ETV Bharat / entertainment

ಮೊದಲ ದಿನವೇ RRR ದಾಖಲೆ ಬ್ರೇಕ್​ ಮಾಡಿದ 'ಬ್ರಹ್ಮಾಸ್ತ್ರ'.. ಟೀಕೆ ನಡುವೆಯೂ ಒಳ್ಳೆಯ ಕಲೆಕ್ಷನ್​​

author img

By

Published : Sep 10, 2022, 12:13 PM IST

Brahmastra box office collection
Brahmastra box office collection

ಅನೇಕ ಟೀಕೆಗಳ ಹೊರತಾಗಿಯೂ ಕೂಡ ಬಾಲಿವುಡ್​ನ ಬ್ರಹ್ಮಾಸ್ತ್ರ ಬಾಕ್ಸ್​ ಆಫೀಸ್​​ನಲ್ಲಿ ಸದ್ದು ಮಾಡಿದೆ. ಮೊದಲ ದಿನವೇ ಉತ್ತಮ ಗಳಿಕೆ ಮಾಡಿದ್ದು, ರಾಜಮೌಳಿ ಅವರ ಆರ್​ಆರ್​ಆರ್​​ ಚಿತ್ರದ ದಾಖಲೆ ಬ್ರೇಕ್ ಮಾಡಿದೆ.

ಹೈದರಾಬಾದ್​​: ದಕ್ಷಿಣದ ಸಿನಿ ತಾರೆಯರ ಅಬ್ಬರಕ್ಕೆ ಕಳೆದ ಕೆಲ ತಿಂಗಳಿಂದ ಮಕಾಡೆ ಮಲಗಿದ್ದ ಬಾಲಿವುಡ್​​​ಗೆ 'ಬ್ರಹ್ಮಾಸ್ತ್ರ' ಬೂಸ್ಟರ್ ನೀಡಿದೆ. ಚಿತ್ರದ ಬಗ್ಗೆ ಟೀಕೆ ಕೇಳಿ ಬಂದಿರುವ ಹೊರತಾಗಿಯೂ ಕೂಡ ಮೊದಲ ದಿನ ಉತ್ತಮ ಗಳಿಕೆ ಮಾಡಿದ್ದು, ಆರ್​ಆರ್​ಆರ್ ದಾಖಲೆ ಹಿಂದಿಕ್ಕಿದೆ.

ರಣಬೀರ್​​ ಕಪೂರ್​​ ಹಾಗೂ ಆಲಿಯಾ ಭಟ್ ನಟನೆಯ ಬ್ರಹ್ಮಾಸ್ತ್ರ ಸಿನಿಮಾ ಮೊದಲ ದಿನ ಗಲ್ಲಾಪಟ್ಟೆಗೆಯಲ್ಲಿ ಸದ್ದು ಮಾಡಿದ್ದು, ಉತ್ತಮ ಕಲೆಕ್ಷನ್ ಮಾಡಿದೆ. ಲಭ್ಯವಾಗಿರುವ ಮಾಹಿತಿ ಪ್ರಕಾರ ಚಿತ್ರ ಮೊದಲ ದಿನವೇ 35-36 ಕೋಟಿಗೂ ಅಧಿಕ ಹಣ ಗಳಿಕೆ ಮಾಡಿದೆ ಎಂದು ಸಿನಿಮಾ ತಜ್ಞರು ಮಾಹಿತಿ ಹಂಚಿಕೊಂಡಿದ್ದಾರೆ. ಈ ಮೂಲಕ ಆರ್​​ಆರ್​ಆರ್​ ದಾಖಲೆ ಬ್ರೇಕ್ ಮಾಡಿದೆ. ಜೂನಿಯರ್​ ಎನ್​​ಟಿಆರ್​ ಹಾಗೂ ರಾಮ್​ ಚರಣ್​ ಅಭಿನಯದ ಆರ್​​ಆರ್​ಆರ್​ ಮೊದಲ ದಿನ 20 ಕೋಟಿ ಗಳಿಕೆ ಮಾಡಿತ್ತು. ಇದಲ್ಲದೇ ಸಂಜು ಚಿತ್ರದ 34.75 ಕೋಟಿ ಗಳಿಕೆಯ ದಾಖಲೆ ಸಹ ಇದೀಗ ಬ್ರಹ್ಮಾಸ್ತ್ರದ ಮುಂದೆ ಬ್ರೇಕ್​ ಆಗಿದೆ.

Brahmastra box office collection
ಮೊದಲ ದಿನವೇ RRR ದಾಖಲೆ ಬ್ರೇಕ್​ ಮಾಡಿದ 'ಬ್ರಹ್ಮಾಸ್ತ್ರ'

ವಿಶ್ವದಾದ್ಯಂತ 8,913 ಸ್ಕ್ರೀನ್​​​ಗಳಲ್ಲಿ ಬ್ರಹ್ಮಾಸ್ತ್ರ ರಿಲೀಸ್​ ಆಗಿತ್ತು. ಇದರಲ್ಲಿ ಭಾರತದಲ್ಲಿ 5,019 ಹಾಗೂ ವಿದೇಶಗಳಲ್ಲಿ 3,894+ ಸ್ಕ್ರೀನ್​​​​ಗಳು ಸೇರಿಕೊಂಡಿದ್ದವು. ಈ ಮೂಲಕ 36+ ಕೋಟಿ ರೂ. ಗಳಿಕೆ ಮಾಡಿದೆ. ಬ್ರಹ್ಮಾಸ್ತ್ರ’ ನಿರಾಶಾದಾಯಕ. ಉತ್ತಮ ಸಂಭಾಷಣೆ ಬರೆದಿಲ್ಲ. ಸ್ಕ್ರೀನ್​ ಪ್ಲೇ ಚೆನ್ನಾಗಿಲ್ಲ ಎಂಬೆಲ್ಲ ಮಾತುಗಳು ಕೇಳಿ ಬಂದಿದ್ದವು. ಆದರೆ, ಇದೀಗ ಉತ್ತಮ ಗಳಿಕೆ ಮಾಡಿದೆ.

ಇದನ್ನೂ ಓದಿ: RRR, ಭೂಲ್​​ ಭುಲೈಯಾ 2 ಮೀರಿಸಿದ 'ಬ್ರಹ್ಮಾಸ್ತ್ರ': ಬಾಲಿವುಡ್​​​ಗೆ ಸಿಗುವುದೇ ಬೂಸ್ಟರ್ ಡೋಸ್‌?

ಕಳೆದ ನಾಲ್ಕು ವರ್ಷಗಳಿಂದ ಬ್ರಹ್ಮಾಸ್ತ್ರ ಚಿತ್ರದ ಚಿತ್ರೀಕರಣ ನಡೆದಿದ್ದು, ಇದಕ್ಕೋಸ್ಕರ ಬರೋಬ್ಬರಿ 410 ಕೋಟಿ ರೂ. ಖರ್ಚು ಮಾಡಲಾಗಿದೆ. ಬಾಲಿವುಡ್​​ನಲ್ಲಿ ನಿರ್ಮಾಣಗೊಂಡಿರುವ ಅತ್ಯಂತ ದುಬಾರಿ ವೆಚ್ಚದ ಚಿತ್ರ ಇದಾಗಿದೆ. ಹಿಂದಿ ಮಾತ್ರವಲ್ಲದೆ ಕನ್ನಡ, ಮಲಯಾಳಂ, ತಮಿಳು ಹಾಗೂ ತೆಲುಗಿನಲ್ಲಿ ಈ ಸಿನಿಮಾ ರಿಲೀಸ್ ಆಗಿದೆ. ದಕ್ಷಿಣ ಭಾರತದಲ್ಲಿ ಸಿನಿಮಾ ಹಂಚಿಕೆ ಜವಾಬ್ದಾರಿಯನ್ನು ರಾಜಮೌಳಿ ಹೊತ್ತುಕೊಂಡಿದ್ದರು. ಈ ಕಾರಣದಿಂದಲೂ ಸಿನಿಮಾಗೆ ಹೆಚ್ಚಿನ ಮೈಲೇಜ್ ಸಿಕ್ಕಿದೆ ಎಂಬ ಮಾತು ಜೋರಾಗಿ ಕೇಳಿಬರುತ್ತಿವೆ.

ಮುಂಗಡ ಬುಕ್ಕಿಂಗ್​​ನಲ್ಲೂ ದಾಖಲೆ: ಬ್ರಹ್ಮಾಸ್ತ್ರ ಚಿತ್ರ ಮುಂಗಡ ಬುಕ್ಕಿಂಗ್​​ನಲ್ಲೂ ದಾಖಲೆ ಬರೆದಿದೆ. ಸೆಪ್ಟೆಂಬರ್​ 6ರ ರಾತ್ರಿ 11:30ರವರೆಗಿನ ಮಾಹಿತಿ ಪ್ರಕಾರ ಒಟ್ಟು 1,31,000 ಟಿಕೆಟ್​​​​ಗಳು ಬಿಕರಿಯಾಗಿವೆ. ಈ ಮೂಲಕ ಕೋವಿಡ್​​​ ಮಹಾಮಾರಿ ಬಳಿಕ ಹೆಚ್ಚು ಮುಂಗಡ ಬುಕ್ಕಿಂಗ್​ ಆಗಿರುವ ಚಿತ್ರ ಎಂಬ ವಿಶೇಷತೆಗೆ ಪಾತ್ರವಾಗಿದೆ. ಅಷ್ಟೇ ಅಲ್ಲ, ಆರ್​ಆರ್​ಆರ್​ ಹಾಗೂ ಭೂಲ್​​ಭುಲೈಯಾ ಟಿಕೆಟ್ ಬುಕ್ಕಿಂಗ್​ ದಾಖಲೆಯನ್ನು ಇದು ಪುಡಿಗಟ್ಟಿದೆ. ಚಿತ್ರದಲ್ಲಿ ರಣಬೀರ್​ ಜೊತೆ ನಟಿ ಆಲಿಯಾ ಭಟ್​, ಅಮಿತಾಬ್​ ಬಚ್ಚನ್​, ನಾಗಾರ್ಜುನ್​​ ಮತ್ತು ಮೌನಿ ರಾಯ್ ಮುಖ್ಯ ಭೂಮಿಕೆಯಲ್ಲಿ​ ನಟಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.