ETV Bharat / entertainment

ಹ್ಯಾಪಿ ಬರ್ತ್​ಡೇ ಇಳಯರಾಜ - ಮಣಿರತ್ನಂ: ಹುಟ್ಟುಹಬ್ಬದ ಸಂಭ್ರಮದಲ್ಲಿ ಸಿನಿಲೋಕದ ದಿಗ್ಗಜರು

author img

By

Published : Jun 2, 2023, 3:54 PM IST

ಸಂಗೀತ ಮಾಂತ್ರಿಕ ಇಳಯರಾಜ ಮತ್ತು ಖ್ಯಾತ ನಿರ್ದೇಶಕ ಮಣಿರತ್ನಂ ಅವರು ಇಂದು ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ.

Mani Ratnam and 'Isai Gnani' Ilayaraaja
ಇಳಯರಾಜ ಮತ್ತು ಮಣಿರತ್ನಂ

ಭಾರತೀಯ ಚಿತ್ರರಂಗದ ಇಬ್ಬರು ದಿಗ್ಗಜರು ಇಂದು ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಸಂಗೀತ ಮಾಂತ್ರಿಕ ಇಳಯರಾಜ 80ನೇ ವರ್ಷಕ್ಕೆ ಕಾಲಿಟ್ಟರೆ, ಖ್ಯಾತ ನಿರ್ದೇಶಕ ಮಣಿರತ್ನಂ 67ನೇ ವರ್ಷದ ಜನ್ಮದಿನವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಇವರಿಬ್ಬರು ಚಿತ್ರರಂಗಕ್ಕೆ ಉತ್ತಮ ಸೇವೆ ಸಲ್ಲಿಸಿದ್ದಾರೆ. ಇವರಿಬ್ಬರ ಕಾಂಬಿನೇಷನ್ ನಲ್ಲಿ ಹಲವು ಹಿಟ್ ಸಿನಿಮಾಗಳು ಸೃಷ್ಟಿಯಾಗಿ ಸಂಚಲನ ಮೂಡಿಸಿವೆ.

  • இந்தியாவின் தலைசிறந்த திரை இயக்குநர்களில் ஒருவராக விளங்கும் திரு. மணிரத்னம் அவர்களுக்குப் பிறந்தநாள் வாழ்த்துகளைத் தெரிவித்துக் கொள்கிறேன். உலகம் போற்றும் படைப்புகளைத் தொடர்ந்து படைத்திட வாழ்த்துகிறேன். #ManiRatnam

    — M.K.Stalin (@mkstalin) June 2, 2023 " class="align-text-top noRightClick twitterSection" data=" ">

ಹುಟ್ಟುಹಬ್ಬದ ಸಂಭ್ರಮದಲ್ಲಿರುವ ಈ ಮೇರು ವ್ಯಕ್ತಿಗಳಿಗೆ ತಾರಾ ಗಣ್ಯರು, ಕುಟುಂಬಸ್ಥರು ಸೇರಿದಂತೆ ಅಭಿಮಾನಿಗಳು ಶುಭಕೋರುತ್ತಿದ್ದಾರೆ. ತಮಿಳುನಾಡು ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್​ ಮತ್ತು ಖ್ಯಾತ ನಟ ಕಮಲ್​ ಹಾಸನ್​ ಸೇರಿದಂತೆ ಅನೇಕರು ಜನ್ಮದಿನದ ಶುಭಾಶಯ ತಿಳಿಸಿದ್ದಾರೆ. ಸ್ಟಾಲಿನ್​ ಅವರು ಇಳಯರಾಜ ಅವರನ್ನು ಭೇಟಿ ಮಾಡಿ ಸನ್ಮಾನಿಸಿದ್ದಾರೆ.

ಟ್ಟಿಟರ್​ನಲ್ಲಿ ಮುಖ್ಯಮಂತ್ರಿ ಸ್ಟಾಲಿನ್ ಅವರು​ ಇಳಯರಾಜ ಮತ್ತು ಮಣಿರತ್ನಂ ಅವರಿಗೆ ಬರ್ತ್​ಡೇ ವಿಶ್​ ಮಾಡಿದ್ದಾರೆ. ಇಳಯರಾಜ ಅವರನ್ನು 'ಸಂಗೀತ ಕ್ಷೇತ್ರಕ್ಕೆ ಕ್ರಾಂತಿ' ಎಂದೇ ಸಂಬೋಧಿಸಿದ್ದಾರೆ. ಅವರು ಕೇವಲ ಸಂಗೀತ ವಾದ್ಯಗಳನ್ನು ಸ್ಟಿಂಗ್​ ಮಾಡುವುದಿಲ್ಲ. ಜೊತೆಗೆ ನಮ್ಮ ಹೃದಯವನ್ನು ನುಡಿಸುತ್ತಾರೆ ಎಂದು ಹೇಳಿದ್ದಾರೆ.

  • காலைப் பொழுது இனிதாய் மலர - பயணங்கள் இதமாய் அமைய - மகிழ்ச்சிகள் கொண்டாட்டமாய் மாற - துன்பங்கள் தூசியாய் மறைய - இரவு இனிமையாய்ச் சாய தமிழ்நாட்டின் தேர்வு 'இசைஞானி' இளையராஜா!

    அவர் இசைக்கருவிகளை மீட்டுவதில்லை; நம் இதயங்களை வருடுகிறார். அவரே உணர்வாகி நம்முள் உருகுகிறார்.… pic.twitter.com/Os1dE1UJKH

    — M.K.Stalin (@mkstalin) June 2, 2023 " class="align-text-top noRightClick twitterSection" data=" ">

ಜೊತೆಗೆ "ಭಾರತದ ಶ್ರೇಷ್ಠ ಚಲನಚಿತ್ರ ನಿರ್ದೇಶಕರಲ್ಲಿ ಒಬ್ಬರಾದ ಮಣಿರತ್ನಂ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು. ನೀವು ಜಗತ್ತು ಮೆಚ್ಚುವ ಕಥೆಗಳನ್ನು ರಚಿಸುವುದನ್ನು ಮುಂದುವರಿಸಬೇಕು ಎಂದು ನಾನು ಬಯಸುತ್ತೇನೆ ಎಂದು ಮಣಿರತ್ನಂ ಅವರಿಗೆ ಜನ್ಮದಿನದ ಶುಭಾಶಯ ಕೋರಿ ಟ್ವೀಟ್​ ಮಾಡಿದ್ದಾರೆ. ಮಣಿರತ್ನಂ ಅವರ ಇತ್ತೀಚೆಗಿನ ಪೊನ್ನಿಯನ್​ ಸೆಲ್ವನ್​ 2 ಚಿತ್ರ ಭಾರೀ ಮೆಚ್ಚುಗೆ ಗಳಿಸಿದೆ.

ಇದನ್ನೂ ಓದಿ: ಬಹುನಿರೀಕ್ಷಿತ 'ಬೆಂಗಳೂರು ಬಾಯ್ಸ್'​ ಚಿತ್ರದ ಟ್ರೇಲರ್​ ಔಟ್​: ನೀವೂ ನೋಡಿ..!

ಕಮಲ್​ ಹಾಸನ್​ ಅವರು ಹಿರಿಯ ಸಹೋದರರಿಬ್ಬರಿಗೆ ಹುಟ್ಟುಹಬ್ಬದ ಶುಭಾಶಯ ಕೋರಲು ಟ್ವಿಟರ್​ ವೇದಿಕೆ ಬಳಸಿಕೊಂಡರು. ಇಳಯರಾಜ ಅವರನ್ನು 'ಸಂಗೀತ ಪ್ರಪಂಚದ ಸಾಮ್ರಾಟ' ಎಂದು ಬಣ್ಣಿಸಿದರು. ಇಳಯರಾಜ ಅವರೊಂದಿಗೆ ಸಂಭಾಷಣೆ ತೊಡಗಿರುವ ಕಪ್ಪು- ಬಿಳುಪಿನ ಫೋಟೋವನ್ನು ಹಂಚಿಕೊಂಡು ಶುಬಾಶಯ ಕೋರಿದರು.

  • If one were to count life by the happiness that they create around them and if age is calculated by the friends around you, my dear #ManiRatnam you are going to be a much older man today! A doyen of Indian Cinema who has touched the hearts of millions through his art and one who… pic.twitter.com/FoFz4pqaHh

    — Kamal Haasan (@ikamalhaasan) June 2, 2023 " class="align-text-top noRightClick twitterSection" data=" ">

ಇನ್ನು ಮಣಿರತ್ನಂ ಅವರ ಜೊತೆ ಇತ್ತೀಚೆಗೆ ತೆಗೆಸಿಕೊಂಡಿರುವ ಫೋಟೋವನ್ನು ಕಮಲ್​ ಹಾಸನ್​ ಹಂಚಿಕೊಂಡು ಹುಟ್ಟುಹಬ್ಬದ ಶುಭಾಶಯ ಕೋರಿದರು. "ನನ್ನ ಪ್ರೀತಿಯ ಮಣಿರತ್ನಂ ನೀವು ಇಂದು ಹೆಚ್ಚು ವಯಸ್ಸಾದ ವ್ಯಕ್ತಿಯಾಗಲಿದ್ದೀರಿ. ತಮ್ಮ ಕಲೆಯ ಮೂಲಕ ಲಕ್ಷಾಂತರ ಜನರ ಹೃದಯವನ್ನು ಮುಟ್ಟಿದ ಭಾರತೀಯ ಚಿತ್ರರಂಗದ ದೊರೆ ಮತ್ತು ಸಂಭಾಷಣೆಯನ್ನು ಸುಂದರವಾದ ದೃಶ್ಯ ಅನುಭವವಾಗಿ ಪರಿವರ್ತಿಸಿದವರು" ಎಂದು ತಮ್ಮ 'ನಾಯಕನ್​' ನಿರ್ದೇಶಕರ ಬಗ್ಗೆ ಕಮಲ್​ ಹಾಸನ್ ಹೇಳಿದರು.​

  • திரையிசைச் சகாப்தம் ஒன்று எட்டு தசாப்தங்களைக் கடந்து நிலைத்து மகிழ்வித்துக்கொண்டிருக்கிறது. இ, ளை, ய, ரா, ஜா ஆகிய ஐந்துதான் இந்தியத் திரையிசையின் அபூர்வ ஸ்வரங்கள் என்று சொல்லத்தக்க அளவில் தன் சிம்மாசனத்தை அழுத்தமாக அமைத்துக்கொண்டவர் என் அன்புக்கும் ஆச்சரியத்துக்கும் மிக உரிய… pic.twitter.com/0csPLNnE7P

    — Kamal Haasan (@ikamalhaasan) June 2, 2023 " class="align-text-top noRightClick twitterSection" data=" ">

ಮುಂದುವರೆದು, "ಇಂದು ನೀವು ಮುಂದಿನ ಪೀಳಿಗೆಯ ಚಲನಚಿತ್ರ ನಿರ್ಮಾಪಕರನ್ನು ಪ್ರೇರೇಪಿಸುವ ಮಾಸ್ಟರ್​​ ಆಗಿದ್ದೀರಿ. ಅವರ ಮೂಲಕ ನಿಮ್ಮ ಪರಂಪರೆಯು ಶಾಶ್ವತವಾಗಿ ಮುಂದುವರೆಯುತ್ತದೆ. ನಾಯಕನ್‌ನಿಂದ #KH234 ವರೆಗೆ, ನಮ್ಮ ಒಟ್ಟಿಗೆ ಪ್ರಯಾಣವು ವೈಯಕ್ತಿಕವಾಗಿ ನನಗೆ ಲಾಭದಾಯಕವಾಗಿದೆ ಮತ್ತು ಶ್ರೀಮಂತವಾಗಿದೆ. ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು ಸ್ನೇಹಿತ" ಎಂದು ಕ್ಯಾಪ್ಶನ್​ ಬರೆದು ಹುಟ್ಟುಹಬ್ಬಕ್ಕೆ ಶುಭಹಾರೈಸಿದ್ದಾರೆ.

ಇದನ್ನೂ ಓದಿ: ಏಷ್ಯಾ, ಇಂಟರ್​ನ್ಯಾಷನಲ್‌ ಬುಕ್‌ ಆಫ್‌ ರೆಕಾರ್ಡ್ ಸೇರಿದ‌ 'ವಿಷ್ಣುವರ್ಧನ್‌ ಕಟೌಟ್ ಜಾತ್ರೆ'

ETV Bharat Logo

Copyright © 2024 Ushodaya Enterprises Pvt. Ltd., All Rights Reserved.