ETV Bharat / entertainment

Fighter: ವಾಯುಪಡೆ ಅಧಿಕಾರಿಗಳ ಪಾತ್ರದಲ್ಲಿ ಹೃತಿಕ್​, ದೀಪಿಕಾ, ಅನಿಲ್​ ಕಪೂರ್: ಫೈಟರ್ ಮೋಷನ್​ ಪೋಸ್ಟರ್ ರಿಲೀಸ್

author img

By

Published : Aug 15, 2023, 5:51 PM IST

fighter first glimpse
ಫೈಟರ್ ಮೋಷನ್​ ಪೋಸ್ಟರ್

Fighter Motion Poster: 77ನೇ ಸ್ವಾತಂತ್ರ್ಯ ದಿನದ ಅಂಗವಾಗಿ ಇಂದು ಫೈಟರ್ ಮೋಷನ್​ ಪೋಸ್ಟರ್ ಬಿಡುಗಡೆಯಾಗಿದ್ದು, ಚಿತ್ರದ ಕುರಿತು ಕುತೂಹಲ ಮೂಡಿಸಿದೆ.

ಬಾಲಿವುಡ್​ ಲೋಕದ ಬಹುಬೇಡಿಕೆಯ ನಟರಾದ ಹೃತಿಕ್​ ರೋಷನ್​ ಮತ್ತು ದೀಪಿಕಾ ಪಡುಕೋಣೆ 'ಫೈಟರ್​​' ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಇಂದು 77ನೇ ಸ್ವಾತಂತ್ರ್ಯ ದಿನದ ಅಂಗವಾಗಿ ಬಹುನಿರೀಕ್ಷಿತ ಚಿತ್ರದ ಮೋಷನ್​ ಪೋಸ್ಟರ್ ಅನಾವರಣಗೊಂಡಿದೆ. ಪ್ರತಿಭಾನ್ವಿತ ಕಲಾವಿದರ ಅಪಾರ ಸಂಖ್ಯೆಯ ಅಭಿಮಾನಿಗಳು ಚಿತ್ರದ ಕುರಿತು ಕುತೂಹಲ ವ್ಯಕ್ತಪಡಿಸುತ್ತಿದ್ದಾರೆ.

ಫೈಟರ್ ಮೋಷನ್​ ಪೋಸ್ಟರ್: 'ಫೈಟರ್' ಸಿನಿಮಾ ಭಾರತದ ಮೊದಲ ವೈಮಾನಿಕ ಸಾಹಸಮಯ ಪ್ರೊಜೆಕ್ಟ್​ ಎಂದು ಹೇಳಲಾಗಿದ್ದು, ಬಾಲಿವುಡ್​ ಸ್ಟಾರ್ ಡೈರೆಕ್ಟರ್​ ಸಿದ್ಧಾರ್ಥ್ ಆನಂದ್​ ಆ್ಯಕ್ಷನ್​ ಕಟ್​ ಹೇಳುತ್ತಿದ್ದಾರೆ. ಸ್ಟೈಲಿಶ್​ ಐಕಾನ್​ ಹೃತಿಕ್​ ರೋಷನ್​ ಮತ್ತು ಪಠಾಣ್​ ಪ್ರತಿಭೆ ದೀಪಿಕಾ ಪಡುಕೋಣೆ ಪ್ರಮುಖ ಪಾತ್ರಗಳನ್ನು ಹಂಚಿಕೊಂಡಿದ್ದಾರೆ. 2024 ರ ಜನವರಿ 25 ರಂದು ಸಿನಿಮಾ ಬಿಡುಗಡೆಗೊಳಿಸಲು ಚಿತ್ರತಂಡ ತಯಾರಿ ನಡೆಸಿದೆ. ಸದ್ಯ ಶೂಟಿಂಗ್​ ಭರದಿಂದ ಸಾಗುತ್ತಿದೆ. ಸ್ವಾತಂತ್ರ್ಯ ದಿನದ ಅಂಗವಾಗಿ ಮೋಷನ್​ ಪೋಸ್ಟರ್ ಬಿಡುಗಡೆಗೊಳಿಸುವ ಮೂಲಕ ಚಿತ್ರ ತಯಾರಕರು ಸಿನಿರಸಿಕರ ಕುತೂಹಲ ಹೆಚ್ಚಿಸಿದ್ದಾರೆ.

ಗಣರಾಜ್ಯೋತ್ಸವಕ್ಕೆ ಸಿನಿಮಾ ಬಿಡುಗಡೆ: 'ಫೈಟರ್​' ಚಿತ್ರದಲ್ಲಿ ತೆರೆ ಹಂಚಿಕೊಂಡಿರುವ ಹೃತಿಕ್​ ರೋಷನ್​ ಮತ್ತು ದೀಪಿಕಾ ಪಡುಕೋಣೆ ಇಂದು ಸಾಮಾಜಿಕ ಜಾಲತಾಣದಲ್ಲಿ ಮೋಷನ್​ ಪೋಸ್ಟರ್ ಪೋಸ್ಟ್‌ ಮಾಡಿದ್ದಾರೆ. ಇನ್​​ಸ್ಟಾಗ್ರಾಮ್​ನಲ್ಲಿ ಶೇರ್ ಮಾಡಿರುವ ಕೋಯಿ ಮಿಲ್​ ಗಯಾ ನಟ, ''ಸ್ಪಿರಿಟ್​ ಆಫ್​ ಫೈಟರ್, ವಂದೇ ಮಾತರಂ, ಮುಂದಿನ ಗಣರಾಜ್ಯೋತ್ಸವ ಸಂದರ್ಭ ನಿಮ್ಮನ್ನು ಚಿತ್ರಮಂದಿರದಲ್ಲಿ ಭೇಟಿಯಾಗುತ್ತೇನೆ. 2024 ರ ಜನವರಿ 15 ರಂದು ವಿಶ್ವಾದ್ಯಂತದ ಚಿತ್ರಮಂದಿರಗಳಲ್ಲಿ ಫೈಟರ್​ ಸಿನಿಮಾ ತೆರೆಕಾಣಲಿದೆ'' ಎಂದು ಬರೆದುಕೊಂಡಿದ್ದಾರೆ. ಇನ್ನು, ದೀಪಿಕಾ ಪಡುಕೋಣೆ ಸಹ ಪೋಸ್ಟ್ ಶೇರ್ ಮಾಡಿದ್ದು, "ನಮ್ಮ ಭವ್ಯ ರಾಷ್ಟ್ರಕ್ಕೆ ಒಂದು ಸಲಾಂ, ಸ್ವಾತಂತ್ರ್ಯ ದಿನದ ಶುಭಾಶಯಗಳು" ಎಂದು ಬರೆದಿದ್ದಾರೆ.

ಇದನ್ನೂ ಓದಿ: Roopesh Shetty: ಕರಾವಳಿ ಪ್ರತಿಭೆ ರೂಪೇಶ್​ ಶೆಟ್ಟಿ ಕನ್ನಡ ಸಿನಿಮಾ ಟೈಟಲ್​ ರಿವೀಲ್​​ ಅಭಿಮಾನಿಗಳಲ್ಲಿ ಹೆಚ್ಚಿದ ಕುತೂಹಲ

ವಾಯುಪಡೆ ಅಧಿಕಾರಿಗಳ ಪಾತ್ರ: ಹಿರಿಯ ನಟ ಅನಿಲ್​ ಕಪೂರ್​ ಸಹ ಸಾಮಾಜಿಕ ಮಾಧ್ಯಮದಲ್ಲಿ ಮೋಷನ್​ ಪೋಸ್ಟರ್ ಶೇರ್ ಮಾಡಿಕೊಂಡಿದ್ದಾರೆ. ಈ ಪೋಸ್ಟ್, ಭಾರತೀಯ ವಾಯುಪಡೆ (ಐಎಎಫ್) ಅಧಿಕಾರಿಗಳ ಪಾತ್ರದಲ್ಲಿ ನಟಿಸುತ್ತಿರುವ ಮೂವರು ನಟರ ಮೊದಲ ನೋಟ ಪ್ರದರ್ಶಿಸಿದೆ. ಫೈಟರ್​ ಮೋಷನ್​ ಪೋಸ್ಟರ್ ರಿಲೀಸ್ ಆದ ಕೂಡಲೇ ಅಭಿಮಾನಿಗಳು ತಮ್ಮ ಪ್ರತಿಕ್ರಿಯೆ ವ್ಯಕ್ತಪಡಿಸಲು ಶುರು ಹಚ್ಚಿಕೊಂಡಿದ್ದಾರೆ. ಫೈಯರ್, ರೆಡ್ ಹಾರ್ಟ್, ಲವ್​ ಸಿಂಬಲ್ಸ್ ಕಾಮೆಂಟ್​ ಸೆಕ್ಷನ್​ನಲ್ಲಿ ತುಂಬಿ ತುಳುಕುತ್ತಿವೆ.

ಇದನ್ನೂ ಓದಿ: Independence day: ರಿಷಬ್​ ಶೆಟ್ಟಿ ಸೇರಿ ಸ್ಯಾಂಡಲ್​ವುಡ್​ ಗಣ್ಯರಿಂದ ನಾಡಿನ ಜನತೆಗೆ ಶುಭಾಶಯ

ವಯಾಕಾಂ 18 ಸ್ಟುಡಿಯೋಸ್, ಮಾರ್​ಫ್ಲಿಕ್ಸ್ ಪಿಕ್ಚರ್ಸ್ ನಿರ್ಮಾಣ ಹೊಣೆ ಹೊತ್ತಿದೆ. ಫೈಟರ್ ಸಿನಿಮಾ ಭಾರತೀಯ ಶಸಸ್ತ್ರ ಪಡೆಗಳ ಶೌರ್ಯ, ತ್ಯಾಗ ಮತ್ತು ಧೇಶಭಕ್ತಿಗೆ ಸೂಚಿಸುವ ಗೌರವ ಎಂದು ಚಿತ್ರತಂಡ ಹೇಳಿಕೊಂಡಿದೆ. ಬ್ಯಾಂಗ್​ ಬ್ಯಾಂಗ್​ ಸಿನಿಮಾ ನಂತರ ಹೃತಿಕ್​ ರೋಷನ್​ ಮತ್ತು ಸಿದ್ಧಾರ್ಥ್ ಆನಂದ್​ ಕಾಂಬೋದಲ್ಲಿ ಬರುತ್ತಿರುವ ಎರಡನೇ ಚಿತ್ರ. ಈ ವರ್ಷಾರಂಭದಲ್ಲಿ ಧೂಳೆಬ್ಬಿಸಿದ್ದ ಪಠಾಣ್​ ನಂತರ ದೀಪಿಕಾ ಪಡುಕೋಣೆ ಮತ್ತು ಸಿದ್ಧಾರ್ಥ್ ಆನಂದ್​ ಕಾಂಬಿನೇಶನ್​ನಲ್ಲಿ ಬರುತ್ತಿರುವ 2ನೇ ಸಿನಿಮಾ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.