ETV Bharat / entertainment

ಭಾರತೀಯ ಚಿತ್ರರಂಗದಲ್ಲೇ ಅತಿ ಹೆಚ್ಚು ಕಲೆಕ್ಷನ್​ ಮಾಡಿದ 'ದಂಗಲ್​'ಗೆ 7 ವರ್ಷ; ಹಿಟ್​ ಲಿಸ್ಟ್ ಇಲ್ಲಿದೆ

author img

By ETV Bharat Karnataka Team

Published : Dec 23, 2023, 3:38 PM IST

Dangal
ದಂಗಲ್

ಭಾರತೀಯ ಚಿತ್ರರಂಗದಲ್ಲಿ ಈವರೆಗೆ ಅತಿ ಹೆಚ್ಚು ಸಂಪಾದನೆ ಮಾಡಿರುವ ಸಿನಿಮಾ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ 'ದಂಗಲ್​' ತೆರೆಕಂಡು ಇಂದಿಗೆ ಏಳು ವರ್ಷ ಪೂರೈಸಿದೆ.

ಮಿಸ್ಟರ್ ಪರ್ಫೆಕ್ಷನಿಸ್ಟ್ ಖ್ಯಾತಿಯ ಬಾಲಿವುಡ್ ಸೂಪರ್‌ ಸ್ಟಾರ್ ಅಮೀರ್ ಖಾನ್ ಅವರ ಕೊನೆಯ ಕೆಲ ಚಿತ್ರಗಳು ಹೆಚ್ಚು ಸದ್ದು ಮಾಡಿಲ್ಲ. ಸದ್ಯ ನಟನ ಮುಂದಿನ ಸಿನಿಮಾಗಳ ಸುಳಿವಿಲ್ಲ. ಆದರೆ, ಭಾರತೀಯ ಚಿತ್ರರಂಗದಲ್ಲೇ ಅತಿ ಹೆಚ್ಚು ಕಲೆಕ್ಷನ್​ ಮಾಡಿದ ಸಿನಿಮಾದಲ್ಲಿ ನಟಿಸಿದ್ದು ಅಮೀರ್ ಖಾನ್ ಅನ್ನೋದನ್ನು ಮರೆಯೋ ಹಾಗಿಲ್ಲ. ಅಮೀರ್ ಖಾನ್​​ ಬಣ್ಣ ಹಚ್ಚಿದ ಬ್ಲಾಕ್​​ಬಸ್ಟರ್ ಸಿನಿಮಾ 'ದಂಗಲ್​​' ಬಿಡುಗಡೆ ಆಗಿ ಇಂದಿಗೆ 7 ವರ್ಷ ಪೂರ್ಣ.

ಹೌದು, ನಟ ಅಮೀರ್ ಖಾನ್ ಅಭಿನಯದ ದಂಗಲ್ ಸಿನಿಮಾ 2016ರ ಡಿಸೆಂಬರ್ 23ಕ್ಕೆ ತೆರೆಗಪ್ಪಳಿಸಿತ್ತು. ಅದಾದ ಬಳಿಕ ಆದದ್ದೆಲ್ಲವೂ ಈಗ ಇತಿಹಾಸ. ಭಾರತೀಯ ಚಿತ್ರರಂಗದ ಖ್ಯಾತನಾಮರ ಹುಬ್ಬೇರಿಸಿದ್ದ ಈ ಸಿನಿಮಾ ಇಂದಿಗೆ 7 ವರ್ಷಗಳನ್ನು ಪೂರೈಸಿದೆ. ಭಾರತೀಯ ಚಿತ್ರರಂಗಲ್ಲೇ ಅತಿ ಹೆಚ್ಚು ಗಳಿಕೆ ಮಾಡಿದ ಚಿತ್ರ ಇದಾಗಿದೆ. ಸೂಪರ್​ ಹಿಟ್​ ಸಿನಿಮಾಗಳಾದ ಆರ್​ಆರ್​ಆರ್​, ಬಾಹುಬಲಿ 1-2, ಕೆಜಿಎಫ್​ ಸರಣಿಗಳು 'ದಂಗಲ್​' ಸಿನಿಮಾದ ಹಿಂದಿವೆ.

ದಂಗಲ್ ನಿರ್ದೇಶಕ ಯಾರು? ಚಿಲ್ಲರ್ ಪಾರ್ಟಿ, ಭೂತ್​​ನಾಥ್ ರಿಟರ್ನ್ಸ್, ಛಿಛೋರೆ, ಬ್ರೇಕ್ ಪಾಯಿಂಟ್ ಮತ್ತು ಬವಾಲ್ ಸೇರಿದಂತೆ ಹಲವು ಹಿಟ್​​ ಸಿನಿಮಾಗಳ ನಿರ್ದೇಶಕ ನಿತೇಶ್ ತಿವಾರಿ ಅವರು ಈ 'ದಂಗಲ್' ಸಿನಿಮಾ ನಿರ್ದೇಶಿಸಿದ್ದಾರೆ. ನಿತೇಶ್ ತಿವಾರಿ ಅವರೇ ದಂಗಲ್ ಚಿತ್ರಕ್ಕೆ ಕಥೆ, ಸಂಭಾಷಣೆ, ಚಿತ್ರಕಥೆ ಬರೆದಿದ್ದಾರೆ.

ದಂಗಲ್‌ ಕಾಸ್ಟ್: ಕುಸ್ತಿಪಟು ಮಹಾವೀರ್ ಸಿಂಗ್ ಫೋಗಟ್ ಪಾತ್ರವನ್ನು ಅಮೀರ್ ಖಾನ್ ನಿರ್ವಹಿಸಿದ್ದಾರೆ. ಇವರ ಪತ್ನಿ ದಯಾ ಶೋಭಾ ಕೌರ್ ಪಾತ್ರದಲ್ಲಿ ಸಾಕ್ಷಿ ತನ್ವರ್ ನಟಿಸಿದ್ದಾರೆ. ಗೀತಾ ಪಾತ್ರದಲ್ಲಿ ಫಾತಿಮಾ ಸನಾ ಶೇಖ್, ಬಬಿತಾ ಕುಮಾರಿ ಪಾತ್ರದಲ್ಲಿ ಸಾನ್ಯಾ ಮಲ್ಹೋತ್ರಾ ನಟಿಸಿದ್ದಾರೆ. ಕುಸ್ತಿಪಟುಗಳಾದ ಗೀತಾ ಮತ್ತು ಬಬಿಬಾ ಮಹಾವೀರ್ ಸಿಂಗ್​​ ಫೋಗಟ್​​ ಅವರ ಪುತ್ರಿಯರು.

ದಂಗಲ್ ಕಲೆಕ್ಷನ್? 2016ರ ಡಿಸೆಂಬರ್ 23ರಂದು ಈ ಸಿನಿಮಾ ಬಿಡುಗಡೆಯಾಯಿತು. ಚಿತ್ರಕ್ಕೆ 70 ಕೋಟಿ ರೂ. ಬಂಡವಾಳ ಹೂಡಲಾಗಿತ್ತು. ಆದ್ರೆ ಗಳಿಸಿದ ಲಾಭ ಮಾತ್ರ 'ದಾಖಲೆ'ಯಷ್ಟು. ಅಮೀರ್ ಖಾನ್ ಮುಖ್ಯಭೂಮಿಕೆಯ ಈ ಚಿತ್ರ ಭಾರತದಲ್ಲಿ ಮೊದಲ ದಿನವೇ 29.78 ಕೋಟಿ ರೂ. ಗಳಿಸಿತ್ತು. ವರದಿಗಳ ಪ್ರಕಾರ, ದಂಗಲ್​ನ ಒಟ್ಟು ಜಾಗತಿಕ ಕಲೆಕ್ಷನ್​​ 2023.81 ಕೋಟಿ ರೂ., ಭಾರತದಲ್ಲಿ 542.34 ರೂ. ಕಲೆಕ್ಷನ್​ ಮಾಡಿದೆ. ಸಾಗರೋತ್ತರದ ಕಲೆಕ್ಷನ್​ 1357.01 ರೂ. ಆಗಿದೆ.

ಅತಿ ಹೆಚ್ಚು ಕಲೆಕ್ಷನ್​ ಮಾಡಿರುವ ಸಿನಿಮಾಗಳು:

  • ದಂಗಲ್ - 2023.81 ಕೋಟಿ ರೂ.
  • ಜವಾನ್ - 1,148.32 ಕೋಟಿ ರೂ.
  • ಪಠಾಣ್ - 1,050.30 ಕೋಟಿ ರೂ.
  • ಭಜರಂಗಿ ಭಾಯಿಜಾನ್ - 969.06 ಕೋಟಿ ರೂ.
  • ಸೀಕ್ರೆಟ್ ಸೂಪರ್‌ಸ್ಟಾರ್ - 905.7 ಕೋಟಿ ರೂ.
  • ಅನಿಮಲ್​ - 862 ಕೋಟಿ ರೂ. (ಚಿತ್ರಮಂದಿರಗಳಲ್ಲಿ ಪ್ರದರ್ಶನ ಮುಮದುವರಿದಿದೆ)
  • ಪಿ.ಕೆ - 769.89 ಕೋಟಿ ರೂ.
  • ಗದರ್ 2 - 691 ಕೋಟಿ ರೂ.
  • ಸುಲ್ತಾನ್ - 614.49 ಕೋಟಿ ರೂ.

ಸೌತ್​ ಸಿನಿಮಾಗಳು:

  • ಬಾಹುಬಲಿ 2 - 1810.59 ರೂ.
  • ಆರ್​ಆರ್​ಆರ್​ - 1,387.26 ಕೋಟಿ ರೂ.
  • ಕೆಜಿಎಫ್ ಚಾಪ್ಟರ್ 2 - 1,250 ಕೋಟಿ ರೂ.
  • 2.0 - 699 ಕೋಟಿ ರೂ.
  • ಜೈಲರ್ - 650 ಕೋಟಿ ರೂ.
  • ಬಾಹುಬಲಿ 1 - 650 ಕೋಟಿ ರೂ.
  • ಲಿಯೋ - 625 ಕೋಟಿ ರೂ.

ಇದನ್ನೂ ಓದಿ: ಮೊದಲ ದಿನವೇ 175 ಕೋಟಿ ಗಳಿಸಿದ 'ಸಲಾರ್​'; ಬಾಕ್ಸ್ ಆಫೀಸ್ ದಾಖಲೆ ಉಡೀಸ್​!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.