ETV Bharat / international

ಗಿನ್ನಿಸ್​ ದಾಖಲೆ ಸೇರಿದ 'ದಲೈ ಲಾಮಾ': ಅತಿ ಹೆಚ್ಚು ಕಾಲ ಜೀವಿಸಿದ ಒಂಟೆ ಇದು!

author img

By

Published : Feb 17, 2023, 5:22 PM IST

ಗಿನ್ನಿಸ್​ ದಾಖಲೆ ಸೇರಿದ ದಲೈ ಲಾಮಾ; ಹೆಚ್ಚು ಕಾಲ ಜೀವಿಸಿದ ಒಂಟೆ
Dalai Lama who joined the Guinness record; Longest lived camelid

ಅತಿ ಹೆಚ್ಚು ಕಾಲ ಜೀವಿಸುವ ಮೂಲಕ ಒಂಟೆಯೊಂದು ಗಿನ್ನೆಸ್​ ದಾಖಲೆ ಪುಸ್ತಕದ ಪುಟ ಸೇರಿದೆ.

ಅತಿ ಹೆಚ್ಚು ಕಾಲ ಜೀವಿಸುವ ಮೂಲಕ ಒಂಟೆಯೊಂದು ಗಿನ್ನಿಸ್​ ವರ್ಲ್ಡ್​​ ರೆಕಾರ್ಡ್​ನಲ್ಲಿ ತನ್ನ ಹೆಸರು ದಾಖಲಿಸಿದೆ. 1996ರ ಜನವರಿಯಲ್ಲಿ ಅಮೆರಿಕದಲ್ಲಿ ಹುಟ್ಟಿದ ಇದರ ಹೆಸರು ದಲೈ ಲಾಮಾ. 27 ವರ್ಷದ ಒಂಟೆ ಅಮೆರಿಕ, ಮೆಕ್ಸಿಕೊದ ಅಲ್ಬುಕ್ಯುರೆುಕ್ಯೂನ ಸಂತತಿಯಲ್ಲಿ ಹಳೆಯ ಜೀವಿ ಎಂಬ ಹೆಗ್ಗಳಿಕೆ ಪಡೆದಿದೆ. ಈ ಸಂಬಂಧ ಪಶುಸಂಗೋಪನೆ ವೈದ್ಯರು ಸರ್ಟಿಫಿಕೇಟ್​ ನೀಡಿದ್ದಾರೆ.

ಒಂಟೆಯ ವಯಸ್ಸು ಸರಿಯಾಗಿ 27 ವರ್ಷ 1 ದಿನ. ತನ್ನ ಸಂತತಿಯಲ್ಲೇ ಹೆಚ್ಚು ಕಾಲ ಬದುಕಿದ ಜೀವಿ. ಪ್ರಾಣಿ ತಜ್ಞರ ಪ್ರಕಾರ, ಸಾಮಾನ್ಯವಾಗಿ ಒಂಟೆಗಳ ಜೀವಿತಾವಧಿ 20 ವರ್ಷ. ಈ ದಾಖಲೆಯನ್ನು ದಲೈ ಲಾಮಾ ಮುರಿದಿದೆ. 2007ರಿಂದ ಆಂಡ್ರ್ಯೂ ಥಾಮಸ್​ ಕುಟುಂಬ ತಮ್ಮ ಮಗಳು ಸ್ಯಾಮಿಗಾಗಿ ಒಂಟೆಯನ್ನು ಸಾಕುತ್ತಿದ್ದಾರೆ. 14 ವರ್ಷಗಳ ಹಿಂದೆ ಈ ಕುಟುಂಬ ಸೇರಿದ್ದ ಲಾಮಾಗೆ ಇದಕ್ಕೂ ಮುನ್ನ ಡಿಎಂ ಟಾಮಿ ಟ್ಯೂನ್​ ಎಂದು ಹೆಸರಿಡಲಾಗಿತ್ತು. 2007ರ ಬಳಿಕ ಕುಟುಂಬದ ಸದಸ್ಯನಾಗಿದ್ದು ಹೊಸ ಹೆಸರಿಡಲಾಗಿದೆ.

ಈ ಮೊದಲು ಲಾಮಾನನ್ನು ನ್ಯೂ ಮೆಕ್ಸಿಕೊದ ಡೊರ್ಸೆ ಮ್ಯಾನಷನ್​ ರಂಚದಲ್ಲಿ ವಾಸವಾಗಿದ್ದ ಡೋರ್ಸೆ ಎಂಬ ಕುಟುಂಬ ಸಾಕುತಿತ್ತು. ಡೊರ್ಸೆ ಕುಟುಂಬ ತನ್ನ ಮಕ್ಕಳಿಗಾಗಿ ಲಾಮಾನನ್ನು ದತ್ತು ಪಡೆದಿತ್ತಂತೆ. ಇಷ್ಟೇ ಅಲ್ಲದೇ, ನೆಟ್​ವರ್ಕ್​ 4-ಎಚ್​ ಪ್ರಾಜೆಕ್ಟ್​​ನಲ್ಲಿ ಕೂಡ ಇದು ಸೇರಿದೆ. ಈ ಪ್ರಾಜೆಕ್ಟ್​​ ಅನ್ನು ಅಮೆರಿಕ ಮೂಲದ ಯುವ ಸಂಘಟನೆ ಮಾಡುತ್ತಿದ್ದು, ಅಮೆರಿಕದ ಗ್ರಾಮೀಣ ಮತ್ತು ನಗರ ಪ್ರದೇಶದಾದ್ಯಂತ ಮಕ್ಕಳನ್ನು ತಲುಪಲಿದೆ.

ಇದನ್ನೂ ಓದಿ: ಗ್ಲೋಬಲ್ ವಾರ್ಮಿಂಗ್​ನಿಂದ ಭಾರಿ ಗಂಡಾಂತರ: ಯುಎನ್ ಸೆಕ್ರೆಟರಿ ಜನರಲ್ ವಾರ್ನಿಂಗ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.