ETV Bharat / international

ಭೂಕಂಪದಲ್ಲಿ ಸಾವಿರಾರು ಜನ ಸಾವು: ಅಂತಾರಾಷ್ಟ್ರೀಯ ಸಹಾಯಕ್ಕಾಗಿ ಮನವಿ ಮಾಡಿದ ತಾಲಿಬಾನ್​!

author img

By

Published : Jun 23, 2022, 2:23 PM IST

Taliban government appealed for international aid, Afghanistan earthquake news, Taliban government appealed for help, Many people died in Afghanistan earthquake, ಅಂತರರಾಷ್ಟ್ರೀಯ ಸಹಾಯಕ್ಕಾಗಿ ಮನವಿ ಮಾಡಿದ ತಾಲಿಬಾನ್ ಸರ್ಕಾರ, ಅಫ್ಘಾನಿಸ್ತಾನ ಭೂಕಂಪದ ಸುದ್ದಿ, ಸಹಾಯಕ್ಕಾಗಿ ಮನವಿ ಮಾಡಿದ ತಾಲಿಬಾನ್ ಸರ್ಕಾರ, ಅಫ್ಘಾನಿಸ್ತಾನ ಭೂಕಂಪದಲ್ಲಿ ಅನೇಕ ಜನರು ಸಾವು,
ಭೂಕಂಪದಲ್ಲಿ ಸಾವಿರಾರೂ ಜನ ಸಾವು

ಕಳೆದ ದಿನ ಸಂಭವಿಸಿದ ಭೂಕಂಪದಲ್ಲಿ ಈಗಾಗಲೇ ಸಾವಿರಾರೂ ಜನರು ಸಾವನ್ನಪ್ಪಿದ್ದಾರೆ. ರಕ್ಷಣಾ ಕಾರ್ಯಗಳು ಭರದಿಂದ ಸಾಗಿವೆ. ಅಷ್ಟೇ ಅಲ್ಲ ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯೂ ಇದೆ. ವಿನಾಶಕಾರಿ ಭೂಕಂಪದ ನಂತರ ತಾಲಿಬಾನ್ ಸರ್ಕಾರ ಅಂತಾರಾಷ್ಟ್ರೀಯ ಸಹಾಯಕ್ಕಾಗಿ ಮನವಿ ಮಾಡಿದೆ.

ಕಾಬೂಲ್ : ಅಫ್ಘಾನಿಸ್ತಾನದ ಪಕ್ಟಿಕಾ ಪ್ರಾಂತ್ಯದಲ್ಲಿ ಕನಿಷ್ಠ 1,000 ಜನರನ್ನು ಬಲಿತೆಗೆದುಕೊಂಡ ಭೂಕಂಪದ ನಂತರ ತಾಲಿಬಾನ್ ನೇತೃತ್ವದ ಸರ್ಕಾರವು ಅಂತಾರಾಷ್ಟ್ರೀಯ ಸಹಾಯಕ್ಕಾಗಿ ಮನವಿ ಮಾಡಿದೆ ಎಂದು ತಿಳಿದು ಬಂದಿದೆ.

ಬುಧವಾರದ ಭೂಕಂಪವು ಎರಡು ದಶಕಗಳಲ್ಲಿ ದೇಶವನ್ನು ಅಪ್ಪಳಿಸಿದ ಅತ್ಯಂತ ಮಾರಣಾಂತಿಕವಾಗಿದೆ ಎಂದು ಪರಿಗಣಿಸಲಾಗಿದೆ. ಭೂಕಂಪನದಿಂದಾದ ಭೂಕುಸಿತಗಳಿಂದ ಗಯಾನ್ ಮತ್ತು ಬರ್ಮಾಲ್ ಎಂಬ ಎರಡು ಜಿಲ್ಲೆಗಳಲ್ಲಿ 1,500 ಜನರು ಗಾಯಗೊಂಡಿದ್ದಾರೆ. ಭೂಕಂಪದ ಕೇಂದ್ರ ಬಿಂದು ಖೋಸ್ಟ್ ನಗರದಿಂದ 44 ಕಿಮೀ ದೂರದಲ್ಲಿ ಕೇಂದ್ರಿಕೃತವಾಗಿದ್ದು, ಪಾಕಿಸ್ತಾನ ಮತ್ತು ಭಾರತದವರೆಗೂ ಕಂಪನದ ಅನುಭವವಾಗಿದೆ ಎಂದು ತಿಳಿದು ಬಂದಿದೆ.

ತಾಲಿಬಾನ್​​​ನ ಹಿರಿಯ ಅಧಿಕಾರಿ ಅಬ್ದುಲ್ ಕಹರ್ ಬಾಲ್ಖಿ ಮಾತನಾಡಿ, ಅಫ್ಘಾನಿಸ್ತಾನವು ನಡೆಯುತ್ತಿರುವ ಮಾನವೀಯ ಮತ್ತು ಆರ್ಥಿಕ ಬಿಕ್ಕಟ್ಟಿನ ಮಧ್ಯೆ ಇರುವುದರಿಂದ ಆಡಳಿತವು ಜನರಿಗೆ ಅಗತ್ಯವಿರುವ ಮಟ್ಟಿಗೆ ಆರ್ಥಿಕವಾಗಿ ಸಹಾಯ ಮಾಡಲು ಅಸಮರ್ಥವಾಗಿದೆ ಎಂದು ಹೇಳಿದ್ದಾರೆ.

ಸಹಾಯ ಸಂಸ್ಥೆಗಳು, ನೆರೆಯ ದೇಶಗಳು ಮತ್ತು ವಿಶ್ವ ಶಕ್ತಿಗಳ ಸಹಾಯದ ಹೊರತಾಗಿಯೂ, ತಮ್ಮ ಸಹಾಯವನ್ನು ಬಹಳ ದೊಡ್ಡ ಪ್ರಮಾಣದಲ್ಲಿ ಮಾಡಬೇಕಾಗಿದೆ. ಏಕೆಂದರೆ ಇದು ದಶಕಗಳಿಂದ ಅನುಭವಿಸದ ವಿನಾಶಕಾರಿ ಭೂಕಂಪವಾಗಿದೆ ಎಂದು ಅವರು ಹೇಳಿದರು.

ಓದಿ: ಅಫ್ಘಾನಿಸ್ತಾನದಲ್ಲಿ ಭಾರಿ ಭೂಕಂಪ..1000ಕ್ಕೂ ಹೆಚ್ಚು ಜನ ಸಾವು, ಅವಶೇಷಗಳಡಿ ಸಿಲುಕಿದ ನೂರಾರು ಜನ!

ನೂರಾರು ಮನೆಗಳು ನಾಶ: ನೂರಾರು ಮನೆಗಳು ಧ್ವಂಸಗೊಂಡಿವೆ. ರಕ್ಷಣಾ ತಂಡಗಳು ಅವಶೇಷಗಳ ಅಡಿ ಸಿಲುಕಿರುವ ಜನರನ್ನು ಹೊರ ತೆಗೆಯುವ ಕಾರ್ಯದಲ್ಲಿ ನಿರತರಾಗಿದ್ದು, ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆ ಎಂದು ತಾಲಿಬಾನ್ ಸುಪ್ರೀಂ ನಾಯಕ ಹಿಬತುಲ್ಲಾ ಅಖುಂದ್ಜಾದಾ ಹೇಳಿದ್ದಾರೆ.

ಭೂಕಂಪದ ಬಳಿಕ ಪರಿಣಾಮಗಳನ್ನು ತಾಲಿಬಾನ್ ಸರಿಯಾಗಿ ನಿರ್ವಹಿಸಲಿಲ್ಲ. ಘಟನೆ ನಡೆದು ಸುಮಾರು ಎಂಟು ಗಂಟೆಗಳ ನಂತರ ತಾಲಿಬಾನ್ ಕ್ಯಾಬಿನೆಟ್ ಸದಸ್ಯರು ಐದು ಹೆಲಿಕಾಪ್ಟರ್‌ಗಳನ್ನು ಸ್ಥಳಕ್ಕೆ ಕಳುಹಿಸಿದ್ದಾರೆ. ಸಂತ್ರಸ್ತರಿಗೆ ಸಹಾಯ ಮಾಡಲು ತಾಲಿಬಾನ್ ಪರಿಹಾರ ತಂಡವು ಸುಮಾರು 11 ಗಂಟೆಗಳ ಬಳಿಕ ಘಟನಾ ಸ್ಥಳಕ್ಕೆ ತಲುಪಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಸಂತ್ರಸ್ತರ ಕುಟುಂಬಗಳಿಗೆ 100,000 ಲಕ್ಷ(ಆಫ್ಘನ್​​​ ಕರೆನ್ಸಿಯಲ್ಲಿ) ಮತ್ತು ಗಾಯಗೊಂಡವರಿಗೆ 50,000 AFS ಪಾವತಿಸುವುದಾಗಿ ಸರ್ಕಾರ ಘೋಷಿಸಿದೆ. ಕಳೆದ ಒಂದು ದಶಕದ ಭೂಕಂಪಗಳಲ್ಲಿ 7,000 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಎಂದು ವಿಶ್ವಸಂಸ್ಥೆಯ ಮಾನವೀಯ ವ್ಯವಹಾರಗಳ ಸಮನ್ವಯ ಕಚೇರಿಯ ವರದಿಗಳು ಮಾಹಿತಿ ನೀಡಿವೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.