ETV Bharat / international

ಇಸ್ರೇಲ್-ಹಮಾಸ್ ಕದನವಿರಾಮಕ್ಕೆ ಹೊಸ ಪ್ರಸ್ತಾವನೆ ಮುಂದಿಟ್ಟ ಕತಾರ್

author img

By ETV Bharat Karnataka Team

Published : Dec 18, 2023, 12:53 PM IST

ಇಸ್ರೇಲ್ ಮತ್ತು ಹಮಾಸ್ ಮಧ್ಯೆ ಕದನ ವಿರಾಮ ಮೂಡಿಸಲು ಕತಾರ್ ಮತ್ತೊಂದು ಹಂತದ ಪ್ರಯತ್ನಗಳನ್ನು ಆರಂಭಿಸಿದೆ ಎಂದು ಮೂಲಗಳು ತಿಳಿಸಿವೆ.

Qatar presents new proposals on Hamas-Israel hostage deal
Qatar presents new proposals on Hamas-Israel hostage deal

ಗಾಝಾ : ಗಾಜಾ ಪಟ್ಟಿಯಲ್ಲಿ ಮತ್ತೊಂದು ಹಂತದ ಕದನ ವಿರಾಮ ಜಾರಿಗೊಳಿಸಲು ಕತಾರ್ ಹೊಸ ಪ್ರಸ್ತಾಪಗಳನ್ನು ಮಂಡಿಸಿದೆ ಎಂದು ಪ್ಯಾಲೆಸ್ಟೈನ್ ಮೂಲಗಳು ತಿಳಿಸಿವೆ. ಕದನವಿರಾಮಕ್ಕಾಗಿ ಇಸ್ರೇಲ್ ಮತ್ತು ಹಮಾಸ್ ನಡುವಿನ ಒತ್ತೆಯಾಳು ಬಿಡುಗಡೆ ಒಪ್ಪಂದವನ್ನು ಪುನರಾರಂಭಿಸಲು ಕತಾರ್ ಪ್ರಯತ್ನಿಸುತ್ತಿದೆ. ಡಿಸೆಂಬರ್ 16 ರಿಂದ ನಾರ್ವೆಯಲ್ಲಿ ನಡೆದ ಅಘೋಷಿತ ಸಭೆಗಳಲ್ಲಿ ಉನ್ನತ ಮಟ್ಟದ ಕತಾರ್ ನಿಯೋಗವು ಇಸ್ರೇಲ್ ಅಧಿಕಾರಿಗಳೊಂದಿಗೆ ಈ ಪ್ರಸ್ತಾಪಗಳನ್ನು ಚರ್ಚಿಸುತ್ತಿದೆ ಎಂದು ಮೂಲಗಳು ಭಾನುವಾರ ಕ್ಸಿನ್ಹುವಾ ಸುದ್ದಿ ಸಂಸ್ಥೆಗೆ ತಿಳಿಸಿವೆ.

"ಈಜಿಪ್ಟ್ ಸಹಯೋಗದೊಂದಿಗೆ, ಗಾಜಾದಲ್ಲಿ ಮಾನವೀಯ ಕದನ ವಿರಾಮಕ್ಕಾಗಿ ಹೊಸ ತಿಳುವಳಿಕೆಗಳನ್ನು ತಲುಪುವ ಪ್ರಯತ್ನದಲ್ಲಿ ಇಸ್ರೇಲ್ ಮತ್ತು ಹಮಾಸ್ ನಡುವಿನ ಒತ್ತೆಯಾಳು ವಿನಿಮಯ ಒಪ್ಪಂದವನ್ನು ಪುನಾರಂಭಿಸಲು ಕತಾರ್ ಪ್ರಯತ್ನಿಸುತ್ತಿದೆ" ಎಂದು ಮೂಲಗಳು ತಿಳಿಸಿವೆ. ಗಾಜಾದಲ್ಲಿ ಹಲವಾರು ದಿನಗಳ ಮಾನವೀಯ ಕದನ ವಿರಾಮ ಘೋಷಣೆಗೆ ಪ್ರತಿಯಾಗಿ ಹಮಾಸ್ ವಶದಲ್ಲಿರುವ ಉಳಿದ ಇಸ್ರೇಲಿ ಒತ್ತೆಯಾಳುಗಳನ್ನು ಬಿಡುಗಡೆ ಮಾಡುವುದು ಮತ್ತು ಇಸ್ರೇಲ್ ತನ್ನ ಬಂಧನದಲ್ಲಿರುವ ಪ್ಯಾಲೆಸ್ಟೈನ್ ಕೈದಿಗಳನ್ನು ಬಿಡುಗಡೆ ಮಾಡುವ ಬಗ್ಗೆ ಚರ್ಚೆಗಳು ನಡೆದಿವೆ ಎಂದು ಮೂಲಗಳು ತಿಳಿಸಿವೆ.

ಇಸ್ರೇಲಿ ಜೈಲುಗಳಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಹಲವಾರು ಪ್ಯಾಲೆಸ್ಟೈನ್ ಕೈದಿಗಳ ಬಿಡುಗಡೆಗೆ ಪ್ರತಿಯಾಗಿ ಮೂವರು ಹಿರಿಯ ಇಸ್ರೇಲಿ ಅಧಿಕಾರಿಗಳನ್ನು ಬಿಡುಗಡೆ ಮಾಡಿಸಲು ಕತಾರ್ ಪ್ರಯತ್ನಿಸುತ್ತಿದೆ. ಹಮಾಸ್​ನಿಂದ ಸೆರೆಹಿಡಿಯಲ್ಪಟ್ಟ ಮೂವರು ಇಸ್ರೇಲಿ ಸೈನಿಕರು ಗಾಜಾದಲ್ಲಿ ಇಸ್ರೇಲಿ ಸೈನ್ಯದಿಂದಲೇ ಆಕಸ್ಮಿಕವಾಗಿ ಕೊಲ್ಲಲ್ಪಟ್ಟ ನಂತರ ಕತಾರ್ ಹೊಸದಾಗಿ ರಾಜತಾಂತ್ರಿಕ ಪ್ರಯತ್ನಗಳನ್ನು ಆರಂಭಿಸಿದೆ.

ಇಸ್ರೇಲ್ ಪಡೆಗಳು ಹಮಾಸ್ ವಶದಲ್ಲಿದ್ದ ತಮ್ಮದೇ ನಾಗರಿಕರನ್ನು ಆಕಸ್ಮಿಕವಾಗಿ ಕೊಂದಿದ್ದಕ್ಕೆ ಇಸ್ರೇಲ್​ನಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಉಳಿದ 129 ಇಸ್ರೇಲಿಗರನ್ನು ತಕ್ಷಣವೇ ಬಿಡಿಸಿಕೊಳ್ಳುವಂತೆ ಜನತೆ ಸರ್ಕಾರದ ಮೇಲೆ ತೀವ್ರ ಒತ್ತಡ ಹೇರುತ್ತಿದ್ದಾರೆ. ಆದರೆ ಗಾಜಾ ಮೇಲಿನ ಆಕ್ರಮಣವನ್ನು ಕೊನೆಗೊಳಿಸದ ಹೊರತು ಇಸ್ರೇಲ್​ನೊಂದಿಗೆ ಹೊಸದಾಗಿ ಯಾವುದೇ ಮಾತುಕತೆಗಳಲ್ಲಿ ಭಾಗಿಯಾಗಲು ಹಮಾಸ್ ನಿರಾಕರಿಸಿದೆ.

ಅಕ್ಟೋಬರ್ 7 ರಂದು ಯುದ್ಧ ಆರಂಭವಾದಾಗಿನಿಂದ ಗಾಜಾ ಪಟ್ಟಿಯಲ್ಲಿ 18,787 ಜನರು ಸಾವನ್ನಪ್ಪಿದ್ದಾರೆ. ಕೊಲ್ಲಲ್ಪಟ್ಟವರಲ್ಲಿ ಸುಮಾರು 70 ಪ್ರತಿಶತದಷ್ಟು ಮಹಿಳೆಯರು ಮತ್ತು ಮಕ್ಕಳು ಎಂದು ಹೇಳಲಾಗಿದೆ. ಹಾಗೆಯೇ ಇಸ್ರೇಲ್​ನಲ್ಲಿನ ವಿದೇಶಿ ಪ್ರಜೆಗಳು ಸೇರಿದಂತೆ 1,200 ಕ್ಕೂ ಹೆಚ್ಚು ಜನ ಸಾವಿಗೀಡಾಗಿದ್ದಾರೆ.

ಇದನ್ನೂ ಓದಿ : 'ಸೋವಿಯತ್ ವಿರುದ್ಧ ಅಫ್ಘಾನ್ ಜಿಹಾದ್​ಗೆ ರಹಸ್ಯ ನೆರವು ನೀಡಿತ್ತು ಯುಎಸ್': ರಹಸ್ಯ ದಾಖಲೆ ಬಹಿರಂಗ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.