ETV Bharat / international

ಚೀನಾದ ಬಳಿಕ ಭಾರತದಲ್ಲೇ ನಗರವಾಸಿಗಳು ಹೆಚ್ಚು: ವಿಶ್ವಸಂಸ್ಥೆ ವರದಿ

author img

By

Published : Jun 30, 2022, 5:48 PM IST

ಜಗತ್ತಿನಾದ್ಯಂತ ನಗರವಾಸಿಗಳ ಜನಸಂಖ್ಯೆ ಮತ್ತೆ ಏರಿಕೆ ಕಾಣುತ್ತಿರುವುದನ್ನು ವಿಶ್ವಸಂಸ್ಥೆಯ ವರದಿ ಗುರುತಿಸಿದೆ. ಚೀನಾದ ಬಳಿಕ ಹೆಚ್ಚು ನಗರವಾಸಿಗಳಿರುವ ದೇಶ ಭಾರತವಾಗಲಿದೆ ಎಂಬುದು ವರದಿಯ ಸಾರಾಂಶ.

ಚೀನಾದ ಬಳಿಕ ಭಾರತದಲ್ಲೇ ನಗರವಾಸಿಗಳು ಹೆಚ್ಚು: ವಿಶ್ವಸಂಸ್ಥೆ ವರದಿ
ಚೀನಾದ ಬಳಿಕ ಭಾರತದಲ್ಲೇ ನಗರವಾಸಿಗಳು ಹೆಚ್ಚು: ವಿಶ್ವಸಂಸ್ಥೆ ವರದಿ

ವಿಶ್ವಸಂಸ್ಥೆ: ಕೊರೊನಾ ಬಳಿಕ ವಿಶ್ವದಲ್ಲಿ ನಗರವಾಸಿಗಳ ಸಂಖ್ಯೆ ಏರುಗತಿಯಲ್ಲಿ ಸಾಗಿದೆ. ಭಾರತದಲ್ಲಿ 2035 ರ ವೇಳೆಗೆ ನಗರವಾಸಿಗಳ ಸಂಖ್ಯೆ 675 ಮಿಲಿಯನ್​ ದಾಟಲಿದೆ. ಚೀನಾಕ್ಕಿಂತ 1 ಬಿಲಿಯನ್​ ಹಿಂದಿರಲಿದೆ ಎಂದು ವರದಿಯೊಂದು ತಿಳಿಸಿದೆ.

ಕೊರೊನಾ ಅಬ್ಬರಿಸಿದ ಕಾರಣ ನಗರದಿಂದ ವಲಸೆ ಹೋಗಿದ್ದ ಜನರು ಇದೀಗ ಮತ್ತೆ ವಾಪಸ್​ ನಗರಗಳಿಗೆ ಎಡತಾಕುತ್ತಿದ್ದಾರೆ. ಹೀಗಾಗಿ ನಗರವಾಸಿಗಳ ಸಂಖ್ಯೆ ಮತ್ತೆ ದಿಢೀರ್​ ಏರಿಕೆಯಾಗಿದೆ. 2050 ರ ವೇಳೆಗೆ ಈ ಸಂಖ್ಯೆ 2.2 ಬಿಲಿಯನ್​ ದಾಟಲಿದೆ ಎಂದು ವಿಶ್ವಸಂಸ್ಥೆಯ ಹ್ಯಾಬಿಟಾಟ್‌ನ ವಿಶ್ವ ನಗರಗಳ ವರದಿಯಲ್ಲಿ ಹೇಳಲಾಗಿದೆ. ನಗರೀಕರಣವು ಕೊರೊನಾ ಸಾಂಕ್ರಾಮಿಕದಿಂದ ತಾತ್ಕಾಲಿಕವಾಗಿ ವಿಳಂಬ ಹಾದಿಯಲ್ಲಿದೆ ಎಂದೂ ವರದಿ ಹೇಳಿದೆ.

ಜಾಗತಿಕವಾಗಿ ನಗರಗಲ್ಲಿ ವಾಸಿಸುವ ಜನಸಂಖ್ಯೆಯು 2050 ರ ವೇಳೆಗೆ ಇನ್ನೂ 2.2 ಶತಕೋಟಿ ಬೆಳೆಯಲಿದೆ. ಭಾರತದ ನಗರ ಜನಸಂಖ್ಯೆಯು 2035 ರ ವೇಳೆಗೆ 675 ಮಿಲಿಯನ್​ ಆಗಲಿದೆ ಎಂದು ವರದಿ ಅಂದಾಜಿಸಿದೆ. 2020 ರಲ್ಲಿ ಈ ಸಂಖ್ಯೆ 483 ಮಿಲಿಯನ್​ ಇದ್ದರೆ, 2025 ರಲ್ಲಿ 542 ಮಿಲಿಯನ್​ ಹೆಚ್ಚಲಿದೆ. ಇದು ಜನಸಂಖ್ಯೆಯ ಶೇ.43.2 ರಷ್ಟಾಗಲಿದೆ ಎಂದು ಅದು ಹೇಳಿದೆ.

2035 ರಲ್ಲಿ ಚೀನಾದ ನಗರ ಜನಸಂಖ್ಯೆಯು 1.05 ಬಿಲಿಯನ್​ ದಾಟಲಿದೆ ಎಂದು ಅಂದಾಜಿಸಿರುವ ವರದಿ, ಏಷ್ಯಾದ ನಗರ ಜನಸಂಖ್ಯೆಯು 2035 ರಲ್ಲಿ 2.99 ಬಿಲಿಯನ್​ ಮೀರಿದರೆ, ದಕ್ಷಿಣ ಏಷ್ಯಾದಲ್ಲಿ 987 ಮಿಲಿಯನ್​ ಹೆಚ್ಚಲಿದೆ. ಚೀನಾ ಮತ್ತು ಭಾರತದಂತಹ ದೊಡ್ಡ ಆರ್ಥಿಕತೆ ರಾಷ್ಟ್ರಗಳೇ ವಿಶ್ವದ ಇಡೀ ಜನಸಂಖ್ಯೆಯಲ್ಲಿ ಹೆಚ್ಚಿನ ಪಾಲು ಹೊಂದಿವೆ. ಈ ದೇಶಗಳ ಅಭಿವೃದ್ಧಿ ಪಥಗಳು ಜಾಗತಿಕವಾಗಿ ಹೆಚ್ಚು ಪ್ರಭಾವ ಬೀರಿವೆ ಎಂದು ವರದಿ ಹೇಳಿದೆ.

ಇದನ್ನೂ ಓದಿ: ಕಾಂಗೋದಲ್ಲಿ ಮಹಿಳೆ ಅಪಹರಿಸಿ ಅತ್ಯಾಚಾರ ಮಾಡಿ, ಮಾನವನ ಮಾಂಸ ತಿನ್ನಿಸಿದ ಉಗ್ರರು!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.