ETV Bharat / entertainment

ದಿಶಾ ಪಟಾನಿ ಗೆಳೆಯನ ಕೈ ಮೇಲೆ ಟ್ಯಾಟೂ... ವದಂತಿಗೆ ಪುಷ್ಟಿ ನೀಡಿದ ಹಚ್ಚೆ!

author img

By

Published : Aug 20, 2023, 8:03 PM IST

Disha Patani
ದಿಶಾ ಪಟಾನಿ

Disha Patani: ಬಾಲಿವುಡ್​ ನಟಿ ದಿಶಾ ಪಟಾನಿ ವದಂತಿ ಗೆಳೆಯ ಅಲೆಕ್ಸಾಂಡರ್​ ಅಲೆಕ್ಸ್​ ಇಲಿಕ್ ತಮ್ಮ ಕೈಯಲ್ಲಿ ದಿಶಾಳ ಟ್ಯಾಟೂ ಹಾಕಿಸಿಕೊಂಡಿದ್ದಾರೆ.

ಬಾಲಿವುಡ್​ ಹಾಟ್​ ಬ್ಯೂಟಿ ದಿಶಾ ಪಟಾನಿ ಸದಾ ಒಂದಲ್ಲ ಒಂದು ವಿಚಾರವಾಗಿ ಸುದ್ದಿಯಲ್ಲಿರುತ್ತಾರೆ. ಟೈಗರ್​ ಶ್ರಾಫ್​ ಜೊತೆಗಿನ ಬ್ರೇಕಪ್​ ವದಂತಿಯ ನಂತರ ಅಲೆಕ್ಸಾಂಡರ್​ ಅಲೆಕ್ಸ್​ ಇಲಿಕ್​ ಜೊತೆ ನಟಿ ಡೇಟಿಂಗ್​ನಲ್ಲಿರುವ ಬಗ್ಗೆ ಕೆಲವು ಊಹಾಪೋಹಗಳು ಹರಿದಾಡುತ್ತಿವೆ. ಈ ವದಂತಿಗಳು ನಿಜವೆಂಬುಕ್ಕೆ ಇದೀಗ ಅಲೆಕ್ಸಾಂಡರ್​ ಕೈಯಲ್ಲಿ ದಿಶಾಳ ಟ್ಯಾಟೂ ಮೂಡಿದೆ. ಅವರು ತಮ್ಮ ಕೈಯಲ್ಲಿ ದಿಶಾಳ ಮುಖವನ್ನು ಹಚ್ಚೆ ಹಾಕಿಸಿಕೊಂಡಿದ್ದಾರೆ. ಇದು ಡೇಟಿಂಗ್​ ವದಂತಿಗಳಿಗೆ ಮತ್ತಷ್ಟು ತುಪ್ಪ ಸುರಿದಂತಿದೆ.

ದಿಶಾ ಇನ್​ಸ್ಟಾ ಸ್ಟೋರಿ​: ಅಲೆಕ್ಸಾಂಡರ್​ ಅಲೆಕ್ಸ್​ ಇಲಿಕ್ ಹಚ್ಚೆ ಹಾಕಿಸಿಕೊಂಡಿರುವ ಫೋಟೋವನ್ನು ದಿಶಾ ಪಟಾನಿ ಇನ್​ಸ್ಟಾಗ್ರಾಮ್​ ಸ್ಟೋರಿ ಹಾಕಿಕೊಂಡಿದ್ದಾರೆ. "ಇದು ನನಗೆ ತುಂಬಾ ಇಷ್ಟವಾಯಿತು ಅಲೆಕ್ಸಿ. ನಿಮ್ಮನ್ನು ಸ್ನೇಹಿತನಾಗಿ ಪಡೆಯಲು ನಾನು ತುಂಬಾ ಲಕ್ಕಿ #BFF" ಎಂದು ಫೋಟೋ ಕ್ಯಾಪ್ಶನ್​ ನೀಡಿದ್ದಾರೆ. ನಟಿಯ ಸ್ಟೋರಿಯಲ್ಲಿ ಅಲೆಕ್ಸಾಂಡರ್​ ಅಲೆಕ್ಸ್​ ಇಲಿಕ್ ಕೈಯಲ್ಲಿ ದಿಶಾ ಅವರ ಪೋಟೋವನ್ನು ಹಚ್ಚೆ ಹಾಕಿಕೊಂಡಿರುವುದನ್ನು ಕಾಣಬಹುದು.

ದಿಶಾ ಪಟಾನಿ ಮತ್ತು ಅಲೆಕ್ಸಾಂಡರ್​ ಅಲೆಕ್ಸ್​ ಇಲಿಕ್​ ಬಹಿರಂಗವಾಗಿ ತಾವಿಬ್ಬರು ಪ್ರೀತಿಸುತ್ತಿರುವುದಾಗಿ ಎಲ್ಲಿಯೂ ಹೇಳಿಕೊಂಡಿಲ್ಲ. ಕಳೆದ ಡಿಸೆಂಬರ್​ ತಿಂಗಳಿನಿಂದ ಇವರಿಬ್ಬರ ನಡುವಿನ ಸಂಬಂಧದ ಬಗ್ಗೆ ವದಂತಿಗಳು ಪ್ರಾರಂಭವಾದವು. ಆದರೆ ತಾವಿಬ್ಬರು ಸ್ನೇಹಿತರು ಎಂಬುದಾಗಿ ಎಲ್ಲಾ ಕಡೆಯೂ ಹೇಳಿಕೊಂಡಿದ್ದಾರೆ.

Disha Patani
ದಿಶಾ ಪಟಾನಿ ಇನ್​ಸ್ಟಾ ಸ್ಟೋರಿ

ಇದನ್ನೂ ಓದಿ: 3 ಲಕ್ಷದ ದಿರಿಸಿನಲ್ಲಿ ಮಿಂಚಿದ ಬಾಲಿವುಡ್​ ಮಿಂಚುಳ್ಳಿ ದಿಶಾ ಪಟಾನಿ

ಇನ್ನೂ ಇದಕ್ಕೂ ಮುನ್ನ ಟೈಗರ್​ ಶ್ರಾಫ್​ ಜೊತೆ ದಿಶಾ ಪಟಾನಿ ಹೆಸರು ಕೇಳಿಬಂದಿತ್ತು. ಆದರೆ ಬ್ರೇಕಪ್​ ವದಂತಿ ಬಗ್ಗೆ ಊಹಾಪೋಹಗಳಿದೆಯೇ ಹೊರತು ಅಧಿಕೃತವಾಗಿ ಯಾವುದೇ ಹೇಳಿಕೆಗಳಿಲ್ಲ. ಈ ಬಗ್ಗೆ ಟೈಗರ್ ಶ್ರಾಫ್ ಆಗಲಿ, ದಿಶಾ ಪಟಾನಿ ಆಗಲಿ ಯಾರೂ ಸ್ಪಷ್ಟಪಡಿಸಿಲ್ಲ. ಇನ್ನು ತಾವು ಡೇಟಿಂಗ್​ ನಡೆಸುತ್ತಿರುವುದಾಗಿಯೂ ಈ ತಾರಾ ಜೋಡಿ ಯಾವತ್ತೂ ಹೇಳಿಕೊಂಡಿರಲಿಲ್ಲ. ಹೀಗಾಗಿ ಬ್ರೇಕಪ್​ ವದಂತಿ ಎಷ್ಟರ ಮಟ್ಟಿಗೆ ಸರಿ ಅನ್ನುವುದಕ್ಕೆ ಸ್ಪಷ್ಟತೆಯಿಲ್ಲ.

ಕೆಲವು ಸಿನಿಮಾಗಳಲ್ಲಿ ಒಟ್ಟಿಗೆ ಕಾಣಿಸಿಕೊಳ್ಳುವ ಮೂಲಕ ಅಭಿಮಾನಿಗಳ ಮನದಲ್ಲಿ ಇವರು ಬಾಲಿವುಡ್​ನ ದಿ ಬೆಸ್ಟ್​​ ಜೋಡಿ ಅನ್ನಿಸಿಕೊಂಡಿದ್ದರು. ಕಳೆದ ಆರೇಳು ವರ್ಷದಿಂದ ಎಲ್ಲೇ ಹೋದರೂ ಅವರು ಜೋಡಿಯಾಗಿಯೇ ಓಡಾಡುತ್ತಿದ್ದರು. ಇವರ ಒಡನಾಟ ಕಂಡ ನೆಟಿಜನ್​​ಗಳು ಇವರನ್ನು ಸೂಪರ್​ ಜೋಡಿಗೆ ಹೋಲಿಸತೊಡಗಿದ್ದರು. ಪಾರ್ಟಿ, ಪ್ರವಾಸ, ಡಿನ್ನರ್​, ಮೋಜು - ಮಸ್ತಿ ಅಂತ ಬಂದಾಗಲೂ ಅವರು ಜೋಡಿಯಾಗಿಯೇ ಕಾಣಿಸಿಕೊಳ್ಳುತ್ತಿದ್ದರು. ಹಾಗಾಗಿ ಇದೊಂದು ಡೇಟಿಂಗ್​ ಆಗಿ ಕಾಣಿಸತೊಡಗಿತ್ತು.

ದಿಶಾ ಪಟಾನಿ ಸಿನಿಮಾಗಳು.. ನಟಿ ದಿಶಾ ಪಟಾನಿ ಪ್ಯಾನ್​ ಇಂಡಿಯಾ ಸ್ಟಾರ್​ ಪ್ರಭಾಸ್​, ಅಮಿತಾಭ್​ ಬಚ್ಚನ್​, ದೀಪಿಕಾ ಪಡುಕೋಣೆ ಮತ್ತು ಕಮಲ್​ ಹಾಸನ್​ ನಟನೆಯ ಪ್ರಾಜೆಕ್ಟ್ ಕೆ​ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರಕ್ಕೆ ಅಧಿಕೃತವಾಗಿ 'ಕಲ್ಕಿ 2898 ಎಡಿ' (Kalki 2898 AD) ಎಂದು ಹೆಸರಿಡಲಾಗಿದೆ. ಸಿನಿಮಾವನ್ನು ನಾಗ್​ ಅಶ್ವಿನ್​ ನಿರ್ದೇಶಿಸುತ್ತಿದ್ದಾರೆ. ಇದಲ್ಲದೇ ದಿಶಾ ಅವರು ಸಿದ್ಧಾರ್ಥ್ ಮಲ್ಹೋತ್ರಾ ಜೊತೆ 'ಯೋಧ' ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ವರ್ಷ ಡಿಸೆಂಬರ್ 15 ರಂದು ಚಿತ್ರವನ್ನು ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ.

ಇದನ್ನೂ ಓದಿ: Disha Patani: ಸ್ಟೈಲಿಶ್ ಸೀರೆಯುಟ್ಟು ಮೋಡಿ ಮಾಡಿದ ಬಳುಕುವ ಬಳ್ಳಿ ದಿಶಾ ಪಟಾನಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.