ETV Bharat / entertainment

ಸಿನಿ ಪ್ರೇಮಿಗಳಿಗೆ ಮನರಂಜನೆಯ ಮಹಾಹಬ್ಬ; ಇನ್ನು ಮೂರು ತಿಂಗಳಲ್ಲಿ ಸಾಲು ಸಾಲು ಸಿನಿಮಾಗಳು ತೆರೆಗೆ

author img

By ETV Bharat Karnataka Team

Published : Oct 3, 2023, 6:36 PM IST

Box office marred with film clashes from second half of 2023 onwards; Here's full list of major releases
ಸಿನಿ ಪ್ರೇಮಿಗಳಿಗೆ ಮನರಂಜನೆಯ ಮಹಾಹಬ್ಬ; ಇನ್ನು ಮೂರು ತಿಂಗಳಲ್ಲಿ ತೆರೆ ಕಾಣಲಿದೆ ಸಾಲು ಸಾಲು ಸಿನಿಮಾಗಳು

ಭಾರತೀಯ ಚಿತ್ರರಂಗದ ಬಹುನಿರೀಕ್ಷಿತ ಸಿನಿಮಾಗಳು ಮುಂದಿನ ಮೂರು ತಿಂಗಳಲ್ಲಿ ಬಿಡುಗಡೆಯಾಗಲಿದ್ದು, ಬಾಕ್ಸ್​ ಆಫೀಸ್​ನಲ್ಲಿ ಭಾರೀ ಪೈಪೋಟಿಯೇ ನಡೆಯಲಿದೆ.

'2023' ಸಿನಿ ಪ್ರೇಮಿಗಳಿಗೆ ಮನರಂಜನೆಯ ವರ್ಷವೆಂದೇ ಹೇಳಬಹುದು. ಜನವರಿಯಿಂದ ಈವರೆಗೂ ಅನೇಕ ಸಿನಿಮಾಗಳು ತೆರೆ ಕಂಡಿದ್ದು, ಮುಂದಿನ ದಿನಗಳಲ್ಲಿ ಇದಕ್ಕೂ ಹೆಚ್ಚಿನ​ ಬಹುನಿರೀಕ್ಷಿತ ಚಿತ್ರಗಳೇ ತೆರೆ ಕಾಣಲು ಸಜ್ಜಾಗಿದೆ. 2024ರ ಆರಂಭದಲ್ಲೂ ಸಿನಿಮಾಗಳ ಮನರಂಜನೆ ಹೀಗೆಯೇ ಮುಂದುವರೆಯಲಿದೆ. ಈ ಮೂಲಕ ಇನ್ನು ಮುಂದಿನ ದಿನಗಳಲ್ಲಿ ಬಾಕ್ಸ್​ ಆಫೀಸ್​ನಲ್ಲಿ ಭಾರಿ ಪೈಪೋಟಿಯೇ ನಡೆಯಲಿದೆ. ಆ ಸಿನಿಮಾಗಳ ಡೀಟೈಲ್ಸ್​ ಹೀಗಿದೆ..

ಯೋಧ Vs ಮೇರಿ ಕ್ರಿಸ್ಮಸ್​: ಕತ್ರಿನಾ ಕೈಫ್​ ಮತ್ತು ವಿಜಯ್​ ಸೇತುಪತಿ ನಟನೆಯ 'ಮೇರಿ ಕ್ರಿಸ್ಮಸ್​' ಸಿನಿಮಾ ಡಿಸೆಂಬರ್ 8 ರಂದು ತೆರೆ ಕಾಣಲಿದೆ. ಅದೇ ದಿನದಂದು ಸಿದ್ಧಾರ್ಥ್​ ಮಲ್ಹೋತ್ರಾ ಮತ್ತು ದಿಶಾ ಪಟಾನಿ ಮುಖ್ಯಭೂಮಿಕೆಯ 'ಯೋಧ' ಸಿನಿಮಾ ಕೂಡ ಬಿಡುಗಡೆಯಾಗಲಿದೆ.

ಡಂಕಿ Vs ಸಲಾರ್​: ಭಾರತೀಯ ಚಿತ್ರರಂಗದ ಈ ವರ್ಷದ ಎರಡು ಬಹುನಿರೀಕ್ಷಿತ ಸಿನಿಮಾಗಳೆಂದರೆ 'ಸಲಾರ್'​ ಮತ್ತು 'ಡಂಕಿ'. ಪ್ರಶಾಂತ್​ ನೀಲ್​ ನಿರ್ದೇಶಿಸಿ, ಪ್ರಭಾಸ್​ ನಟಿಸಿರುವ 'ಸಲಾರ್'​ ಮತ್ತು ರಾಜ್​ಕುಮಾರ್​ ಹಿರಾನಿ ನಿರ್ದೇಶನದ, ಶಾರುಖ್​ ಖಾನ್​ ನಟನೆಯ 'ಡಂಕಿ' ಡಿಸೆಂಬರ್​ 22ರಂದು ಒಮ್ಮೆಲೇ ತೆರೆಗಪ್ಪಳಿಸಲಿದೆ. ಈ ಎರಡು ಸಿನಿಮಾಗಳ ಮಧ್ಯೆ ಭಾರಿ ಪೈಪೋಟಿ ಏರ್ಪಡುವುದಂತೂ ಪಕ್ಕಾ.

ಮಿಷನ್ ರಾಣಿಗಂಜ್: ದಿ ಗ್ರೇಟ್ ಭಾರತ್ ರೆಸ್ಕ್ಯೂ Vs ಥ್ಯಾಂಕ್ಯೂ ಫರ್​ ಕಮಿಂಗ್​: ಬಾಲಿವುಡ್​ ಕಿಲಾಡಿ ಅಕ್ಷಯ್​ ಕುಮಾರ್​ ಹಾಗೂ ಪರಿಣಿತಿ ಚೋಪ್ರಾ ನಟನೆಯ 'ಮಿಷನ್ ರಾಣಿಗಂಜ್: ದಿ ಗ್ರೇಟ್ ಭಾರತ್ ರೆಸ್ಕ್ಯೂ'​ ಸಿನಿಮಾ ಅಕ್ಟೋಬರ್​ 6 ರಂದು ಬಿಡುಗಡೆಯಾಗಲಿದೆ. ಇದೇ ದಿನದಂದು ಭೂಮಿ ಪಡ್ನೇಕರ್​ ಮುಖ್ಯಭೂಮಿಕೆಯ 'ಥ್ಯಾಂಕ್ಯೂ ಫಾರ್​ ಕಮಿಂಗ್​' ಕೂಡ ತೆರೆ ಕಾಣಲಿದೆ.

ಅನಿಮಲ್​ Vs ಸ್ಯಾಮ್​​ ಬಹದ್ದೂರ್​: ಸಂದೀಪ್​ ರೆಡ್ಡಿ ವಂಗಾ ನಿರ್ದೇಶಿಸಿ, ರಣ್​ಬೀರ್​ ಕಪೂರ್​ ಮತ್ತು ರಶ್ಮಿಕಾ ಮಂದಣ್ಣ ನಟಿಸಿರುವ 'ಅನಿಮಲ್'​ ಚಿತ್ರ ಡಿಸೆಂಬರ್​ 1 ರಂದು ಬಿಡುಗಡೆಯಾಗಲಿದೆ. ಇದೇ ದಿನದಂದು ಮೇಘನಾ ಗುಲ್ಜಾರ್​ ಜೀವನಾಧಾರಿತ 'ಸ್ಯಾಮ್​​ ಬಹದ್ದೂರ್​' ಚಿತ್ರವು ಬೆಳ್ಳಿ ಪರದೆಗೆ ಬರಲಿದೆ. ಈ ಸಿನಿಮಾದಲ್ಲಿ ವಿಕ್ಕಿ ಕೌಶಲ್​ ನಟಿಸಿದ್ದಾರೆ.

ಅಮೀರ್​ ಖಾನ್​ ಮುಂದಿನ ಸಿನಿಮಾ Vs ವೆಲ್​ಕಮ್​ ಟು ದಿ ಜಂಗಲ್​: ಅಮೀರ್​ ಖಾನ್​ ತಮ್ಮ ಮುಂದಿನ ಸಿನಿಮಾದ ಚಿತ್ರೀಕರಣವನ್ನು ಈಗಾಗಲೇ ಪ್ರಾರಂಭಿಸಿದ್ದಾರೆ. ಶೀರ್ಷಿಕೆ ಮತ್ತು ಕಥೆಯ ಬಗ್ಗೆ ಬಹಿರಂಗಪಡಿಸಿಲ್ಲ. ಆದರೆ ಈ ಹೆಸರಿಡದ ಸಿನಿಮಾ ಕ್ರಿಸ್ಮಸ್​ ವೇಳೆ ಡಿಸೆಂಬರ್​ 20 ರಂದು ಬಿಡುಗಡೆಯಾಗಲಿದೆ. ಇದೇ ಸಮಯದಲ್ಲಿ ವೆಲ್​ಕಮ್​ ಟು ದಿ ಜಂಗಲ್ ಕೂಡ ತೆರೆ ಕಾಣಲಿದೆ. ಈ ಸಿನಿಮಾದಲ್ಲಿ ಅಕ್ಷಯ್​ ಕುಮಾರ್​, ಸಂಜಯ್​ ದತ್​, ಅರ್ಷದ್​ ವಾರ್ಸಿ, ಸುನೀಲ್​ ಶೆಟ್ಟಿ, ಜಾಕ್ವೆಲಿನ್​ ಫರ್ನಾಂಡೀಸ್​, ದಿಶಾ ಪಟಾನಿ ನಟಿಸಿದ್ದಾರೆ.

ಗಣಪತ್​ Vs ಯಾರಿಯನ್​ 2 Vs ತೇಜಸ್​: ಈ ತಿಂಗಳ ಕೊನೆಯಲ್ಲಿ ಮೂರು ಸಿನಿಮಾಗಳು ಬಿಡುಗಡೆಯಾಗಲಿದೆ. ಟೈಗರ್​ ಶ್ರಾಫ್​ ನಟನೆಯ ಗಣಪತ್​: ಎ ಹೀರೋ ಇಸ್​ ಬಾರ್ನ್​, ಕಂಗನಾ ರಣಾವತ್​ ಮುಖ್ಯಭೂಮಿಕೆಯ ತೇಜಸ್​ ಮತ್ತು ದಿವ್ಯಾ ಖೋಸ್ಲಾ ಕುಮಾರ್​ ಅವರ ಯಾರಿಯನ್​ 2 ಚಿತ್ರಗಳು ಅಕ್ಟೋಬರ್​ 20ರಂದು ತೆರೆ ಕಾಣಲಿದೆ.

ಸಿಂಗಮ್​ Vs ಪುಷ್ಪ 2: ಅಜಯ್​ ದೇವಗನ್​ ನಟನೆಯ 'ಸಿಂಗಮ್​' ಮತ್ತು ಅಲ್ಲು ಅರ್ಜುನ್​ ನಟನೆಯ 'ಪುಷ್ಪ 2: ದಿ ರೂಲ್​' ಸಿನಿಮಾಗಳನ್ನು ಮುಂದಿನ ವರ್ಷ 2024ರ ಆಗಸ್ಟ್​ 15ರಂದು ಬಿಡುಗಡೆಗೊಳಿಸಲು ನಿರ್ಧರಿಸಲಾಗಿದೆ. ಆದರೆ ಈ ಸಿನಿಮಾದ ರಿಲೀಸ್​ ಡೇಟ್​ನಲ್ಲಿ ಬದಲಾವಣೆಗಳಾಗುವ ಸಾಧ್ಯತೆಗಳು ಇವೆ.

ಇದನ್ನೂ ಓದಿ: ಬಹುನಿರೀಕ್ಷಿತ 'ಸಲಾರ್'​​ ರಿಲೀಸ್​ ಡೇಟ್​ ಅನೌನ್ಸ್: ಶಾರುಖ್​ ಸಿನಿಮಾದೊಂದಿಗೆ ಪೈಪೋಟಿ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.