LIVE: 'ಯು ಐ' ಚಿತ್ರದ ಟೀಸರ್ ಬಿಡುಗಡೆ ಕಾರ್ಯಕ್ರಮ

By ETV Bharat Karnataka Team

Published : Jan 8, 2024, 11:28 AM IST

Updated : Jan 8, 2024, 12:41 PM IST

thumbnail

ಬೆಂಗಳೂರು : ರಿಯಲ್​ ಸ್ಟಾರ್​ ಉಪೇಂದ್ರ ಅಭಿನಯಿಸಿ ಮತ್ತು ನಿರ್ದೇಶನ ಮಾಡುತ್ತಿರುವ 'ಯು ಐ' ಚಿತ್ರದ ಟೀಸರ್ ಬಿಡುಗಡೆ ಕಾರ್ಯಕ್ರಮ ನಗರದ ಖಾಸಗಿ ಹೋಟೆಲ್​​ನಲ್ಲಿ ನಡೆಯುತ್ತಿದೆ‌. ಹ್ಯಾಟ್ರಿಕ್ ಹೀರೋ ಶಿವರಾಜ್​​ಕುಮಾರ್ ಹಾಗು ಕಿಚ್ಚ ಸುದೀಪ್ ಅವರು ಈ ಟೀಸರ್ ಲಾಂಚ್ ಮಾಡುತ್ತಿದ್ದಾರೆ‌‌.

ಏಳು ವರ್ಷಗಳ ಬಳಿಕ 'ಬುದ್ಧಿವಂತ' ಸಿನಿಮಾ ಖ್ಯಾತಿಯ ಉಪೇಂದ್ರ ನಿರ್ದೇಶಕನ ಕ್ಯಾಪ್‌ ಧರಿಸಿರುವ ಬಹುನಿರೀಕ್ಷಿತ ಚಿತ್ರ ಇದಾಗಿದೆ. ಟೈಟಲ್ ಹಾಗೂ ಮೇಕಿಂಗ್​ನಿಂದ ಕ್ರೇಜ್ ಹುಟ್ಟಿಸಿರುವ ಯು ಐ ಸಿನಿಮಾ ಮೇಲೆ ಸಾಕಷ್ಟು ನಿರೀಕ್ಷೆ ಇದೆ. ಈ ಹಿಂದೆ ಮೂರು ನಾಮ ಇರುವ ಶೈಲಿಯಲ್ಲಿ ಯು ಐ ಶೀರ್ಷಿಕೆ ಇಟ್ಟು ಉಪೇಂದ್ರ ಅಭಿಮಾನಿಗಳ ತಲೆಗೆ ಹುಳ ಬಿಟ್ಟಿದ್ದರು. ಬಳಿಕ ಸಿನಿಮಾಗೆ ನಾಯಕ ನಟಿ ಯಾರಾಗ್ತಾರೆ ಅಂತಾ ಸಿನಿಮಾರಂಗದಲ್ಲಿ ಬಿಸಿ ಬಿಸಿ ಚರ್ಚೆ ಶುರುವಾಗಿತ್ತು.

ಪರಭಾಷಾ ನಟಿಯನ್ನು ಕರೆ ತರುತ್ತಾರೆ ಎಂದೂ ಹೇಳಲಾಗುತ್ತಿತ್ತು. ಬಳಿಕ ಪ್ರಶ್ನೆಗೆ ಉತ್ತರ ಸಿಕ್ಕಿದ್ದು, ಏಕ್ ಲವ್ ಯಾ ಸಿನಿಮಾ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ರೀಷ್ಮಾ ನಾಣಯ್ಯ ಅವರು ಉಪೇಂದ್ರ ಜೊತೆ ಸ್ಕ್ರೀನ್​ ಶೇರ್​ ಮಾಡಿದ್ದಾರೆ. ಈಗಾಗಲೇ ರೀಷ್ಮಾ ಏಕ್​​ ಲವ್​​ ಯಾ ಸಿನಿಮಾದಲ್ಲಿನ ನಟನೆಯಿಂದ ಗಮನ ಸೆಳೆದಿದ್ದಾರೆ. 'ಟಗರು' ಖ್ಯಾತಿಯ ಕೆ.ಪಿ.ಶ್ರೀಕಾಂತ್ ಹಾಗೂ ಲಹರಿ ಸಂಸ್ಥೆಯ ಮನೋಹರ್ ಸಹಯೋಗದಲ್ಲಿ ಸುಮಾರು 100 ಕೋಟಿ ರೂ. ಬಜೆಟ್​​ನಲ್ಲಿ ಸಿನಿಮಾ ನಿರ್ಮಾಣ ಆಗುತ್ತಿದೆ.

Last Updated : Jan 8, 2024, 12:41 PM IST

ABOUT THE AUTHOR

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.