ETV Bharat / entertainment

ಬಾಲಿವುಡ್ ನಟ - ನಟಿಯರಿಗೆ ಅಸೂಯೆ ಮತ್ತು ಭಯವಿದೆ: ಕಿಚ್ಚನ ಪರ ಆರ್​ಜಿವಿ ಟ್ವೀಟ್​

author img

By

Published : Apr 28, 2022, 1:32 PM IST

Tollywood Director Ram Gopal Verma On Kiccha Sudeep Tweet
ಬಾಲಿವುಡ್ ನಟ-ನಟಿಯರಿಗೆ ಅಸೂಯೆ ಮತ್ತು ಭಯವಿದೆ: ಕಿಚ್ಚನ ಪರ ಆರ್​ಜಿವಿ ಟ್ವೀಟ್​

ಉತ್ತರ ಭಾರತದ ನಟ ಮತ್ತುನಟಿಯರು, ದಕ್ಷಿಣ ಭಾರತದ ನಟ ಮತ್ತು ನಟಿಯರ ಬಗ್ಗೆ ಭಯ ಮತ್ತು ಅಸೂಯೆ ಹೊಂದಿದ್ದಾರೆ. ಏಕೆಂದರೆ, ಕನ್ನಡದಿಂದ ಡಬ್‌ ಆದ 'ಕೆಜಿಎಫ್–2' ಮೊದಲ ದಿನವೇ 50 ಕೋಟಿ ರೂಪಾಯಿ ಗಳಿಸಿದೆ ಎಂದು ರಾಮ್​ಗೋಪಾಲ್ ವರ್ಮಾ ಟ್ವೀಟ್ ಮಾಡಿದ್ದಾರೆ.

ಸ್ಯಾಂಡಲ್​ವುಡ್​ನ ಕಿಚ್ಚ ಸುದೀಪ್ ಮತ್ತು ಬಾಲಿವುಡ್​ನ ಅಜಯ್​ ದೇವಗನ್​ ನಡುವಿನ 'ರಾಷ್ಟ್ರಭಾಷೆ' ವಿಚಾರದ ಬಗೆಗಿನ ಚರ್ಚೆ ಮುಂದುವರೆದಿದೆ. ಕನ್ನಡಿಗರು ಮಾತ್ರವಲ್ಲದೇ ದಕ್ಷಿಣ ಭಾರತದ ಸಿನಿಮಾಗಳ ಸೆಲೆಬ್ರಿಟಿಗಳೂ ಕೂಡಾ ಅಜಯ್ ದೇವಗನ್ ಅವರನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ. ಈಗ ಸುದೀಪ್ ಪರ ದಕ್ಷಿಣದ ನಿರ್ದೇಶಕ, ನಿರ್ಮಾಪಕ ರಾಮ್​ ಗೋಪಾಲ್​ ವರ್ಮಾ ಕೂಡಾ ಟ್ವಿಟರ್​ನಲ್ಲಿ ಬ್ಯಾಟ್ ಬೀಸಿದ್ದಾರೆ.

'ಸತ್ಯವನ್ನು ಯಾರೂ ನಿರಾಕರಿಸಲಾಗದು ಸುದೀಪ್ ಸರ್. ಉತ್ತರ ಭಾರತದ ನಟ ಮತ್ತುನಟಿಯರು, ದಕ್ಷಿಣ ಭಾರತದ ನಟ ಮತ್ತು ನಟಿಯರ ಬಗ್ಗೆ ಭಯ ಮತ್ತು ಅಸೂಯೆ ಹೊಂದಿದ್ದಾರೆ. ಏಕೆಂದರೆ, ಕನ್ನಡದಿಂದ ಡಬ್‌ ಆದ 'ಕೆಜಿಎಫ್–2' ಮೊದಲ ದಿನವೇ 50 ಕೋಟಿ ರೂಪಾಯಿ ಗಳಿಸಿದೆ. ಹಿಂದಿ ಸಿನಿಮಾಗಳ ಆರಂಭಿಕ ದಿನಗಳನ್ನು ನಾವೆಲ್ಲರೂ ನೋಡಲಿದ್ದೇವೆ ಎಂದು ರಾಮ್​ ಗೋಪಾಲ್​ ವರ್ಮಾ ಟ್ವೀಟ್ ಮಾಡಿದ್ದಾರೆ.

  • The base undeniable ground truth @KicchaSudeep sir ,is that the north stars are insecure and jealous of the south stars because a Kannada dubbing film #KGF2 had a 50 crore opening day and we all are going to see the coming opening days of Hindi films

    — Ram Gopal Varma (@RGVzoomin) April 27, 2022 " class="align-text-top noRightClick twitterSection" data=" ">

ಇದರೊಂದಿಗೆ ಮತ್ತಷ್ಟು ಟ್ವೀಟ್ ಮಾಡಿರುವ ರಾಮ್​ ಗೋಪಾಲ್​ ವರ್ಮಾ ನೀವು ಈ ಹೇಳಿಕೆಯನ್ನು ಉದ್ದೇಶ ಪೂರ್ವಕವಾಗಿ ನೀಡಿದ್ದರೂ, ನೀಡದಿದ್ದರೂ, ಈ ಹೇಳಿಕೆಯಿಂದ ಸಂತೋಷವಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಬಾಲಿವುಡ್ ಮತ್ತು ಸ್ಯಾಂಡಲ್​ವುಡ್​ ಎರಡೂ ಕೂಡಾ ಶಾಂತವಾಗಿರಲು ಸಾಧ್ಯವಿಲ್ಲ ಎಂದಿದ್ದಾರೆ. ಅಜಯ್ ದೇವಗನ್ ಅವರ ರನ್​ವೇ 34 ಸಿನಿಮಾ ಕನ್ನಡದಲ್ಲಿ ಮತ್ತು ಹಿಂದಿಯಲ್ಲಿ ಎಷ್ಟು ಚಿನ್ನ ಇದೆ ಎಂಬುದನ್ನು ಸಾಬಿತುಪಡಿಸಲಿವೆ ಎಂದು ರಾಮ್​ಗೋಪಾಲ್ ವರ್ಮಾ ಮಾರ್ಮಿಕವಾಗಿ ನುಡಿದಿದ್ದಾರೆ.

  • Raaj Bhaasha.
    Raashtra Bhaasha Nahi, Sir.

    Why is this ‘Hindi is our National Language’ being repeated so much?

    Everyone will learn a language if needed no or if they like / want to be a polyglot. No? https://t.co/ZkG7ed3OgX

    — Chinmayi Sripaada (@Chinmayi) April 27, 2022 " class="align-text-top noRightClick twitterSection" data=" ">

ಗಾಯಕಿ ಚಿನ್ಮಯಿ ಶ್ರೀಪಾದ ಅವರೂ ಅಜಯ್ ದೇವಗನ್ ಟ್ವೀಟ್​ಗೆ ಪ್ರತಿಕ್ರಿಯೆ ನೀಡಿದ್ದು, ರಾಜ​ ಭಾಷೆ, ರಾಷ್ಟ್ರ ಭಾಷೆಯಾಗುವುದಿಲ್ಲ ಸಾರ್. ಹಿಂದಿ ಭಾಷೆ ರಾಷ್ಟ್ರ ಭಾಷೆ ಎಂಬುದು ಏಕೆ ಪುನರಾವರ್ತನೆಯಾಗುತ್ತಿದೆ? ಎಲ್ಲರೂ ಅವಶ್ಯಕತೆ ಇದ್ದರೆ ಅಥವಾ ಇಷ್ಟಪಟ್ಟರೆ ಭಾಷೆಯನ್ನು ಕಲಿಯುತ್ತಾರೆ ಅಥವಾ ಬಹುಭಾಷಿಕರಾಗಲು ಕಲಿಯುತ್ತಾರೆ ಅಲ್ಲವೇ? ಎಂದು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: ಹಿಂದಿ ರಾಷ್ಟ್ರೀಯ ಭಾಷೆ ಅಲ್ಲ: ಸುದೀಪ್ ಮಾತಿಗೆ ಧ್ವನಿಗೂಡಿಸಿದ ಕನ್ನಡ ತಾರೆಯರು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.