ETV Bharat / entertainment

ಕಪ್ಪು ಬಿಳುಪಿನ ಚಿತ್ರದಲ್ಲಿ ಕಲರ್​ಫುಲ್ ನೋಟ ಬೀರಿದ 'ಶಾಕುಂತಲೆ' ಸಮಂತಾ

author img

By

Published : Mar 21, 2023, 8:39 PM IST

ನಟಿ ಸಮಂತಾ ರುತ್ ಪ್ರಭು ತಮ್ಮ ಮುಂದಿನ 'ಶಾಕುಂತಲಂ' ಸಿನಿಮಾ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ.

Samantha Ruth Prabhu
ನಟಿ ಸಮಂತಾ ರುತ್ ಪ್ರಭು

ಟಾಲಿವುಡ್ ಬಹು ಬೇಡಿಕೆ ನಟಿ ಸಮಂತಾ ರುತ್ ಪ್ರಭು ಅವರು ತಮ್ಮ ಮುಂಬರುವ ಚಿತ್ರ 'ಶಾಕುಂತಲಂ'ನಲ್ಲಿ ಮಗ್ನರಾಗಿದ್ದಾರೆ. ಚಿತ್ರ ಬಿಡುಗಡೆ ಹೊಸ್ತಿಲಿನಲ್ಲಿದ್ದು, ಪ್ರಚಾರ ಪ್ರಾರಂಭಿಸಿದ್ದಾರೆ. ನಟಿಯ ಅಭಿಮಾನಿಗಳು ಅವರ ಮುಂದಿನ ಸಿನಿಮಾ ಬಿಡುಗಡೆಗೆ ಕಾತುರದಿಂದ ಕಾಯುತ್ತಿರುವ ಈ ಸಂದರ್ಭ ಸಮಂತಾ ತಮ್ಮ ಇನ್‌ಸ್ಟಾಗ್ರಾಮ್​ನಲ್ಲಿ ಬ್ಲ್ಯಾಕ್​ ಅ್ಯಂಡ್​ ವೈಟ್ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಬಿಳಿ ಉಡುಪು ಧರಿಸಿರುವ ನಟಿ ಶಾಕುಂತಲೆಯಂತೆ ಮನಮೋಹಕ ನೋಟ ಬೀರಿದ್ದಾರೆ.

ಫೋಟೋಗಳನ್ನು ಹಂಚಿಕೊಂಡಿರುವ ನಟಿ ಸಮಂತಾ ರುತ್ ಪ್ರಭು, 'ಶಾಕುಂತಲಂ'ನ ಎಲ್ಲಾ ವಿಷಯಗಳನ್ನು ಮಾತನಾಡೋಣ ಎಂದು ಬರೆದಿದ್ದಾರೆ. ಇದಕ್ಕೆ ವೈಟ್​ ಹಾರ್ಟ್ ಎಮೋಜಿ ಕೂಡ ಹಾಕಿದ್ದಾರೆ. ಅಭಿಮಾನಿಗಳೀಗ ನಟಿ ಹಾಕಿರುವ ಪೋಸ್ಟ್​ನ ಕಾಮೆಂಟ್ ವಿಭಾಗದಲ್ಲಿ ಬ್ಯುಸಿಯಾಗಿದ್ದಾರೆ. ಹೆಚ್ಚಿನವರು ರೆಡ್​ ಹಾರ್ಟ್ ಎಮೋಜಿ ಹಾಕಿ ತಮ್ಮ ಮೆಚ್ಚುಗೆ ಸೂಚಿಸಿದ್ದಾರೆ. ಉಳಿದಂತೆ, 'ಸೌತ್ ಸಿನಿಮಾ ಇಂಡಸ್ಟ್ರಿಯ ಅತಿ ದೊಡ್ಡ ನಾಯಕಿ, ಸುಂದರಿ, ರಾಜಕುಮಾರಿ ನಿಮ್ಮ ಬಗ್ಗೆ ಹೇಳಬೇಕಾಗಿಲ್ಲ’ ಎಂದು ಅಭಿಮಾನಿಯೊಬ್ಬರು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, "ಈ ಪೋಸ್ಟ್‌ನಲ್ಲಿ ನೀವು 10 ವರ್ಷ ಚಿಕ್ಕವರಂತೆ ಕಾಣುತ್ತೀರಿ. ಪ್ರತಿ ಹೋರಾಟದಲ್ಲೂ ಆಶೀರ್ವಾದಗಳಿವೆ" ಎಂದು ಬರೆದಿದ್ದಾರೆ.

Samantha Ruth Prabhu
ನಟಿ ಸಮಂತಾ ರುತ್ ಪ್ರಭು

'ಶಾಕುಂತಲಂ' ಚಿತ್ರದ ಬಗ್ಗೆ ಹೇಳುವುದಾದರೆ, ಮಹಾಭಾರತದಲ್ಲಿ ಬರುವ ರಾಜ ದುಶ್ಯಂತ್ ಮತ್ತು ಶಾಕುಂತಲೆಯ ಪ್ರೇಮಕಥೆಯನ್ನು ಚಿತ್ರಿಸುತ್ತದೆ. ದೇವ್ ಮೋಹನ್ ಮತ್ತು ಸಮಂತಾ ಈ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಚಿತ್ರದಲ್ಲಿ ಜಿಸ್ಶು ಸೇನ್‌ ಗುಪ್ತಾ, ಡಾ. ಎಂ ಮೋಹನ್ ಬಾಬು ಪ್ರಕಾಶ್ ರಾಜ್, ಮಧುಬಾಲಾ, ಗೌತಮಿ, ಅದಿತಿ ಬಾಲನ್ ಮತ್ತು ಸಚಿನ್ ಖೇಡೇಕರ್ ಕಬೀರ್ ಬೇಡಿ ಸೇರಿದಂತೆ ಪ್ರತಿಭಾವಂತ ತಾರಾಗಣವಿದೆ. ರಾಜಕುಮಾರ ಭರತನ ಪಾತ್ರದಲ್ಲಿ ನಟಿಸಿರುವ ಅಲ್ಲು ಅರ್ಜುನ್ ಅವರ ಪುತ್ರಿ ಅಲ್ಲು ಅರ್ಹಾ ನಟಿಸಿದ್ದಾರೆ.

ಶಾಕುಂತಲಂ ಅನ್ನು ನೀಲಿಮಾ ಗುಣ ನಿರ್ಮಿಸಿದ್ದಾರೆ. ಗುಣಶೇಖರ್ ಖತೆ ಬರೆದು ನಿರ್ದೇಶಿಸಿದ್ದಾರೆ ಮತ್ತು ಶ್ರೀ ವೆಂಕಟೇಶ್ವರ ಕ್ರಿಯೇಷನ್ಸ್ ಅಡಿಯಲ್ಲಿ ದಿಲ್ ರಾಜು ಪ್ರಸ್ತುತಪಡಿಸಲಿದ್ದಾರೆ. ಚಿತ್ರ ಫೆಬ್ರವರಿ 17ರಂದು ಬಿಡುಗಡೆಯಾಗಬೇಕಿತ್ತು. ಆದರೆ ಬಿಡುಗಡೆ ದಿನಾಂಕವನ್ನು ಮುಂದೂಡಲಾಯಿತು. ಏಪ್ರಿಲ್ 14ರಂದು ಈ ಚಿತ್ರ ತೆರೆಕಾಣಲಿದ್ದು, ಪ್ರಚಾರ ಕಾರ್ಯ ಬಿರುಸಿನಿಂದ ಸಾಗಿದೆ.

ಇದನ್ನೂ ಓದಿ: RRR ನಾಟು ನಾಟು ಕ್ರೇಜ್​​: ಮಸ್ಕ್ ಮೆಚ್ಚುಗೆ, ನೂರಾರು ಟೆಸ್ಲಾ ಕಾರುಗಳಲ್ಲಿ ಲೈಟ್​ ಶೋ

ಉಳಿದಂತೆ ನಟಿ ಸಮಂತಾ ರುತ್ ಪ್ರಭು ಮುಂದೆ ರಾಜ್ ಮತ್ತು ಡಿಕೆ ಅವರ ಸಿಟಾಡೆಲ್‌ನಲ್ಲಿ ಬಾಲಿವುಡ್​ ನಟ ವರುಣ್ ಧವನ್ ಜೊತೆಗೆ ಕಾಣಿಸಿಕೊಳ್ಳಲಿದ್ದಾರೆ. ಇದಲ್ಲದೇ, ನಟ ವಿಜಯ್ ದೇವರಕೊಂಡ ಅವರೊಂದಿಗೆ ರೊಮ್ಯಾಂಟಿಕ್ 'ಖುಷಿ' ಸಿನಿಮಾದಲ್ಲೂ ಸಹ ಕಾಣಿಸಿಕೊಳ್ಳಲಿದ್ದಾರೆ.

ಇದನ್ನೂ ಓದಿ: ಜನಪ್ರಿಯ ಭಾರತೀಯ ಸೆಲೆಬ್ರಿಟಿಗಳು: ರಾಮ್ ಚರಣ್ ನಂಬರ್​ 1, ಎರಡನೇ ಸ್ಥಾನದಲ್ಲಿ ದೀಪಿಕಾ

ಇನ್ನೂ ಸಮಂತಾ ಅವರು ನಟಿಸುತ್ತಿರುವ 'ಸಿಟಾಡೆಲ್' ಪ್ರಿಯಾಂಕಾ ಚೋಪ್ರಾ ಅವರ ವಿದೇಶಿ ಸೀರಿಸ್​ ಸಿಟಾಡೆಲ್‌ನ ಹಿಂದಿ ಅಧಿಕೃತ ಆವೃತ್ತಿ. ನಟಿ ಸಮಂತಾ ಬಾಲಿವುಡ್ ನಟ ವರುಣ್ ಧವನ್ ಅವರೊಂದಿಗೆ ಮೊದಲ ಬಾರಿಗೆ ತೆರೆ ಮೇಲೆ ಒಟ್ಟಾಗಿ ಕಾಣಿಸಿಕೊಳ್ಳಲಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.