ETV Bharat / international

Guinness World Records: ಅಮೆರಿಕಾದ ಈಕೆ ವಿಶ್ವದಲ್ಲೇ ಅತ್ಯಂತ ಅಗಲವಾದ ಬಾಯಿ ಹೊಂದಿರುವ ಮಹಿಳೆ

author img

By

Published : Jul 31, 2021, 3:17 AM IST

Guinness World Records
Guinness World Records

ಕನೆಕ್ಟಿಕಟ್​ನ ಸೌತ್​ ನಾರ್ವಾಕ್​ನಲ್ಲಿನ ದಂತ ವೈದ್ಯರ ಆಸ್ಪತ್ರೆಯಲ್ಲಿ ಅಮೆರಿಕಾದ ಗಿನ್ನೆಸ್ ದಾಖಲೆ ತೀರ್ಪುಗಾರರ ಸಮ್ಮುಖದಲ್ಲಿ ಸಮಂತಾರ ಬಾಯಿಯ ಅಂತರವನ್ನು ಅಳತೆ ಮಾಡಿ ಗಿನ್ನೆಸ್ ದಾಖಲೆಯ ಪ್ರಶಸ್ತಿಯನ್ನು ನೀಡಿದ್ದಾರೆ. ​

ನ್ಯೂಯಾರ್ಕ್​: ಟಿಕ್​ ಟಾಕ್​ನಲ್ಲಿ ತನ್ನ ಅಗಲವಾದ ಬಾಯಿಯನ್ನು ಬಳಸಿಕೊಂಡು ವಿಚಿತ್ರ ಮತ್ತು ವಿಶೇಷ ವಿಡಿಯೋಗಳ ಪ್ರಸಿದ್ಧಿಯಾಗಿದ್ದ ಅಮೆರಿಕಾದ ಹಾಸ್ಯಗಾರ್ತಿ, ಇದೀಗ ವಿಶ್ವದಲ್ಲಿ ಅತ್ಯಂತ ವಿಸ್ತೀರ್ಣವಾದ ಬಾಯಿಯನ್ನು ಹೊಂದಿರುವ ಮಹಿಳೆ ಎಂಬ ಗಿನ್ನೆಸ್ ದಾಖಲೆಗೆ ಪಾತ್ರರಾಗಿದ್ದಾರೆ.

ಅಮೆರಿಕಾದ ಕನೆಕ್ಟಿಕಟ್​ನಲ್ಲಿ ವಾಸಿಸುವ 31 ವರ್ಷದ ಸಮಂತಾ ರ‍್ಯಾಮ್ಸ್​ಡೆಲ್​ ಎಂಬ ಮಹಿಳೆ ತಮ್ಮ ಬಾಯಿಯನ್ನು 6.52 ಸೆಂಟಿ ಮೀಟರ್​ಗಳಷ್ಟು ವಿಸ್ತರಿಸಲ್ಲರು.​ ವಿಶ್ವ ಗಿನ್ನೆಲ್​ ದಾಖಲೆಯ ಪ್ರಕಾರ ಸ್ಯಾಮ್​ ವಿಶ್ವದ ಅತ್ಯಂತ ಅಗಲವಾದ ಬಾಯಿಯನ್ನು ಹೊಂದಿರುವ ಮಹಿಳೆ ಎಂಬುದು ಸಾಬೀತಾಗಿದೆ. ಈಕೆ ಒಂದು ಸೇಬಿನ ಹಣ್ಣು, ಬರ್ಗರ್​ ಒಮ್ಮೆಲೆ ಬಾಯಿಗೆ ಹಾಕಿಕೊಂಡು ತಿನ್ನುವ ಸಾಮರ್ಥ್ಯವನ್ನು ಹೊಂದಿದ್ದಾರೆ. ಅವರ ಸಾಮಾಜಿಕ ಜಾಲಾತಾಣದ ಖಾತೆಯಲ್ಲಿ ಹಲವಾರು ವಿಡಿಯೋಗಳನ್ನು ಮಾಡಿದ್ದು, ಇವೆಲ್ಲವೂ ಲಕ್ಷಾಂತರ ವೀಕ್ಷಣೆಯನ್ನು ಪಡೆದುಕೊಂಡಿವೆ.

  • " class="align-text-top noRightClick twitterSection" data="">

ಇವರು ಅಗಲವಾಗಿ ಬಾಯಿಯನ್ನು ತೆರೆದು ತಿನಿಸುಗಳನ್ನು ತಿನ್ನುವ ವಿಡಿಯೋ, ಹಾಸ್ಯ ನಟನೆಯ ವಿಡಿಯೋಗಳು ಟಿಕ್​ಟಾಕ್​ ಸೇರಿದಂತೆ ಸಾಮಾಜಿಕ ಜಾಲಾತಾಣಗಳಲ್ಲಿ ಭಾರಿ ವೈರಲ್​ ಆಗಿದ್ದವು. ಈ ವಿಡಿಯೋಗಳನ್ನು ವೀಕ್ಷಿಸಿದ ಇವರ ಫಾಲೋವರ್ಸ್​ ಸಮಂತಾಗೆ ಹೆಚ್ಚು ವಿಸ್ತೀರ್ಣವಾದ ಬಾಯಿಯನ್ನು ಹೊಂದಿರುವುದಾಗಿ ಸಮಂತಾಗೆ ಮನವರಿಕೆ ಮಾಡಿ, ಅಲ್ಲದೆ ಅವರನ್ನು ವಿಶ್ವದಾಖಲೆ ಪರೀಕ್ಷೆಗೆ ಹೋಗುವಂತೆ ಪ್ರೋತ್ಸಾಹಿಸಿದ್ದಾರೆಂದು ತಿಳಿದುಬಂದಿದೆ.

ಕನೆಕ್ಟಿಕಟ್​ನ ಸೌತ್​ ನಾರ್ವಾಕ್​ನಲ್ಲಿನ ದಂತ ವೈದ್ಯರ ಆಸ್ಪತ್ರೆಯಲ್ಲಿ ಅಮೆರಿಕಾದ ಗಿನ್ನೆಸ್ ದಾಖಲೆ ತೀರ್ಪುಗಾರರ ಸಮ್ಮುಖದಲ್ಲಿ ಸಮಂತಾರ ಬಾಯಿಯ ಅಂತರವನ್ನು ಅಳತೆ ಮಾಡಿ ಗಿನ್ನೆಸ್ ದಾಖಲೆಯ ಪ್ರಶಸ್ತಿಯನ್ನು ನೀಡಲಾಗಿದೆ

ಇದನ್ನು ಓದಿ: ಏಕಕಾಲದಲ್ಲಿ ಎರಡೂ ಕೈಗಳಿಂದ ವಿಭಿನ್ನ ಬರಹ.. ವಿಶ್ವದಾಖಲೆ ಬರೆದ ಕುಡ್ಲದ ಕುವರಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.