ETV Bharat / science-and-technology

ಕೃತಕ ಬುದ್ಧಿಮತ್ತೆ ಎಂಬ ವಿನಾಶಕಾರಿ ಶಕ್ತಿ ಎಲ್ಲಾ ಕೆಲಸಗಳನ್ನೂ ಕಸಿದುಕೊಳ್ಳಬಹುದು: ಎಲೋನ್ ಮಸ್ಕ್

author img

By ETV Bharat Karnataka Team

Published : Nov 3, 2023, 2:21 PM IST

Updated : Nov 3, 2023, 2:27 PM IST

Musk
ಸುನಕ್ ಜೊತೆ ಮಸ್ಕ್ ಚರ್ಚೆ

ಎಐ ಸುರಕ್ಷತಾ ಶೃಂಗಸಭೆಯಲ್ಲಿ ಬ್ರಿಟಿಷ್ ಪ್ರಧಾನಿ ರಿಷಿ ಸುನಕ್ ಮತ್ತು ಟೆಸ್ಲಾ ಸಿಇಒ ನಡುವೆ ಸಂಭಾಷಣೆ ನಡೆಯಿತು.

ಲಂಡನ್: ಕೃತಕ ಬುದ್ಧಿಮತ್ತೆಗೆ (ಎಐ) ಸಂಬಂಧಿಸಿದ ಅಪಾಯಗಳ ಕುರಿತು ಬ್ರಿಟನ್‌ನಲ್ಲಿ ಎಐ ಸುರಕ್ಷತಾ ಶೃಂಗಸಭೆ ಆಯೋಜಿಸಲಾಗಿತ್ತು. 27 ದೇಶಗಳ ಪ್ರತಿನಿಧಿಗಳು ಇದರಲ್ಲಿ ಭಾಗವಹಿಸಿದ್ದರು. ಈ ವೇಳೆ ಬ್ರಿಟನ್‌ನ ಪ್ರಧಾನಿ ರಿಷಿ ಸುನಕ್ ಅವರು ಎಲೋನ್ ಮಸ್ಕ್ ಅವರೊಂದಿಗೆ ಎಐ ಅಪಾಯಗಳ ಬಗ್ಗೆ ಚರ್ಚಿಸಿದರು.

ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಮಾಧ್ಯಮಗಳಲ್ಲಿ ಕೃತಕ ಬುದ್ಧಿಮತ್ತೆಯನ್ನು ಇತಿಹಾಸದಲ್ಲಿ ಅತ್ಯಂತ ವಿಚ್ಛಿದ್ರಕಾರಕ ಶಕ್ತಿಗಳಲ್ಲಿ ಒಂದೆಂದು ವಿವರಿಸಲಾಗಿದೆ. ಎಐ ಒಳ್ಳೆಯದಕ್ಕೆ ಒಂದು ಶಕ್ತಿಯಾಗಿರಬಹುದು ಆದರೆ ಅದರಿಂದ ಕೆಟ್ಟದಾಗುವ ಸಾಧ್ಯತೆ ಕೂಡ ಇದೆ ಎಂದು ಎಲೋನ್ ಮಸ್ಕ್ ಅಭಿಪ್ರಾಯ ವ್ಯಕ್ತಪಡಿಸಿದರು.

ಈ ಚರ್ಚೆಯಲ್ಲಿ ಎಲೋನ್ ಮಸ್ಕ್ ಒಂದು ಕುತೂಹಲಕಾರಿ ವಿಷಯವನ್ನು ಹೇಳಿದರು. ಭವಿಷ್ಯದಲ್ಲಿ ಹುಮನಾಯ್ಡ್ ರೋಬೋಟ್‌ಗಳು ಅಂದರೆ ಮಾನವ ಕೆಲಸ ಮಾಡಲು ವಿನ್ಯಾಸಗೊಳಿಸಲಾದ ರೋಬೋಟ್‌ಗಳು ಮನುಷ್ಯರನ್ನು ಎಲ್ಲೆಡೆ ಅನುಸರಿಸುತ್ತವೆ. ಜನರು ಮುಂದಿನ ದಿನಗಳಲ್ಲಿ ಕೆಲಸ ಮಾಡುವ ಅಗತ್ಯವಿಲ್ಲದ ಸಮಯ ಬರುತ್ತದೆ, ಯೂನಿವರ್ಸಲ್ ಬೇಸಿಕ್ ಇನ್ಕಮ್ ಬದಲಿಗೆ ಯುನಿವರ್ಸಲ್ ಹೈ ಇನ್ಕಮ್ ಬಗ್ಗೆ ಚರ್ಚೆ ನಡೆಯುವ ಸಮಯ ಬರಲಿದೆ ಎಂದರು.

ಇತಿಹಾಸದಲ್ಲಿ ಅತ್ಯಂತ ವಿಧ್ವಂಸಕ ಶಕ್ತಿಯನ್ನು ನಾವು ಇಲ್ಲಿ ನೋಡುತ್ತಿದ್ದೇವೆ. ವೈಯಕ್ತಿಕ ತೃಪ್ತಿಗಾಗಿ ಕೆಲಸ ಮಾಡಲು ಬಯಸುವ ಜನರಿಗೆ ಮಾತ್ರ ಉದ್ಯೋಗಗಳು ಲಭ್ಯವಿರುತ್ತವೆ. ಆದರೆ AI ಎಲ್ಲವನ್ನೂ ಮಾಡುತ್ತದೆ. ಆದರೂ ಕಾಲ್ಪನಿಕ ಕಥೆಗಳು ಚೆನ್ನಾಗಿ ಕೊನೆಗೊಳ್ಳುತ್ತವೆ ಎಂದು ವ್ಯಂಗ್ಯವಾಡಿದರು. ಬಳಿಕ, ಸುನಕ್ ಮತ್ತು ಮಸ್ಕ್ ಅವರು ಡಿಜಿಟಲ್ ಸೂಪರ್ ಬುದ್ಧಿವಂತಿಕೆಯು ಜನರ ಮೇಲೆ ಹೇಗೆ ಪ್ರಭಾವ ಬೀರಬಹುದು ಎಂಬ ಕುರಿತು ಚರ್ಚೆ ನಡೆಸಿದರು. ಈ ಶೃಂಗಸಭೆ ಆಯೋಜಿಸಿರುವುದಕ್ಕೆ ಸುನಕ್‌ ಅವರಿಗೆ ಧನ್ಯವಾದ ತಿಳಿಸಿದರು.

ಇದನ್ನೂ ಓದಿ: 'ಎಐ ಅಪಾಯ ತಡೆ ಪ್ರತಿಜ್ಞೆ'ಗೆ ಭಾರತ, ಇಯು ಸೇರಿದಂತೆ 27 ರಾಷ್ಟ್ರಗಳ ಸಹಿ

ಈ ಮಧ್ಯೆ ಮೊದಲ ದಿನ ನಡೆದ ಅಂತಾರಾಷ್ಟ್ರೀಯ ಕೃತಕ ಬುದ್ಧಿಮತ್ತೆ (ಎಐ) ಸುರಕ್ಷತಾ ಶೃಂಗಸಭೆಯಲ್ಲಿ ಕೃತಕ ಬುದ್ಧಿಮತ್ತೆಯಲ್ಲಿನ ಪ್ರಗತಿಯಿಂದ ಉಂಟಾದ ಸಂಭಾವ್ಯ ಅಪಾಯಗಳನ್ನು ಎದುರಿಸಲು ಒಟ್ಟಾಗಿ ಕೆಲಸ ಮಾಡುವುದಾಗಿ ಯುಎಸ್ ಮತ್ತು ಚೀನಾ ಸೇರಿದಂತೆ 28 ರಾಷ್ಟ್ರಗಳ ಪ್ರತಿನಿಧಿಗಳು ಸಹಿ ಹಾಕಿದ್ದಾರೆ. AI ತಂತ್ರಜ್ಞಾನವನ್ನು ಮಾನವ ಕೇಂದ್ರಿತ, ವಿಶ್ವಾಸಾರ್ಹ ಸೇವೆಯಾಗಿ ನಿಯೋಜಿಸುವ ಪ್ರಯತ್ನಗಳಲ್ಲಿ ಕಣ್ಗಾವಲು ಜಂಟಿ ವಿಧಾನವನ್ನು ರಚಿಸಲು ಒಟ್ಟಾಗಿ ಕೆಲಸ ಮಾಡುವುದಾಗಿ ಒಪ್ಪಿಗೆ ನೀಡಿದ್ದಾರೆ.

ಇದನ್ನೂ ಓದಿ: ಕೃತಕ ಬುದ್ಧಿಮತ್ತೆ (AI) ಸುರಕ್ಷತಾ ಶೃಂಗಸಭೆ : ಅಪಾಯ ನಿಭಾಯಿಸಲು ಜಾಗತಿಕ ನಾಯಕರ ಪ್ರತಿಜ್ಞೆ

Last Updated :Nov 3, 2023, 2:27 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.