ETV Bharat / science-and-technology

ChatGPT: ಆ್ಯಂಡ್ರಾಯ್ಡ್​ನಲ್ಲಿ ChatGPT ಡೌನ್​​ಲೋಡ್ ಹೇಗೆ? ಇಲ್ಲಿದೆ ಮಾಹಿತಿ

author img

By

Published : Jul 26, 2023, 4:00 PM IST

ChatGPT for Android now available for download
ChatGPT for Android now available for download

ChatGPT: ಭಾರತದಲ್ಲಿ ಈಗ ಚಾಟ್​ಜಿಪಿಟಿ ಡೌನ್​ಲೋಡ್​ಗೆ ಲಭ್ಯವಾಗುತ್ತಿದೆ. ಆ್ಯಂಡ್ರಾಯ್ಡ್​ ಬಳಕೆದಾರರು ಈಗ ಚಾಟ್​ಜಿಪಿಟಿ ಡೌನ್​ಲೋಡ್ ಮಾಡಿಕೊಳ್ಳಬಹುದು ಎಂದು ಓಪನ್ ಎಐ ಹೇಳಿದೆ.

ಸ್ಯಾನ್ ಫ್ರಾನ್ಸಿಸ್ಕೋ : ಭಾರತದಲ್ಲಿನ ಆ್ಯಂಡ್ರಾಯ್ಡ್​​ ಬಳಕೆದಾರರು ಈಗ ಕೃತಕ ಬುದ್ಧಿಮತ್ತೆ (AI) ಚಾಟ್‌ಬಾಟ್ ಚಾಟ್‌ಜಿಪಿಟಿಯನ್ನು ತಮ್ಮ ಆ್ಯಂಡ್ರಾಯ್ಡ್ ಸಾಧನಗಳಲ್ಲಿ ಡೌನ್‌ಲೋಡ್ ಮಾಡಬಹುದು ಎಂದು OpenAI ಘೋಷಿಸಿದೆ. "ಆ್ಯಂಡ್ರಾಯ್ಡ್‌ಗಾಗಿ ಚಾಟ್‌ಜಿಪಿಟಿ ಈಗ ಯುಎಸ್, ಭಾರತ, ಬಾಂಗ್ಲಾದೇಶ ಮತ್ತು ಬ್ರೆಜಿಲ್‌ನಲ್ಲಿ ಡೌನ್‌ಲೋಡ್ ಮಾಡಲು ಲಭ್ಯವಿದೆ!" ಎಂದು ಕಂಪನಿಯು ಮಂಗಳವಾರ ಟ್ವೀಟ್ ಮಾಡಿದೆ.

"ಮುಂದಿನ ವಾರದಲ್ಲಿ ಇನ್ನಷ್ಟು ದೇಶಗಳಲ್ಲಿ ಚಾಟ್​​ಜಿಪಿಟಿ ಡೌನ್​​ಲೋಡ್ ಮಾಡಲು ಲಭ್ಯವಾಗಲಿದೆ" ಎಂದು ಓಪನ್ ಎಐ ಹೇಳಿದೆ. ಗೂಗಲ್ ಪ್ಲೇ ಸ್ಟೋರ್​ ನಲ್ಲಿನ ಅಪ್ಲಿಕೇಶನ್‌ನಲ್ಲಿನ ವಿವರಣೆಯ ಪ್ರಕಾರ, ಆ್ಯಂಡ್ರಾಯ್ಡ್​​ನಲ್ಲಿನ ಚಾಟ್​ ಜಿಪಿಟಿಯು ನಿಮ್ಮ ಡಿವೈಸ್​​ಗಳಲ್ಲಿನ ಹಿಸ್ಟರಿ ಸಿಂಕ್ ಮಾಡುತ್ತದೆ ಮತ್ತು ಓಪನ್​ಎಐನ ಹೊಸ ಮಾಡೆಲ್​​ ಅಪ್ಡೇಟ್​ಗಳನ್ನು ಒದಗಿಸುತ್ತದೆ" ಎಂದು ಬರೆಯಲಾಗಿದೆ.

AI ಚಾಟ್‌ಬಾಟ್‌ ಬಳಸಿ ಬಳಕೆದಾರರು ತ್ವರಿತ ಉತ್ತರಗಳು, ಸೂಕ್ತವಾದ ಸಲಹೆಗಳನ್ನು ಪಡೆಯಬಹುದು ಮತ್ತು ಸೃಜನಶೀಲತೆ ಹೆಚ್ಚಿಸಿಕೊಳ್ಳಬಹುದು. ಕಳೆದ ವಾರ, ಓಪನ್​ ಎಐ ChatGPTಯಲ್ಲಿ ಹೊಸ 'ಕಸ್ಟಮೈಸ್ ಮಾಡಿದ ಸೂಚನೆಗಳು' (customised instructions) ಎಂಬ ವೈಶಿಷ್ಟ್ಯವನ್ನು ಪರಿಚಯಿಸಿದೆ.

ಇದನ್ನು ಬಳಸಿ ಈ ಎಲ್ಲ ಕೆಲಸ ಮಾಡಿಕೊಳ್ಳಿ: ಇದನ್ನು ಬಳಸಿ ಭವಿಷ್ಯದ ಸಂಭಾಷಣೆಗಳಿಗಾಗಿ AI ಚಾಟ್‌ಬಾಟ್‌ನೊಂದಿಗೆ ಏನನ್ನಾದರೂ ಶೇರ್​ ಮಾಡಿಕೊಳ್ಳಬಹುದು. ಪ್ಲಸ್ ಬಳಕೆದಾರರಿಗೆ ಕಸ್ಟಮ್ ಸೂಚನೆಗಳು ಪ್ರಸ್ತುತ ಬೀಟಾದಲ್ಲಿ ಲಭ್ಯವಿವೆ ಮತ್ತು ಕಂಪನಿಯು ಈ ವೈಶಿಷ್ಟ್ಯವನ್ನು ಶೀಘ್ರದಲ್ಲೇ ಎಲ್ಲ ಬಳಕೆದಾರರಿಗೆ ಮುಕ್ತವಾಗಿಸಲು ಯೋಜಿಸುತ್ತಿದೆ. ಹೊಸ ಸಂಭಾಷಣೆಗಳಿಗಾಗಿ ಬಳಕೆದಾರರು ಯಾವುದೇ ಸಮಯದಲ್ಲಿ ಕಸ್ಟಮ್ ಸೂಚನೆಗಳನ್ನು ಎಡಿಟ್ ಮಾಡಬಹುದು ಅಥವಾ ಅಳಿಸಬಹುದು.

ಇದಲ್ಲದೇ, ಬಳಕೆದಾರರ ಸೂಚನೆಗಳನ್ನು ಲಿಂಕ್ ವೀಕ್ಷಕರೊಂದಿಗೆ ಶೇರ್ ಮಾಡಲಾಗುವುದಿಲ್ಲ. ಬಳಕೆದಾರರು ತಮ್ಮ ಓಪನ್ ಎಐ ಖಾತೆಗಳನ್ನು ಡಿಲೀಟ್ ಮಾಡಿದಾಗ, ಆ ಪ್ರಕ್ರಿಯೆಯ ಭಾಗವಾಗಿ ಅವರ ಅಕೌಂಟ್​ಗಳಿಗೆ ಸಂಬಂಧಿಸಿರುವ ಕಸ್ಟಮ್ ಸೂಚನೆಗಳನ್ನು ಸಹ 30 ದಿನಗಳಲ್ಲಿ ಡಿಲೀಟ್ ಮಾಡಲಾಗುತ್ತದೆ ಎಂದು ಕಂಪನಿ ವಿವರಿಸಿದೆ.

iOS ನಲ್ಲಿ ಬಳಕೆದಾರರು ChatGPT ಯಲ್ಲಿ Account Settings > Custom Instructions ಮೂಲಕ ಕಸ್ಟಮ್ ಸೂಚನೆಗಳನ್ನು ಬಳಸಲಾರಂಭಿಸಬಹುದು. ವೆಬ್‌ನಲ್ಲಿ ಈ ವೈಶಿಷ್ಟ್ಯವನ್ನು ಬಳಸಲು ನಿಮ್ಮ ಹೆಸರಿನ ಮೇಲೆ ಕ್ಲಿಕ್ ಮಾಡಿ, ನಂತರ 'Custom Instructions' ಆಯ್ಕೆಮಾಡಿ. ಎರಡೂ ಕಡೆಗಳಲ್ಲಿ ಸೂಚನೆಗಳನ್ನು ನಮೂದಿಸಿ ಮತ್ತು ಯಾವ ರೀತಿಯ ವಿಷಯಗಳನ್ನು ಬರೆಯಬೇಕೆಂಬುದರ ಕೆಲವು ಉದಾಹರಣೆಗಳಿಗಾಗಿ 'Show tips' ಅನ್ನು ಕ್ಲಿಕ್ ಮಾಡಿ. ಅದರ ನಂತರ 'Save' ಆಯ್ಕೆಮಾಡಿ.

ಆ್ಯಂಡ್ರಾಯ್ಡ್​ನಲ್ಲಿ ಚಾಟ್​ಜಿಪಿಟಿ ಡೌನ್​ಲೋಡ್ ಮಾಡಲು Google Play ಸ್ಟೋರ್‌ನ ChatGPT Android ಅಪ್ಲಿಕೇಶನ್ ಪುಟಕ್ಕೆ ಹೋಗಿ. Install ಬಟನ್ ಮೇಲೆ ಟ್ಯಾಪ್ ಮಾಡಿ ಮತ್ತು ಅಪ್ಲಿಕೇಶನ್ ಡೌನ್‌ಲೋಡ್ ಮಾಡಿ, ಇನ್​ಸ್ಟಾಲ್ ಮಾಡಿ. ನೀವು ಈಗಾಗಲೇ ಸೈನ್ ಇನ್ ಆಗಿಲ್ಲದಿದ್ದರೆ, ಅಪ್ಲಿಕೇಶನ್ ತೆರೆಯಿರಿ ಮತ್ತು ವಿನಂತಿಸಿದಾಗ ನಿಮ್ಮ Google ID ಮತ್ತು ಪಾಸ್‌ವರ್ಡ್ ಅನ್ನು ನಮೂದಿಸಿ.

ಏತನ್ಮಧ್ಯೆ, ಕಳೆದ ತಿಂಗಳು ಕಂಪನಿಯು iOS ನಲ್ಲಿನ ಚಾಟ್​​ ಜಿಪಿಟಿ ಅಪ್ಲಿಕೇಶನ್ ಅನ್ನು ಅಪ್ಡೇಟ್ ಮಾಡಿದೆ ಮತ್ತು ಪ್ಲಸ್ ಪ್ಲಾನ್ ಬಳಕೆದಾರರಿಗೆ Bing ಸಂಯೋಜನೆಯನ್ನು ಸೇರಿಸಿದೆ. ಈ ಅಪ್ಡೇಟ್​​ನಲ್ಲಿ history search ಅನ್ನು ಕೂಡ ಓಪನ್ ಎಐ ಸುಧಾರಿಸಿದೆ.

ಇದನ್ನೂ ಓದಿ : ಮಾನವ & AI ಪ್ರತ್ಯೇಕಿಸಲು ಹೊಸ ತಂತ್ರಜ್ಞಾನ; ಏನಿದು Worldcoin?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.