲದ ಎ.ಕೊತ್ತಪಲ್ಲಿಯ ಎ.ಅನಂತಲಕ್ಷ್ಮಿ (55) ಕೆಲ ದಿನಗಳಿಂದ ತೀವ್ರ ಬಲಗಾಲು ಮತ್ತು ಬಲಗೈ ಸೆಳೆತದಿಂದ ಬಳಲುತ್ತಿದ್ದರು. ಆಕೆಯು ಅನೇಕ ಕಾರ್ಪೊರೇಟ್ ಆಸ್ಪತ್ರೆಗಳಲ್ಲಿ ತೋರಿಸಿದ್ದರು. ಆ ಆಸ್ಪತ್ರೆಗಳ ಚಿಕಿತ್ಸೆ ದುಬಾರಿ ಮತ್ತು ಗುಣಪಡಿಸಲು ಕಷ್ಟವಾಗುತ್ತದೆ ಖಾಸಗಿ ವೈದ್ಯರು ತಿಳಿಸಿದರು. ಅನಂತಲಕ್ಷ್ಮಿ ಅವರಿಗೆ ತಲೆನೋವು, ಮೂರ್ಛೆ, ದೇಹದ ಬಲಭಾಗದಲ್ಲಿ ಮರಗಟ್ಟುವಿಕೆ ಕಾಣಿಸಿಕೊಂಡಿದ್ದು, ಇದೇ 11ರಂದು ಕಾಕಿನಾಡದ ಜಿಜಿಎಚ್‌ಗೆ ದಾಖಲಾಗಿದ್ದರು ಎಂದು ಅವರು ತಿಳಿಸಿದ್ದಾರೆ.
ಸಿನಿಮಾ ನೋಡಿ ಆನಂದಿಸುತ್ತಿರುವಾಗಲೇ ವೈದ್ಯರಿಂದ ಶಸ್ತ್ರಚಿಕಿತ್ಸೆ: ಅನಂತಲಕ್ಷ್ಮಿ ಅವರನ್ನು ಪರೀಕ್ಷಿಸಿದ ವೈದ್ಯರು, ಆರಂಭದಲ್ಲಿ ಅವರ ಮೆದುಳಿನ ಎಡಭಾಗದಲ್ಲಿ 3.3ರಿಂದ 2.7 ಸೆಂ.ಮೀ. ಗಡ್ಡೆ ಇರುವುದು ಪತ್ತೆಯಾಯಿತು. ಮಂಗಳವಾರ ಶಸ್ತ್ರಚಿಕಿತ್ಸೆ ವೇಳೆ, ಆಕೆ ಕನಿಷ್ಠ ನಿದ್ರೆ ಮಾಡದಂತೆ ಎಚ್ಚರವಾಗಿ ಇರಬೇಕಾಗಿತ್ತು. ಈ ವೇಳೆ ಅನಂತಲಕ್ಷ್ಮಿ, ‘ಅದುರ್ಸ್’ ಸಿನಿಮಾ ನೋಡುತ್ತಾ ಆನಂದದಲ್ಲಿರುವಾಗಲೇ ಶಸ್ತ್ರ ಚಿಕಿತ್ಸೆ ಪೂರ್ಣಗೊಳಿಸಿದ್ದಾರೆ. ಈ ಸಮಯದಲ್ಲಿ ಅನಂತಲಕ್ಷ್ಮಿ ಯಾವುದೇ ನೋವನ್ನೂ ಹೇಳಿಕೊಂಡಿಲ್ಲ. ಅವಳು ಎದ್ದು ಕುಳಿತು ಟಿಫಿನ್ ತೆಗೆದುಕೊಂಡಿದ್ದಳು ಎಂದು ವೈದ್ಯರು ಹೇಳಿದರು.
ಜಿಜಿಎಚ್‌ನಲ್ಲಿ ಮೊದಲ ಬಾರಿಗೆ ಈ ರೀತಿಯ ಶಸ್ತ್ರಚಿಕಿತ್ಸೆ ಮಾಡಲಾಗಿದ್ದು, ಐದು ದಿನಗಳಲ್ಲಿ ಅವರನ್ನು ಡಿಸ್ಚಾರ್ಜ್ ಮಾಡಲಾಗುವುದು. ಸುಮಾರು ಎರಡೂವರೆ ಗಂಟೆಗಳ ಕಾಲ ಹಿರಿಯ ನರಶಸ್ತ್ರಚಿಕಿತ್ಸಾ ವೈದ್ಯರು ಮತ್ತು ಅರಿವಳಿಕೆ ತಜ್ಞರ ಮೇಲ್ವಿಚಾರಣೆಯಲ್ಲಿ ಈ ಚಿಕಿತ್ಸೆಯನ್ನು ನಡೆಸಲಾಯಿತು ಎಂದು ವೈದ್ಯರು ಮಾಹಿತಿ ನೀಡಿದರು.
ಶಸ್ತ್ರಚಿಕಿತ್ಸೆಯ ಸಮಯದಲ್ಲಿ ವೈದ್ಯರು ಕೇಳುವ ಪ್ರಶ್ನೆಗಳಿಗೆ ರೋಗಿಗಳು ಸಾಮಾನ್ಯವಾಗಿ ಉತ್ತರಿಸುತ್ತಾರೆ. ಅವರ ಸಮಸ್ಯೆಗಳನ್ನು ಅರಿತು ಚಿಕಿತ್ಸಾ ಕಾರ್ಯವನ್ನು ಮುನ್ನಡಸಬೇಕಾಗುತ್ತದೆ ಎಂದು ಜಿಜಿಎಚ್ ಅರಿವಳಿಕೆ ವಿಭಾಗದ ಎಚ್ ವಿಒಡಿ ಡಾ.ಎ.ವಿಷ್ಣುವರ್ಧನ್, ನ್ಯೂರೋಸರ್ಜರಿ ವಿಭಾಗದ ಮುಖ್ಯಸ್ಥ ಡಾ.ವಿಜಯಶೇಖರ್ ತಿಳಿಸಿದರು.
ವೈದ್ಯಕೀಯ ತಂಡದಲ್ಲಿ ಸಹ ಪ್ರಾಧ್ಯಾಪಕ ಡಾ.ಡಿ.ಕೆ. ಗಿರಿರಾವ್, ಸಹಾಯಕ ಪ್ರಾಧ್ಯಾಪಕ ಡಾ.ಕಾರ್ತಿಕ್, ಡಾ.ಟಿ. ಗೌತಮ್, ಡಾ.ಗೋಪಿ, ಪಿಜಿ ವೈದ್ಯರಾದ ಡಾ.ಅರವಿಂದ್, ಡಾ.ಸಾಯಿತೇಜ, ಡಾ.ಸಾಯಿರಾಮ್, ಡಾ.ಶ್ರಾವಣಿ, ಡಾ.ಆನಂದ್. ಡಾ.ಅಬು ಮತ್ತಿತರರು ಸಹಕರಿಸಿದ್ದಾರೆ.