ETV Bharat / international

ಭಾರತವು ವಿಶ್ವದ ಬೆಳವಣಿಗೆಯ ಎಂಜಿನ್: ಬ್ರಿಕ್ಸ್ ಬಿಸಿನೆಸ್ ಫೋರಂನಲ್ಲಿ ಪ್ರಧಾನಿ ಮೋದಿ

author img

By ETV Bharat Karnataka Team

Published : Aug 22, 2023, 11:08 PM IST

PM Modi South Africa Visit: ಮುಂಬರುವ ವರ್ಷಗಳಲ್ಲಿ ಭಾರತವು ವಿಶ್ವದ ಬೆಳವಣಿಗೆಯ ಎಂಜಿನ್ ಆಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

Etv Bharat
ಭಾರತವು ವಿಶ್ವದ ಬೆಳವಣಿಗೆಯ ಎಂಜಿನ್: ಬ್ರಿಕ್ಸ್ ಬಿಸಿನೆಸ್ ಫೋರಂನಲ್ಲಿ ಪ್ರಧಾನಿ ಮೋದಿ

ಜೋಹಾನ್ಸ್‌ಬರ್ಗ್ (ದಕ್ಷಿಣ ಆಫ್ರಿಕಾ): ಅಸ್ಥಿರವಾದ ಜಾಗತಿಕ ಆರ್ಥಿಕತೆಯ ಹೊರತಾಗಿಯೂ ಭಾರತವು ವಿಶ್ವದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಪ್ರಮುಖ ಆರ್ಥಿಕತೆಯಾಗಿ ಹೊರಹೊಮ್ಮಿದೆ. ಶೀಘ್ರದಲ್ಲೇ ಭಾರತ ಐದು ಟ್ರಿಲಿಯನ್ ಡಾಲರ್ ಆರ್ಥಿಕತೆಯಾಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.

ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿರುವ ಪಿಎಂ ಮೋದಿ ಮಂಗಳವಾರ ಬ್ರಿಕ್ಸ್ ಬಿಸಿನೆಸ್ ಫೋರಂ ನಾಯಕರ ಸಂವಾದದಲ್ಲಿ ಮಾತನಾಡಿ, ''ಮುಂಬರುವ ವರ್ಷಗಳಲ್ಲಿ ಭಾರತವು ವಿಶ್ವದ ಬೆಳವಣಿಗೆಯ ಎಂಜಿನ್ ಆಗಲಿದೆ'' ಎಂದೂ ಹೇಳಿದರು. ''ಭಾರತವು ವಿಶ್ವದ ಮೂರನೇ ಅತಿದೊಡ್ಡ ಸ್ಟಾರ್ಟ್​ಅಪ್ ಪರಿಸರ ವ್ಯವಸ್ಥೆ ಹೊಂದಿದ್ದು, 100ಕ್ಕೂ ಹೆಚ್ಚು ಯುನಿಕಾರ್ನ್‌ಗಳಿವೆ. ಸರ್ಕಾರ ಕೈಗೊಂಡಿರುವ ಮಿಷನ್ ಮೋಡ್ ಸುಧಾರಣೆಗಳ ಪರಿಣಾಮ ವ್ಯಾಪಾರ ಸುಲಭತೆಯು (Ease of Doing Business) ಸುಧಾರಿಸಿದೆ'' ಎಂದು ತಿಳಿಸಿದರು.

  • PHOTO | "Despite a shaky world economy, India has emerged as world's fastest growing major economy. India will soon become 5 trillion dollar economy," said PM Modi addressing the BRICS Business Forum Leaders' Dialogue in Johannesburg, South Africa. #BRICSSummit2023 pic.twitter.com/flqjjKUsq8

    — Press Trust of India (@PTI_News) August 22, 2023 " class="align-text-top noRightClick twitterSection" data=" ">

''2009ರಲ್ಲಿ ಮೊದಲ ಬ್ರಿಕ್ಸ್ ಶೃಂಗಸಭೆ ನಡೆದಾಗ ಜಗತ್ತು ದೊಡ್ಡ ಆರ್ಥಿಕ ಬಿಕ್ಕಟ್ಟಿನಿಂದ ಹೊರಬರುತ್ತಿತ್ತು. ಅದೇ ಸಮಯದಲ್ಲಿ ವಿಶ್ವ ಆರ್ಥಿಕತೆಯ ಭರವಸೆಯ ಕಿರಣವಾಗಿ ಬ್ರಿಕ್ಸ್​ ಹೊರಹೊಮ್ಮಿತ್ತು'' ಎಂದು ಪ್ರಧಾನಿ ಮೋದಿ ಅಭಿಪ್ರಾಯಪಟ್ಟರು. ಬ್ರೆಜಿಲ್, ರಷ್ಯಾ, ಭಾರತ, ಚೀನಾ ಮತ್ತು ದಕ್ಷಿಣ ಆಫ್ರಿಕಾ ರಾಷ್ಟ್ರಗಳನ್ನು ಬ್ರಿಕ್ಸ್​ ಒಳಗೊಂಡಿದೆ. 2019ರ ನಂತರ ಮೊದಲ ಬಾರಿಗೆ ಶೃಂಗಸಭೆಯನ್ನು ಆಫ್ರಿಕಾದಲ್ಲಿ ನಡೆಯುತ್ತಿದ್ದು, ಆ ರಾಷ್ಟ್ರವು ಮೊದಲ ಶೃಂಗಸಭೆಯನ್ನು ಆಯೋಜಿಸಿದೆ.

ಆಗಸ್ಟ್ 22ರಿಂದ 24 ರವರೆಗೆ ಈ ಶೃಂಗಸಭೆ ನಡೆಯುತ್ತಿದ್ದು, ದಕ್ಷಿಣ ಆಫ್ರಿಕಾ ಅಧ್ಯಕ್ಷ ಮಟಮೆಲಾ ಸಿರಿಲ್ ರಮಾಫೋಸಾ ಆಹ್ವಾನದ ಮೇರೆಗೆ ಪ್ರಧಾನಿ ಮೋದಿ ತೆರಳಿದ್ದಾರೆ. ಬ್ರಿಕ್ಸ್​ ಸದಸ್ಯ ರಾಷ್ಟ್ರಗಳ ನಾಯಕರು ಇದರಲ್ಲಿ ಪಾಲ್ಗೊಂಡಿದ್ದಾರೆ. ಚೀನಾ ಅಧ್ಯಕ್ಷ ಕ್ಸಿ ಜಿನ್​ಪಿಂಗ್​ ಸಭೆಯಲ್ಲಿ ಹಾಜರಿರಲಿದ್ದಾರೆ ಚೀನಾದ ಜೊತೆಗೆ ಗಡಿ ತಂಟೆ ನಡುವೆಯೇ ಬ್ರಿಕ್ಸ್ ಸಭೆಯಲ್ಲಿ ಚೀನಾ ಅಧ್ಯಕ್ಷ ಹಾಗೂ ಪ್ರಧಾನಿ ಮೋದಿ ಅವರ ನಡುವೆ ಮಾತುಕತೆ ನಡೆಯುವ ಸಾಧ್ಯತೆಯೂ ಇದೆ.

ಇಂದು ಬೆಳಗ್ಗೆ ನವದೆಹಲಿಯಿಂದ ತಮ್ಮ ಪ್ರಯಾಣ ಆರಂಭಿಸಿದ್ದ ಪ್ರಧಾನಿ ಜೋಹಾನ್ಸ್‌ಬರ್ಗ್ ವಿಮಾನಕ್ಕೆ ಬಂದಿಳಿದಿದ್ದರು. ವಿಮಾನ ನಿಲ್ದಾಣದಲ್ಲಿ ಪ್ರಧಾನಿ ಮೋದಿ ಅವರನ್ನು ಅದ್ಧೂರಿ ಬರಮಾಡಿಕೊಳ್ಳಲಾಯಿತು. ಪ್ರಧಾನಿ ಮೋದಿ ಆಗಮನ ಹಿನ್ನೆಲೆಯಲ್ಲಿ ಭಾರತೀಯ ಸಮುದಾಯ ಹಚ್ಚಿನ ಸಂಖ್ಯೆಯಲ್ಲಿ ವಿಮಾನ ನಿಲ್ದಾಣಕ್ಕೆ ಆಗಮಿಸಿತ್ತು. ಆಫ್ರಿಕಾದ ನೃತ್ಯಗಾರರು ಸಾಂಪ್ರದಾಯಿಕ ನೃತ್ಯದೊಂದಿಗೆ ಭಾರತೀಯ ಶೈಲಿಯ ಡೋಲು, ವಾದ್ಯಗಳ ಕಲಾವಿದರೂ ಮೋದಿ ಅವರಿಗೆ ಸ್ವಾಗತಿಸಿದರು. ಅಲ್ಲದೇ, ಸ್ವಾಮೀಜಿಗಳು ಹಾಗೂ ಜೈನ ಮುನಿಗಳು ಸೇರಿದಂತೆ ಹಲವರು ದೇವ ಗೀತೆಗಳನ್ನು ಹಾಡುವ ಮೂಲಕವೂ ಮೋದಿ ಅವರನ್ನು ಬರಮಾಡಿಕೊಂಡರು.

ಇದನ್ನೂ ಓದಿ: ಬ್ರಿಕ್ಸ್​ ಶೃಂಗಸಭೆ: ಜೋಹಾನ್ಸ್​ಬರ್ಗ್​ಗೆ ಬಂದಿಳಿದ ಪ್ರಧಾನಿ ಮೋದಿಗೆ​ ಸಾಂಪ್ರದಾಯಿಕ ಸ್ವಾಗತ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.