ETV Bharat / entertainment

ಶಾರುಖ್​ ಪುತ್ರಿಯ ಚೊಚ್ಚಲ ಚಿತ್ರ 'ದಿ ಆರ್ಚೀಸ್'ನ ಮೊದಲ ಹಾಡು ಬಿಡುಗಡೆ-ನೋಡಿ

author img

By ETV Bharat Karnataka Team

Published : Oct 19, 2023, 10:00 PM IST

ಬಾಲಿವುಡ್​ ದಿಗ್ಗಜರ ಮಕ್ಕಳು ಹಾಗೂ ಮೊಮ್ಮಕ್ಕಳು ನಟಿಸಿರುವ 'ದಿ ಆರ್ಚೀಸ್' ಚಿತ್ರದ ಮೊದಲ ಹಾಡು ಬಿಡುಗಡೆಯಾಗಿದೆ.

The Archies first song Sunoh out; Suhana Khan skates in Zoya Akhtar's Riverdale - watch
ಶಾರುಖ್​ ಪುತ್ರಿಯ ಚೊಚ್ಚಲ ಚಿತ್ರ 'ದಿ ಆರ್ಚೀಸ್'ನ ಮೊದಲ ಹಾಡು ಬಿಡುಗಡೆ

ಬಾಲಿವುಡ್​​ ಕಿಂಗ್​ ಖಾನ್​​ ಶಾರುಖ್ ಪುತ್ರಿ ಸುಹಾನಾ ಖಾನ್ ನಟನೆಯ ಚೊಚ್ಚಲ ಚಿತ್ರ 'ದಿ ಆರ್ಚೀಸ್'. ನೆಟ್‌ಫ್ಲಿಕ್ಸ್​ನಲ್ಲಿ ಬಿಡುಗಡೆ ಆಗಲು ಸಜ್ಜಾಗಿರುವ ಈ ಸಿನಿಮಾದಲ್ಲಿ ಬಾಲಿವುಡ್​​ ದಿಗ್ಗಜರ ಮಕ್ಕಳು, ಮೊಮ್ಮಕ್ಕಳು ನಟಿಸಿದ್ದಾರೆ. ಹಾಗಾಗಿ ಈ ಪ್ರಾಜೆಕ್ಟ್​​ ಮೇಲೆ ಅಭಿಮಾನಿಗಳು ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಇಂದು ಚಿತ್ರತಂಡದಿಂದ ಮೊದಲ ಹಾಡು ಬಿಡುಗಡೆಯಾಗಿದೆ.

  • " class="align-text-top noRightClick twitterSection" data="">

ಈ ಹಾಡನ್ನು ಅಂಕುರ್​ ತಿವಾರಿ ಮತ್ತು ದಿ ಐಲ್ಯಾಂಡರ್ಸ್ ಸಂಯೋಜಿಸಿದ್ದರೆ, ಜಾವೇದ್ ಅಖ್ತರ್ ಮತ್ತು ಡಾಟ್ ಸಾಹಿತ್ಯ ಬರೆದಿದ್ದಾರೆ. ಈ ಸಂತೋಷಕರ ಟ್ರ್ಯಾಕ್‌ಗೆ ಗಾಯಕ ತೇಜಸ್ ತಮ್ಮ ಆಕರ್ಷಕ ಕಂಠ ನೀಡಿದ್ದಾರೆ. ಡಿಸೆಂಬರ್​ 7 ರಂದು ನೆಟ್​​ಫ್ಲಿಕ್ಸ್​​ನಲ್ಲಿ ದಿ ಆರ್ಚೀಸ್​ ಬಿಡುಗಡೆ ಆಗಲಿದೆ. ಶಾರುಖ್​ ಖಾನ್​ ಪುತ್ರಿ ಸುಹಾನಾ ಖಾನ್​ ಅವರ ಚೊಚ್ಚಲ ಚಿತ್ರ ಇದಾಗಿದ್ದು, ಸಿನಿಮಾದಲ್ಲಿ ಅವರು ವೆರೋನಿಕಾ ಪಾತ್ರವನ್ನು​​ ನಿರ್ವಹಿಸಿದ್ದಾರೆ.

ಸುಹಾನಾ ಖಾನ್​​ ಶೂಟಿಂಗ್​ ಅನುಭವ: ಇತ್ತೀಚೆಗೆ ತಮ್ಮ ಆರಂಭಿಕ ಅನುಭವದ ಬಗ್ಗೆ ಮಾತನಾಡಿದ್ದ ಶಾರುಖ್ ಪುತ್ರಿ, ಮೊದಲ ದಿನದ ಶೂಟಿಂಗ್ ವಿಭಿನ್ನವಾಗಿತ್ತು. ನೆಟ್‌ಫ್ಲಿಕ್ಸ್ ಸಿನಿಮಾದಲ್ಲಿ ಕೆಲಸ ಮಾಡುವುದು ಓರ್ವ ಕಲಾವಿದರಿಗೆ ಒಂದು ವಿಭಿನ್ನ ಅನುಭವ. ನಾನು ಕೊಂಚ ಆತಂಕಗೊಂಡಿದ್ದೆ ಎಂದು ತಿಳಿಸಿದ್ದರು.

ಇದನ್ನೂ ಓದಿ: ವೆಬ್ ಸಿರೀಸ್​ನಲ್ಲಿ ಬಾಲಿವುಡ್ ದಿಗ್ಗಜರ ಮಕ್ಕಳು, ಮೊಮ್ಮಕ್ಕಳು!

ಬಾಲಿವುಡ್​​ ದಿಗ್ಗಜರ ಮಕ್ಕಳು, ಮೊಮ್ಮಕ್ಕಳ ಸಿನಿಮಾ: ದಿ ಆರ್ಚೀಸ್ ಒಂದು ಮ್ಯೂಸಿಕಲ್​ ಕಾಮಿಡಿ ಸಿನಿಮಾ. ಈ ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಹೊಸಬರ ಎಂಟ್ರಿ ಆಗುತ್ತಿದೆ. ಪ್ರಮುಖ ಪಾತ್ರ ವಹಿಸಿರುವವರ ಪೈಕಿ ಹೆಚ್ಚಿನವರು ಬಾಲಿವುಡ್​​ ದಿಗ್ಗಜರ ಮಕ್ಕಳು, ಮೊಮ್ಮಕ್ಕಳು. ಸುಹಾನಾ ಖಾನ್, ಖುಷಿ ಕಪೂರ್ ಮತ್ತು ಅಗಸ್ತ್ಯ ನಂದಾ ಸೇರಿದಂತೆ ಹಲವರು ನಟಿಸಿದ್ದಾರೆ. ಚಿತ್ರ ಕೇವಲ ಓರ್ವ ನಟ ನಟಿ ಮೇಲೆ ಕೇಂದ್ರೀಕೃತವಾಗಿಲ್ಲ. ಹಲವರು ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ. ಈ ವರ್ಷದ ಡಿಸೆಂಬರ್ 7 ರಂದು ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಗಲು ಸಜ್ಜಾಗಿದೆ. ಚಿತ್ರತಂಡ ಈಗಾಗಲೇ ಪ್ರಚಾರ ಪ್ರಾರಂಭಿಸಿದೆ.

ಇತ್ತೀಚಿನ ಸಂದರ್ಶನವೊಂದರಲ್ಲಿ ಸುಹಾನಾ ಖಾನ್​ ತಮ್ಮ ಪೋಷಕರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಶಾರುಖ್ ಖಾನ್ ಮತ್ತು ಗೌರಿ ಖಾನ್ ತಮ್ಮ ಮಾರ್ಗದರ್ಶಕರು ಎಂದು ಹೇಳಿಕೊಂಡಿದ್ದರು. ನನ್ನ ಪೋಷಕರು ನನಗೆ ಬಹಳ ಬೆಂಬಲ ಕೊಟ್ಟಿದ್ದಾರೆ. ನಮ್ಮ ಕುಟುಂಬದ ಎಲ್ಲರೂ ಪರಸ್ಪರ ಬೆಂಬಲಿಸುತ್ತೇವೆ. ಈ ಬೆಂಬಲ ಹೀಗೆ ಮುಂದುವರಿಯುತ್ತದೆ ಎಂದು ತಿಳಿಸಿದ್ದರು. ಜೋಯಾ ಅಖ್ತರ್ ನಿರ್ದೇಶನದ ಈ ಚಿತ್ರದ ಮೇಲೆ ಪ್ರೇಕ್ಷಕರು ಕುತೂಹಲ ವ್ಯಕ್ತಪಡಿಸಿದ್ದು, ಸಿನಿಮಾ ಯಾವ ಮಟ್ಟಿಗೆ ಗೆಲ್ಲಲಿದೆ ಎಂಬುದನ್ನು ಕಾದು ನೋಡಬೇಕಿದೆ.

ಇದನ್ನೂ ಓದಿ: 'ದಿ ಆರ್ಚೀಸ್' ಬಿಡುಗಡೆಗೆ ಮುಹೂರ್ತ ಫಿಕ್ಸ್​​; ತೆರೆ ಹಂಚಿಕೊಂಡ ಬಾಲಿವುಡ್ ಸ್ಟಾರ್​ ಕಿಡ್ಸ್​!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.