ETV Bharat / entertainment

ಪೊನ್ನಿಯಿನ್ ಸೆಲ್ವನ್ 2: ನಟ ಕಾರ್ತಿ ಸಿನಿಮಾ ನೋಡಲು ಜಪಾನ್​ನಿಂದ ಬಂದ ಫ್ಯಾನ್ಸ್, ನಟನ ಮನೆಯಲ್ಲಿ ಸತ್ಕಾರ

author img

By

Published : May 2, 2023, 8:19 PM IST

ಪೊನ್ನಿಯಿನ್ ಸೆಲ್ವನ್ 2 ಚಿತ್ರ ವೀಕ್ಷಿಸಲು ನಟ ಕಾರ್ತಿ ಅಭಿಮಾನಿಗಳು ಜಪಾನ್​ನಿಂದ ಚೆನ್ನೈಗೆ ಆಗಮಿಸಿದ್ದಾರೆ.

Karthi fans
ನಟ ಕಾರ್ತಿ ಅಭಿಮಾನಿಗಳು

ಪೊನ್ನಿಯಿನ್ ಸೆಲ್ವನ್ 2 ಚಿತ್ರಮಂದಿರದಲ್ಲಿ ಧೂಳೆಬ್ಬಿಸುತ್ತಿದೆ. ತೆರೆಕಂಡು ನಾಲ್ಕೇ ದಿನದಲ್ಲಿ ಚಿತ್ರ ಜಗತ್ತಿನಾದ್ಯಂತ 200 ಕೋಟಿ ಸಂಗ್ರಹ ಮಾಡುವಲ್ಲಿ ಯಶಸ್ವಿಯಾಗಿದೆ. ಮಣಿರತ್ನಂ ನಿರ್ದೇಶನದ ಈ ಸಿನಿಮಾದಲ್ಲಿ ಘಟಾನುಘಟಿಗಳು ನಟಿಸಿದ್ದು, ಪ್ರತಿಯೊಬ್ಬರ ಪಾತ್ರವೂ ವಿಭಿನ್ನವಾಗಿದೆ. ಈ ಸಿನಿಮಾ ವೀಕ್ಷಿಸಲು ನಟ ಕಾರ್ತಿ ಅಭಿಮಾನಿಗಳು ಜಪಾನ್‌ನಿಂದ ಚೆನ್ನೈಗೆ ಆಗಮಿಸಿದ್ದರು. ನಟ ಕೂಡ ತಮ್ಮ ಅಭಿಮಾನಿಗಳಿಗೆ ಸಮಯ ಮೀಸಲಿಟ್ಟಿದ್ದರು. ಈ ವಿಷಯವೀಗ ಸೋಶಿಯಲ್​ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ.

ಹೌದು, ಜಪಾನ್‌ನಿಂದ ಚೆನ್ನೈವರೆಗೆ ಪ್ರಯಾಣಿಸಿದ ತಮ್ಮ ನಿಷ್ಠಾವಂತ ಅಭಿಮಾನಿಗಳನ್ನು ಭೇಟಿ ಮಾಡಲು ನಟ ಕಾರ್ತಿ ಸಮಯ ಮಾಡಿಕೊಂಡರು. ಕಾರ್ತಿ ಅವರ ಅಭಿಮಾನಿಗಳಾದ ತೆರುಮಿ ಕಕುಬರಿ ಫುಜಿಡಾ (Terumi Kakubari Fujieda) ಮತ್ತು ಇಸಾವೊ ಎಂಡೋ (Isao Endo) ಅವರು ಮಣಿರತ್ನಂ ಅವರ ಚಲನಚಿತ್ರದಲ್ಲಿ ತಮ್ಮ ಮೆಚ್ಚಿನ ನಟನ ಅಭಿನಯ ನೋಡಲು ಜಪಾನ್‌ನಿಂದ ಭಾರತಕ್ಕೆ ಆಗಮಿಸಿದ್ದರು. ಬಹಳ ಸಮಯದಿಂದ ನಟ ಕಾರ್ತಿ ಅವರನ್ನು ಫಾಲೋ ಮಾಡುತ್ತಿದ್ದರು. ಅವರ ನಟನೆಗೆ ಮನಸೋತಿದ್ದರು. ನಟ ಕಾರ್ತಿ ಅಭಿಮಾನಿಗಳನ್ನು ಸ್ವಾಗತಿಸಿದರು ಮತ್ತು ತಮ್ಮ ಮನೆಗೆ ಆಹ್ವಾನಿಸಿ ವಿಶೇಷವಾಗಿ ಸತ್ಕರಿಸಿದರು.

ಅಭಿಮಾನಿಗಳ ಭಾರತ ಭೇಟಿಯ ಬಗ್ಗೆ ತಿಳಿದ ನಂತರ ಅವರನ್ನು ಭೇಟಿ ಮಾಡಲು ಮತ್ತು ಮಾತನಾಡಲು ನಟ ಕಾರ್ತಿ ಸಮಯ ತೆಗೆದುಕೊಂಡರು. ಸದ್ಯ ಸಾಮಾಜಿಕ ಮಾಧ್ಯಮ ನಟ ಕಾರ್ತಿ ಮತ್ತು ಅವರ ಫಾರಿನ್​ ಫ್ಯಾನ್ಸ್​​ಗಳ ಚಿತ್ರಗಳಿಂದ ತುಂಬಿದೆ. ಪೊನ್ನಿಯಿನ್ ಸೆಲ್ವನ್ 2 ವೀಕ್ಷಿಸಲು ಕೇವಲ ಮೂರು ದಿನಗಳ ಕಾಲ ಚೆನ್ನೈಗೆ ಪ್ರಯಾಣಿಸಿದ್ದೇನೆ ಎಂದು ಅಭಿಮಾನಿ ತೆರುಮಿ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ. ಸೋಮವಾರ ಸಂಜೆ ಅವರು ಜಪಾನ್‌ಗೆ ಹೊರಟರು. ಕೋವಿಡ್​ಗೂ ಮುನ್ನ, ಅವರು ಭಾರತದಲ್ಲಿ ಎರಡು ವರ್ಷಗಳ ಕಾಲ ನೆಲೆಸಿದ್ದರು ಎಂದು ಸಹ ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: ₹200 ಕೋಟಿ ಸಂಪಾದಿಸಿದ 'ಪೊನ್ನಿಯಿನ್​ ಸೆಲ್ವನ್ 2'!

ವ್ಯಾಪಾರ ವಿಶ್ಲೇಷಕ ರಮೇಶ್ ಬಾಲಾ ಟ್ವಿಟ್ಟರ್‌ನಲ್ಲಿ ಸರಣಿಯನ್ನು ಚಿತ್ರಗಳನ್ನು ಅಪ್‌ಲೋಡ್ ಮಾಡಿದ್ದಾರೆ. ''ಪೊನ್ನಿಯಿನ್ ಸೆಲ್ವನ್ 2, ನಟ ಕಾರ್ತಿಗೆ ಇದು ಸಮಯ, ತಮಿಳು ಪ್ರೇಕ್ಷಕರೊಂದಿಗೆ ಪೊನ್ನಿಯಿನ್ ಸೆಲ್ವನ್ 2 ವೀಕ್ಷಿಸಲು ಅಭಿಮಾನಿಗಳು ಜಪಾನ್‌ನಿಂದ ಪ್ರಯಾಣ ಬೆಳೆಸಿದರು. ಅವರು ಚಿತ್ರವನ್ನು ನಾಲ್ಕು ಬಾರಿ ವೀಕ್ಷಿಸಿದ್ದಾರೆ ಮತ್ತು ಅವರು ಚೆನ್ನೈನಲ್ಲಿರುವ ನಟನ ಮನೆಯಲ್ಲಿ ಕಾರ್ತಿಯನ್ನು ಸಹ ಭೇಟಿಯಾದರು'' ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ಮೂರೂ ಪಕ್ಷಗಳ ಚುನಾವಣಾ ಪ್ರಣಾಳಿಕೆಯಲ್ಲಿ ಚಿತ್ರೋದ್ಯಮಕ್ಕೆ ಸಿಕ್ಕ ಭರವಸೆ ಏನು?

ಮಣಿರತ್ನಂ ಅವರ ಬಹುತಾರಾಗಣದ ಈ ಪೊನ್ನಿಯಿನ್ ಸೆಲ್ವನ್ 2 ಚಿತ್ರದಲ್ಲಿ ಕಾರ್ತಿ ಕಮಾಂಡರ್ ವಂಧಿಯತೇವನ್ ಪಾತ್ರವನ್ನು ಚಿತ್ರಿಸಿದ್ದಾರೆ. ಶುಕ್ರವಾರ ಜಾಗತಿಕವಾಗಿ ಈ ಚಿತ್ರ ತೆರೆಕಂಡಿದೆ. ವಿಶ್ವಾದ್ಯಂತ ನಾಲ್ಕೇ ದಿನಗಳಲ್ಲಿ 200 ಕೋಟಿ ರೂ.ಗೂ ಹೆಚ್ಚು ಗಳಿಸಿದೆ. ಐಶ್ವರ್ಯಾ ರೈ ಬಚ್ಚನ್​ ಮತ್ತು ವಿಕ್ರಮ್​ ಮುಖ್ಯಭೂಮಿಕೆಯ ಈ ಸಿನಿಮಾ ಚಿತ್ರಮಂದಿರಗಳಲ್ಲಿ ಉತ್ತಮ ಪ್ರದರ್ಶನ ಮುಂದುವರಿಸಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.