ETV Bharat / international

ಬ್ರೆಜಿಲ್​ನಲ್ಲಿ 7 ಲಕ್ಷ ತಲುಪಿದ ಕೊರೊನಾ ಸಾವು: 'ಲಸಿಕೆ ನಿರ್ಲಕ್ಷ್ಯವೇ ಕಾರಣ'

author img

By

Published : Mar 29, 2023, 7:11 AM IST

ಬ್ರೆಜಿಲ್​ನಲ್ಲಿ 7 ಲಕ್ಷ ಕೊರೊನಾ ಸಾವು
ಬ್ರೆಜಿಲ್​ನಲ್ಲಿ 7 ಲಕ್ಷ ಕೊರೊನಾ ಸಾವು

ವಿಶ್ವವನ್ನು ಬಾಧಿಸುತ್ತಿರುವ ಕೊರೊನಾದಿಂದ ಬ್ರೆಜಿಲ್​ನಲ್ಲಿ ಎರಡನೇ ಅತಿ ಹೆಚ್ಚು ಸಾವು ಸಂಭವಿಸಿದೆ. ಅಮೆರಿಕ ಈ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ. ಕೊರೊನಾ ಲಸಿಕೆ ಪಡೆಯದಿರುವುದೇ ಇದಕ್ಕೆ ಕಾರಣವೆಂದು ಎಂದು ಅಲ್ಲಿನ ಸರ್ಕಾರ ತಿಳಿಸಿದೆ.

ಸಾಯೊ ಪೌಲೊ (ಬ್ರೆಜಿಲ್​): ವಿಶ್ವವನ್ನೇ ನಡುಗಿಸುತ್ತಿರುವ ಕೊರೊನಾ ವೈರಸ್​ ಮತ್ತೆ ತನ್ನ ಪ್ರತಾಪ ತೋರಿಸುತ್ತಿದೆ. ಲಸಿಕಾಕರಣ ಅಭಿಯಾನ ನಡೆಸಿ ಅದರ ತಡೆಗೆ ಸರ್ಕಾರಗಳು ಪ್ರಯತ್ನ ನಡೆಸುತ್ತಿವೆ. ಕೆಲವೆಡೆ ಲಸಿಕೆಯ ಬಗೆಗಿನ ಅಸಡ್ಡೆಯಿಂದಾಗಿ ಸಾವು-ನೋವುಗಳು ಹೆಚ್ಚಿವೆ. ಅದರಲ್ಲಿ ಅಮೆರಿಕ ಮತ್ತು ಬ್ರೆಜಿಲ್​ ಮೊದಲೆರಡು ಸ್ಥಾನಗಳಲ್ಲಿವೆ. ಅಮೆರಿಕದಲ್ಲಿ 11 ಲಕ್ಷಕ್ಕೂ ಅಧಿಕ ಜನರು ಕೋವಿಡ್​ಗೆ ತುತ್ತಾದರೆ, 7 ಲಕ್ಷ ಮಂದಿ ಬ್ರೆಜಿಲ್​ನಲ್ಲಿ ಸಾವನ್ನಪ್ಪಿದ್ದಾರೆ. ಇದು ವಿಶ್ವದಲ್ಲಿಯೇ ಅತಿಹೆಚ್ಚು.

ಬ್ರೆಜಿಲ್​ನಲ್ಲಿ ಕೋವಿಡ್​ ಸಾವುಗಳು ಏರಿಕೆ ಗತಿಯಲ್ಲಿವೆ. ಇದಕ್ಕೆ ಕಾರಣ ಕೊರೊನಾ ಲಸಿಕೆ ಹಾಕಿಸದೇ ಇರುವುದು ಮತ್ತು ವಿವಿಧ ರೀತಿಯ ಕಾಯಿಲೆಗಳು ಅಲ್ಲಿನ ಜನರನ್ನು ಬಾಧಿಸುತ್ತಿರುವುದು. ಅಮೆರಿಕದ ಬಳಿಕ ವಿಶ್ವದಲ್ಲಿಯೇ ಅತಿಹೆಚ್ಚು ಕೋವಿಡ್​ ಸಾವಾಗಿದ್ದು ಬ್ರೆಜಿಲ್​ನಲ್ಲಿ 7 ಲಕ್ಷಕ್ಕೂ ಅಧಿಕ ಮಂದಿ ಕೊರೊನಾಗೆ ತುತ್ತಾಗಿದ್ದಾರೆ ಎಂದು ಅಲ್ಲಿನ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.

"ಇತ್ತೀಚಿನ ದಿನಗಳಲ್ಲಿ ಕೋವಿಡ್-19 ನಿಂದ ಸಾಯುತ್ತಿರುವ ಹೆಚ್ಚಿನ ಜನರು ಲಸಿಕೆ ಹಾಕಿಸಿಕೊಂಡಿಲ್ಲ ಅಥವಾ ಇತರ ಭೀಕರ ಕಾಯಿಲೆಗಳಿಂದ ಬಳಲುತ್ತಿದ್ದವರಾಗಿದ್ದಾರೆ" ಎಂದು ಬ್ರೆಜಿಲಿಯನ್ ಆರೋಗ್ಯ ತಜ್ಞರು ತಿಳಿಸಿದ್ದಾರೆ. ದೇಶದ ಪ್ರತಿಯೊಂದು ಆರೋಗ್ಯ ಕೇಂದ್ರಗಳಲ್ಲಿ ಲಸಿಕೆ ಲಭ್ಯವಿದೆ. ಸಾಂಕ್ರಾಮಿಕ ರೋಗ ತಡೆಗೆ ಜನರು ಅದನ್ನು ಪಡೆಯಬೇಕು ಎಂದು ಸರ್ಕಾರ ಕೋರಿದೆ.

ಕೊರೊನಾ ಲಸಿಕೆ ಪಡೆಯುವುದರಿಂದ ತಮ್ಮವರನ್ನು ಕಳೆದುಕೊಂಡ ಕುಟುಂಬದ ರಕ್ಷಣೆಗೆ ಇದು ನೆರವಾಗಲಿದೆ. ಕೊರೊನಾ ವೈರಸ್​ ಇತರೆ ವ್ಯಾಧಿಗಳ ಮೇಲೆ ಪರಿಣಾಮ ಬೀರಿ ಸಾವು ತರುತ್ತಿದೆ. ಇದಕ್ಕಿರುವ ಮಾರ್ಗ ಲಸಿಕೆ ಸ್ವೀಕಾರ ಎಂದು ಸರ್ಕಾರ ಹೇಳಿದೆ.

ಮಾಜಿ ಅಧ್ಯಕ್ಷರ ವಿರುದ್ಧ ಟೀಕೆ: ಇನ್ನು, ಬ್ರೆಜಿಲ್​ನ ಮಾಜಿ ಅಧ್ಯಕ್ಷ ಜೈರ್ ಬೋಲ್ಸನಾರೊ ಅವರು ಸ್ವತಃ ಕೊರೊನಾ ನಿಯಮಗಳನ್ನು ಈ ಹಿಂದೆ ಗಾಳಿಗೆ ತೂರಿದ್ದರು. ಅವರೇ ಸೋಂಕಿಗೆ ತುತ್ತಾದ ಬಳಿಕ ಲಸಿಕೆ ಪಡೆಯದೇ ಆರೋಗ್ಯ ನಿಯಮಗಳನ್ನು ಉಲ್ಲಂಘಿಸಿ ವಿವಾದ ಸೃಷ್ಟಿಸಿದ್ದರು. ಸೋಂಕು ವ್ಯಾಪಿಸಿದ ವೇಳೆ ಅವರು ಅದರ ತಡೆಗೆ ಹೆಚ್ಚಿನ ಆದ್ಯತೆ ನೀಡಲಿಲ್ಲ. ಇದರಿಂದ ದೇಶದಲ್ಲಿ ಹೆಚ್ಚಿನ ಸಾವು ಸಂಭವಿಸಿದವು. ಆರೋಗ್ಯ ನಿರ್ಬಂಧಗಳನ್ನು ಸರ್ಕಾರ ನಡೆಸುವವರೇ ಮುರಿದರೆ, ಸಾಮಾನ್ಯರ ಮೇಲೆ ಹೇಗೆ ಅದನ್ನು ಹೇರಿಕೆ ಮಾಡಲು ಸಾಧ್ಯ ಎಂದು ಆರೋಗ್ಯ ಸಚಿವ ನಿಸಿಯಾ ಟ್ರಿಂಡಡೆ ಪ್ರಶ್ನಿಸಿದ್ದರು.

"ಹಿಂದೆ ನಡೆದ ಪ್ರಮಾದಗಳ ಬಗ್ಗೆ ಗಮನ ಹರಿಸಿ, ಮುಂದಾಗುವ ಅನಾಹುತವನ್ನು ತಡೆಯಬೇಕು. ಆರೋಗ್ಯ ಸಚಿವಾಲಯವು ಸಮನ್ವಯಗೊಳಿಸದಿರುವ, ಕಾಳಜಿ ವಹಿಸದಿರುವ, ಚಿಕಿತ್ಸೆ ನೀಡದ ಜನರಿಗೆ ಉತ್ತಮ ಆರೋಗ್ಯ ಕಾಳಜಿ ವಹಿಸಬೇಕು. ನಾವು ಒಗ್ಗಟ್ಟಿನಿಂದ ಇರಬೇಕಿದೆ. ಇದರಿಂದ ಮಾತ್ರ ಹೊಸ ದುರಂತಗಳು ಸಂಭವಿಸದಂತೆ ನೋಡಿಕೊಳ್ಳಲು ಸಾಧ್ಯ. ಕೊರೊನಾ ಲಸಿಕೆಯನ್ನು ಕಡ್ಡಾಯವಾಗಿ ಪಡೆದುಕೊಳ್ಳಬೇಕು" ಎಂದು ಅವರು ಕೋರಿದರು.

ಸಾರ್ವಜನಿಕ ಆರೋಗ್ಯ ಅಧಿಕಾರಿಗಳಿಗೆ ಸಲಹೆ ನೀಡುವ ಬ್ರೆಜಿಲ್‌ನ ಇನ್‌ಸ್ಟಿಟ್ಯೂಟ್ ಫಾರ್ ಹೆಲ್ತ್ ಪಾಲಿಸಿ ಸ್ಟಡೀಸ್‌ನ ಕಾರ್ಯನಿರ್ವಾಹಕ ನಿರ್ದೇಶಕ ಮಿಗುಯೆಲ್ ಲಾಗೊ, "ವೈರಸ್ ವಿರುದ್ಧ ಕಾರ್ಯನಿರ್ವಹಿಸಲು ವಿಫಲರಾದ ಮತ್ತು ಸಾವು ಏರಿಕೆಗೆ ಕಾರಣವಾದ ವ್ಯಕ್ತಿಗಳ ವಿರುದ್ಧ ಶಿಕ್ಷೆ ಜರುಗಿಸಬೇಕು" ಎಂದು ಹೇಳಿದ್ದಾರೆ. ಇದರಲ್ಲಿ ಸಾರ್ವಜನಿಕ ನೇರ ಹೊಣೆಗಾರಿಕೆ ಕೂಡ ಇದೆ ಎಂದು ಇದೇ ವೇಳೆ ಹೇಳಿದರು.

ಇದನ್ನೂ ಓದಿ: ಭ್ರಷ್ಟಾಚಾರದಲ್ಲಿ ತೊಡಗಿರುವವರು ಒಂದೇ ವೇದಿಕೆಗೆ ಬಂದರೆ, ಭ್ರಷ್ಟರ ವಿರುದ್ಧ ಕ್ರಮ: ಪ್ರಧಾನಿ ಮೋದಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.