ETV Bharat / international

ಬಲವಂತದ ಮತಾಂತರ ಕೇಸ್​​: ಮೂವರು ಆರೋಪಿಗಳಿಗೆ ಪಾಕ್​ ಕೋರ್ಟ್​ನಿಂದ ಜೈಲು ಶಿಕ್ಷೆ

author img

By

Published : Jan 13, 2021, 8:48 PM IST

Pakistan court
Pakistan court

2019ರಲ್ಲಿ ಸಿಖ್ಖ್​ ಸಮುದಾಯದ ಬಾಲಕಿಯನ್ನು ಬಲವಂತವಾಗಿ ಅಪಹರಣ ಮಾಡಿ, ಮತಾಂತರಗೊಳಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಿಗೆ ಪಾಕ್ ಕೋರ್ಟ್​ ಶಿಕ್ಷೆ ನೀಡಿ ಆದೇಶ ಹೊರಡಿಸಿದೆ.

ನಂಕಾನಾ ಸಾಹೀಬ್​(ಪಾಕ್​): ಪಾಕಿಸ್ತಾನದ ನಂಕಾಬಾ ಸಾಹೀಬ್​ನಲ್ಲಿ 2019ರಲ್ಲಿ ಸಿಖ್ಖ್​ ಬಾಲಕಿಯನ್ನು ಬಲವಂತವಾಗಿ ಅಪಹರಣ ಮಾಡಿ, ಮತಾಂತರಗೊಳಿಸಿ ಮದುವೆಯಾದ ಪ್ರಕರಣದಲ್ಲಿ ಇದೀಗ ಪಾಕ್​ ಕೋರ್ಟ್​ನಿಂದ ಶಿಕ್ಷೆ ಪ್ರಕಟಗೊಂಡಿದೆ.

ಎಂಟು ಆರೋಪಿಗಳ ಪೈಕಿ ಮೂವರಿಗೆ ಎರಡು ವರ್ಷಗಳ ಜೈಲು ಶಿಕ್ಷೆ ವಿಧಿಸಿ ಆದೇಶ ಹೊರಡಿಸಲಾಗಿದೆ. ಮುಹಮ್ಮದ್​ ಸಲ್ಮಾನ್​ ಮತ್ತು ಮಹಮ್ಮದ್ ಅಹ್ಮದ್​ ಎಂಬುವರಿಗೆ ಆರು ತಿಂಗಳ ಶಿಕ್ಷೆ ಹಾಗೂ 10 ಸಾವಿರ ದಂಡ ವಿಧಿಸಲಾಗಿದೆ.

ಸಿಖ್ಖ್​ ಸಮುದಾಯ ಗುರಿಯಾಗಿಸಿ ಹಿಂಸಾಚಾರ ಪ್ರಚೋದಿಸಿದ ಆರೋಪ ಇದಾಗಿದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ. ಆದರೆ ಪ್ರಕರಣದಲ್ಲಿ ಇತರೆ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಸಿಖ್ಖ್​ನಿಂದ ಇಸ್ಲಾಂಗೆ ಮತಾಂತರಗೊಳಿಸಿ ಆಕೆಯನ್ನು ಮದುವೆ ಮಾಡಿಕೊಳ್ಳಲಾಗಿತ್ತು. ಜತೆಗೆ ಆಕೆಯ ಹೆಸರು ಜಗ್ಜಿತ್​ ಕೌರ್​ನಿಂದ ಆಯೆಷಾ ಎಂದು ಬದಲಾಯಿಸಲಾಗಿತ್ತು.

ಇದೇ ವಿಚಾರವಾಗಿ ಸಿಖ್ಖ್ ಸಮುದಾಯ ಪ್ರತಿಭಟನೆ ನಡೆಸಿದ್ದರಿಂದ ವಿಷಯ ಜಾಗತಿಕವಾಗಿ ಗಮನ ಸೆಳೆದಿತ್ತು. ಜತೆಗೆ ಪಾಕ್​ನಲ್ಲಿನ ಅಲ್ಪಸಂಖ್ಯಾತರ ಬಗ್ಗೆ ಗಂಭೀರ ಪ್ರಶ್ನೆಗಳು ಉದ್ಭವವಾಗಿದ್ದವು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.