ETV Bharat / entertainment

ಬೀದಿ ಶ್ವಾನಗಳ ದತ್ತು ಪಡೆಯುವ ಸಂಸ್ಥೆಗೆ ಸಹಾಯ ಮಾಡುವ ಆಲೋಚನೆ ಇದೆ: ರಕ್ಷಿತ್ ಶೆಟ್ಟಿ

author img

By

Published : Jun 8, 2022, 11:01 PM IST

ನಟ ರಕ್ಷಿತ್ ಶೆಟ್ಟಿ
ನಟ ರಕ್ಷಿತ್ ಶೆಟ್ಟಿ

ಬೀದಿ ಶ್ವಾನಗಳ ದತ್ತು ಪಡೆಯುವ ಸಂಸ್ಥೆಗಳಿಗೆ, ಸಹಾಯ ಮಾಡುವ ಆಲೋಚನೆ ಇದೆ ಎಂದು ನಟ ರಕ್ಷಿತ್ ಶೆಟ್ಟಿ ತಿಳಿಸಿದ್ದಾರೆ.

ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಒಬ್ಬ ಸಾಮಾನ್ಯ ವ್ಯಕ್ತಿಯ ಪಾತ್ರದಲ್ಲಿ ಕಾಣಿಸಿಕೊಂಡಿರುವ ಸಿನಿಮಾ 777 ಚಾರ್ಲಿ. ಈ ಸಿನಿಮಾ ಬಿಡುಗಡೆಗೂ ಮುಂಚೆ ಶ್ವಾನ ಪ್ರಿಯರ ಮನಸ್ಸು ಗೆದ್ದಿರುವ 777 ಚಾರ್ಲಿ ಸೌತ್ ಸಿನಿಮಾ ಇಂಡಸ್ಟ್ರಿಯಲ್ಲಿ ಸಂಚಲನ ಸೃಷ್ಟಿಸಿದೆ. ಚಾರ್ಲಿ ಎಂಬ ಶ್ವಾನದಿಂದ , ಸಮಾಜದಲ್ಲಿ ಬದಲಾವಣೆ ಬಯಸುತ್ತಿರುವ ರಕ್ಷಿತ್ ಸಿನಿಮಾದಿಂದ ಬರುವ ಹೆಚ್ಚು ಹಣದಿಂದ ಏನಾದರೂ ಸಹಾಯ ಮಾಡುವ ಯೋಚನೆಯಲ್ಲಿದ್ದಾರೆ.

ನಟ ರಕ್ಷಿತ್ ಶೆಟ್ಟಿ

ಹೌದು, ಸಿನಿಮಾ ಇಂಡಸ್ಟ್ರಿಯ ಸ್ನೇಹಿತರಿಗಾಗಿ 777 ಚಾರ್ಲಿ ಸಿನಿಮಾದ ಪ್ರಿಮಿಯರ್ ಶೋ ಮಾಡಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಬೀದಿ ಶ್ವಾನಗಳ ದತ್ತು ಪಡೆಯುವ ಸಂಸ್ಥೆಗಳಿಗೆ, ಸಹಾಯ ಮಾಡುವ ಆಲೋಚನೆ ಇದೆ ಅಂದಿದ್ದಾರೆ. 777 ಚಾರ್ಲಿ ಸಿನಿಮಾ ಬಿಡುಗಡೆ ಆಗಿ ಎಲ್ಲಾ ಕಡೆ, ಉತ್ತಮ ಪ್ರತಿಕ್ರಿಯೆ ಜೊತೆಗೆ ಬಾಕ್ಸ್ ಆಫೀಸ್‌ನಲ್ಲಿ ಒಳ್ಳೆ ಗಳಿಕೆ ಆದ ಮೇಲೆ ಬಂದ ಹಣದಿಂದ ಬೀದಿ ಶ್ವಾನಗಳ ದತ್ತು ಪಡೆಯುವ ಸಂಸ್ಥೆಗಳಿಗೆ ಸಹಾಯ ಮಾಡಲು ರಕ್ಷಿತ್ ಶೆಟ್ಟಿ ಮನಸ್ಸು ಮಾಡಿದ್ದಾರೆ‌.

777 ಚಾರ್ಲಿ ಸಿನಿಮಾಕ್ಕಾಗಿ ನಾನು ಮತ್ತು ಚಾರ್ಲಿ ಎಂಬ ಶ್ವಾನ ಸಿನಿಮಾ ಶೂಟಿಂಗ್ ಹೋಗುವುದಕ್ಕಿಂತ ಮುಂದೆ ಒಂದು ವಾರ ಕಾಲ ಟ್ರೈನಿಂಗ್ ಮಾಡಿ ಈ ಸಿನಿಮಾದಲ್ಲಿ ನಟಿಸಲಾಗಿದೆ‌. ಅದರಲ್ಲಿ ನಾನು ಚಾರ್ಲಿಗೆ ಶೂಟಿಂಗ್ ಸ್ಪಾಟ್​ನಲ್ಲಿ ಅದರ ಫೇವರೇಟ್ ಬಿಸ್ಕತ್ತನ್ನ ಕೈಯಲ್ಲಿ ಹಿಡಿದುಕೊಂಡು ಅಭಿನಯಿಸಬೇಕಿತ್ತು. ಒಮ್ಮೊಮ್ಮೆ ಮುಖಾಮುಖಿ ಸಮಯದಲ್ಲಿ ನಾನು ನಾಯಿ ಬಿಸ್ಕತ್ತನ್ನ ಬಾಯಲ್ಲಿ ಇಟ್ಟುಕೊಂಡು ಅಭಿನಯಿಸಿದ್ದೇನೆ. ಆಗ ಸಾಕಷ್ಟು ಚಾಲೆಂಜ್ ಆಗಿತ್ತು. ಆದರೆ ಸಿನಿಮಾದಲ್ಲಿ ಈ ಕಷ್ಟಗಳು ಯಾರಿಗೂ ಗೊತ್ತಾಗಲ್ಲ ಅಂದರು.

ಬಿಡುಗಡೆಗೂ ಮುಂಚೆ ತಾರೀಖು 8 ಹಾಗು 9ರಂದು ಬೆಂಗಳೂರಿನಲ್ಲಿ 55 ಹಾಗು 45 ಜಿಲ್ಲೆಗಳು ಸೇರಿದಂತೆ 100 ಕಡೆಗಳಲ್ಲಿ ಪ್ರಿಮಿಯರ್ ಶೋ ಮಾಡ್ತಾ ಇರೋದು, ಇದೇ ಮೊದಲು. ಹೀಗೆ ಸಾಕಷ್ಟು ಹೈಲೆಟ್ಸ್ ಹೊಂದಿರುವ 777 ಚಾರ್ಲಿ ಸಿನಿಮಾ, ಕನ್ನಡ, ತೆಲುಗು, ತಮಿಳು, ಮಲೆಯಾಳಂ ಹಾಗು ಹಿಂದಿಯಲ್ಲಿ ಜೂನ್ 10ಕ್ಕೆ ವಿಶ್ವದಾದ್ಯಂತ ತೆರೆ ಕಾಣುತ್ತಿದೆ.

ಓದಿ: ವೈರಾಗ್ಯಮೂರ್ತಿಗೆ ಮಹಾಮಸ್ತಕಾಭಿಷೇಕ: ಕಣ್ತುಂಬಿಕೊಂಡ ಭಕ್ತ ಸಮೂಹ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.