ETV Bharat / international

ಪ್ರಧಾನಿ ಮೋದಿಗೆ ಗ್ರೀಕ್‌ನ 'ಗ್ರ್ಯಾಂಡ್ ಕ್ರಾಸ್ ಆಫ್ ದಿ ಆರ್ಡರ್ ಆಫ್ ಆನರ್' ಗೌರವ

author img

By ETV Bharat Karnataka Team

Published : Aug 25, 2023, 4:46 PM IST

PM Modi Greek Visit: ಪ್ರಧಾನಿ ನರೇಂದ್ರ ಮೋದಿ ಅವರಿಂದು ಗ್ರೀಕ್ ಅಧ್ಯಕ್ಷೆ ಕಟೆರಿನಾ ಸಕೆಲ್ಲರೊಪೌಲ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು. ಈ ಸಂದರ್ಭದಲ್ಲಿ 'ಗ್ರ್ಯಾಂಡ್ ಕ್ರಾಸ್ ಆಫ್ ದಿ ಆರ್ಡರ್ ಆಫ್ ಆನರ್' ಪ್ರಶಸ್ತಿ ಪ್ರದಾನ ಮಾಡಲಾಯಿತು.

Modi meets Greek President speaks about Chandrayaans success
ಪ್ರಧಾನಿ ಮೋದಿಗೆ ಗ್ರೀಕ್ ದೇಶದ ಅತ್ಯುನ್ನತ ಪ್ರಶಸ್ತಿ ನೀಡಿ ಗೌರವಿಸಿದ ಅಧ್ಯಕ್ಷೆ ಕಟೆರಿನಾ

ಅಥೆನ್ಸ್​ (ಗ್ರೀಕ್​): ಗ್ರೀಕ್​ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಆ ದೇಶದ ಅತ್ಯುನ್ನತ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. 'ಗ್ರ್ಯಾಂಡ್ ಕ್ರಾಸ್ ಆಫ್ ದಿ ಆರ್ಡರ್ ಆಫ್ ಆನರ್' ನೀಡಿ ಅಧ್ಯಕ್ಷೆ ಕಟೆರಿನಾ ಸಕೆಲ್ಲರೊಪೌಲ್ ಗೌರವಿಸಿದ್ದಾರೆ. ಇದು ಗ್ರೀಕ್ ದೇಶದ ಎರಡನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾಗಿದೆ.

ಬ್ರಿಕ್ಸ್​ ಶೃಂಗಸಭೆ ನಿಮಿತ್ತ ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಂಡಿದ್ದ ಮೋದಿ ಅಲ್ಲಿಂದ ಶುಕ್ರವಾರ ಗ್ರೀಕ್​ ರಾಜಧಾನಿ ಅಥೆನ್ಸ್​ಗೆ ಬಂದಿಳಿದಿದ್ದಾರೆ. ಇದು ಮೋದಿ ಅವರ ಮೊದಲ ಗ್ರೀಕ್​ ಪ್ರವಾಸವಾಗಿದೆ. ಅಲ್ಲದೇ, 40 ವರ್ಷಗಳ ನಂತರ ಭಾರತದ ಪ್ರಧಾನಿಯೊಬ್ಬರು ಆ ರಾಷ್ಟ್ರಕ್ಕೆ ನೀಡಿದ ಭೇಟಿ ಇದಾಗಿದೆ. 1983ರಲ್ಲಿ ಕೊನೆಯದಾಗಿ ಅಂದಿನ ಪ್ರಧಾನಿ ಇಂದಿರಾ ಗಾಂಧಿ ಭೇಟಿ ಕೊಟ್ಟಿದ್ದರು.

ಇಂದು ಅಥೆನ್ಸ್​ಗೆ ಆಗಮಿಸಿದ ಮೋದಿ ಅವರು ಗ್ರೀಕ್ ಅಧ್ಯಕ್ಷೆ ಕಟೆರಿನಾ ಸಕೆಲ್ಲರೊಪೌಲ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು. ಈ ಸಂದರ್ಭದಲ್ಲಿ ಚಂದ್ರಯಾನ-3 ಮಿಷನ್‌ನ ಯಶಸ್ಸಿನ ಕುರಿತು ಚರ್ಚಿಸಿದರು. ಟ್ವೀಟ್​ ಮಾಡಿರುವ ಪ್ರಧಾನಿ ಮೋದಿ, ''ಅಥೆನ್ಸ್‌ನಲ್ಲಿ ಅಧ್ಯಕ್ಷೆ ಕಟೆರಿನಾ ಸಕೆಲ್ಲರೊಪೌಲ್ ಅವರನ್ನು ಭೇಟಿ ಮಾಡಿದ್ದು ಸಂತೋಷವಾಗಿದೆ. ಭಾರತ-ಗ್ರೀಸ್ ಸ್ನೇಹವನ್ನು ಬಲಪಡಿಸುವ ಹಲವಾರು ವಿಷಯಗಳನ್ನು ನಾವು ಚರ್ಚಿಸಿದ್ದೇವೆ. ಸುಸ್ಥಿರ ಅಭಿವೃದ್ಧಿಯನ್ನು ಹೆಚ್ಚಿಸುವ ಮಾರ್ಗಗಳನ್ನೂ ನಾವು ಮಾತನಾಡಿದ್ದೇವೆ. ಚಂದ್ರಯಾನ-3ರ ಯಶಸ್ಸಿಗೆ ಗ್ರೀಕ್ ಅಧ್ಯಕ್ಷರು ಭಾರತವನ್ನು ಅಭಿನಂದಿಸಿದರು'' ಎಂದು ತಿಳಿಸಿದ್ದಾರೆ.

  • Glad to have met President Katerina Sakellaropoulou in Athens. We discussed several issues which will strengthen the India-Greece friendship. We also discussed ways to boost sustainable development. She congratulated India on the success of Chandrayaan-3. @PresidencyGR pic.twitter.com/aoQFtKMdQq

    — Narendra Modi (@narendramodi) August 25, 2023 " class="align-text-top noRightClick twitterSection" data=" ">

ಇದನ್ನೂ ಓದಿ: ಭಾರತವು ವಿಶ್ವದ ಬೆಳವಣಿಗೆಯ ಎಂಜಿನ್: ಬ್ರಿಕ್ಸ್ ಬಿಸಿನೆಸ್ ಫೋರಂನಲ್ಲಿ ಪ್ರಧಾನಿ ಮೋದಿ

ಈ ಭೇಟಿಯ ಸಂದರ್ಭದಲ್ಲಿ ಅಧ್ಯಕ್ಷೆ ಸಕೆಲ್ಲರೊಪೌಲ್ ಅವರು ಪ್ರಧಾನಿ ಮೋದಿ ಅವರಿಗೆ 'ಗ್ರ್ಯಾಂಡ್ ಕ್ರಾಸ್ ಆಫ್ ದಿ ಆರ್ಡರ್ ಆಫ್ ಆನರ್' ನೀಡಿ ಗೌರವಿಸಿದರು. ಈ ಬಗ್ಗೆ ಮತ್ತೊಂದು ಟ್ವೀಟ್​ ಮಾಡಿರುವ ಪ್ರಧಾನಿ, "ನನಗೆ ಗ್ರ್ಯಾಂಡ್​ ಕ್ರಾಸ್​ ಆಫ್ ದಿ ಆರ್ಡರ್ ಆಫ್ ಆನರ್ ನೀಡಿದ್ದಕ್ಕಾಗಿ ನಾನು ಅಧ್ಯಕ್ಷೆ ಕಟೆರಿನಾ ಸಕೆಲ್ಲರೊಪೌಲೌ, ಸರ್ಕಾರ ಮತ್ತು ಗ್ರೀಸ್ ಜನರಿಗೆ ಧನ್ಯವಾದಗಳು. ಇದು ಗ್ರೀಸ್‌ನ ಜನರು ಭಾರತದ ಬಗ್ಗೆ ಹೊಂದಿರುವ ಗೌರವವನ್ನು ತೋರಿಸುತ್ತದೆ'' ಎಂದು ಹೇಳಿದ್ದಾರೆ.

  • I thank President Katerina Sakellaropoulou, the Government and people of Greece for conferring upon me The Grand Cross of the Order of Honour. This shows the respect the people of Greece have towards India. @PresidencyGR pic.twitter.com/UWBua3qbPf

    — Narendra Modi (@narendramodi) August 25, 2023 " class="align-text-top noRightClick twitterSection" data=" ">

ಗ್ರೀಕ್ ವ್ಯಾಪಾರ ಸಮುದಾಯ, ಭಾರತೀಯ ಸಮುದಾಯ ಮತ್ತು ಪ್ರಮುಖ ಗಣ್ಯರೊಂದಿಗೆ ಮೋದಿ ಸಂವಾದ ನಡೆಸಲಿದ್ದಾರೆ. ಇದಕ್ಕೂ ಮುನ್ನ ಶುಕ್ರವಾರ ಬೆಳಗ್ಗೆ 'ಅಜ್ಞಾತ ಸೈನಿಕರ ಸಮಾಧಿ'ಗೆ ಅವರು ಶ್ರದ್ಧಾಂಜಲಿ ಸಲ್ಲಿಸಿದರು. ಅಲ್ಲದೇ, ಅಥೆನ್ಸ್​ಗೆ ಬಂದಿಳಿದ ಅವರಿಗೆ ಅದ್ಧೂರಿಯಾಗಿ ಸ್ವಾಗತ ಕೋರಲಾಯಿತು. ಅನಿವಾಸಿ ಭಾರತೀಯರು ಹೆಚ್ಚಿನ ಸಂಖ್ಯೆಯಲ್ಲಿ ಸೇರಿ ಪ್ರಧಾನಿಯನ್ನು ಬರಮಾಡಿಕೊಂಡರು.

ಇದನ್ನೂ ಓದಿ: ಗ್ರೀಸ್​ನಲ್ಲಿ ನೆಲೆಸಿರುವ ಭಾರತೀಯರಿಂದ ಮೋದಿಗೆ ಅದ್ದೂರಿ ಸ್ವಾಗತ.. ಮೊಳಗಿದ 'ಭಾರತ್ ಮಾತಾ ಕಿ ಜೈ,' 'ಮೋದಿ, ಮೋದಿ' ಘೋಷಣೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.