ETV Bharat / international

ಅಮೆರಿಕದ ಸ್ಪೀಕರ್​ ನ್ಯಾನ್ಸಿ ಕುಟುಂಬದ ಮೇಲೆ ಭೀಕರ ದಾಳಿ.. ಪತಿಗೆ ಗಂಭೀರ ಗಾಯ

author img

By

Published : Oct 29, 2022, 6:57 AM IST

intruder-attacks-americas-speaker-pelosis-husband
ಅಮೆರಿಕದ ಸ್ಪೀಕರ್​ ನ್ಯಾನ್ಸಿ ಕುಟುಂಬದ ಮೇಲೆ ಭೀಕರ ದಾಳಿ

ಅಮೆರಿಕದ ಸ್ಪೀಕರ್​ ನ್ಯಾನ್ಸಿ ಫೆಲೋಸಿ ಅವರನ್ನು ಗುರಿಯಾಗಿಸಿಕೊಂಡು ನಡೆದ ದಾಳಿಯಲ್ಲಿ ಅವರ ಪತಿ ಗಂಭೀರ ಗಾಯಗೊಂಡಿದ್ದಾರೆ. ಮನೆಗೆ ನುಗ್ಗಿದ ಹಲ್ಲೆಕೋರ ಫೇಲೋಸಿ ಪತಿಯ ಮೇಲೆ ಗಂಭೀರ ಹಲ್ಲೆ ನಡೆಸಿದ್ದಾನೆ.

ಅಮೆರಿಕ: ಚೀನಾ ತನ್ನ ಅಧೀನಕ್ಕೆ ತೆಗೆದುಕೊಳ್ಳಲು ಯತ್ನಿಸುತ್ತಿರುವ ತೈವಾನ್ ದೇಶಕ್ಕೆ ಈಚೆಗೆ ಭೇಟಿ ನೀಡಿ ಸುದ್ದಿಯಾಗಿದ್ದ ಅಮೆರಿಕದ ಸ್ಪೀಕರ್​ ನ್ಯಾನ್ಸಿ ಫೆಲೋಸಿ ಕುಟುಂಬದ ಮೇಲೆ ಭೀಕರ ದಾಳಿ ನಡೆದಿದೆ. ವ್ಯಕ್ತಿಯೊಬ್ಬ ಮನೆಗೆ ನುಗ್ಗಿ ಆಕೆಯ ಪತಿಗೆ ಸುತ್ತಿಗೆಯಿಂದ ಜಜ್ಜಿದ್ದಾನೆ. ಗಂಭೀರ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ದಾಳಿಯ ವೇಳೆ ಸ್ಪೀಕರ್​ ನ್ಯಾನ್ಸಿ ಫೆಲೋಸಿ ಅವರು ಮನೆಯಲ್ಲಿರಲಿಲ್ಲ. ಏಕಾಏಕಿ ಮನೆಗೆ ನುಗ್ಗಿದ ವ್ಯಕ್ತಿ ಕುಟುಂಬಸ್ಥರ ಮೇಲೆ ಹಲ್ಲೆ ಮಾಡಿದ್ದಾನೆ. ಫೆಲೋಸಿ ಅವರ ಪತಿಯನ್ನು ಸುತ್ತಿಗೆಯಿಂದ ಮನಸೋಇಚ್ಚೆ ಹೊಡೆದು ಪರಾರಿಯಾಗಿದ್ದಾನೆ. ಇದರಿಂದ ಅವರು ಗಂಭೀರ ಗಾಯಗೊಂಡಿದ್ದಾರೆ.

ವಿಷಯ ತಿಳಿದ ಪೊಲೀಸರು ತಕ್ಷಣವೇ ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದಾರೆ. ಗಾಯಗೊಂಡ ಫೆಲೋಸಿ ಪತಿಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ನ್ಯಾನ್ಸಿ ಫೆಲೋಸಿ ಅವರು ದಾಳಿ ವೇಳೆ ಮನೆಯಲ್ಲಿ ಇಲ್ಲದ ಕಾರಣ ಹಲ್ಲೆಕೋರ ಪರಾರಿಯಾಗಿದ್ದಾನೆ. ಸ್ಪೀಕರ್ ​ಮೇಲೆಯೇ ದಾಳಿ ಮಾಡಲು ಆತ ಮನೆಗೆ ನುಗ್ಗಿದ್ದ ಎಂದು ತಿಳಿದುಬಂದಿದೆ.

ನ್ಯಾನ್ಸಿ ಎಲ್ಲೆಂದು ಕೇಳಿದ ಹಲ್ಲೆಕೋರ: ಮನೆಗೆ ನುಗ್ಗಿ ಹಲ್ಲೆ ನಡೆಸಿದ ದಾಳಿಕೋರ ನ್ಯಾನ್ಸಿ ಎಲ್ಲಿ, ನ್ಯಾನ್ಸಿ ಎಲ್ಲಿ ಎಂದು ಪ್ರಶ್ನಿಸುತ್ತಲೇ ಆಕೆಯ ಪತಿಯನ್ನು ಹೊಡೆದಿದ್ದಾನೆ. ಸ್ಪೀಕರ್​ ಗುರಿಯಾಗಿಸಿಕೊಂಡೇ ಈತ ದಾಳಿ ನಡೆಸಿದ್ದ.

ಇನ್ನು ದಾಳಿಕೋರನನ್ನು ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಅವರ ಬೆಂಬಲಿಗ ಎಂದು ಹೇಳಲಾಗಿದ್ದು, ಬಂಧಿಸಲಾಗಿದೆ. ದಾಳಿ ನಡೆಸಲು ಕಾರಣ ಏನೆಂದು ಗೊತ್ತಾಗಿಲ್ಲ. ಇನ್ನು ಕೆಲ ದಿನಗಳ ಬಳಿಕ ದೇಶದಲ್ಲಿ ಮಧ್ಯಂತರ ಚುನಾವಣೆ ನಡೆಯಲಿದ್ದು, ಈ ಮಧ್ಯೆಯೇ ರಾಜಕೀಯ ದ್ವೇಷ ಭುಗಿಲೆದ್ದಿದೆ. ದಾಳಿಯನ್ನು ಅಧ್ಯಕ್ಷ ಜೋ ಬೈಡನ್​​ ಖಂಡಿಸಿದ್ದು, ಬೆದರಿಕೆ ಹಿನ್ನೆಲೆಯಲ್ಲಿ ಸ್ಪೀಕರ್​ ಸೇರಿದಂತೆ ಎಲ್ಲ ಸಂಸದರಿಗೆ ಹೆಚ್ಚಿನ ಭದ್ರತೆ ನೀಡಲು ಸೂಚಿಸಿದ್ದಾರೆ.

ಓದಿ: ಕಾಶ್ಮೀರ ವಿವಾದವನ್ನು ಭಾರತ-ಪಾಕ್​ ಮಾತುಕತೆ ಮೂಲಕ ಪರಿಹರಿಸಬೇಕು: ಚೀನಾ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.