ETV Bharat / entertainment

'ಕಾಫಿ ವಿತ್ ಕರಣ್' ಶೋ: ಇವರೇ ನೋಡಿ ಮುಂದಿನ ಅತಿಥಿಗಳು!

author img

By ETV Bharat Karnataka Team

Published : Nov 3, 2023, 12:11 PM IST

Koffee With Karan Season-8: ಬಾಲಿವುಡ್​ ಬೆಡಗಿಯರಾದ ಸಾರಾ ಅಲಿ ಖಾನ್, ಅನನ್ಯಾ ಪಾಂಡೆ 'ಕಾಫಿ ವಿತ್ ಕರಣ್' ಸೀಸನ್ 8ರ ಮುಂದಿನ ಅತಿಥಿಗಳೆಂದು ವರದಿಯಾಗಿದೆ.

Ananya Panday Sara Ali Khan
ಅನನ್ಯಾ ಪಾಂಡೆ, ಸಾರಾ ಅಲಿ ಖಾನ್

ಬಾಲಿವುಡ್​​​ನ ಖ್ಯಾತ ನಿರ್ಮಾಪಕ, ನಿರ್ದೇಶಕ ಕರಣ್​ ಜೋಹರ್​ ನಡೆಸಿಕೊಡುವ 'ಕಾಫಿ ವಿತ್ ಕರಣ್' ಅತ್ಯಂತ ಜನಪ್ರಿಯ ಹಿಂದಿ ಕಿರುತೆರೆ ಕಾರ್ಯಕ್ರಮಗಳಲ್ಲೊಂದು. ಇತ್ತೀಚೆಗಷ್ಟೇ ಆರಂಭಗೊಂಡಿರುವ ಸೀಸನ್ 8ರಲ್ಲಿ ದೀಪ್​ವೀರ್​ ಜೋಡಿ, ಡಿಯೋಲ್​ ಬ್ರದರ್ಸ್ ಅತಿಥಿಗಳಾಗಿ ಆಗಮಿಸಿ ಪ್ರೇಕ್ಷಕರನ್ನು ಮೋಡಿ ಮಾಡಿದ್ದರು. ಮುಂದಿನ ಅತಿಥಿಗಳಾಗಿ ಬಾಲಿವುಡ್​ ನಟಿಯರಾದ ಸಾರಾ ಅಲಿ ಖಾನ್, ಅನನ್ಯಾ ಪಾಂಡೆ ಕಾಣಿಸಿಕೊಳ್ಳಲಿದ್ದಾರೆ.

ಕಳೆದ 20 ವರ್ಷಗಳಿಂದ ಈ ಪಾಪ್ಯುಲರ್​​ ಚಾಟ್​ ಶೋ ನಡೆಯುತ್ತಿದೆ. ಅಕ್ಟೋಬರ್​ 26ರಂದು ಸೀಸನ್ 8 ಆರಂಭಗೊಂಡಿತು. ಬಾಲಿವುಡ್​ನ ಕಪಲ್ ದೀಪಿಕಾ ಪಡುಕೋಣೆ ಹಾಗೂ ರಣ್​ವೀರ್​ ಸಿಂಗ್​​​ ಮೂಲಕ ಗ್ರ್ಯಾಂಡ್​​ ಓಪನಿಂಗ್​ ಪಡೆದ ಶೋನ ಎರಡನೇ ವಾರದ ಅತಿಥಿಗಳಾಗಿ ಸನ್ನಿ ಡಿಯೋಲ್ ಮತ್ತು ಬಾಬಿ ಡಿಯೋಲ್ ಕಾಣಿಸಿಕೊಂಡರು. ವರದಿಗಳಂತೆ, ಮೂರನೇ ವಾರದ ಅತಿಥಿಗಳಾಗಿ ಸಾರಾ ಅಲಿ ಖಾನ್ ಮತ್ತು ಅನನ್ಯಾ ಪಾಂಡೆ ಪಾಲ್ಗೊಳ್ಳಲಿದ್ದು, ಶೋ ಈ ಹಿಂದಿಗಿಂತಲೂ ಕೊಂಚ ವಿಭಿನ್ನವಾಗಿರಲಿದೆ. ಮುಂದಿನ ಸಂಚಿಕೆ ಹೆಚ್ಚು ಮನರಂಜನಾತ್ಮಕವಾಗಿರಲಿದೆ ಎಂದು ಹೇಳಲಾಗಿದೆ.

ಕರಣ್ ಜೋಹರ್ ಅವರು ತಮ್ಮ ಶೋನ ವೀಕ್ಷಕರ ಸಂಖ್ಯೆ ಹೆಚ್ಚಿಸಿಕೊಳ್ಳಲು ಬಯಸಿದ್ದಾರೆ. ಮುಂದಿನ ಸಂಚಿಕೆ ಯಂಗ್​​ಸ್ಟರ್​​​ಗಳಿಗೆ ಹೆಚ್ಚು ಹಿಡಿಸಲಿದೆ ಎಂದು ನಂಬಿದ್ದಾರೆ. ಬಾಲಿವುಡ್​ನಲ್ಲಿ ಬೆಳೆಯುತ್ತಿರುವ ಸಾರಾ ಅಲಿ ಖಾನ್ ಮತ್ತು ಕೆಲ ಚಿತ್ರಗಳಲ್ಲಿ ಕಾಣಿಸಿಕೊಂಡಿರುವ ಅನನ್ಯಾ ಪಾಂಡೆ ಅವರು ಕಾರ್ಯಕ್ರಮದ ಮೂರನೇ ವಾರದ ಅತಿಥಿಗಳಾಗಿ ಗುರುತಿಸಿಕೊಳ್ಳಲಿದ್ದಾರೆ. ಇಬ್ಬರೂ ಯಂಗ್​ಸ್ಟರ್​​ಗಳಾದ ಹಿನ್ನೆಲೆಯಲ್ಲಿ ಈ ಶೋ ಯುವಕರನ್ನು ಹೆಚ್ಚು ಆಕರ್ಷಿಸಲಿದೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: ಉರ್ಫಿ ಜಾವೇದ್​ರನ್ನು ಕರೆದೊಯ್ದ ಮುಂಬೈ ಪೊಲೀಸರು: ವಿಡಿಯೋ ವೈರಲ್​

ಸಾರಾ ಅಲಿ ಖಾನ್ 2018ರಲ್ಲಿ ನಡೆದ ಕಾಫಿ ವಿತ್ ಕರಣ್​ ಸೀಸನ್​​ 6ರಲ್ಲಿ ಮೊದಲ ಬಾರಿ ಕಾಣಿಸಿಕೊಂಡಿದ್ದರು. ತಂದೆ, ನಟ ಸೈಫ್ ಅಲಿ ಖಾನ್ ಅವರೊಂದಿಗೆ ಕಾರ್ಯಕ್ರಮಕ್ಕೆ ಆಗಮಿಸಿದ್ದರು. ಮತ್ತೊಂದೆಡೆ, ಅನನ್ಯಾ ಪಾಂಡೆ 2019ರಲ್ಲಿ ಟೈಗರ್ ಶ್ರಾಫ್ ಮತ್ತು ತಾರಾ ಸುತಾರಿಯಾ ಅವರೊಂದಿಗೆ ಸ್ಟೂಡೆಂಟ್ ಆಫ್ ದಿ ಇಯರ್ 2 ಬಿಡುಗಡೆಗೂ ಮುನ್ನ ಆಗಮಿಸಿದ್ದರು.

ಇದನ್ನೂ ಓದಿ: ಅಭಿಮಾನಿಗಳೊಂದಿಗೆ ಕುಣಿದು ಕುಪ್ಪಳಿಸಿದ ಶಾರುಖ್ ಖಾನ್: 'ಡಂಕಿ' ಬಗ್ಗೆ ಮತ್ತಷ್ಟು ಡೀಟೆಲ್ಸ್

ಕಾಫಿ ವಿತ್ ಕರಣ್ ಸೀಸನ್ ಲೇಟೆಸ್ಟ್ ಸಂಚಿಕೆಯಲ್ಲಿ, ಸನ್ನಿ ಡಿಯೋಲ್ ಮತ್ತು ಬಾಬಿ ಡಿಯೋಲ್ ಅವರು ತಮ್ಮ ವೃತ್ತಿಜೀವನದ ಸವಾಲಿನ ಸಮಯವನ್ನು ಮೆಲುಕು ಹಾಕಿದ್ದರು. ಅಕ್ಷಯ್​​ ಕುಮಾರ್​ ಅವರ ಓ ಮೈ ಗಾಡ್​ 2 ಸಿನಿಮಾ ಜೊತೆ ತಮ್ಮ ಗದರ್​ 2 ಬಾಕ್ಸ್​​ ಆಫೀಸ್​ನಲ್ಲಿ ಪೈಪೋಟಿ ನಡೆಸಿದ ವಿಚಾರವಾಗಿಯೂ ಮಾತನಾಡಿದ್ದರು. ದೀಪಿಕಾ ಪಡುಕೋಣೆ ಮತ್ತು ರಣ್​​​ವೀರ್ ಸಿಂಗ್ ಇಬ್ಬರೂ ತಮ್ಮ ವೈಯಕ್ತಿಕ ವಿಚಾರಗಳನ್ನು ಬಹಿರಂಗಪಡಿಸಿದ್ದರು. ರಿಲೇಶನ್​​ಶಿಪ್​ ಬಗ್ಗೆ ದೀಪಿಕಾ ಹೇಳಿಕೆಗಳು ಸಿಕ್ಕಾಪಟ್ಟೆ ಟ್ರೋಲ್ ಆಗಿದ್ದು, ಬಳಿಕ ಟ್ರೋಲರ್​ಗಳನ್ನೇ ನಟಿ ಟ್ರೋಲ್​ ಮಾಡಿದ್ದರು. ಇದರ ವಿಡಿಯೋ ಸೋಷಿಯಲ್​ ಮೀಡಿಯಾದಲ್ಲಿ ಸಖತ್​ ಸದ್ದು ಮಾಡಿತ್ತು. ಜಸ್ಟ್ ಲುಕಿಂಗ್​ ಲೈಕ್ ಅ ವಾವ್ಹ್ ಎಂಬುದು ಈಗಲೂ ಟ್ರೆಂಡಿಂಗ್​ನಲ್ಲಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.