ETV Bharat / entertainment

ಪ್ರಾಜೆಕ್ಟ್ ಕೆ ಟ್ರೇಲರ್ ಬಿಡುಗಡೆಗೆ ಕ್ಷಣಗಣನೆ.. ಕುತೂಹಲ ಹೆಚ್ಚಿಸಿದ ಪ್ರಭಾಸ್​ ಫಸ್ಟ್ ಲುಕ್‌

author img

By

Published : Jul 19, 2023, 4:22 PM IST

Updated : Jul 19, 2023, 5:06 PM IST

Prabhas first look
ಪ್ರಭಾಸ್​ ಫಸ್ಟ್ ಲುಕ್‌

ಬಿಗ್​ ಬಜೆಟ್ 'ಪ್ರೊಜೆಕ್ಟ್​​ ಕೆ'​ ಸಿನಿಮಾದಿಂದ ಪ್ಯಾನ್​ ಇಂಡಿಯಾ ಸ್ಟಾರ್ ಪ್ರಭಾಸ್​ ಫಸ್ಟ್ ಲುಕ್​ ಅನಾವರಣಗೊಂಡಿದೆ.

ಅಮೆರಿಕದಲ್ಲಿ ನಡೆಯಲಿರುವ ಸ್ಯಾನ್ ಡಿಯಾಗೋ ಕಾಮಿಕ್ ಕಾನ್ 2023ರಲ್ಲಿ ಪ್ರಭಾಸ್ ಮತ್ತು ದೀಪಿಕಾ ಪಡುಕೋಣೆ ಅಭಿನಯದ ಸೈನ್ಸ್​ ಫಿಕ್ಷನ್​​​ ಫ್ಯಾಂಟಸಿ ಫಿಲ್ಮ್ ಪ್ರಾಜೆಕ್ಟ್ ಕೆ ಟ್ರೇಲರ್ ಬಿಡುಗಡೆಗೆ ಕ್ಷಣಗಣನೆ ಆರಂಭವಾಗಿದೆ. ಅದಕ್ಕೂ ಮುನ್ನ ಚಿತ್ರ ನಿರ್ಮಾಪಕರು ಪ್ರಭಾಸ್​ ಫಸ್ಟ್ ಲುಕ್‌ನೊಂದಿಗೆ ಅಭಿಮಾನಿಗಳ ಕುತೂಹಲ ಹೆಚ್ಚಿಸಿದ್ದಾರೆ. ಪೋಸ್ಟರ್‌ನಲ್ಲಿ ರೆಬೆಲ್ ಸ್ಟಾರ್ ಪ್ರಭಾಸ್ ತೀಕ್ಷ್ಣ ನೋಟದಲ್ಲಿ ಕಾಣಿಸಿಕೊಂಡಿದ್ದಾರೆ. ಪ್ರಾಜೆಕ್ಟ್ ಕೆ ಟ್ರೇಲರ್ ಜುಲೈ 20 ರಂದು ಅಮೆರಿಕದಲ್ಲಿ ನಡೆಯಲಿರುವ ಗ್ರ್ಯಾಂಡ್​ ಈವೆಂಟ್​ನಲ್ಲಿ ಬಿಡುಗಡೆ ಆಗಲಿದೆ.

ಪ್ರಭಾಸ್​ ಫಸ್ಟ್ ಲುಕ್‌: ಬಹುನಿರೀಕ್ಷಿತ ಪ್ರಾಜೆಕ್ಟ್ ಕೆ ಸಿನಿಮಾಗೆ ಬಂಡವಾಳ ಹೂಡುತ್ತಿರುವ ವೈಜಯಂತಿ ಮೂವೀಸ್ ಇಂದು ಸಾಮಾಜಿಕ ಮಾಧ್ಯಮದಲ್ಲಿ ಪ್ಯಾನ್​ ಇಂಡಿಯಾ ಸ್ಟಾರ್ ಪ್ರಭಾಸ್‌ ಅವರ ಫಸ್ಟ್ ಲುಕ್ ಅನ್ನು ಹಂಚಿಕೊಂಡಿದೆ. ಪೋಸ್ಟರ್ ಅನ್ನು ಹಂಚಿಕೊಳ್ಳುವಾಗ, ''ಹೀರೋಸ್​ ರೈಸಸ್, ಈ ಕ್ಷಣದಿಂದ ಗೇಮ್​ ಚೇಂಜ್​ ಆಗಲಿದೆ. ಪ್ರಾಜೆಕ್ಟ್ ಕೆ ಚಿತ್ರದಿಂದ ರೆಬೆಲ್​ ಸ್ಟಾರ್ ಪ್ರಭಾಸ್​​ ಮೊದಲ ನೋಟ, ಜುಲೈ 20ರಂದು (ಭಾರತದ ಸಮಯಾನುಸಾರ ಜುಲೈ 21) ಪ್ರೊಜೆಕ್ಟ್​ ಕೆ ಚಿತ್ರದ ಫಸ್ಟ್ ಗ್ಲಿಂಪ್ಸ್​ ಹೊರಬರಲಿದೆ'' ಎಂದು ಬರೆದುಕೊಂಡಿದ್ದಾರೆ.

ಅಮೆರಿಕ ತಲುಪಿದ ಪ್ರಭಾಸ್: ಚಲನಚಿತ್ರ ನಿರ್ಮಾಣ ಸಂಸ್ಥೆ ವೈಜಯಂತಿ ಮೂವೀಸ್ ಪ್ರಾಜೆಕ್ಟ್​ ಕೆ ಟ್ರೇಲರ್ ಬಿಡುಗಡೆ ಕುರಿತು ಅಪ್​ಡೇಟ್ಸ್ ಹಂಚಿಕೊಂಡಿದೆ. ಅಮೆರಿಕದಲ್ಲಿ ನಡೆಯಲಿರುವ ಈವೆಂಟ್​ನಲ್ಲಿ ಭಾಗಿಯಾಗಲು ಬಾಹುಬಲಿ ನಟರಾದ ಸೂಪರ್‌ಸ್ಟಾರ್ ಪ್ರಭಾಸ್ ಮತ್ತು ರಾಣಾ ದಗ್ಗುಬಾಟಿ ಮಂಗಳವಾರದಂದು ಸ್ಯಾನ್ ಡಿಯಾಗೋವನ್ನು ತಲುಪಿದ್ದಾರೆ ಎಂದು ಸಹ ವೈಜಯಂತಿ ಮೂವೀಸ್ ತಿಳಿಸಿದೆ.

ದೀಪಿಕಾ ಪಡುಕೋಣೆ ಫಸ್ಟ್ ಲುಕ್: ಮಂಗಳವಾರದಂದು ದೀಪಿಕಾ ಪಡುಕೋಣೆ ಅವರ ಫಸ್ಟ್ ಲುಕ್ ಅನ್ನು ಅನಾವರಣಗೊಳಿಸಿದ್ದರು. ಸೋಷಿಯಲ್​ ಮೀಡಿಯಾದಲ್ಲಿ ನಟಿಯ ನೋಟ ಸದ್ದು ಮಾಡಿತ್ತು. ಕೆಲವರು ನಟಿಯ ನೋಟವನ್ನು ಹಾಲಿವುಡ್ ಚಲನಚಿತ್ರ 'ಡ್ಯೂನ್' (Dune) ನ ಝೆಂಡಾಯಾ ಪಾತ್ರಕ್ಕೆ ಹೋಲಿಸಿದ್ದರು.

ಇದನ್ನೂ ಓದಿ: ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಭಾರತೀಯ ಸಿನಿಮಾ; ಇತಿಹಾಸ ಸೃಷ್ಟಿಗೆ ಸಜ್ಜಾದ 'ಪ್ರಾಜೆಕ್ಟ್ ಕೆ'

ವರದಿಗಳ ಪ್ರಕಾರ, ಪ್ರಾಜೆಕ್ಟ್ ಕೆ ಚಿತ್ರತಂಡ ಟ್ರೇಲರ್​, ಫೈನಲ್​ ಟೈಟಲ್​​ ಅನಾವರಣಗೊಳಿಸುವ ಮೂಲಕ ಸ್ಯಾನ್ ಡಿಯಾಗೋ ಕಾಮಿಕ್-ಕಾನ್ (SDCC)ನಲ್ಲಿ ತನ್ನ ಪ್ರಚಾರ ಪ್ರಾರಂಭಿಸಲಿದೆ. ಪ್ರಭಾಸ್ ಮತ್ತು ರಾಣಾ ದಗ್ಗುಬಾಟಿ ಜೊತೆಗೆ ಕಾಲಿವುಡ್​ ಸೂಪರ್​ ಸ್ಟಾರ್ ಕಮಲ್ ಹಾಸನ್ ಮತ್ತು ನಿರ್ದೇಶಕ ನಾಗ್ ಅಶ್ವಿನ್ ಸಹ ಸಮಾರಂಭಕ್ಕೆ ಸಾಕ್ಷಿಯಾಗಲಿದ್ದಾರೆ. ದೀಪಿಕಾ ಪಡುಕೋಣೆ ಕೂಡ ಈ ಸಮಾರಂಭದ ಭಾಗವಾಗಬೇಕಿತ್ತು. ಆದರೆ ಇತ್ತೀಚಿನ ವರದಿಗಳ ಪ್ರಕಾರ, ಯುಎಸ್​​ನಲ್ಲಿ ನಡೆಯುತ್ತಿರುವ ಹಾಲಿವುಡ್​ ಮುಷ್ಕರ ಹಿನ್ನೆಲೆ ದೀಪಿಕಾ ಪಡುಕೋಣೆ ಕಾರ್ಯಕ್ರಮಕ್ಕೆ ಭಾಗಿಯಾಗುವುದಿಲ್ಲ ಎನ್ನಲಾಗಿದೆ. ನಾಗ್ ಅಶ್ವಿನ್ ಆ್ಯಕ್ಷನ್​ ಕಟ್​ ಹೇಳುತ್ತಿರುವ ಈ ಸಿನಿಮಾದಲ್ಲಿ ಪ್ಯಾನ್​ ಇಂಡಿಯಾ ಸ್ಟಾರ್ ಪ್ರಭಾಸ್​, ಬಾಲಿವುಡ್​ ಪ್ರತಿಭೆ ದೀಪಿಕಾ ಪಡುಕೋಣೆ ಅಲ್ಲದೇ, ಬಾಲಿವುಡ್​ ಹಿರಿಯ ನಟ ಅಮಿತಾಭ್​ ಬಚ್ಚನ್, ಕಾಲಿವುಡ್​ ಹಿರಿಯ ನಟ ಕಮಲ್ ಹಾಸನ್, ಬಹುಭಾಷಾ ನಟಿ​​ ದಿಶಾ ಪಟಾನಿ ಸಹ ನಟಿಸುತ್ತಿದ್ದಾರೆ.

ಇದನ್ನೂ ಓದಿ: ಬವಾಲ್ ಬಿಡುಗಡೆಗೆ ಕ್ಷಣಗಣನೆ: ಸೋಷಿಯಲ್​ ಮೀಡಿಯಾದಲ್ಲಿ ಬಿಸಿಯೇರಿಸಿದ ಬಾಲಿವುಡ್​ ಬ್ಯೂಟಿ ಜಾನ್ವಿ ಕಪೂರ್

Last Updated :Jul 19, 2023, 5:06 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.