ETV Bharat / international

ಚೀನಾ ವಿರುದ್ಧ ಮತ್ತೆ ಹರಿಹಾಯ್ದ ಟ್ರಂಪ್​ : ಬೈಡನ್​ ಓರ್ವ ಭ್ರಷ್ಟ ರಾಜಕಾರಣಿ ಎಂದು ಆಕ್ರೋಶ

author img

By

Published : Nov 3, 2020, 10:49 AM IST

: ಬೈಡನ್​ ಓರ್ವ ಭ್ರಷ್ಟ ರಾಜಕಾರಣಿ ಎಂದು ಆಕ್ರೋಶ
: ಬೈಡನ್​ ಓರ್ವ ಭ್ರಷ್ಟ ರಾಜಕಾರಣಿ ಎಂದು ಆಕ್ರೋಶ

ಡ್ರಾಗನ್​ ದೇಶದ ದೊಡ್ಡ ದೊಡ್ಡ ಐಟಿ, ಟೆಕ್​ ಕಂಪನಿಗಳು ಹಾಗೂ ಅಲ್ಲಿನ ಪ್ರಮುಖ ಮಾಧ್ಯಮಗಳು ತಮ್ಮ ವಿರುದ್ಧ ಕೆಲಸ ಮಾಡುತ್ತಿವೆ. ಡೆಮಾಕ್ರಟಿಕ್​ ಪಕ್ಷದ ಅಭ್ಯರ್ಥಿ ಜೋ ಬೈಡನ್​ ಅವರನ್ನ ನಿಯಂತ್ರಿಸುತ್ತಿವೆ ಎಂದು ಚೀನಾ ವಿರುದ್ಧ ಟ್ರಂಪ್​ ಮತ್ತೆ ಹರಿಹಾಯ್ದಿದ್ದಾರೆ.

ಅಮೆರಿಕ: ಚೀನಾ ವಿರುದ್ಧ ಟ್ರಂಪ್​ ಮತ್ತೆ ಹರಿಹಾಯ್ದಿದ್ದಾರೆ. ಡ್ರಾಗನ್​ ದೇಶದ ದೊಡ್ಡ ದೊಡ್ಡ ಐಟಿ, ಟೆಕ್​ ಕಂಪನಿಗಳು ಹಾಗೂ ಅಲ್ಲಿನ ಪ್ರಮುಖ ಮಾಧ್ಯಮಗಳು ತಮ್ಮ ವಿರುದ್ಧ ಕೆಲಸ ಮಾಡುತ್ತಿವೆ ಎಂದು ಆರೋಪಿಸಿದ್ದಾರೆ. ಅಷ್ಟೇ ಅಲ್ಲ ಡೆಮಾಕ್ರಟಿಕ್​ ಪಕ್ಷದ ಅಭ್ಯರ್ಥಿ ಜೋ ಬೈಡನ್​ ಅವರನ್ನ ನಿಯಂತ್ರಿಸುತ್ತಿದ್ದು, ಅವರಿಗೆ ಬೆಂಬಲ ನೀಡುತ್ತಿವೆ ಎಂದು ದೂರಿದ್ದಾರೆ.

ಹತಾಶವಾಗಿರುವ ದೊಡ್ಡ ದೊಡ್ಡ ತಂತ್ರಜ್ಞಾನ, ದೊಡ್ಡ ದೊಡ್ಡ ಮಾಧ್ಯಮಗಳು, ದೊಡ್ಡ ದಾನಿಗಳು ವಿಶೇಷ ಆಸಕ್ತಿವಹಿಸಿ ನಿದ್ರೆ ಮಾಡುತ್ತಿರುವ ಜೋ ಬೈಡನ್​ ಅವರನ್ನ ಬೆಂಬಲಿಸುತ್ತಿವೆ ಎಂದು ಟ್ರಂಪ್​ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅಧ್ಯಕ್ಷೀಯ ಚುನಾವಣೆಯ ನಿರ್ಣಾಯಕ ದಿನದ ಮುನ್ನಾದಿನ ಪ್ರಮುಖ ರಾಜ್ಯಗಳಲ್ಲಿ ಚುನಾವಣಾ ಪ್ರಚಾರ ಮಾಡಿ ಟ್ರಂಪ್​​ ಈ ಆರೋಪ ಮಾಡಿದರು. ಅವರು ಯಾವಾಗಲೂ ಭ್ರಷ್ಟರಾಗಲು ಬಯಸುತ್ತಾರೆ. ಅವರೊಬ್ಬ ಭ್ರಷ್ಟ ರಾಜಕಾರಣಿ. ನಾನು ಅವರಿಗೆ ಹೆದರುವುದಿಲ್ಲ. ಜನರಿಗೆ ಸತ್ಯ ಏನೆಂಬುದು ಗೊತ್ತಿದೆ ಎಂದು ಟ್ರಂಪ್​​​​ ಜೋ ಬೈಡನ್​ ವಿರುದ್ಧ ವಾಗ್ದಾಳಿ ನಡೆಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.