ETV Bharat / entertainment

'ಕಬ್ಜ'ದಲ್ಲಿ ಮಿರಮಿರ ಮಿಂಚುವ ವಿಂಟೇಜ್​ ಕಾರುಗಳು.. ಖರ್ಚು ಎಷ್ಟು ಗೊತ್ತಾ?

author img

By

Published : Mar 6, 2023, 5:54 PM IST

Updated : Mar 6, 2023, 8:02 PM IST

movie
'ಕಬ್ಜ'ದಲ್ಲಿ ಮಿರಮಿರ ಮಿಂಚುವ ವಿಂಟೇಜ್​ ಕಾರುಗಳು

ನಿರ್ದೇಶಕ ಆರ್​ ಚಂದ್ರು ಅವರು ಕಬ್ಜ ಸಿನಿಮಾದಲ್ಲಿ ವಿಂಟೇಜ್​ ಕಾರುಗಳ ಜೊತೆಗೆ ರೆಟ್ರೋ ಕಾಲದ ಪ್ರಾಪರ್ಟೀಸ್​ಗಳನ್ನು ಬಳಸಿ ಶೂಟಿಂಗ್​ ಮಾಡಿದ್ದಾರೆ.

'ಕಬ್ಜ'ದಲ್ಲಿ ಮಿರಮಿರ ಮಿಂಚುವ ವಿಂಟೇಜ್​ ಕಾರುಗಳು

ಬಹುನಿರೀಕ್ಷಿತ ಕಬ್ಜ ಸಿನಿಮಾ ಬಗ್ಗೆ ಕ್ರಿಯೇಟ್​ ಆಗಿರೋ ಕ್ರೇಜ್​ ಅಷ್ಟಿಷ್ಟಲ್ಲ. ಇಷ್ಟೊಂದು ಕುತೂಹಲ​ ಮೂಡಿದ್ದು ಸುಮ್ಮನೆಯಲ್ಲ. ಅದರ ಹಿಂದೆ ನಿರ್ದೇಶಕ ಆರ್​ ಚಂದ್ರು ಅವರ ಕಠಿಣ ಪರಿಶ್ರಮವಿದೆ. ಜೊತೆಗೆ ಹಗಲು ರಾತ್ರಿ ಎನ್ನದೇ ಕಷ್ಟಪಟ್ಟು ಕೆಲಸ ಮಾಡಿದ ದೊಡ್ಡ ತಂಡವೇ ಇದೆ. ರೆಟ್ರೋ ಕಾಲದ ಕಥೆಯನ್ನು ತೆರೆಗೆ ತರೋದು ಅಂದ್ರೆ ನಿಜಕ್ಕೂ ಅದು ಸುಲಭದ ಕೆಲಸವಲ್ಲ. ಆ ಕಾಲದ ರೀತಿ ಕಾಣೋಕೆ ಪ್ರಾಪರ್ಟೀಸ್​ಗಳು​ ಬೇಕು. ಅದನ್ನೆಲ್ಲ ಹೊಂದಿಸುವಲ್ಲಿ ಆರ್​ ಚಂದ್ರು ಟೀಮ್​ ಸಿಕ್ಕಾಪಟ್ಟೆ ಎಫರ್ಟ್​ ಹಾಕಿದೆ. ಅದಕ್ಕೆ ಸಾಕ್ಷಿಯೇ ಈ ಸಿನಿಮಾದಲ್ಲಿನ ಕಾರುಗಳ ಕಲೆಕ್ಷನ್​.

'ಕಬ್ಜ' ಅಂದ್ರೆ ಬರೀ ಸಿನಿಮಾ ಅಲ್ಲ. ಅದು ನಿರ್ದೇಶಕ ಹಾಗೂ ನಿರ್ಮಾಪಕ ಆರ್​ ಚಂದ್ರು ಅವರ ಬಹುದೊಡ್ಡ ಕನಸು. ಅದನ್ನು ನನಸಾಗಿಸೋಕೆ ಕೋಟಿ ಕೋಟಿ ಹಣ ಸುರಿಸಿದ್ದಾರೆ. ಕ್ವಾಲಿಟಿಯಲ್ಲಿ ಕಾಂಪ್ರಮೈಸ್​ ಆಗುವ ಮಾತೇ ಇಲ್ಲ ಎಂಬುದು ಚಂದ್ರು ಅವರ ಪಾಲಿಸಿ. ಇದು ನಿಜವೆಂಬುದಕ್ಕೆ ಕಬ್ಜ ಸಿನಿಮಾದಲ್ಲಿ ಕಾಣಿಸುವ ಕಾರುಗಳೇ ಸಾಕ್ಷಿ. ಇದನ್ನು ನೋಡಿದ್ರೇನೇ ತಿಳಿಯುತ್ತೆ ನಿರ್ದೇಶಕರ ವಿಷನ್​ ಎಂಥದ್ದು ಅಂತ.

ರಿಯಲ್​ ಸ್ಟಾರ್​ ಉಪೇಂದ್ರ, ಕಿಚ್ಚ ಸುದೀಪ್​, ಶ್ರೀಯಾ ಶರಣ್​ ಅವರ ಅಭಿಮಾನಿಗಳಿಗೆ ‘ಕಬ್ಜ’ ಸಿನಿಮಾ ಎಂದರೆ ಮನರಂಜನೆಯ ಹಬ್ಬ. ಪಾತ್ರಗಳ ರೀತಿಯೇ ಈ ಸಿನಿಮಾದಲ್ಲಿ ಆ ಕಾಲದ ಕಾರುಗಳು, ಬೈಕ್​ಗಳು, ಲಾರಿಗಳು ಗಮನ ಸೆಳೆಯಲಿವೆ. ಈಗಾಗಲೇ ಟ್ರೇಲರ್​ನಲ್ಲಿ ಅವುಗಳ ಝಲಕ್​ ಕಾಣಿಸಿಕೊಂಡಿವೆ. ಮಿರಮಿರ ಮಿಂಚುವ ಕಾರುಗಳು ಹೈಲೈಟ್​ ಆಗಿವೆ.

ಕಬ್ಜ ಶೂಟಿಂಗ್​ಗಾಗಿ ಕಲಾ ಫಾರ್ಮ್​ನಿಂದ 30 ವಿಂಟೇಜ್​ ಕಾರುಗಳನ್ನು ತರಿಸಲಾಗಿತ್ತು. ಬೇರೆ ಬೇರೆ ಕಡೆಗಳಿಂದ 30 ಲಾರಿಗಳನ್ನು ತರಿಸಿ ಶೂಟಿಂಗ್​ ಮಾಡಲಾಗಿದೆ. ಬರೋಬ್ಬರಿ 300 ಬೈಕ್​ಗಳು ಬಳಕೆ ಆಗಿವೆ. 70 ಜೀಪುಗಳು ಕೂಡ ಅಬ್ಬರಿಸುತ್ತಿವೆ. ಈ ಕಾರು ಹಾಗೂ ಬೈಕ್​ಗಳಿಗಾಗಿ ಕಮ್ಮಿ ಅಂದ್ರು 10 ರಿಂದ 15‌ ಕೋಟಿ ಖರ್ಚು ಮಾಡಲಾಗಿದೆಯಂತೆ. 1945ರ ಕಾಲದ ಸೀನ್​ಗಳನ್ನು ತೆರೆ ಮೇಲೆ ಮೂಡಿಸೋಕೆ ಕಬ್ಜ ತಂಡ ಇಷ್ಟೆಲ್ಲ ಕಷ್ಟಪಟ್ಟಿದೆ. ಒಟ್ಟಿನಲ್ಲಿ ಸಿನಿಮಾ ನೋಡೋರಿಗೆ ರೆಟ್ರೋ ಜಮಾನದ ಫೀಲ್​ ಆಗಬೇಕು. ನೋಡಿದವರೆಲ್ಲ ವಾವ್​ ಅನ್ನಲೇಬೇಕು ಎನ್ನುವಂತಹ ಗುರಿ ಇಟ್ಕೊಂಡು ಮಾಡಿದ ಪ್ರಯತ್ನವೆಲ್ಲವೂ ತೆರೆ ಮೇಲೆ ಕಾಣಿಸುತ್ತಿದೆ.

ಇದನ್ನೂ ಓದಿ: ಟಾಲಿವುಡ್​ಗೆ ಕಾಲಿಟ್ಟ ಬಿಟೌನ್​ ಬೆಡಗಿ; ಎನ್​ಟಿಆರ್​ ಸಿನಿಮಾಗೆ ಜಾನ್ವಿ ಕಪೂರ್​ ನಾಯಕಿ

ನಿರ್ದೇಶಕ ಆರ್​ ಚಂದ್ರು ಅವರು ಒಬ್ಬ ಛಲಗಾರ. ಅಂದುಕೊಂಡ ರೀತಿಯೇ ಸಿನಿಮಾ ಮೂಡಿಬರಬೇಕು ಅಂತ ಪಟ್ಟು ಹಿಡಿಯುವ ಹಠವಾದಿ. ಕೊರೊನಾ ಲಾಕ್​ಡೌನ್​ನಿಂದಾಗಿ ಸಿನಿಮಾ ಶೂಟಿಂಗ್​ಗೆ ಅಡಚಣೆ ಉಂಟಾಗಿತ್ತು. ಆ ರೀತಿ ಎಷ್ಟೇ ಕಷ್ಟ ಬಂದ್ರೂ ಹಿಡಿದ ಕೆಲಸವನ್ನು ಅವರು ಅರ್ಧಕ್ಕೆ ಬಿಟ್ಟಿಲ್ಲ. ಅಂದುಕೊಂಡ ರೀತಿಯೇ ‘ಕಬ್ಜ’ ಲೋಕವನ್ನು ಅವರು ಕಟ್ಟಿದ್ದಾರೆ.

ವಿಂಟೇಜ್​ ಕಾರುಗಳನ್ನು ಇಟ್ಟುಕೊಂಡು ನೂರಾರು ದಿನಗಳ ಕಾಲ ಶೂಟಿಂಗ್​​ ಮಾಡುವುದು ಅಷ್ಟು ಸುಲಭವಲ್ಲ. ಆ್ಯಕ್ಷನ್​ ಸೀಕ್ವೆನ್ಸ್​ ಮಾಡುವಾಗ ಮೈಯೆಲ್ಲಾ ಕಣ್ಣಾಗಿರಬೇಕು. ಒಂದು ಕಾರಿಗೂ ಹಾನಿ ಆಗದಂತೆ ನೋಡಿಕೊಳ್ಳಬೇಕು. ಯಾಕೆಂದ್ರೆ ಈ ವಾಹನಗಳಿಗೆ ಬೆಲೆ ಕಟ್ಟೋಕಾಗಲ್ಲ. ಇಂಥ ಸಾಕಷ್ಟು ಚಾಲೆಂಜ್​ಗಳ ನಡುವೆಯೇ ‘ಕಬ್ಜ’ ಸಿನಿಮಾ ನಿರ್ಮಾಣ ಆಗಿದೆ. 1945 ರಿಂದ 1987 ರವರೆಗೆ ಸಾಗುವ ಕಥೆಯಲ್ಲಿ ಯಾವ ಯಾವ ರೀತಿ ವಾಹನಗಳು ಬರುತ್ತವೋ ಅದೆನ್ನೆಲ್ಲಾ ಕಷ್ಟಪಟ್ಟು ಸಂಗ್ರಹಿಸಿ ಶೂಟಿಂಗ್​ ಮಾಡಲಾಗಿದೆ.

ಆರ್ ಚಂದ್ರು ಅವರ ಈ ಪರಿಶ್ರಮದಿಂದಾಗಿ ಎಲ್ಲರೂ ಕಬ್ಜ ಚಿತ್ರದ ಬಗ್ಗೆ ಮಾತಾಡುವಂತಾಗಿದೆ. ಕ್ವಾಲಿಟಿ ಅಂದ್ರೆ ಕಬ್ಜ, ಕಬ್ಜ ಅಂದ್ರೆ ಕ್ವಾಲಿಟಿ ಅಂತ ಎಲ್ಲರೂ ಕಮೆಂಟ್​ ಮಾಡ್ತಿದ್ದಾರೆ. ಮೇಕಿಂಗ್​ ಸ್ಟೈಲ್​ ನೋಡಿ ಪರಭಾಷೆಯ ಮಂದಿ ಬಾಯಿ ಮೇಲೆ ಬೆರಳು ಇಟ್ಟುಕೊಂಡಿದ್ದಾರೆ. ಕಬ್ಜ ಬ್ಲಾಕ್​ ಬಸ್ಟರ್​ ಹಿಟ್​ ಆಗೋದ್ರಲ್ಲಿ ಅನುಮಾನವೇ ಇಲ್ಲ ಎಂಬ ಟಾಕ್​ ಕ್ರಿಯೇಟ್​ ಆಗಿದೆ.

ಇದನ್ನೂ ಓದಿ: 'ಅವಕಾಶ ನೀಡಿದಕ್ಕಾಗಿ ಥ್ಯಾಂಕ್ಯೂ..' ಬಹುನಿರೀಕ್ಷಿತ 'ಕಬ್ಜ' ಚಿತ್ರದ ಬಗ್ಗೆ ಶಿವಣ್ಣ ಹೀಗಂದ್ರು..

Last Updated :Mar 6, 2023, 8:02 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.