ETV Bharat / entertainment

ಬಿಗ್‌ ಬಾಸ್ ಮನೆಗೆ ಬಂದ ವಿನಯ್ ಪತ್ನಿ; ಸಂಗೀತಾ ಜೊತೆ ಹರಟೆ

author img

By ETV Bharat Karnataka Team

Published : Dec 28, 2023, 4:54 PM IST

Kannada Bigg Boss
ಕನ್ನಡ ಬಿಗ್​ ಬಾಸ್

Kannada Bigg Boss: ಬಿಗ್​ ಬಾಸ್​ ಮನೆಗೆ ಪ್ರತಾಪ್​ ಮತ್ತು ವಿನಯ್​ ಅವರ ಕುಟುಂಬಸ್ಥರು ಆಗಮಿಸಿದ್ದಾರೆ.

ನಟ ಸುದೀಪ್​​ ನಡೆಸಿಕೊಡುವ ಬಿಗ್​ ಬಾಸ್​​​ ರಿಯಾಲಿಟಿ ಶೋ ಬಹುತೇಕ ಕೊನೆಯ ಹಂತ ತಲುಪಿದೆ. ಹೆಚ್ಚಾಗಿ ವಿವಿಧ ರೀತಿಯ ಟಾಸ್ಕ್‌ ಗೆಲ್ಲಲು ಜಿದ್ದಾಜಿದ್ದಿನಿಂದ ಕೂಡಿರುವ ಶೋ, ಈ ವಾರವಿಡೀ ಭಾವುಕ ಕ್ಷಣಗಳಿಗೆ ಸಾಕ್ಷಿಯಾಯಿತು.

ಕುಟುಂಬ ಸದಸ್ಯರಿಂದ ದೂರವಿದ್ದ ಸ್ಪರ್ಧಿಗಳಿಗೆ 'ಬಿಗ್​ ಬಾಸ್​' ಸಪ್ರೈಸ್‌​ ಕೊಟ್ಟಿದ್ದಾರೆ. ತಮ್ಮ ಮನೆಯವರನ್ನು ಭೇಟಿಯಾಗುವ ಅವಕಾಶ ಅವರಿಗೆ ಸಿಕ್ಕಿದೆ. ಅದರಂತೆ ಬಹುತೇಕ ಎಲ್ಲಾ ಸ್ಪರ್ಧಿಗಳ ಮನೆಯವರು ಒಬ್ಬರಾದ ಬಳಿಕ ಒಬ್ಬರಂತೆ ಬಿಗ್​​ ಬಾಸ್​ ಮನೆಗೆ ಬಂದಿದ್ದಾರೆ. ಇಂದು ಪ್ರತಾಪ್​ ಮತ್ತು ವಿನಯ್​ ಮನೆಯವರು ಆಗಮಿಸಿದರು. ಜೊತೆಗೊಂದಿಷ್ಟು ಕುತೂಹಲದ ಸನ್ನಿವೇಶವೂ ನಡೆಯಿತು.

ಬಿಗ್​ ಬಾಸ್​ ಪ್ರೋಮೋ ನೋಡಿ: 'ಮಡದಿ ಎದುರು ಮಗುವಾದ್ರಾ ವಿನಯ್?' ಮತ್ತು 'ಅಪ್ಪ-ಮಗನ ಸಮಾಗಮಕ್ಕೆ ಸಾಕ್ಷಿಯಾಯ್ತು ದೊಡ್ಮನೆ!' ಎಂಬ ಶೀರ್ಷಿಕೆಯಡಿ ವಾಹಿನಿ ಎರಡು ಪ್ರೋಮೋ ಬಿಡುಗಡೆ ಮಾಡಿದೆ. ಹೀಗಾಗಿ ವೀಕ್ಷಕರು ಇಂದಿನ ಸಂಪೂರ್ಣ ಸಂಚಿಕೆ ನೋಡಲು ಕಾತರರಾಗಿದ್ದಾರೆ.

ಪ್ರತಾಪ್​ ಭಾವುಕ ಕ್ಷಣ: ಮನೆಯವರು ಬರುತ್ತಾರೆಂಬ ಕಾತರದಲ್ಲಿದ್ದ ಪ್ರತಾಪ್‌ಗೆ ತಿಂಡಿ ತಿನ್ನಿಸಲು ಮನೆಯ ಕೆಲ ಸದಸ್ಯರು ಮುಂದಾಗುತ್ತಾರೆ. ಆದರೆ ಪ್ರತಾಪ್​​ ಏನೂ ತಿನ್ನದೇ ಖಾಲಿ ಹೊಟ್ಟೆಯಲ್ಲೇ ಮನೆಯವರಿಗಾಗಿ ಚಡಪಡಿಸುತ್ತಿರುತ್ತಾರೆ. ಆ ಸಂದರ್ಭದಲ್ಲಿ 'ಪ್ರತಾಪ್​​' ಎನ್ನುವ ಮನೆಯವರ ಧ್ವನಿ ಕೇಳಿಸುತ್ತದೆ. ಅಪ್ಪ, ಅಮ್ಮ ಎಲ್ಲಿದ್ದಾರೆಂದು ಪ್ರತಾಪ್ ಇಡೀ ಮನೆಯೆಲ್ಲಾ ಹುಡುಕಾಡುತ್ತಾರೆ. ಅಷ್ಟರಲ್ಲಿ ಮನೆಯ ಮುಖ್ಯದ್ವಾರ ತೆರೆದುಕೊಂಡಿತು. ಮನೆಯವರು ಅಲ್ಲಿ ಬಂದಿದ್ದರು. ಮನೆಯ ಒಂದು ಹಂತದ ಬಾಗಿಲು ಲಾಕ್​ ಆಗುತ್ತದೆ. ಎರಡೂ ಬದಿಯಲ್ಲಿ ಪ್ರತಾಪ್​ ಮತ್ತು ಮನೆಯವರು ಮುಖಾಮುಖಿಯಾಗುತ್ತಾರೆ. ಎರಡೂ ಕಡೆಯಿಂದ ಕಣ್ಣಲ್ಲೇ ಭಾವನೆಗಳು ವ್ಯಕ್ತವಾಗುತ್ತವೆ.

ಇದನ್ನೂ ಓದಿ: ಮಲಯಾಳಂ ಚಿತ್ರರಂಗಕ್ಕೆ 'ದಿಯಾ' ಹೀರೋ ದೀಕ್ಷಿತ್ ಶೆಟ್ಟಿ ಎಂಟ್ರಿ

ಮತ್ತೊಂದು ಪ್ರೋಮೋದಲ್ಲಿ, ವಿನಯ್​ ಪತ್ನಿ ಮನೆಗೆ ಬಂದಿದ್ದಾರೆ. ಇವ್ರು ನಿಮಗೆ ತಿಳಿದಿರುವ ಹಾಗೆ ಬಹಳ ಕೋಪಿಷ್ಠ. ಆದರೆ ಇವ್ರು ಮಗು ಮನಸ್ಸಿನವರು ಎಂಬ ಹಿನ್ನೆಲೆ ದನಿ ಪ್ಲೇ ಆಗುತ್ತದೆ. ಪ್ರೀತಿ ತುಂಬಿದ ಕ್ಷಣಗಳು ಪ್ರೋಮೋದಲ್ಲಿವೆ. ವಿಲನ್​​ ಮುಖದಲ್ಲಿ ಹೀರೋ ಕಳೆ ಎಂದು ಸಹ ಸ್ಪರ್ಧಿಯೋರ್ವರು ಹೇಳುತ್ತಿದ್ದಂತೆ, ವಿಲನ್​ ಆಗುವ ಮುಂಚೆ ಹೀರೋ ಆಗಿದ್ದವನು ಎಂದು ವಿನಯ್​ ಹೇಳಿದ್ದಾರೆ. ಕೆಲವು ಕ್ಷಣಗಳ ಬಳಿಕ ವಿನಯ್​ ಪತ್ನಿ, 'ಸಂಗೀತಾ...' ನಿಮ್ಮ ಬಳಿ ಮಾತನಾಡಬೇಕೆಂದು ಕರೆದೊಯ್ದರು. ಇಂದಿನ ಸಂಚಿಕೆಯಲ್ಲಿ ಏನಾಗಲಿದೆ ಎಂಬ ಕುತೂಹಲ ಪ್ರೇಕ್ಷಕರಲ್ಲಿ ಮನೆ ಮಾಡಿದೆ.

ಇದನ್ನೂ ಓದಿ: 'chef ಚಿದಂಬರ'ದ ಅನು ಪಾತ್ರದಲ್ಲಿ ರೆಚೆಲ್ ಡೇವಿಡ್; ಶೀಘ್ರ ಬಿಡುಗಡೆಗೆ ಸಿದ್ಧತೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.