ETV Bharat / entertainment

'ಕನಸೊಂದು ಶುರುವಾಗಿದೆ' ಚಿತ್ರಕ್ಕೆ ಅಶ್ವಿನಿ ಪುನೀತ್ ರಾಜ್​ಕುಮಾರ್ ಸಾಥ್

author img

By ETV Bharat Karnataka Team

Published : Jan 4, 2024, 5:42 PM IST

Kanasondu shuruvagide movie
'ಕನಸೊಂದು ಶುರುವಾಗಿದೆ' ಚಿತ್ರ

ಚಿತ್ರೀಕರಣ ಪೂರ್ಣಗೊಳಿಸಿರುವ 'ಕನಸೊಂದು ಶುರುವಾಗಿದೆ' ಎಂಬ ಚಿತ್ರಕ್ಕೆ ನಿರ್ಮಾಪಕಿ ಅಶ್ವಿನಿ ಪುನೀತ್ ರಾಜ್​​ಕುಮಾರ್ ಶುಭ ಹಾರೈಸಿದ್ದಾರೆ.

'ಸಹರ' ಎಂಬ‌ ಸಿನಿಮಾ ಮೂಲಕ ನಿರ್ದೇಶಕರಾಗಿ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿರುವ ಮಂಜೇಶ್ ಭಾಗವತ್ ಅವರೀಗ ಹೊಸ ಸಿನಿಮಾವೊಂದನ್ನು ಕೈಗೆತ್ತಿಕೊಂಡಿದ್ದಾರೆ. ಸದ್ದಿಲ್ಲದೇ ಎರಡನೇ ಚಿತ್ರದ ಚಿತ್ರೀಕರಣ ಪೂರ್ಣಗೊಳಿಸಿರುವ ನಿರ್ದೇಶಕರೀಗ ಚಿತ್ರತಂಡದೊಂದಿಗೆ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ.

ಶೀರ್ಷಿಕೆ ಅನಾವರಣ: ಮಂಜೇಶ್ ಭಾಗವತ್​​ ನಿರ್ದೇಶನದ ಎರಡನೇ ಚಿತ್ರಕ್ಕೆ 'ಕನಸೊಂದು ಶುರುವಾಗಿದೆ' ಎಂಬ ಸುಂದರ ಶೀರ್ಷಿಕೆ ಇಡಲಾಗಿದೆ. ನಿರ್ಮಾಪಕಿ ಅಶ್ವಿನಿ ಪುನೀತ್ ರಾಜ್​​ಕುಮಾರ್ ಅವರು ಹೊಸಬರ ಕನಸಿಗೆ ಜೊತೆಯಾಗಿದ್ದಾರೆ. ಚಿತ್ರದ ಶೀರ್ಷಿಕೆ ಅನಾವರಣಗೊಳಿಸಿ ಇಡೀ ಚಿತ್ರತಂಡಕ್ಕೆ ಶುಭ ಕೋರಿದ್ದಾರೆ.

Kanasondu shuruvagide movie
'ಕನಸೊಂದು ಶುರುವಾಗಿದೆ'

ಪೋಸ್ಟ್ ಪ್ರೊಡಕ್ಷನ್ ಕೆಲಸ; 'ಕನಸೊಂದು ಶುರುವಾಗಿದೆ' ಸಿನಿಮಾ ಮೂಲಕ ಸಂತೋಷ್ ಬಿಲ್ವಾ ನಾಯಕ ನಟನಾಗಿ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ. ಅವರಿಗೆ ಜೋಡಿಯಾಗಿ ಸಾತ್ವಿಕಾ ನಟಿಸಿದ್ದಾರೆ. ಥ್ರಿಲ್ಲರ್ ಮಂಜು, ಕುರಿ ಸುನಿಲ್ ತಾರಾಬಳಗದಲ್ಲಿದ್ದಾರೆ. ಸಸ್ಪೆನ್ಸ್ ಥ್ರಿಲ್ಲರ್ ಕಥಾಹಂದರ ಹೊಂದಿರುವ 'ಕನಸೊಂದು ಶುರುವಾಗಿದೆ' ಚಿತ್ರವನ್ನು ಬೆಂಗಳೂರು, ಕುಂದಾಪುರ, ಕುಣಿಗಲ್ ಸುತ್ತಮುತ್ತ ಚಿತ್ರೀಕರಿಸಲಾಗಿದೆ. ಈಗಾಗಲೇ ಶೂಟಿಂಗ್ ಮುಕ್ತಾಯಗೊಂಡಿದ್ದು, ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಭರದಿಂದ ಸಾಗಿವೆ.

ಕೆಕೆಆರ್​​ ಮೀಡಿಯಾ ಬ್ಯಾನರ್ ಅಡಿ ಲಕ್ಷ್ಮೀಕಾಂತ್ ರೆಡ್ಡಿ ಎಸ್​ ಆವರು ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಲೋಕೇಂದ್ರ ಸೂರ್ಯ ಛಾಯಾಗ್ರಹಣ ನಿರ್ವಹಿಸಿದ್ದಾರೆ. ಸೂರಜ್ ಜೋಯಿಸ್ ಸಂಗೀತ, ದೀಪಕ್ ಸಿ.ಎಸ್ ಗೌಡ ಅವರ ಸಂಕಲನ ಈ ಚಿತ್ರಕ್ಕಿದೆ. ಶಶಾಂಕ್, ಸಿಂಪಲ್ ಸುನಿ ಹಾಗೂ ಪ್ರಮೋದ್ ಮರವಂತೆ ಸಾಹಿತ್ಯ ಬರೆದಿದ್ದು, ಸೋನು ನಿಗಂ, ರಾಜೇಶ್ ಕೃಷ್ಣನ್ ಹಾಗೂ ವಾಸುಕಿ ವೈಭವ್ ಹಾಡುಗಳಿಗೆ ದನಿಯಾಗಿದ್ದಾರೆ.

Ashwini Puneeth Rajkumar supports Kanasondu shuruvagide movie
'ಕನಸೊಂದು ಶುರುವಾಗಿದೆ' ಚಿತ್ರಕ್ಕೆ ಅಶ್ವಿನಿ ಪುನೀತ್ ರಾಜ್​ಕುಮಾರ್ ಸಾಥ್

ಇದನ್ನೂ ಓದಿ: ಯಶ್​ ಅಭಿನಯದ 'ಟಾಕ್ಸಿಕ್' ಸಿನಿಮಾದಲ್ಲಿ ಕರೀನಾ ಕಪೂರ್​ ಖಾನ್​?!

ಕನ್ನಡ ಚಿತ್ರರಂಗದಲ್ಲಿ ವಿಭಿನ್ನ ಪ್ರಕಾರದ ಸಿನಿಮಾಗಳು ನಿರ್ಮಾಣಗೊಳ್ಳುತ್ತಿವೆ. ಆ್ಯಕ್ಷನ್​​, ಲವ್, ಕಾಮಿಡಿ ಹೀಗೆ ಪ್ರತೀ ಜಾನರ್​​​ನ ಸಿನಿಮಾಗಳು ಮೂಡಿ ಬರುತ್ತಿವೆ. ಮೇಕಿಂಗ್​​ ಜೊತೆಗೆ ಕಂಟೆಂಟ್​​ಗೂ ಮಹತ್ವ ಕೊಡಲಾಗುತ್ತಿದೆ. ಪ್ರೇಕ್ಷಕರೀಗ ಹೊಸತನದ ಸಿನಿಮಾಗಳಿಗೆ ಮೊದಲ ಆದ್ಯತೆ ಕೊಡುತ್ತಿದ್ದಾರೆ. ಕಂಟೆಂಟ್​ ಆಧಾರಿತ ಸಿನಿಮಾಗಳು ಗೆಲ್ಲುತ್ತಿವೆ. 2022ರಲ್ಲಿ ಕಂಟೆಂಟ್​​ ಆ್ಯಂಡ್​ ಮೇಕಿಂಗ್​ ಸಲುವಾಗಿ ಕೆಜಿಎಫ್​ 2, ಕಾಂತಾರ ಗೆದ್ದು ಬೀಗಿತ್ತು. ಇಡೀ ಭಾರತೀಯ ಚಿತ್ರರಂಗ ಸ್ಯಾಂಡಲ್​ವುಡ್​ನತ್ತ ನೋಡುವಂತಾಯ್ತು.

ಇದನ್ನೂ ಓದಿ: ಜಪಾನ್​ ಭೂಕಂಪ; ಜನಜೀವನ ಅಸ್ತವ್ಯಸ್ತ, ಫೋಟೋಗಳಲ್ಲಿ ಸೆರೆಯಾದ ನರಕಸದೃಶ್ಯ ಘಟನೆ

ಬಳಿಕ ಬಂದ ಹಲವು ಸಿನಿಮಾಗಳು ಪ್ರೇಕ್ಷಕರನ್ನು ರಂಜಿಸುವಲ್ಲಿ ಯಶ ಕಂಡಿವೆ. 'ಕನಸೊಂದು ಶುರುವಾಗಿದೆ' ಎಂಬ ಸುಂದರ ಶೀರ್ಷಿಕೆಯುಳ್ಳ ಸಿನಿಮಾ ಎಷ್ಟರ ಮಟ್ಟಿಗೆ ಗೆಲುವು ಕಾಣಲಿದೆ ಅನ್ನೋದನ್ನು ಕಾದು ನೋಡಬೇಕಿದೆ. ನಿರ್ಮಾಪಕಿ ಅಶ್ವಿನಿ ಪುನೀತ್ ರಾಜ್​​ಕುಮಾರ್ ಅವರು ಹೊಸ ಸಿನಿಮಾಗಳಿಗೆ ವಿಶೇಷವಾಗಿ ಹೊಸಬರ ಚಿತ್ರಗಳಿಗೆ ತಮ್ಮ ಬೆಂಬಲ ನೀಡುತ್ತಾ ಬಂದಿದ್ದಾರೆ. ಅದರಂತೆ ಈ ಕನಸೊಂದು ಶುರುವಾಗಿದೆ' ಚಿತ್ರಕ್ಕೂ ತಮ್ಮ ಬೆಂಬಲ ಸೂಚಿಸಿದ್ದು, ಸಿನಿಮಾ ಗೆಲ್ಲಲಿ ಎಂದು ಶುಭ ಹಾರೈಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.