ETV Bharat / international

ಚೀನಾದಲ್ಲಿ ಕೋವಿಡ್‌ ಮತ್ತೆ ಏರಿಕೆ: 33 ನಗರಗಳಲ್ಲಿ ಲಾಕ್​ಡೌನ್​ ನಿರ್ಬಂಧ

author img

By

Published : Sep 6, 2022, 11:43 AM IST

ಚೀನಾದಲ್ಲಿ ರಾಷ್ಟ್ರೀಯ ರಜಾ ದಿನಗಳು ಆಗಮಿಸುತ್ತಿರುವ ಕಾರಣ ಮತ್ತು ಕೋವಿಡ್​ ಪ್ರಕರಣಗಳು ಏರಿಕೆಯಾಗುತ್ತಿವೆ. ಹೀಗಾಗಿ 33 ನಗರಗಳಲ್ಲಿ ಲಾಕ್​ಡೌನ್​ ಘೋಷಿಸಲಾಗಿದೆ.

china-33-cities-in-under-lockdown
ಚೀನಾದ 33ನಗರಗಳಲ್ಲಿ ಲಾಕ್​ಡೌನ್​ ಘೋಷಣೆ

ಬೀಜಿಂಗ್​: ಚೀನಾದಲ್ಲಿ ಕೋವಿಡ್​ ಪ್ರಕರಣಗಳ ಸಂಖ್ಯೆ ಏರಿಕೆ ಆಗುತ್ತಿದ್ದು ಮತ್ತು ಮುಂಬರುವ ದಿನಗಳಲ್ಲಿ ರಾಷ್ಟ್ರೀಯ ರಜಾದಿನಗಳಿರುವ ಕಾರಣ ಮುನ್ನೆಚ್ಚರಿಕೆ ಕ್ರಮವಾಗಿ ಪ್ರಮುಖ ನಗರಗಳಲ್ಲಿ ಲಾಕ್​ಡೌನ್​ ಘೋಷಿಸಲಾಗಿದೆ. ರಾಜಧಾನಿ ಬೀಜಿಂಗ್‌ ಸೇರಿದಂತೆ 33 ನಗರಗಳಲ್ಲಿ ಕಠಿಣ ನಿರ್ಬಂಧಗಳನ್ನು ಜಾರಿ ಮಾಡಲಾಗಿದೆ. ಡ್ರ್ಯಾಗನ್ ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 1,552 ಹೊಸ ಪ್ರಕರಣಗಳು ದಾಖಲಾಗಿವೆ ಎಂದು ಅಲ್ಲಿನ ರಾಷ್ಟ್ರೀಯ ಆರೋಗ್ಯ ಆಯೋಗ ತಿಳಿಸಿದೆ.

ಸಪ್ಟೆಂಬರ್​ 10 ರಿಂದ 12 ರವರೆಗೆ ಚೀನಾದಲ್ಲಿ ಹೊಸ ವರ್ಷದ ನಂತರ ಸಾಲು ಸಾಲು ರಜೆಗಳಿದ್ದು ಸಾರ್ವಜನಿಕ ಪ್ರದೇಶದಲ್ಲಿ ಜನರು ಒಗ್ಗೂಡುವುದನ್ನು ತಪ್ಪಿಸಲು ಲಾಕ್​ಡೌನ್ ಅನುಷ್ಠಾನಗೊಳಿಸಲಾಗಿದೆ. ಇದರಿಂದ ಚೀನಾದ ಆರ್ಥಿಕ ವ್ಯವಸ್ಥೆ, ಸಾರಿಗೆ ಕ್ಷೇತ್ರ, ಸಮಾಜದ ಮೇಲೆ ತೀವ್ರ ಪರಿಣಾಮ ಬೀರುತ್ತಿದೆ. 65 ದಶಲಕ್ಷಕ್ಕೂ ಹೆಚ್ಚು ಜನ ಲಾಕ್​ಡೌನ್​ಗೆ ಒಳಗಾಗಲಿದ್ದಾರೆ.

ಲಾಕ್​ಡೌನ್​ ಹೇರಿರುವುದರಿಂದ ಕಚೇರಿಗಳು, ಶಾಲೆಗಳು ಮತ್ತು ಮನರಂಜನಾ ಸ್ಥಳಗಳನ್ನು ಮುಚ್ಚಲಾಗಿದೆ. ಅಗತ್ಯ ವಸ್ತುಗಳ ಪೂರೈಕೆಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ವರ್ಕ್‌ಫ್ರಮ್​ ಹೋಮ್​ ಮತ್ತು ಆನ್​ಲೈನ್​ ತರಗತಿಗಳನ್ನು ನಡೆಸುವಂತೆ ಸೂಚಿಸಲಾಗಿದೆ. ಮೆಡಿಕಲ್​ಗಳಲ್ಲಿ ಶೀತ, ಜ್ವರ ಮತ್ತು ಕೆಮ್ಮಿಗೆ ಸಂಬಂಧಿಸಿದ ಔಷಧಗಳನ್ನು ವೈದ್ಯಕೀಯ ಸಲಹೆ ಇಲ್ಲದೇ ಮಾರಾಟ ಮಾಡುವುದಕ್ಕೆ ತಡೆಯೊಡ್ಡಲಾಗಿದೆ.

ಇದನ್ನೂ ಓದಿ: ಜಿಂಬಾಬ್ವೆಯಲ್ಲಿ ದಿಢೀರ್​ ಉಲ್ಭಣಗೊಂಡ 'ದಡಾರ': 700 ಮಕ್ಕಳು ಸಾವು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.