ETV Bharat / jagte-raho

ಕದ್ದ ಬೈಕ್‌ನಲ್ಲಿ ಮಹಿಳೆಯರ ಸರ ಎಗರಿಸಿ ಮೂಲ ಜಾಗದಲ್ಲೇ ನಿಲ್ಲಿಸುತ್ತಿದ್ದ ಚೋರ ಸಿಕ್ಕಿಬಿದ್ದ!

author img

By

Published : Dec 26, 2020, 5:53 PM IST

arrested-for-bike-and-gold-chain-theft-accused-news
ಕದ್ದ ಬೈಕ್​​ನಲ್ಲಿ ಸರಗಳ್ಳತನ ಮಾಡುತ್ತಿದ್ದ ಕುಖ್ಯಾತ ಚೋರನ ಬಂಧನ

ಆರೋಪಿ ವ್ಯವಸ್ಥಿತವಾಗಿ ಸಂಚು ರೂಪಿಸಿ ಬೆಳಗ್ಗಿನ ಜಾವ ಮನೆ ಮುಂದೆ ನಿಲ್ಲಿಸಿದ್ದ ಬೈಕ್​​ಗಳನ್ನು ಕದಿಯುತ್ತಿದ್ದ. ಅದೇ ಬೈಕ್​​ನಲ್ಲಿ ಒಂಟಿ ಮಹಿಳೆಯರನ್ನು ಗುರಿಯಾಗಿಸಿಕೊಂಡು ಸರ ಕಸಿಯುತ್ತಿದ್ದ. ಈ ಕೃತ್ಯ ಎಸಗಿದ ಬಳಿಕ, ಬೈಕ್​ ​ಅನ್ನು ಇದ್ದ ಜಾಗದಲ್ಲೇ ತಂದು ನಿಲ್ಲಿಸಿ ಪರಾರಿಯಾಗುವ ಪ್ರವೃತ್ತಿ ಬೆಳೆಸಿಕೊಂಡಿದ್ದ ಎನ್ನುವ ವಿಚಾರ ಆರೋಪಿಯ ವಿಚಾರಣೆಯ ವೇಳೆ ಬೆಳಕಿಗೆ ಬಂದಿದೆ.

ಬೆಂಗಳೂರು: ಮನೆ ಮುಂದೆ ನಿಲ್ಲಿಸಿದ್ದ ಬೈಕ್​​ಗಳನ್ನು‌ ಕಳ್ಳತನ ಮಾಡಿ, ಅದರಲ್ಲೇ ಒಂಟಿ ಮಹಿಳೆಯರನ್ನು ಗುರಿಯಾಗಿಸಿಕೊಂಡು ಸರಗಳ್ಳತನ ಮಾಡುತ್ತಿದ್ದ ಕಳ್ಳನನ್ನು ತಿಲಕ್ ನಗರ ಪೊಲೀಸರು ಬಂಧಿಸಿದ್ದಾರೆ.

ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಮಾಹಿತಿ

ಮೈಸೂರು ರಸ್ತೆಯ ಬಳಿಯ ನಿವಾಸಿ 22 ವರ್ಷದ ಸಂಜಯ್ ಅಲಿಯಾಸ್ ಸ್ಮಶಾನ ಎಂಬಾತ ಬಂಧಿತ ವ್ಯಕ್ತಿ. ಈತನಿಂದ ಅಂದಾಜು 4.30 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಹಾಗೂ ಒಂದು ಬೈಕ್‌ನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.

ಈತ ಸುಲಭವಾಗಿ ಹಣ ಸಂಪಾದಿಸಿ, ಮೋಜು-ಮಸ್ತಿ ಮಾಡಲು ಚಿಕ್ಕ ವಯಸ್ಸಿನಲ್ಲೇ ಅಪರಾಧ ಲೋಕಕ್ಕೆ‌ ಇಳಿದಿದ್ದಾನೆ. ವೃತ್ತಿಯಲ್ಲಿ ಸ್ಮಶಾನದಲ್ಲಿ ಗುಂಡಿ ತೆಗೆಯುವ ಕೆಲಸ ಮಾಡುತ್ತಿದ್ದ‌‌ ಸಂಜಯ್‌ಗೆ ಈ‌ ಕೆಲಸದಲ್ಲಿ ಹೆಚ್ಚು ಹಣ ಗಳಿಸಲು ಸಾಧ್ಯವಾಗಿಲ್ಲ. ಹೀಗಾಗಿ ಸಹಚರರೊಂದಿಗೆ ಸೇರಿಕೊಂಡು ಅಪರಾಧ ಕೃತ್ಯಗಳಲ್ಲಿ ಭಾಗಿಯಾಗುತ್ತಿದ್ದನಂತೆ.

ಓದಿ: ಖೋಟಾ ನೋಟು ಪ್ರಿಂಟ್ ಮಾಡಿ ಚಲಾವಣೆ: ಪಾದರಾಯನಪುರ ನಿವಾಸಿ ಬಂಧನ

ವ್ಯವಸ್ಥಿತವಾಗಿ ಸಂಚು ರೂಪಿಸಿ ಬೆಳಗ್ಗಿನ ಜಾವ ಮನೆ ಮುಂದೆ ನಿಲ್ಲಿಸಿದ್ದ ಬೈಕ್​​ಗಳನ್ನು ಕದಿಯುತ್ತಿದ್ದ. ಅದೇ ಬೈಕ್​​ನಲ್ಲಿ ಒಂಟಿ ಮಹಿಳೆಯರನ್ನು ಗುರಿಯಾಗಿಸಿಕೊಂಡು ಸರ ಕಸಿಯುತ್ತಿದ್ದ. ಕೃತ್ಯ ಎಸಗಿದ ಬಳಿಕ, ಬೈಕ್​​ಅನ್ನು ಇದ್ದ ಜಾಗದಲ್ಲೇ ತಂದು ನಿಲ್ಲಿಸಿ ಪರಾರಿಯಾಗುವ ಪ್ರವೃತ್ತಿ ಬೆಳೆಸಿಕೊಂಡಿದ್ದಾನೆ. ಇದರಿಂದ ವಾಹನ‌ ಮಾಲೀಕರಿಗೆ ಯಾವುದೇ ಅನುಮಾನ ಬರುತ್ತಿರಲಿಲ್ಲ.

ಪೊಲೀಸರಿಗೆ ಚಳ್ಳೆಹಣ್ಣು

ಬ್ಯಾಟರಾಯನಪುರ ಹಾಗೂ ಜೆ.ಜೆ.ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸರಗಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿ‌ ಆರೋಪಿ ಜೈಲು ಸೇರಿದ್ದ. ಬಳಿಕ ಈ‌ ಪ್ರಕರಣಗಳಲ್ಲಿ ಜಾಮೀನು ಪಡೆದು ಹೊರಬಂದು ಜೀವನ‌ ನಿಭಾಯಿಸಲು ಮತ್ತೆ ಹಳೆ ಕಾಯಕವನ್ನೇ ಮುಂದುವರೆಸಿದ್ದಾನೆ.

ತಿಲಕ್ ನಗರ, ಕೋರಮಂಗಲ, ಪುಟ್ಟೇನಹಳ್ಳಿ, ಸುಬ್ರಮಣ್ಯನಗರ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ಸಹಚರರೊಂದಿಗೆ ಸೇರಿ ಸರಗಳ್ಳತನ ಮಾಡುತ್ತಿದ್ದ. ಪ್ರಕರಣಗಳಲ್ಲಿ ಜಾಮೀನು ಪಡೆದ ಬಳಿಕ ಮುಂದಿನ ವಿಚಾರಣೆಗೂ ನ್ಯಾಯಾಲಯಕ್ಕೆ ಹಾಜರಾಗುತ್ತಿರಲಿಲ್ಲ. ಸದ್ಯ ಆರೋಪಿಯನ್ನು ಸೆರೆಮನೆಗಟ್ಟಿರುವ ತಿಲಕ್ ನಗರ ಪೊಲೀಸರು ಇನ್ನುಳಿದ ಆರೋಪಿಗಳ ಪತ್ತೆಗಾಗಿ ಬಲೆ ಬೀಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.