ETV Bharat / entertainment

Vamana: 'ವಾ..ವಾ..ವಾಮನ' ಅಂತ ಮಾಸ್​ ಎಂಟ್ರಿ ಕೊಟ್ಟ ಶೋಕ್ದಾರ್ ಧನ್ವೀರ್

author img

By

Published : Jul 31, 2023, 4:25 PM IST

Dhanveer
ವಾಮನ

'ಶೋಕ್ದಾರ್' ಖ್ಯಾತಿಯ ಧನ್ವೀರ್​ ನಟನೆಯ 'ವಾಮನ' ಸಿನಿಮಾದ ಮೊದಲ ಹಾಡು ಬಿಡುಗಡೆಯಾಗಿದೆ.

'ಶೋಕ್ದಾರ್', 'ಬಜಾರ್​' ಮತ್ತು 'ಬೈ ಟು ಲವ್'​ ಚಿತ್ರದ ಮೂಲಕ ಕನ್ನಡ ಚಿತ್ರರಂಗದಲ್ಲಿ ಗುರುತಿಸಿಕೊಂಡಿರುವ ನಟ ಧನ್ವೀರ್​ ಗೌಡ. ಈ ಸಿನಿಮಾಗಳ ಬಳಿಕ ಧನ್ವೀರ್​ ಮಾಸ್​ ಅವತಾರದಲ್ಲಿ ಕಾಣಿಸಿಕೊಳ್ಳುತ್ತಿರುವ ಬಹುನಿರೀಕ್ಷಿತ ಚಿತ್ರ 'ವಾಮನ'. ಬಹುತೇಕ ಚಿತ್ರೀಕರಣ ಮುಗಿಸಿ ಪ್ರೇಕ್ಷಕರ ಮುಂದೆ ಬರೋದಕ್ಕೆ ಸಜ್ಜಾಗಿದೆ. ಇದೀಗ 'ವಾಮನ' ಸಿನಿಮಾದ ಮೊದಲ ಹಾಡು ಬಿಡುಗಡೆಯಾಗಿದೆ. ವಾ..ವಾ..ವಾಮನ ಅಂತ ಬಜಾರ್​ ಹುಡ್ಗ ಮಾಸ್​ ಎಂಟ್ರಿ ಕೊಟ್ಟಿದ್ದಾರೆ.

ನಿರ್ದೇಶಕ ಚೇತನ್​ ಕುಮಾರ್​ ಬರೆದಿರುವ ಸಾಹಿತ್ಯಕ್ಕೆ ಶಶಾಂಕ್​ ಶೇಷಗಿರಿ ಧ್ವನಿಯಾಗಿದ್ದಾರೆ. ಅಜನೀಶ್​ ಲೋಕನಾಥ್​ ಟ್ಯೂನ್​ ನೀಡಿದ್ದಾರೆ. ಭೂಷಣ್​ ಮಾಸ್ಟರ್​ ನೃತ್ಯ ಸಂಯೋಜನೆಯಲ್ಲಿ ಮೂಡಿಬಂದಿರುವ 'ವಾಮನ' ನಾಯಕನ ಇಂಟ್ರಡಕ್ಷನ್​ ಹಾಡಿಗೆ ಧನ್ವೀರ್​ ಜಬರ್ದಸ್ತ್​ ಹೆಜ್ಜೆ ಹಾಕಿದ್ದಾರೆ. 'ವಾಮನ' ಸಿನಿಮಾವನ್ನು ಯುವ ನಿರ್ದೇಶಕ ಶಂಕರ್​ ರಾಮನ್​ ರಚಿಸಿ ನಿರ್ದೇಶಿಸಿದ್ದಾರೆ. ಬೆಂಗಳೂರಿನ ಎಂಎಂಬಿ ಲೆಗಸಿಯಲ್ಲಿ ಹಾಡು ಬಿಡುಗಡೆ ಕಾರ್ಯಕ್ರಮ ನಡೆಯಿತು. ಇಡೀ ಚಿತ್ರತಂಡ ಭಾಗಿಯಾಗಿ ಸಿನಿಮಾ ಬಗ್ಗೆ ಮಾಹಿತಿ ಹಂಚಿಕೊಂಡರು.

ನಿರ್ದೇಶಕ ಶಂಕರ್ ರಾಮನ್ ಮಾತನಾಡಿ, "ಕಥೆಯಲ್ಲಿ ಬರುವ ಪಾತ್ರಗಳಿಗಷ್ಟೇ ಕೌಂಟರ್ ಕೊಡುತ್ತಿರುವುದು, ಬೇರೆ ಯಾರಿಗೂ ಅಲ್ಲ. ನಾಯಕ ಗುಣ ಪಾತ್ರ ನೀರು ಇದ್ದ ಹಾಗೆ. ರಾವಣ, ದುರ್ಯೋಧನ ಇಬ್ಬರನ್ನೂ ಆವರಿಸಿಕೊಳ್ಳುತ್ತಾರೆ. ವಾಮನನ್ನು ಆವರಿಸಿಕೊಳ್ಳುತ್ತಾರೆ. ಸಮಯ ಬಂದಾಗ ದಶಾವತಾರದಲ್ಲಿರುವ ಪಾತ್ರವನ್ನು ಆವರಿಸಿಕೊಳ್ಳುತ್ತಾರೆ. ಚಿತ್ರದಲ್ಲಿ ನಾಲ್ಕ ಆಕ್ಷನ್ ಸೀಕ್ವೆನ್ಸ್ ಇದೆ. ಮಾಸ್ ಆಡಿಯನ್ಸ್​ಗೆ ಏನ್ ಬೇಕು ಅದು ಇದೆ. ಕ್ಲಾಸ್ ಆಡಿಯನ್ಸ್ ಬೇಕಾದ ಕಥೆಯು ಇದೆ" ಎಂದರು.

  • " class="align-text-top noRightClick twitterSection" data="">

ನಾಯಕ‌ ಧನ್ವೀರ್ ಮಾತನಾಡಿ, "ವಾಮನ ನನ್ನ ಮೂರನೇ ಸಿನಿಮಾ. ಇಂದು ಟೈಟಲ್ ಸಾಂಗ್ ರಿಲೀಸ್ ಮಾಡಿದ್ದೇವೆ. ಈ ತರ ಸಾಂಗ್ ಅನ್ನು ನನ್ನ ಹಿಂದಿನ ಸಿನಿಮಾಗಳಲ್ಲಿ ಎಕ್ಸ್​ಪೆಕ್ಟ್ ಮಾಡಿದ್ದೆ. ಆದರೆ ಚೇತನ್ ಸರ್ ನನ್ನ ಹಿಂದೆ ಇಟ್ಟುಬಿಟ್ಟಿದ್ದರು. ಹೋದ ಸಿನಿಮಾದಲ್ಲಿಯೇ ಇದು ಆಗಬೇಕಿತ್ತು. ಅವರ ಬರವಣಿಗೆಗೆ ನಾನು ದೊಡ್ಡ ಫ್ಯಾನ್. ಅವರ ಪದ ಜೋಡಣೆ ಎಲ್ಲವೂ ಚೆನ್ನಾಗಿರುತ್ತದೆ. ಸಿನಿಮಾದಲ್ಲಿ ಒಳ್ಳೆ ಕಂಟೆಂಟ್ ಇದೆ. ಇವತ್ತಿನಿಂದ ನಮ್ಮ ಸಿನಿಮಾ ಪ್ರಮೋಷನ್ ಶುರುವಾಗಿದೆ. ನಿಮ್ಮ ಸಪೋರ್ಟ್ ಇರಲಿ" ಎಂದು ಕನ್ನಡಿಗರಲ್ಲಿ ಕೇಳಿಕೊಂಡರು.

"ವಾಮನ ಸಿನಿಮಾದ ಮೊದಲ ಹಾಡು ರಿಲೀಸ್ ಆಗಿದೆ. ಇದೆಲ್ಲ ಕ್ರೆಡಿಟ್ ನಿರ್ದೇಶಕರು, ಚೇತನ್ ಸರ್ ಸಾಹಿತ್ಯ, ಶಶಾಂಕ್ ವಾಯ್ಸ್, ಅಜನೀಶ್ ಸಂಗೀತಕ್ಕೆ ಸಲ್ಲಬೇಕು. ಈ ಸಿನಿಮಾದ ಎಲ್ಲಾ ಹಾಡುಗಳು ತುಂಬಾ ಚೆನ್ನಾಗಿ ಬಂದಿದೆ. ನನ್ನ ಪಾತ್ರದ ಹೆಸರು ನಂದಿನಿ. ಸಿಂಪಲ್ ಆದ ಮುದ್ದಾದ ಕ್ಯಾರೆಕ್ಟರ್. ಲವ್​ನಲ್ಲಿಯೇ ಫೈಟ್ ಇದೆ" ಎಂದು ನಾಯಕಿ ರೀಷ್ಮಾ ನಾಣಯ್ಯ ಹೇಳಿದರು.

ಬಳಿಕ ನಿರ್ಮಾಪಕ ಚೇತನ್ ಗೌಡ ಮಾತನಾಡಿ, "ವಾಮನ ಸಿನಿಮಾದಲ್ಲಿ ನಮ್ಮ ಶ್ರಮ ಕಡಿಮೆ. ನಿರ್ದೇಶಕರು, ಆಕ್ಟರ್ಸ್, ಟೆಕ್ನಿಷಿಯನ್ಸ್ ಎಲ್ಲಿಯೂ ಶ್ರಮ ಕೊಡಲಿಲ್ಲ. ನಾನು ಶೂಟಿಂಗ್ ಸ್ಪಾಟ್​ಗೆ ಹೋಗಿರುವುದು ಕೇವಲ ನಾಲ್ಕು ದಿನವಷ್ಟೇ. ಅವರ ಮನೆ ಸಿನಿಮಾ ಎನ್ನುವಂತೆ ಎಲ್ಲರು ಕೆಲಸ ಮಾಡಿದ್ದಾರೆ. ಒಳ್ಳೆ ಸಿನಿಮಾ ಮಾಡಬೇಕೆಂದು ಬಂದಿದ್ದೆ. ಒಳ್ಳೆ ಸಿನಿಮಾ ಆಗಿದೆ. ಕನ್ನಡ ಚಿತ್ರರಂಗಕ್ಕೆ ನಮ್ಮದೊಂದು ಕೊಡುಗೆ ಇರಲಿ ಎಂದು ಮಾಡಿದ್ದೇವೆ. ಕೈ ಹಿಡಿದು ಆಶೀರ್ವದಿಸಿ" ಎಂದರು.

ಇನ್ನೂ ಸಿನಿಮಾದಲ್ಲಿ ಧನ್ವೀರ್‌ಗೆ ನಾಯಕಿಯಾಗಿ ರೀಷ್ಮಾ ನಾಣಯ್ಯ ಅಭಿನಯಿಸಿದ್ದು, ತಾರಾ, ಸಂಪತ್‌, ಆದಿತ್ಯ ಮೆನನ್‌, ಶಿವರಾಜ್ ಕೆಆರ್ ಪೇಟೆ, ಅವಿನಾಶ್‌, ಅಚ್ಯುತ್‌ ಕುಮಾರ್‌, ಕಾಕ್ರೊಚ್‌ ಸುಧಿ, ಭೂಷಣ್‌ ಮುಂತಾದವರು ಮುಖ್ಯಭೂಮಿಕೆಯಲ್ಲಿ ಅಭಿನಯಿಸಿದ್ದಾರೆ. ಚಿತ್ರಕ್ಕೆ ಮಹೇಂದ್ರ ಸಿಂಹ ಛಾಯಾಗ್ರಹಣ, ಸುರೇಶ್ ಆರ್ಮುಗಂ ಸಂಕಲನ, ಅರ್ಜುನ್ ರಾಜ್, ವಿಕ್ರಮ್ ಮೋರ್ ಮತ್ತು ಜಾಲಿ ಬಾಸ್ಟಿನ್ ಆಕ್ಷನ್, ನವೀನ್ ಕಲಾ ನಿರ್ದೇಶನವಿದೆ. ಮೊದಲ ಹಾಡು ಬಿಡುಗಡೆ ಮಾಡುವ ಮೂಲಕ ಚಿತ್ರತಂಡ ಪ್ರಚಾರ ಕಾರ್ಯ ಆರಂಭಿಸಿದೆ.

ಇದನ್ನೂ ಓದಿ: Jaggesh: ರಜನಿ 'ಜೈಲರ್​' ಜೊತೆ ಜಗ್ಗೇಶ್​ 'ತೋತಾಪುರಿ 2' ಸಿನಿಮಾ ಬಿಡುಗಡೆ; ಯಾವಾಗ ಗೊತ್ತೇ?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.