ETV Bharat / entertainment

'ಸಲಾರ್' ಟ್ರೇಲರ್ ದಾಖಲೆ: 24 ಗಂಟೆಯೊಳಗೆ 116 ಮಿಲಿಯನ್‌ಗೂ ಹೆಚ್ಚು ವೀಕ್ಷಣೆ!

author img

By ETV Bharat Karnataka Team

Published : Dec 3, 2023, 12:00 PM IST

Updated : Dec 3, 2023, 12:51 PM IST

ಒಂದು ದಿನದಲ್ಲಿ ಅತಿ ಹೆಚ್ಚು ವೀಕ್ಷಿಸಲ್ಪಟ್ಟ ಭಾರತೀಯ ಸಿನಿಮಾ ಟ್ರೇಲರ್ ಎಂಬ ಹಿರಿಮೆಗೆ ​'ಸಲಾರ್' ಪಾತ್ರವಾಗಿದೆ.

Salaar trailer
ಸಲಾರ್ ಟ್ರೇಲರ್

ನಟ ಪ್ರಭಾಸ್ ಅಭಿನಯದ ಹೊಸ ಸಿನಿಮಾ 'ಸಲಾರ್' ಬಿಡುಗಡೆಗೂ ಮುನ್ನವೇ ಭಾರಿ​​ ಸದ್ದು ಮಾಡುತ್ತಿದೆ. ಈಗಾಗಲೇ ಜಬರ್ದಸ್ತ್‌ ಟೀಸರ್‌ ಬಿಡುಗಡೆಯಾಗಿದ್ದು, ಸಿನಿಮಾ ಮೇಲೆ ಪ್ರೇಕ್ಷಕರ ಉತ್ಸಾಹ ಇಮ್ಮಡಿಯಾಗಿದೆ. ಟೀಸರ್‌ನಲ್ಲಿ ನಿರ್ದೇಶಕ ಪ್ರಶಾಂತ್ ನೀಲ್ ಆ್ಯಕ್ಷನ್​​​ ಲೋಕವನ್ನೇ ಪ್ರದರ್ಶಿಸಿದ್ದಾರೆ.

ಹೈ-ಆ್ಯಕ್ಟೇನ್ ಆ್ಯಕ್ಷನ್ ಸೀಕ್ವೆನ್ಸ್‌ಗಳನ್ನು ನೀಡುವಲ್ಲಿ ಹೆಸರುವಾಸಿಯಾಗಿರುವ ನೀಲ್​​ ಅವರ ಸಿನಿಮಾ ವೀಕ್ಷಿಸಲು ಪ್ರೇಕ್ಷಕರು ಸಾಕಷ್ಟು ಕಾತರರಾಗಿದ್ದಾರೆ. ಟ್ರೇಲರ್​ಗೆ ವೀಕ್ಷಕರ ಪ್ರತಿಕ್ರಿಯೆ ಕೂಡ ದೊಡ್ಡ ಮಟ್ಟದಲ್ಲೇ ಲಭಿಸಿದೆ. ಎಲ್ಲಾ ಭಾಷೆಗಳ ಟ್ರೇಲರ್‌ಗಳಿಗೆ ಕೇವಲ 24 ಗಂಟೆಗಳೊಳಗೆ ಯೂಟ್ಯೂಬ್​ನಲ್ಲಿ 116 ಮಿಲಿಯನ್‌ಗೂ ಹೆಚ್ಚು ವೀಕ್ಷಣೆ ಸಿಕ್ಕಿದೆ.

  • " class="align-text-top noRightClick twitterSection" data="">

ಹೊಂಬಾಳೆ ಫಿಲ್ಮ್ಸ್ ಸಾಮಾಜಿಕ ಜಾಲತಾಣದಲ್ಲಿ ಈ ವಿಚಾರ ಹಂಚಿಕೊಂಡಿದೆ. "ಒನ್​​ ಮ್ಯಾನ್​ ಆರ್ಮಿ ಸಲಾರ್ ಯೂಟ್ಯೂಬ್​ಲ್ಲಿ ಅಬ್ಬರಿಸಿದೆ. 24 ಗಂಟೆಯೊಳಗೆ 116 ಮಿಲಿಯನ್​ ವೀಕ್ಷಣೆ, 2.7 ಮಿಲಿಯನ್​​ ಲೈಕ್ಸ್​​ ಆಗಿದೆ​" ಎಂದು ಮಾಹಿತಿ ನೀಡಿದೆ.

ಶುಕ್ರವಾರ ಸಂಜೆ 7:19ಕ್ಕೆ ಅನಾವರಣಗೊಂಡ ಸಲಾರ್​ ಟ್ರೇಲರ್​​​ ಅದ್ಭುತ ಸಿನಿಮೀಯ ಅನುಭವ ನೀಡಲಿರುವ ಭರವಸೆ ಕೊಟ್ಟಿದೆ. 24 ಗಂಟೆಯ ವೀಕ್ಷಣಾ ಸಂಖ್ಯೆಯು, 'ಸಲಾರ್​' ಭಾರತೀಯ ಸಿನಿಮಾ ರಂಗದ ಬಹುನಿರೀಕ್ಷಿತ ಚಿತ್ರ ಎಂಬುದನ್ನು ಖಚಿತಪಡಿಸಿದೆ. ಭಾರತೀಯ ಸಿನಿ ಲೋಕದ ಬ್ಲಾಕ್​​ಬಸ್ಟರ್ ಸಿನಿಮಾ 'ಕೆಜಿಎಫ್‌'ನಿಂದಾಗಿ ಹೆಸರುವಾಸಿಯಾಗಿರುವ ಪ್ರಶಾಂತ್ ನೀಲ್ ಆ್ಯಕ್ಷನ್​ ಕಟ್​​​ ಹೇಳಿರುವುದರಿಂದ ಮತ್ತು ಬಾಹುಬಲಿ ಖ್ಯಾತಿಯ ಪ್ರಭಾಸ್ ತೆರೆ ಮೇಲೆ ಅಬ್ಬರಿಸಿರುವುದರಿಂದ ಈ ಪ್ರಾಜೆಕ್ಟ್​ ಮೇಲಿನ ನಿರೀಕ್ಷೆ, ಉತ್ಸಾಹ, ಕುತೂಹಲ ಬೆಟ್ಟದಷ್ಟಿದೆ. ಅಲ್ಲದೇ ಚಿತ್ರದಲ್ಲಿ ಪ್ರಭಾಸ್ ಜೊತೆಗೆ ಪೃಥ್ವಿರಾಜ್ ಸುಕುಮಾರನ್, ಶ್ರುತಿ ಹಾಸನ್ ಮತ್ತು ಜಗಪತಿ ಬಾಬು ಅವರಂತಹ ಸ್ಟಾರ್​ ಕಲಾವಿದರು ಪ್ರಮುಖ ಪಾತ್ರಗಳಲ್ಲಿ ಕೆಲಸ ಮಾಡಿದ್ದಾರೆ.

ಇದನ್ನೂ ಓದಿ: 'ಸಲಾರ್'​ ಟ್ರೇಲರ್​: ಮತ್ತೊಂದು ಹಿಟ್​ಗೆ ಹೊಂಬಾಳೆ ಫಿಲ್ಮ್ಸ್, ಪ್ರಶಾಂತ್​ ನೀಲ್​​ ರೆಡಿ

'ಸಾಲಾರ್' ಟ್ರೇಲರ್ ಸೋಷಿಯಲ್​ ಮೀಡಿಯಾ ಪ್ಲಾಟ್​ಫಾರ್ಮ್​​​ಗಳಲ್ಲಿ ಟ್ರೆಂಡಿಂಗ್​ನಲ್ಲಿದ್ದು, ವಿವಿಧ ಭಾಷೆಗಳಲ್ಲಿ ಲಕ್ಷಾಂತರ ವೀಕ್ಷಣೆ ಮತ್ತು ಲೈಕ್ಸ್ ಪಡೆಯುತ್ತಿದೆ. ಟ್ರೇಲರ್ ಸಾಹಸ, ರೋಮಾಂಚಕ ಸನ್ನಿವೇಶಗಳ ಮಿಶ್ರಣದಂತಿದೆ. ಈ ವರ್ಷದ ಅದ್ಭುತ ಆ್ಯಕ್ಷನ್​ ಪ್ಯಾಕ್ಡ್ ಸಿನಿಮಾವಾಗಿ ಹೊರಹೊಮ್ಮಲಿದೆ ಅನ್ನೋದು ಅಭಿಮಾನಿಗಳ ವಿಶ್ವಾಸ.

ಇದನ್ನೂ ಓದಿ: 'ಉಗ್ರಂ' ಸಿನಿಮಾ ಕಥೆಯಂತಿದೆ 'ಸಲಾರ್' ಟ್ರೇಲರ್ ಎಂದ ಪ್ರೇಕ್ಷಕರು

ಟ್ರೇಲರ್ ಕೇವಲ 24 ಗಂಟೆಗಳಲ್ಲಿ 116+ ಮಿಲಿಯನ್ ವೀಕ್ಷಣೆಗಳು ಮತ್ತು 2.7+ ಮಿಲಿಯನ್ ಲೈಕ್‌ಗಳನ್ನು ಪಡೆದಿರುವುದರಿಂದ ಸಿನಿಮಾ ಸೂಪರ್ ಹಿಟ್ ಆಗೋದು ಬಹುತೇಕ ಪಕ್ಕಾ ಅಂತಾರೆ ಸಿನಿಪ್ರಿಯರು. ಸಿನಿಮಾ ಪ್ಯಾನ್​ ಇಂಡಿಯಾ ಮಟ್ಟದಲ್ಲಿ ಡಿಸೆಂಬರ್​ 22ರಂದು ತೆರೆಗಪ್ಪಳಿಸಲಿದೆ. ಅಂದೇ ನಟ​​ ಶಾರುಖ್ ಖಾನ್​ ಮುಖ್ಯಭೂಮಿಕೆಯ ಡಂಕಿ ಕೂಡ ಬಿಡುಗಡೆ ಆಗಲಿದೆ. ಎರಡೂ ಕೂಡ ಈ ಸಾಲಿನ ಬಹುನಿರಿಕ್ಷೀತ ಸಿನಿಮಾವಾದ ಹಿನ್ನೆಲೆಯಲ್ಲಿ ಬಾಕ್ಸ್ ಆಫೀಸ್​ನಲ್ಲಿ ದೊಡ್ಡ ಮಟ್ಟದ ಪೈಪೋಟಿ ನಡೆಯುವ ನಿರೀಕ್ಷೆ ಇದೆ.

Last Updated : Dec 3, 2023, 12:51 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.