ETV Bharat / entertainment

ಪ್ರಧಾನಿ ಮೋದಿ ಭೇಟಿಯಾದ ಆಸ್ಕರ್ ವಿಜೇತ "ದಿ ಎಲಿಫೆಂಟ್ ವಿಸ್ಪರರ್ಸ್" ತಂಡ

author img

By

Published : Mar 30, 2023, 5:47 PM IST

The Elephant Whisperers team met PM Modi
ಮೋದಿ ಭೇಟಿಯಾದ ದಿ ಎಲಿಫೆಂಟ್ ವಿಸ್ಪರರ್ಸ್ ತಂಡ

ಇಂದು ಆಸ್ಕರ್ ವಿಜೇತ "ದಿ ಎಲಿಫೆಂಟ್ ವಿಸ್ಪರರ್ಸ್" ತಂಡ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದೆ.

ಆಸ್ಕರ್​​ ವಿಚಾರವಾಗಿ ಭಾರತದ ಸಾಧನೆ ಅಭೂತಪೂರ್ವ. ಇತ್ತೀಚೆಗಷ್ಟೇ ನಡೆದ 95ನೇ ಆಸ್ಕರ್​​ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಕಾರ್ತಿಕಿ ಗೊನ್ಸಾಲ್ವೆಸ್ ನಿರ್ದೇಶನದ ಮತ್ತು ಗುನೀತ್​ ಮೊಂಗಾ ನಿರ್ಮಾಣದ "ದಿ ಎಲಿಫೆಂಟ್ ವಿಸ್ಪರರ್ಸ್" ಅತ್ಯುತ್ತಮ ಕಿರು ಸಾಕ್ಷ್ಯಚಿತ್ರ ಅವಾರ್ಡ್ ಪಡೆದುಕೊಂಡಿತ್ತು. ಅತ್ಯುತ್ತಮ ಕಿರು ಸಾಕ್ಷ್ಯಚಿತ್ರ ವಿಭಾಗದಲ್ಲಿ ಆಸ್ಕರ್ ಪಡೆದ ಭಾರತದ ಮೊದಲ ಸಾಕ್ಷ್ಯಚಿತ್ರ ಇದು ಎಂಬ ಖ್ಯಾತಿಗೂ ಪಾತ್ರವಾಗಿದೆ "ದಿ ಎಲಿಫೆಂಟ್ ವಿಸ್ಪರರ್ಸ್".

ಅತ್ಯುತ್ತಮ ಮೂಲ ಗೀತೆ ವಿಭಾಗದಲ್ಲಿ ನಾಟು ನಾಟು: ಇದಲ್ಲದೇ ಭಾರತದ ಸೂಪರ್ ಹಿಟ್ ಸಿನಿಮಾ 'ಆರ್​ಆರ್​ಆರ್​'ನ ನಾಟು ನಾಟು ಹಾಡು ಕೂಡ ಅತ್ಯುತ್ತಮ ಮೂಲ ಗೀತೆ ವಿಭಾಗದಲ್ಲಿ ಪ್ರಶಸ್ತಿ ಮುಡಿಗೇರಿಸಿಕೊಂಡಿದೆ. ಇದೀಗ "ದಿ ಎಲಿಫೆಂಟ್ ವಿಸ್ಪರರ್ಸ್" ತಂಡ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿದೆ.

  • The cinematic brilliance and success of ‘The Elephant Whisperers’ has drawn global attention as well as acclaim. Today, I had the opportunity to meet the brilliant team associated with it. They have made India very proud. @guneetm @EarthSpectrum pic.twitter.com/44u16fbk3j

    — Narendra Modi (@narendramodi) March 30, 2023 " class="align-text-top noRightClick twitterSection" data=" ">

ಪ್ರಧಾನಿ ಭೇಟಿಯಾದ "ದಿ ಎಲಿಫೆಂಟ್ ವಿಸ್ಪರರ್ಸ್" ತಂಡ: ಇಂದು "ದಿ ಎಲಿಫೆಂಟ್ ವಿಸ್ಪರರ್ಸ್" ನಿರ್ಮಾಪಕಿ ಗುನೀತ್​ ಮೊಂಗಾ ಮತ್ತು ನಿರ್ದೇಶಕಿ ಕಾರ್ತಿಕಿ ಗೊನ್ಸಾಲ್ವೆಸ್ ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಿದ್ದಾರೆ. ಅವರ ಭೇಟಿ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಕಾಣಸಿಗುತ್ತಿವೆ.

ಪ್ರಧಾನಿ ಮೋದಿ ಟ್ವೀಟ್: ದಿ ಎಲಿಫೆಂಟ್ ವಿಸ್ಪರರ್ಸ್ ಸಿನಿಮಾದ ತೇಜಸ್ಸು ಮತ್ತು ಯಶಸ್ಸು ಜಾಗತಿಕವಾಗಿ ಗಮನ ಸೆಳೆಯುವುದರ ಜೊತೆಗೆ ಮೆಚ್ಚುಗೆಯನ್ನೂ ಗಳಿಸಿದೆ. ಇಂದು, ಆ ಅದ್ಭುತ ತಂಡವನ್ನು ಭೇಟಿ ಮಾಡುವ ಅವಕಾಶ ನನಗೆ ಸಿಕ್ಕಿತು. ಅವರು ಭಾರತವನ್ನು ಹೆಮ್ಮೆಪಡುವಂತೆ ಮಾಡಿದ್ದಾರೆ ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ.

ಗುನೀತ್​ ಮೊಂಗಾ ಟ್ವೀಟ್: ಪ್ರಧಾನಿ ಅವರೇ, ಇಂದು ನಿಮ್ಮನ್ನು ಭೇಟಿಯಾದ ಕ್ಷಣ ಮತ್ತು 'ದಿ ಎಲಿಫೆಂಟ್ ವಿಸ್ಪರರ್ಸ್'ಗಾಗಿ ಭಾರತ ಗೆದ್ದ ಆಸ್ಕರ್ ಅನ್ನು ನಿಮ್ಮೊಂದಿಗೆ ಹಂಚಿಕೊಂಡ ಕ್ಷಣ ನಮಗೆ ನಿಜವಾಗಿಯೂ ಗೌರವವಾಗಿದೆ. ನಿಮ್ಮ ಮೆಚ್ಚುಗೆಗೆ ಕೃತಜ್ಞರಾಗಿರುತ್ತೇನೆ ಎಂದು ನಿರ್ಮಾಪಕಿ ಗುನೀತ್​ ಮೊಂಗಾ ಟ್ವೀಟ್ ಮಾಡಿದ್ದಾರೆ.

ಕಾರ್ತಿಕಿ ಗೊನ್ಸಾಲ್ವೆಸ್ ಟ್ವೀಟ್: ಎಲಿಫೆಂಟ್ ವಿಸ್ಪರರ್ಸ್ ತಂಡ ನಮ್ಮ ಪ್ರಧಾನಿ ಅವರನ್ನು ಭೇಟಿ ಮಾಡಿದ್ದು, ಗೌರವದ ಕ್ಷಣವಾಗಿದೆ. ಭಾರತದ ಆಸ್ಕರ್​ ಗೆಲುವನ್ನು ಪ್ರಧಾನಿ ಅವರೊಂದಿಗೆ ಸಂಭ್ರಮಿಸಿ ನಾವು ಕೃತಜ್ಞರಾಗಿದ್ದೇವೆ ಎಂದು ನಿರ್ದೇಶಕಿ ಕಾರ್ತಿಕಿ ಗೊನ್ಸಾಲ್ವೆಸ್ ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ಆರ್ಡರ್​ ಮಾಡಿದ್ದೊಂದು, ಬಂದಿದ್ದು ಮತ್ತೊಂದು: ನಿರಾಶೆಗೊಂಡ ರಶ್ಮಿಕಾ ಮಂದಣ್ಣ

41 ನಿಮಿಷಗಳ ದಿ ಎಲಿಫೆಂಟ್ ವಿಸ್ಪರರ್ಸ್ ಅಕಾಡೆಮಿಯಲ್ಲಿ ಅತ್ಯುತ್ತಮ ಕಿರು ಸಾಕ್ಷ್ಯಚಿತ್ರ ಪ್ರಶಸ್ತಿ ಪಡೆಯುವ ಮೂಲಕ ಭಾರತದ ಕೀರ್ತಿ ಹೆಚ್ಚಿಸಿದೆ. ತಮಿಳುನಾಡಿನ ಮುದುಮಲೈ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಒಂದು ಅನಾಥ ಆನೆಯನ್ನು ದತ್ತು ತೆಗೆದುಕೊಳ್ಳುವ ಕುಟುಂಬದ ಸುತ್ತ ಈ ಕಥೆ ಸುತ್ತುತ್ತದೆ. ಆನೆ ಮರಿಯ ಆರೈಕೆಗಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟ ದಂಪತಿಯ ಕಥೆ ಇದರಲ್ಲಿದೆ.

ಇದನ್ನೂ ಓದಿ: 'ನಿಮ್ಮ ಅಭಿನಯ, ವ್ಯಕ್ತಿತ್ವ ಎರಡೂ ಅದ್ಭುತ': ಅನುಪಮ್​ ಖೇರ್ ಬಗ್ಗೆ ಶಿವಣ್ಣ ಗುಣಗಾನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.