ETV Bharat / international

Pm Modi in America: ಮೋದಿ ಚಿತ್ರದ ನೆಹರು ಜಾಕೆಟ್​ ಧರಿಸಿ ಪ್ರಧಾನಿ ಸ್ವಾಗತಿಸಿದ ಅನಿವಾಸಿ ಭಾರತೀಯ!

author img

By

Published : Jun 21, 2023, 8:03 AM IST

ಮೋದಿ ಚಿತ್ರದ ನೆಹರು ಜಾಕೆಟ್ ಧರಿಸಿದ ವ್ಯಕ್ತಿ
ಮೋದಿ ಚಿತ್ರದ ನೆಹರು ಜಾಕೆಟ್ ಧರಿಸಿದ ವ್ಯಕ್ತಿ

ಅಮೆರಿಕ ಪ್ರವಾಸದಲ್ಲಿರುವ ಪ್ರಧಾನಿ ಮೋದಿ ನ್ಯೂಯಾರ್ಕ್​ಗೆ ಭೇಟಿ ನೀಡಿದ್ದು ಈ ವೇಳೆ ವಲಸಿಗ ಸದಸ್ಯರೊಬ್ಬರು ವಿಶೇಷವಾಗಿ ಪ್ರಧಾನಿ ಅವರನ್ನು ಸ್ವಾಗತಿಸಿ ಗಮನ ಸೆಳೆದಿದ್ದಾರೆ.

ನ್ಯೂಯಾರ್ಕ್​ (ಅಮೆರಿಕ) : ನಾಲ್ಕು ದಿನಗಳ ಕಾಲ ಅಮೆರಿಕ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ನ್ಯೂಯಾರ್ಕ್​ಗೆ ತಲುಪಿದ್ದಾರೆ. ಈ ವೇಳೆ, ಭಾರತೀಯ ವಲಸಿಗರು ಪ್ರಧಾನಿಯನ್ನು ಅದ್ಧೂರಿಯಾಗಿ ಸ್ವಾಗತಿಸಿದರು. ಅದರಲ್ಲೂ ಭಾರತೀಯ ಸದಸ್ಯರೊಬ್ಬರು ಪ್ರಧಾನಿ ನರೇಂದ್ರ ಮೋದಿಯವರನ್ನು ಸ್ವಾಗತಿಸಲು ಮೋದಿ ಚಿತ್ರವಿರುವ ನೆಹರು ಜಾಕೆಟ್​ ಧರಿಸಿ ವಿಶೇಷವಾಗಿ ಸ್ವಾಗತ ಮಾಡಿದರು.

ಮಿನೇಶ್ ಸಿ ಪಟೇಲ್ ಎಂಬುವರು ಮೋದಿ ಚಿತ್ರದಿಂದ ಕೂಡಿದ್ದ ನೆಹರು ಜಾಕೆಟ್​ ಅನ್ನು ಧರಿಸಿ ಸ್ವಾಗತಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, "ಈ ಜಾಕೆಟ್​ ಅನ್ನು 2015ರಲ್ಲಿ ಗುಜರಾತ್​ ದಿನೋತ್ಸವದಂದು ತಯಾರಿಸಲಾಗಿದೆ. ಈ ರೀತಿಯ 26 ಜಾಕೆಟ್​ಗಳನ್ನು ತಯಾರಿಸಲಾಗಿದ್ದು, ಅದರಲ್ಲಿ ನಾಲ್ಕು ಜಾಕೆಟ್​ ಇಲ್ಲಿವೆ" ಎಂದು ಇದೇ ವೇಳೆ ತಿಳಿಸಿದರು.

ನಾಲ್ಕು ದಿನಗಳ ಅಮೆರಿಕ ಪ್ರವಾಸದಲ್ಲಿರುವ ಪ್ರಧಾನಿ ಮೋದಿ ಮೊದಲ ದಿನ ಪ್ರವಾಸಕ್ಕಾಗಿ ನ್ಯೂಯಾರ್ಕ್​ಗೆ ತರೆಳಿದ್ದು, ಅವರು ತಂಗಲಿರುವ ಹೋಟೆಲ್ ಲೊಟ್ಟೆಯಲ್ಲಿ ಭಾರತೀಯ ವಲಸಿಗರಿಂದ ಅದ್ದೂರಿಯಾಗಿ ಸ್ವಾಗತ ಪಡೆದರು. ಈ ವೇಳೆ "ಭಾರತ್​ ಮಾತಾಕಿ ಜೈ" ಎಂಬ ಘೋಷಣೆಗಳು ಹೋಟೆಲ್‌ನಲ್ಲಿ ಪ್ರತಿಧ್ವನಿಸಿದವು.

ಪ್ರಧಾನ ಮಂತ್ರಿ ಅವರನ್ನು ನೋಡುತ್ತಿದ್ದಂತೆ ಭಾರತೀಯ ವಲಸಿಗರು ಹೆಮ್ಮೆಯಿಂದ ರಾಷ್ಟ್ರ ಧ್ವಜಗಳನ್ನು ಬೀಸಿದರು. ಅಲ್ಲದೇ ಪ್ರಧಾನಿ ಮೋದಿ ಅವರ ಭೇಟಿ ಮಾಡಲು ಮತ್ತು ಅವರೊಂದಿಗೆ ಸಂವಾದ ನಡೆಸಲು ನೆರದಿದ್ದ ಜನ ಉತ್ಸಾಹದಿಂದ ಕಾಯುತ್ತಿದ್ದರು. ಹೋಟೆಲ್‌ನಲ್ಲಿ ಬೋರಾ ಸಮುದಾಯದವರೊಂದಿಗೆ ಪ್ರಧಾನಿ ಮೋದಿ ಸಭೆಯನ್ನೂ ನಡೆಸಿದರು.

ಇದೇ ವೇಳೆ, ಅಮೆರಿಕದಲ್ಲಿರುವ ಭಾರತೀಯ ಮೂಲದ ವ್ಯಕ್ತಿಯೊಬ್ಬರು ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಲು ಅವಕಾಶ ಸಿಕ್ಕಿದ್ದಕ್ಕೆ ತಮ್ಮ ಸಂತೋಷವನ್ನು ವ್ಯಕ್ತಪಡಿಸಿದ್ದಾರೆ. "ಅಮೆರಿಕದಲ್ಲಿ ಪ್ರಧಾನಿ ಮೋದಿ ಅವರನ್ನು ಭೇಟಿಯಾಗಿದ್ದು, ನಾನು ಅತ್ಯಂತ ಅದೃಷ್ಟಶಾಲಿ ಎಂದು ಪರಿಗಣಿಸುತ್ತೇನೆ" ಎಂದು ಹೇಳಿದ್ದಾರೆ.

ಏತನ್ಮಧ್ಯೆ, ಮತ್ತೊಬ್ಬ ಭಾರತೀಯ ಮೂಲದ ವ್ಯಕ್ತಿ, "ಪ್ರಧಾನಿ ಮೋದಿಯ ಸುತ್ತಲಿನ ಸೆಳೆತವು ನಿಜವಾಗಿಯೂ ಗಮನಾರ್ಹವಾಗಿದೆ. ಅವರ ಶಾಂತತೆ ಮತ್ತು ದಯೆಯಿಂದ ನಮ್ಮನ್ನೂ ಆತ್ಮೀಯವಾಗಿ ಸ್ವಾಗತಿಸಿದರು. ಇದರಿಂದ ನಾವು ತುಂಬಾ ರೋಮಾಂಚನಗೊಂಡಿದ್ದೇವೆ." ಎಂದು ತಮ್ಮ ಹರ್ಷವನ್ನು ವ್ಯಕ್ತ ಪಡಿಸಿದರು.

ಸ್ಥಳೀಯ ಕಾಲಮಾನದ ಪ್ರಕಾರ ಮಂಗಳವಾರ ಮುಂಜಾನೆ ಪ್ರಧಾನಿ ನರೇಂದ್ರ ಮೋದಿ ಅವರು ನ್ಯೂಯಾರ್ಕ್‌ನ ಜಾನ್ ಎಫ್ ಕೆನಡಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದರು. ಈ ವೇಳೆ, ಭಾರತೀಯ ವಲಸಿಗ ಸದಸ್ಯರು 'ಮೋದಿ, ಮೋದಿ' ಎಂಬ ಘೋಷಣೆಗಳೊಂದಿಗೆ ಬರಮಾಡಿಕೊಂಡರು. ಬಳಿಕ ಮೋದಿ ಭಾರತೀಯ ವಲಸಿಗರೊಂದಿಗೆ ಸಂವಾದ ನಡೆಸಿದರು.

ಅಲ್ಲದೇ (ಸ್ಥಳೀಯ ಕಾಲಮಾನ) ಪ್ರಧಾನಿ ಮೋದಿ ಸಿಇಒಗಳು, ನೊಬೆಲ್ ಪ್ರಶಸ್ತಿ ವಿಜೇತರು, ಅರ್ಥಶಾಸ್ತ್ರಜ್ಞರು, ಕಲಾವಿದರು, ವಿಜ್ಞಾನಿಗಳು, ವಿದ್ವಾಂಸರು, ಉದ್ಯಮಿಗಳು, ಶಿಕ್ಷಣ ತಜ್ಞರು ಮತ್ತು ಆರೋಗ್ಯ ಕ್ಷೇತ್ರದ ತಜ್ಞರನ್ನು ಭೇಟಿ ಮಾಡುವ ನಿರೀಕ್ಷೆಯಿದೆ.

ಜೂನ್ 23 ರಂದು, ಪ್ರಧಾನ ಮೋದಿಯವರಿಗೆ ಅಮೆರಿಕದ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಮತ್ತು ಯುಎಸ್ ವಿದೇಶಾಂಗ ಕಾರ್ಯದರ್ಶಿ ಆಂಟೋನಿ ಬ್ಲಿಂಕೆನ್ ಅವರು ಜಂಟಿಯಾಗಿ ಔತಣಕೂಟವನ್ನು ಆಯೋಜಿಸಲಿದ್ದಾರೆ.

ಇದನ್ನೂ ಓದಿ: PM Modi US Visit: 'ನಾನು ಮೋದಿ ಅವರ ಅಭಿಮಾನಿ': ಟ್ವಿಟರ್​​ ಸಿಇಒ ಎಲಾನ್ ಮಸ್ಕ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.