ETV Bharat / science-and-technology

ಮೆಸ್ಸಿ ಕನಸು ನನಸು: ಗೂಗಲ್​ನ ಸರ್ಚ್​ ಎಂಜಿನ್ ಟ್ರಾಫಿಕ್​ನಲ್ಲಿ ದಾಖಲೆ ಸೃಷ್ಟಿಸಿದ FIFAWorldCup

author img

By

Published : Dec 19, 2022, 12:08 PM IST

ಮೆಸ್ಸಿ ಜಯಭೇರಿ; ಗೂಗಲ್​ನ ಸರ್ಚ್​ ಎಂಜಿನ್ ಟ್ರಾಫಿಕ್​ನಲ್ಲಿ ದಾಖಲೆ ಸೃಷ್ಟಿ ಎಂದ ಸುಂದರ್​ ಪಿಚ್ಚೈ
messi-wins-sundar-pichai-says-creating-a-record-in-googles-search-engine-traffic

ಫಿಫಾ ವಿಶ್ವಕಪ್​ ಫೈನಲ್ ಪಂದ್ಯ ಗೂಗಲ್ ಸರ್ಚ್​ ಟ್ರಾಫಿಕ್​ನಲ್ಲಿ ದಾಖಲೆ ನಿರ್ಮಿಸಿದೆ.

ನವದೆಹಲಿ: 37 ವರ್ಷದ ಬಳಿಕ ಚಾಂಪಿಯನ್ ಕಿರೀಟವನ್ನು ಅರ್ಜೆಂಟೀನಾ ಮುಡಿಗೇರಿಸಲು ಲಿಯೊನೆಲ್​ ಮೆಸ್ಸಿ ಯಶಸ್ವಿಯಾಗಿದ್ದಾರೆ.​ ಮೆಸ್ಸಿ ಆಟಕ್ಕೆ ಇಡೀ ವಿಶ್ವ ಬೆರಗಾಗಿದೆ. ಅವರ ಈ ಐತಿಹಾಸಿಕ ಜಯ ಗೂಗಲ್​ಗೂ ಲಾಭ ತಂದುಕೊಟ್ಟಿದೆ.

ಹೌದು, ಅಚ್ಚರಿ ಆದರೂ ಇದು ಸತ್ಯ. ಫಿಫಾ ವಿಶ್ವಕಪ್​ ಫೈನಲ್ ಪಂದ್ಯ ಗೂಗಲ್​ನಲ್ಲಿ ಸರ್ಚ್​ ಟ್ರಾಫಿಕ್​ನಲ್ಲಿ ದಾಖಲೆ ನಿರ್ಮಿಸಿದೆ. 25 ವರ್ಷದಲ್ಲೇ ದಾಖಲೆಯ ಬಳಕೆದಾರರು ಗೂಗಲ್​ ಸರ್ಚ್​ ಎಂಜಿನ್​ ಅನ್ನು ಫಿಫಾ ವರ್ಲ್ಡ್​ ಕಪ್​ ಫಿನಾಲೆ ವೇಳೆ ಬಳಕೆ ಮಾಡಿದ್ದಾರೆ ಎಂದು ಗೂಗಲ್​ ಸಿಇಒ ಸುಂದರ್​ ಪಿಚೈ ತಿಳಿಸಿದ್ದಾರೆ.

  • Search recorded its highest ever traffic in 25 years during the final of #FIFAWorldCup , it was like the entire world was searching about one thing!

    — Sundar Pichai (@sundarpichai) December 19, 2022 " class="align-text-top noRightClick twitterSection" data=" ">

ಕಳೆದ 25 ವರ್ಷದ ದಾಖಲೆ ಮೀರಿ ಗೂಗಲ್ ಸರ್ಚ್​ ಎಂಜಿನ್​ನಲ್ಲಿ #FIFAWorldCup ಹುಡುಕಾಟ ನಡೆಸಲಾಗಿದೆ. ಇಡೀ ವಿಶ್ವವೇ ಒಂದು ವಿಷಯದ ಬಗ್ಗೆ ದಾಖಲೆಯ ಮಟ್ಟದಲ್ಲಿ ಹುಡುಕಾಟ ನಡೆಸಿದೆ ಎಂದು ಸುಂದರ್​ ಪಿಚೈ ಟ್ವೀಟ್​ ಮಾಡಿದ್ದಾರೆ. ಜೊತೆಗೆ ಅರ್ಜೆಂಟಿನಾ ಮತ್ತು ಫ್ರಾನ್ಸ್​ನ ರೋಚಕ ಪಂದ್ಯ ಮತ್ತು ಮೆಸ್ಸಿಯ ಆಟದ ಬಗ್ಗೆ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ

1998ರಲ್ಲಿ ಗೂಗಲ್​ ಸರ್ಚ್​ ಎಂಜಿನ್ ಸರ್ಜ್​ ಬ್ರಿನ್​ ಹಾಗೂ ಲ್ಯಾರಿ ಪೇಜ್​​ ಸ್ಥಾಪಿಸಿದರು. 2022 ರಲ್ಲಿ ಶೇಕಡಾ 90 ಕ್ಕಿಂತ ಹೆಚ್ಚು ಮಾರುಕಟ್ಟೆ ಪಾಲನ್ನು ಹೊಂದಿ, ಅಧಿಪತ್ಯ ಸಾಧಿಸಿದೆ.

ಇದನ್ನೂ ಓದಿ: ರೆಕಾರ್ಡ್​ಗಳ ರಾಜ.. ವಿಶ್ವಕಪ್​ನ ಫೈನಲ್​ನಲ್ಲೂ ಮೆಸ್ಸಿ ದಾಖಲೆಗಳ ಸುರಿಮಳೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.