ETV Bharat / international

ಪ್ರಧಾನಿ ಮೋದಿ ವಿದೇಶಿ ಪ್ರವಾಸ ಮುಕ್ತಾಯ : 4 ದಿನಗಳ ದಕ್ಷಿಣ ಆಫ್ರಿಕಾ ಮತ್ತು ಗ್ರೀಕ್​ ಭೇಟಿ ಹೇಗಿತ್ತು?

author img

By ETV Bharat Karnataka Team

Published : Aug 26, 2023, 7:02 AM IST

ಪ್ರಧಾನಿ ನರೇಂದ್ರ ಮೋದಿಯವರ ದಕ್ಷಿಣ ಆಫ್ರಿಕಾ ಮತ್ತು ಗ್ರೀಸ್ ಪ್ರವಾಸ ಮುಕ್ತಾಯಗೊಂಡಿದ್ದು ಭಾರತಕ್ಕೆ ಮರಳಿದ್ದಾರೆ. ಗ್ರೀಕ್ ಭೇಟಿಯ ಕೆಲ ಹೈಲೆಟ್ಸ್​ ಇಲ್ಲಿದೆ ನೋಡಿ.

PM Modi
ಪ್ರಧಾನಿ ಮೋದಿ

ಅಥೆನ್ಸ್ (ಗ್ರೀಸ್) : ಪ್ರಧಾನಿ ನರೇಂದ್ರ ಮೋದಿ ಅವರ ಗ್ರೀಸ್ ಪ್ರವಾಸ ಶುಕ್ರವಾರ ಮುಕ್ತಾಯಗೊಂಡಿದ್ದು ಅಥೆನ್ಸ್‌ನಿಂದ ಮರಳಿ ಭಾರತಕ್ಕೆ ಆಗಮಿಸಿದ್ದಾರೆ. ಈ ಬೆನ್ನಲ್ಲೇ ಇಂದು ಇಸ್ರೋ ವಿಜ್ಞಾನಿಗಳನ್ನು ಅಭಿನಂದಿಸಲು ಬೆಂಗಳೂರಿಗೆ ಭೇಟಿ ನೀಡಿದ್ದಾರೆ. ಆಗಸ್ಟ್ 21 ರಂದು ದಕ್ಷಿಣ ಆಫ್ರಿಕಾ ಮತ್ತು ಗ್ರೀಕ್​ಗೆ ನಾಲ್ಕು ದಿನಗಳ ಔಪಚಾರಿಕ ಪ್ರವಾಸ ಪ್ರಾರಂಭಿಸಿದ್ದ ಮೋದಿ, ಆಗಸ್ಟ್ 22-24 ರವರೆಗೆ ದಕ್ಷಿಣ ಆಫ್ರಿಕಾದ ಜೋಹಾನ್ಸ್‌ಬರ್ಗ್‌ನಲ್ಲಿ ನಡೆದ 15 ನೇ ಬ್ರಿಕ್ಸ್ ಶೃಂಗಸಭೆಯಲ್ಲಿ ಪಾಲ್ಗೊಂಡಿದ್ದರು. ಅಲ್ಲಿನ ಅಧ್ಯಕ್ಷ ಮಟಮೆಲಾ ಸಿರಿಲ್ ರಮಾಫೋಸಾ ಅವರ ಆಹ್ವಾನದ ಮೇರೆಗೆ ಭಾಗವಹಿಸಿದ್ದರು.

  • #WATCH | Athens, Greece | PM Narendra Modi says, "When the economy grows rapidly, the country rises out of poverty rapidly. In India, within just 5 years, 13.5 crore citizens came out of the poverty level..." pic.twitter.com/nxz4Hklq4a

    — ANI (@ANI) August 25, 2023 " class="align-text-top noRightClick twitterSection" data=" ">

ಗ್ರೀಸ್ ಭೇಟಿಯ ಸಂದರ್ಭದಲ್ಲಿ ಪ್ರಧಾನ ಮಂತ್ರಿಯವರು ಗ್ರೀಕ್ ಪ್ರಧಾನಿ ಕಿರಿಯಾಕೋಸ್ ಮಿಟ್ಸೋಟಾಕಿಸ್ ಮತ್ತು ಅಧ್ಯಕ್ಷೆ ಕಟೆರಿನಾ ಎನ್ ಸಕೆಲ್ಲರೊಪೌಲೌ ಅವರೊಂದಿಗೆ ಕೆಲ ಸಭೆಗಳನ್ನು ನಡೆಸಿದರು. ಬಳಿಕ, ಅಥೆನ್ಸ್‌ನಲ್ಲಿ ಪ್ರಧಾನಿ ಮೋದಿಯವರಿಗೆ ಗ್ರೀಸ್ ಎರಡನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಅಧ್ಯಕ್ಷೆ ಕಟರೀನಾ ಸಕೆಲ್ಲರೊಪೌಲೌ ಅವರು ಮೋದಿಯವರಿಗೆ ಗ್ರ್ಯಾಂಡ್ ಕ್ರಾಸ್ ಆಫ್ ದಿ ಆರ್ಡರ್ ಆಫ್ ಆನರ್ ಪ್ರಶಸ್ತಿ ಪ್ರಧಾನ ಮಾಡಿದರು. ಕಳೆದ 40 ವರ್ಷಗಳಲ್ಲಿ ಗ್ರೀಸ್‌ಗೆ ಭೇಟಿ ನೀಡಿದ ಮೊದಲ ಭಾರತೀಯ ಪ್ರಧಾನಿ ಮೋದಿ ಅವರಾಗಿದ್ದು, 1983 ರಲ್ಲಿ ಕೊನೆಯದಾಗಿ ಭೇಟಿ ನೀಡಲಾಗಿತ್ತು.

  • #WATCH | Prime Minister Narendra Modi departs from Athens for India.

    After concluding his two-nation visit to South Africa and Greece, the PM is heading straight to Bengaluru, Karnataka on a pre-scheduled visit. He will meet scientists of the ISRO team involved in the… pic.twitter.com/4qfyqoPC0T

    — ANI (@ANI) August 25, 2023 " class="align-text-top noRightClick twitterSection" data=" ">

ಗ್ರೀಕ್ ಭೇಟಿಯ ಅಂಗವಾಗಿ ವ್ಯಾಪಾರ ಸಮುದಾಯ, ಅನಿವಾಸಿ ಭಾರತೀಯರು ಹಾಗೂ ಪ್ರಮುಖ ಗಣ್ಯರೊಂದಿಗೆ ಮೋದಿ ಸಂವಾದ ನಡೆಸಿದರು. ಇದಕ್ಕೂ ಮುನ್ನ ಶುಕ್ರವಾರ ಬೆಳಗ್ಗೆ 'ಅಜ್ಞಾತ ಸೈನಿಕರ ಸಮಾಧಿ'ಗೆ ಅವರು ಶ್ರದ್ಧಾಂಜಲಿ ಸಲ್ಲಿಸಿದರು. ಅಲ್ಲದೇ, ಅಥೆನ್ಸ್​ಗೆ ಬಂದಿಳಿದ ಅವರಿಗೆ ಅದ್ಧೂರಿಯಾಗಿ ಸ್ವಾಗತ ಕೋರಲಾಯಿತು. ಅನಿವಾಸಿ ಭಾರತೀಯರು ಹೆಚ್ಚಿನ ಸಂಖ್ಯೆಯಲ್ಲಿ ಸೇರಿ ಪ್ರಧಾನಿ ಅವರನ್ನು ಅದ್ಧೂರಿಯಾಗಿ ಬರಮಾಡಿಕೊಂಡರು.

ದ್ವಿಪಕ್ಷೀಯ ಒಪ್ಪಂದ: ಇನ್ನು ಎರಡೂ ದೇಶಗಳು ದ್ವಿಪಕ್ಷೀಯ ಒಪ್ಪಂದ ಮಾಡಿಕೊಂಡವು. "ಕಾರ್ಯತಂತ್ರದ ಪಾಲುದಾರಿಕೆ ಸಂಬಂಧಿಸಿದಂತೆ ಉಭಯ ದೇಶಗಳ ರಾಜಕೀಯ, ಭದ್ರತೆ ಮತ್ತು ಆರ್ಥಿಕ ಕ್ಷೇತ್ರಗಳಲ್ಲಿ ದ್ವಿಪಕ್ಷೀಯ ಸಹಕಾರವನ್ನು ಮತ್ತಷ್ಟು ವಿಸ್ತರಿಸಲು ಕೆಲಸ ಮಾಡುವುದಾಗಿ ಒಪ್ಪಿಕೊಂಡಿವೆ ಎಂದು ಭಾರತ-ಗ್ರೀಸ್ ಜಂಟಿಯಾಗಿ ಹೇಳಿಕೆಯಲ್ಲಿ ಒತ್ತಿಹೇಳಿದೆ.

ಇದನ್ನೂ ಓದಿ : ಪ್ರಧಾನಿ ಮೋದಿಗೆ ಗ್ರೀಕ್‌ನ 'ಗ್ರ್ಯಾಂಡ್ ಕ್ರಾಸ್ ಆಫ್ ದಿ ಆರ್ಡರ್ ಆಫ್ ಆನರ್' ಗೌರವ

ಭಾರತ ಮತ್ತು ಗ್ರೀಸ್‌ನ ವ್ಯಾಪಾರ ನಿಯೋಗಗಳನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, "ವಿದೇಶಿ ಹೂಡಿಕೆಗೆ ಭಾರತದ ಬಾಗಿಲುಗಳು ಸದಾ ತೆರೆದಿರುತ್ತವೆ. ರಕ್ಷಣಾ ಕ್ಷೇತ್ರಗಳು ಸಹ ತೆರೆದುಕೊಳ್ಳುತ್ತಿವೆ. ಜೊತೆ ಜೊತೆಗೆ ಅಭಿವೃದ್ಧಿ ಮತ್ತು ಸಹ ಉತ್ಪಾದನೆ ಮುಖ್ಯವಾಗಿದ್ದು, ಡಿಜಿಟಲೀಕರಣದೊಂದಿಗೆ ವ್ಯಾಪಾರ ನಿರಂತರವಾಗಿ ಹೆಚ್ಚುತ್ತಿದೆ" ಎಂದು ಪ್ರತಿಪಾದಿಸಿದರು.

  • #WATCH | PM Narendra Modi met Greek researcher, musician and friend of India, Konstantinos Kalaitzis, in Athens.

    MEA Spokesperson Arindam Bagchi tweets, "PM appreciated Konstantinos Kalaitzis's affection for India and his passion for Indian music and dance. They discussed the… pic.twitter.com/GF9s2q7CcP

    — ANI (@ANI) August 25, 2023 " class="align-text-top noRightClick twitterSection" data=" ">

ಗ್ರೀಸ್ ಭೇಟಿಗೂ ಮುನ್ನ ಪ್ರಧಾನಿ ಮೋದಿ, ದಕ್ಷಿಣ ಆಫ್ರಿಕಾದ ಜೋಹಾನ್ಸ್‌ಬರ್ಗ್‌ನಲ್ಲಿ ನಡೆದ 15 ನೇ ಬ್ರಿಕ್ಸ್ ಶೃಂಗಸಭೆಯಲ್ಲಿ ಭಾಗವಹಿಸಿದ್ದರು, ಅಲ್ಲಿ ಬ್ರಿಕ್ಸ್ ರಾಷ್ಟ್ರಗಳ ಗುಂಪು ಆರು ಹೊಸ ಸದಸ್ಯರನ್ನು ತಮ್ಮ ತಂಡಕ್ಕೆ ಸೇರಿಸಿಕೊಳ್ಳಲು ನಿರ್ಧರಿಸಿತು. ಅರ್ಜೆಂಟೀನಾ, ಈಜಿಪ್ಟ್, ಇಥಿಯೋಪಿಯಾ, ಇರಾನ್, ಸೌದಿ ಅರೇಬಿಯಾ ಹಾಗೂ ಯುನೈಟೆಡ್ ಅರಬ್ ಎಮಿರೇಟ್ಸ್‌ (ಯುಎಇ) ಅನ್ನು ಹೊಸ ಸದಸ್ಯ ರಾಷ್ಟ್ರಗಳನ್ನಾಗಿ ಸೇರಿಸಿಕೊಳ್ಳಲು ಬ್ರಿಕ್ಸ್​ ರಾಷ್ಟ್ರಗಳ ನಾಯಕರು ಸಮ್ಮತಿಸಿದರು. ಹೊಸ ಸದಸ್ಯತ್ವವು ಜನವರಿ 1, 2024 ರಿಂದ ಜಾರಿಗೆ ಬರಲಿದೆ. ಬ್ರೆಜಿಲ್, ರಷ್ಯಾ, ಭಾರತ, ಚೀನಾ ಮತ್ತು ದಕ್ಷಿಣ ಆಫ್ರಿಕಾದ (BRICS) ನಾಯಕರು ಗುಂಪಿನ ವಿಸ್ತರಣೆ ಬೆಂಬಲಿಸಿದರು.

ಬೆಂಗಳೂರಿಗೆ ಭೇಟಿ : ಪ್ರಧಾನಿ ನರೇಂದ್ರ ಮೋದಿ ಅವರು ದಕ್ಷಿಣ ಆಫ್ರಿಕಾ ಮತ್ತು ಗ್ರೀಸ್‌ ರಾಷ್ಟ್ರಗಳ ಭೇಟಿ ಬಳಿಕ ದೇಶಕ್ಕೆ ಮರಳಿದ್ದಾರೆ. ಇಂದು ಬೆಳಗ್ಗೆ ಬೆಂಗಳೂರಿಗೆ ಆಗಮಿಸಿದ್ದಾರೆ. ಯಶಸ್ವಿ ಚಂದ್ರಯಾನ-3 ಮಿಷನ್‌ನಲ್ಲಿ ಭಾಗಿಯಾಗಿರುವ ಇಸ್ರೋ ವಿಜ್ಞಾನಿಗಳನ್ನು ಭೇಟಿ, ಮಾಡಿ ಸಂವಾದ ನಡೆಸುತ್ತಿದ್ದಾರೆ. 15 ನೇ ಬ್ರಿಕ್ಸ್ ಶೃಂಗಸಭೆಯಲ್ಲಿ ಭಾಗವಹಿಸಿದ್ದಾಗ ಜೋಹಾನ್ಸ್‌ಬರ್ಗ್‌ನಿಂದ ಲ್ಯಾಂಡರ್ ವಿಕ್ರಮ್​ನ ಐತಿಹಾಸಿಕ ಸ್ಪರ್ಶದ ನೇರ ಪ್ರಸಾರವನ್ನು ಮೋದಿ ವೀಕ್ಷಿಸಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.