ETV Bharat / international

ಯೂರೋಪಿಯನ್ ಒಕ್ಕೂಟದಿಂದ ಭಾರತಕ್ಕೆ ಬರಲಿದೆ 10 ಕೋಟಿ ಜಾನ್ಸನ್ ​& ಜಾನ್ಸನ್ ಲಸಿಕೆ

author img

By

Published : Jun 29, 2021, 8:44 PM IST

ಜಾನ್ಸನ್ ​& ಜಾನ್ಸನ್ ಲಸಿಕೆ
ಜಾನ್ಸನ್ ​& ಜಾನ್ಸನ್ ಲಸಿಕೆ

ಭಾರತದಲ್ಲಿ ಸುಮಾರು 750 ಆಸ್ಪತ್ರೆಗಳಿಗೆ ಲಸಿಕೆಯ ಅಗತ್ಯತೆ ಇದೆ ಎಂದು ವರದಿಯಾಗಿದೆ. ಹೀಗಾಗಿ ಯೂರೋಪಿಯನ್ ಒಕ್ಕೂಟದಿಂದ ಸುಮಾರು 100 ಮಿಲಿಯನ್ ಡೋಸ್ ಲಸಿಕೆ ತರಿಸಲು ಮುಂದಾಗಲಾಗಿದೆ.

ನವದೆಹಲಿ: 100 ಮಿಲಿಯನ್ ಡೋಸ್​​​ ಸಿಂಗಲ್ ಶಾಟ್​ ಜಾನ್ಸನ್ ಮತ್ತು ಜಾನ್ಸನ್ ಕೊರೊನಾ ಲಸಿಕೆಯನ್ನು ಯೂರೋಪಿಯನ್ ಒಕ್ಕೂಟದಿಂದ ಭಾರತಕ್ಕೆ ತರಲು ಅಸೋಸಿಯೇಷನ್ ಆಫ್​ ಹೆಲ್ತ್​​ಕೇರ್​​ ಪ್ರೊವೈಡರ್ಸ್​ ಎನ್​ಜಿಒ ನಿರ್ಧರಿಸಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ಎನ್​ಜಿಓ ಮಹಾನಿರ್ದೇಶಕ ಡಾ.ಗಿರ್ಧರ್ ಜ್ಞಾನಿ, ಎನ್​ಜಿಒ ಮೂಲಕ ದೇಶದ ಬಹುಪಾಲು ಆಸ್ಪತ್ರೆಗಳ ಪ್ರತಿನಿಧಿಸಿದ್ದೇವೆ. ಅಲ್ಲದೇ ಭಾರತಕ್ಕೆ 100 ಮಿಲಿಯನ್ (10 ಕೋಟಿ) ಡೋಸ್​​ಗಳ ಅಗತ್ಯತೆ ಕುರಿತು ಪತ್ರದ ಮೂಲಕ ಯುರೋಪಿಯನ್ ಯೂನಿಯನ್​ಗೆ ತಿಳಿಸಿದ್ದೇವೆ. ಈ ಪ್ರಕ್ರಿಯೆ ಇನ್ನು ಪ್ರಗತಿ ಹಂತದಲ್ಲಿದೆ ಎಂದಿದ್ದಾರೆ. ಅಲ್ಲದೇ ನೇರವಾಗಿ ಲಸಿಕೆ ತಯಾರಿಕಾ ಸಂಸ್ಥೆಯನ್ನೇ ಸಂಪರ್ಕಿಸಲಾಗಿದೆ. ಇದು ಸಿಂಗಲ್​ ಡೋಸ್ ಲಸಿಕೆಯಾಗಿದ್ದು, ಭಾರತದಲ್ಲಿ ಬಳಕೆಯಾಗುತ್ತಿರುವ ಲಸಿಕೆಗಳೆಲ್ಲವೂ ಎರಡು ಡೋಸ್​ಗಳಾಗಿವೆ ಎಂದಿದ್ದಾರೆ.

ಇದು ಕಡಿಮೆ ವೆಚ್ಚ ಮತ್ತು ಗ್ರಾಮೀಣ ಜನರಿಗೆ ವಿಶೇಷವಾಗಿ ಪ್ರಯೋಜನಕಾರಿಯಾಗಲಿದೆ ಎಂದು ನಿರೀಕ್ಷಿಸಲಾಗಿದೆ. ಜೆ&ಜೆ ಸಿಂಗಲ್ - ಶಾಟ್ ಲಸಿಕೆಯಾಗಿರುವುದು ಭಾರತದಂತಹ ದೇಶಕ್ಕೆ ಉಪಯುಕ್ತವಾಗಲಿದೆ. ಲಸಿಕೆ ಪಡೆಯಲು ಹಿಂದೇಟು ಹಾಕುವ ಜನರನ್ನು ಸುಲಭವಾಗಿ ಈ ಲಸಿಕೆ ಪಡೆಯಲು ಪ್ರೇರೇಪಿಸಬಹುದು. ಕೇವಲ ಒಂದು ಡೋಸ್ ಆಗಿರುವುದರಿಂದ ಜನ ಲಸಿಕೆ ಪಡೆಯುವ ಸಾಧ್ಯತೆ ಹೆಚ್ಚು ಎಂದಿದ್ದಾರೆ.

ಇಯು ಮೂಲಕ ಖರೀದಿಸುತ್ತಿರುವುದರಿಂದ ಡೋಸ್​​ಗೆ 450 ರೂನಿಂದ 550 ರೂಪಾಯಿ ವರೆಗೂ ದರ ನಿಗದಿಯಾಗಬಹುದು. ಈಗಾಗಲೇ ಸುಮಾರು 750 ಆಸ್ಪತ್ರೆಗಳಿಗೆ ಲಸಿಕೆಯ ಅಗತ್ಯತೆ ಇದೆ ಎಂಬ ಡೇಟಾ ನಮ್ಮ ಬಳಿ ಇದೆ ಎಂದಿದ್ದಾರೆ.

ಓದಿ: ಮಾಡರ್ನಾ ಲಸಿಕೆಗೆ DCGI ಅನುಮೋದನೆ.. ಭಾರತಕ್ಕೆ ಅಮೆರಿಕದ ವ್ಯಾಕ್ಸಿನ್​ ಲಗ್ಗೆ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.