ETV Bharat / international

ಟ್ರಂಪ್‌ ಮಿಲಿಟರಿ ಕಾರ್ಯಾಧಿಕಾರಕ್ಕೆ ಅಂಕುಶ.... ಸದನದಲ್ಲಿ ನಿರ್ಣಯ ಅಂಗೀಕಾರ!

author img

By

Published : Jan 11, 2020, 1:44 PM IST

us house
us house

ಯುಎಸ್​ ಹೌಸ್​ನಲ್ಲಿ ಮಂಡನೆಯಾದ ನಿರ್ಣಯವು 224 -194 ಮತಗಳ ಅಂತರದಲ್ಲಿ ಅಂಗೀಕಾರಗೊಂಡಿದೆ. ಇರಾನ್​ ಮಿಲಿಟರಿ ಕಮಾಂಡರ್​​ ಸುಲೇಮಾನಿ ಕೊಂದ ಕ್ರಮ ಪ್ರಚೋದನಕಾರಿ ಎಂದು ಪರಿಗಣಿಸಿ ಅಮೆರಿಕ ಅಧ್ಯಕ್ಷರ ತೀರ್ಮಾನಗಳಿಗೆ ತಡೆ ಒಡ್ಡುವ ನಿರ್ಣಯಕ್ಕೆ ಯುಎಸ್​ ಹೌಸ್​ ಆಫ್​ ರೆಪ್ರೆಜೆಂಟೆಟಿವ್ಸ್​​ ಅಂಗೀಕಾರ ನೀಡಿದೆ ಎಂದು ಸ್ಪೀಕರ್ ನ್ಯಾನ್ಸಿ ಪೆಲೋಸಿ ಟ್ವೀಟ್​ ಮಾಡಿದ್ದಾರೆ.

ವಾಶಿಂಗ್ಟನ್: ಕಾಂಗ್ರೆಸ್​ನ ಪೂರ್ವಾನುಮತಿ ಇಲ್ಲದೇ ಇರಾನ್ ವಿರುದ್ಧ ಮಿಲಿಟರಿ ಕ್ರಮ ಕೈಗೊಳ್ಳುವ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಸಾಮರ್ಥ್ಯವನ್ನು ಸೀಮಿತಗೊಳಿಸುವ 'ಯುದ್ಧ ಅಧಿಕಾರ ನಿರ್ಣಯ'ವನ್ನು ಯುಎಸ್ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ ಗುರುವಾರ ಅಂಗೀಕರಿಸಿದೆ.

ಕಾಂಗ್ರೆಸ್​ನ ಎಲಿಸ್ಸಾ ಸ್ಲಾಟ್ಕಿನ್ ಅವರು ಮಂಡಿಸಿದ ನಿರ್ಣಯವು 224 -194 ಮತಗಳ ಅಂತರದಲ್ಲಿ ಅಂಗೀಕಾರವಾಯಿತು.

ಸ್ಲಾಟ್ಕಿನ್ ಈ ಹಿಂದೆ ಸಿಐಎ ವಿಶ್ಲೇಷಕರಾಗಿ ಶಿಯಾ ಸೇನಾಪಡೆಗಳಲ್ಲಿ ಮತ್ತು ಅಂತಾ​ರಾಷ್ಟ್ರೀಯ ಭದ್ರತಾ ವ್ಯವಹಾರಗಳ ರಕ್ಷಣಾ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದ್ದರು.

ಕಳೆದ ವಾರ ಬಾಗ್ದಾದ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಅಮೆರಿಕಾ ಸೇನೆ ಏರ್​ಸ್ಟ್ರೈಕ್​ ನಡೆಸಿ ಮಿಲಿಟರಿ ಜನರಲ್ ಕಾಸಿಮ್‌ ಸುಲೇಮಾನಿಯನ್ನು ಹೊಡೆದುರುಳಿಸಿತ್ತು. ಈ ವೈಮಾನಿಕ ದಾಳಿಗೆ ಪ್ರತೀಕಾರವಾಗಿ ಇರಾಕಿನಲ್ಲಿರುವ ಯುಎಸ್​ ಸೇನಾ ನೆಲೆಯ ಮೆಲೆ ಇರಾನ್ ಕ್ಷಿಪಣಿ ದಾಳಿ ನಡೆಸಿತ್ತು. ಇದಾದ ಒಂದು ದಿನದ ಬಳಿಕ ಈ ನಿರ್ಣಯ ಕೈಗೊಳ್ಳಲಾಗಿದೆ.

ಸುಲೇಮಾನಿಯನ್ನು ಕೊಂದ ದಾಳಿಯನ್ನು ಪ್ರಚೋದನಕಾರಿ ಹಾಗೂ ಸರಿಯಾದ ನಿರ್ಣಯ ಅಲ್ಲ ಎಂದು ಪರಿಗಣಿಸಿ ಯುಎಸ್​ ಹೌಸ್​ ಸ್ಪೀಕರ್ ನ್ಯಾನ್ಸಿ ಪೆಲೋಸಿ ಟ್ವೀಟ್​ ಮಾಡಿದ್ದಾರೆ.

ಕಾಂಗ್ರೆಸ್​​ ಸಂಪರ್ಕಿಸದೆ, ಇರಾನ್ ಮತ್ತು ಯುಎಸ್​ ನಡುವಿನ ಬಿಕ್ಕಟ್ಟನ್ನು ಹೆಚ್ಚಿಸುವ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ ಎಂದು ಪೆಲೋಸಿ ಆರೋಪಿಸಿದ್ದಾರೆ.

ಅಧ್ಯಕ್ಷರ ಈ ನಿರ್ಧಾರ ಉಭಯ ದೇಶಗಳ ನಡುವಿನ ಉದ್ವಿಗ್ನತೆಯನ್ನು ಹೆಚ್ಚಿಸುವ ಅಪಾಯವನ್ನುಂಟುಮಾಡಿದೆ. ಈ ಕಾರ್ಯತಂತ್ರವನ್ನು ಕಾಂಗ್ರೆಸ್​ನ ಕೆಲವು ಸದಸ್ಯರು ಕೂಡಾ ಗಂಭೀರವಾಗಿ ಪರಿಗಣಿಸಿದ್ದಾರೆಂದು ಸ್ಪೀಕರ್ ಹೇಳಿದ್ದಾರೆ.

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.