ETV Bharat / international

ಮಹಿಳೆಗೆ ಬೆದರಿಕೆ, ಕಿರುಕುಳ​​: ಪಾಕ್ ಕ್ರಿಕೆಟ್​ ಕ್ಯಾಪ್ಟನ್​ ವಿರುದ್ಧ ಕೇಸು ದಾಖಲಿಸಲು ಸೂಚನೆ

author img

By

Published : Mar 18, 2021, 10:38 PM IST

Cricketer Babar Azam
Cricketer Babar Azam

ಪಾಕ್​ ಕ್ರಿಕೆಟ್ ತಂಡದ ಕ್ಯಾಪ್ಟನ್​ ವಿರುದ್ಧ ಕ್ರಿಮಿನಲ್ ಪ್ರಕರಣ​ ದಾಖಲು ಮಾಡುವಂತೆ ಪಾಕಿಸ್ತಾನ ಕೋರ್ಟ್​ ಆದೇಶ ನೀಡಿದೆ.

ಲಾಹೋರ್​: ಮಹಿಳೆಗೆ ಬೆದರಿಕೆ, ಕಿರುಕುಳ ಮತ್ತು ಬ್ಲ್ಯಾಕ್​​ ಮೇಲ್​ ಮಾಡಿದ್ದಾರೆಂಬ ಗಂಭೀರ ಆರೋಪದ ಮೇಲೆ ಪಾಕ್​ ಕ್ರಿಕೆಟ್​ ತಂಡದ ಕ್ಯಾಪ್ಟನ್​ ಬಾಬರ್​ ಆಜಮ್​ ವಿರುದ್ಧ ದೂರು ದಾಖಲು ಮಾಡಲು ಪಾಕ್​ ಕೋರ್ಟ್​ ಸೂಚನೆ ನೀಡಿದೆ.

ನ್ಯಾಯಾಧೀಶ ಹಮೀದ್​ ಹುಸೇನ್​ ನಿಗದಿತ ಸಮಯದೊಳಗೆ ಆರೋಪಿಗಳ ವಿರುದ್ಧ ಪ್ರಕರಣ​ ದಾಖಲು ಮಾಡುವಂತೆ ಆದೇಶ ನೀಡಿದ್ದಾರೆ. ಹಮೀಜಾ ಮುಕ್ತಾರ್​ ಎಂಬ ಮಹಿಳೆಗೆ ಬ್ಲ್ಯಾಕ್​ ಮೇಲ್ ಮತ್ತು ಕಿರುಕುಳ ನೀಡಿದ್ದಾರೆಂಬ ಆರೋಪ ಕೇಳಿ ಬಂದಿರುವ ಕಾರಣ ಪಾಕಿಸ್ತಾನ ಕೋರ್ಟ್​ ಫೆಡರಲ್​ ತನಿಖಾ ಸಂಸ್ಥೆಗೆ ಆದೇಶಿಸಿದೆ.

ಇದನ್ನೂ ಓದಿ: ಸೂರ್ಯಕುಮಾರ್ ವಿವಾದಿತ ವಿಕೆಟ್​​: ಟ್ರೋಲ್‌ಗೊಳಗಾದ ಅಂಪೈರ್​ ತೀರ್ಪು

ಪಾಕ್​ ಕ್ರಿಕೆಟಗ ತನ್ನನ್ನು ಮದುವೆಯಾಗುವ ನೆಪದಲ್ಲಿ ಲೈಂಗಿಕ ಸಂಬಂಧ ಹೊಂದಿದ್ದಾನೆ ಎಂದು ಹಮೀಜಾ ಮುಖ್ತಾರ್​ ಈ ಹಿಂದೆ ಆರೋಪ ಮಾಡಿದ್ದರು. ವರದಿಗಳ ಪ್ರಕಾರ, ಮಹಿಳೆಗೆ ಬಂದಿರುವ ದೂರವಾಣಿ ಕರೆಗಳು ಬಾಬರ್​​ಗೆ ಸೇರಿದ್ದು ಎನ್ನಲಾಗಿದ್ದು, ಗರ್ಭಪಾತ ಮಾಡುವಂತೆ ಸಹ ಒತ್ತಾಯಿಸಿದ್ದಾನೆ ಎಂಬ ಮಾಹಿತಿ ದೊರೆತಿದೆ.

ಕಳೆದ 2020ರ ಡಿಸೆಂಬರ್ ತಿಂಗಳಲ್ಲಿ ಇದಕ್ಕೆ ಸಂಬಂಧಿಸಿದಂತೆ ಮಹಿಳೆ ದೂರು ದಾಖಲಿಸಿದ್ದು, ಕೇಸು​ ದಾಖಲಾಗಿರಲಿಲ್ಲ. ಇದೀಗ ಪಾಕಿಸ್ತಾನ ಕೋರ್ಟ್ ಈ ಆದೇಶ ನೀಡಿದ್ದು, ಪಾಕ್​ ಕ್ಯಾಪ್ಟನ್​ ಇಕ್ಕಟ್ಟಿಗೆ ಸಿಲುಕಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.