ETV Bharat / entertainment

ನಾಳೆ ಅಮೀರ್​ ಖಾನ್​ ಮಗಳ ಮದುವೆ: ಇರಾ-ನೂಪುರ್ ನಿವಾಸಕ್ಕೆ ವಿಶೇಷ ದೀಪಾಲಂಕಾರ

author img

By ETV Bharat Karnataka Team

Published : Jan 2, 2024, 12:33 PM IST

Aamir Khan daughter's wedding
ಅಮೀರ್​ ಖಾನ್​ ಮಗಳ ಮದುವೆ

ಅಮೀರ್ ಖಾನ್ ಮತ್ತು ಮೊದಲ ಪತ್ನಿ ರೀನಾ ದತ್ತಾ ಅವರ ಪುತ್ರಿ ಇರಾ ಖಾನ್ ನಾಳೆ ಫಿಟ್ನೆಸ್ ತರಬೇತುದಾರ ನೂಪುರ್ ಶಿಖರೆ ಅವರೊಂದಿಗೆ ದಾಂಪತ್ಯ ಜೀವನ ಆರಂಭಿಸಲಿದ್ದಾರೆ.

ಬಾಲಿವುಡ್ ನಟ ಅಮೀರ್ ಖಾನ್ ಹಾಗೂ ರೀನಾ ದತ್ತಾ ದಂಪತಿಯ (ವಿಚ್ಛೇದಿತ) ಪುತ್ರಿ ಇರಾ ಖಾನ್ ಮದುವೆಗೆ ಕ್ಷಣಗಣನೆ ಆರಂಭವಾಗಿದೆ. 2024ರ ಜನವರಿ 3, ಅಂದರೆ ನಾಳೆ ಇರಾ ಖಾನ್ ಮತ್ತು ನೂಪುರ್ ಶಿಖರೆ ದಾಂಪತ್ಯ ಜೀವನ ಆರಂಭಿಸುವರು. ಇನ್ನೊಂದೇ ದಿನ ಬಾಕಿ ಇದ್ದು ವಧು-ವರರ ಪೋಷಕರ ನಿವಾಸದಲ್ಲಿ ಸಿದ್ಧತೆಗಳು ಪ್ರಾರಂಭವಾಗಿವೆ. ಅಮೀರ್ ಮತ್ತು ರೀನಾ ಅವರ ಮುಂಬೈ ನಿವಾಸಗಳ ಹಲವು ವಿಡಿಯೋಗಳು ಆನ್‌ಲೈನ್‌ನಲ್ಲಿ ಹರಿದಾಡುತ್ತಿವೆ. ಮನೆಗಳು ಆಕರ್ಷಕ ದೀಪಾಲಂಕಾರದಿಂದ ಕಂಗೊಳಿಸುತ್ತಿವೆ.

ವೈರಲ್​​ ವಿಡಿಯೋದಲ್ಲಿ ಅಮೀರ್ ಖಾನ್​ ನಿವಾಸದ ಎರಡು ಮಹಡಿಗಳು ವಿದ್ಯುತ್ ದೀಪಗಳಿಂದ ಆಕರ್ಷಕವಾಗಿ ಕಾಣಿಸಿಕೊಂಡಿದೆ. ರೀನಾ ದತ್ತಾ ಅವರ ಮನೆ ಪುಷ್ಪಾಲಂಕಾರದಿಂದ ಜಗಮಗಿಸುತ್ತಿದೆ. ಬಹುತೇಕ ಎಲ್ಲಾ ಸಿದ್ಧತೆಗಳು ಪೂರ್ಣಗೊಂಡಿವೆ. ಇರಾ ಖಾನ್ 2022ರ ನವೆಂಬರ್‌ನಲ್ಲಿ ಫಿಟ್ನೆಸ್ ತರಬೇತುದಾರ ನೂಪುರ್ ಶಿಖರೆ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದರು.

ನಿಶ್ಚಿತಾರ್ಥದ ನಂತರ ಸ್ಪೆಷಲ್​​ ಪಾರ್ಟಿ ಆಯೋಜಿಸಿದ್ದರು. ಈ ಸಮಾರಂಭಕ್ಕೆ ಬಿ-ಟೌನ್‌ನ ಖ್ಯಾತನಾಮರು ಸಾಕ್ಷಿಯಾಗಿದ್ದರು. ಮಹಾರಾಷ್ಟ್ರ ಸಂಪ್ರದಾಯದಂತೆ ಮದುವೆಗೂ ಮುನ್ನದ ಶಾಸ್ತ್ರಗಳು ನಡೆಯುತ್ತಿವೆ. ಕೆಲ್ವನ್ ಮತ್ತು ಉಖಾನ ನಡೆಸುವ ಮೂಲಕ ವಿವಾಹಪೂರ್ವ ಸಂಭ್ರಮಾಚರಣೆ ಶುರುವಾಗಿವೆ.

ಇದನ್ನೂ ಓದಿ: ಜ.3ಕ್ಕೆ ಅಮೀರ್​​ ಪುತ್ರಿಯ ವಿವಾಹ: ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾದ ಇರಾ- ನೂಪುರ್

ಇತ್ತೀಚೆಗೆ ಸೋಷಿಯಲ್​ ಮೀಡಿಯಾದಲ್ಲಿ ಇರಾ ಖಾನ್​ ಕೆಲವು ಫೋಟೋಗಳನ್ನು ಹಂಚಿಕೊಂಡಿದ್ದರು. ಅಮೀರ್ ಖಾನ್, ಮಾಜಿ ಪತ್ನಿ ಕಿರಣ್ ರಾವ್ ಮತ್ತು ನಟಿ ಮಿಥಿಲಾ ಪಾಲ್ಕರ್ ಭೂಜನ ಕೂಟದಲ್ಲಿ ಸೇರಿದ್ದರು. ನಿಶ್ಚಿತಾರ್ಥದ ನಂತರ ಇರಾ ತಮ್ಮ ಮದುವೆಯ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಮಾಹಿತಿ ಹಂಚಿಕೊಳ್ಳುತ್ತಿದ್ದಾರೆ. ಉಂಗುರ ತೊಡಿಸಿ ಪ್ರಪೋಸ್​ ಮಾಡಿದ್ದ ಕ್ಷಣವನ್ನೂ ಅವರು ನೆನಪಿಸಿಕೊಂಡಿದ್ದಾರೆ.

ಇದನ್ನೂ ಓದಿ: 'ಕಾಟೇರ' ಪೈರಸಿ ಮಾಡಿದರೆ ಸ್ಪೆಷಲ್‌ ಟ್ರೀಟ್‌ಮೆಂಟ್: ನಟ ದರ್ಶನ್ ಎಚ್ಚರಿಕೆ

ಮೂಲಗಳ ಪ್ರಕಾರ, ಬಾಂದ್ರಾದಲ್ಲಿನ ರಾಯಲ್​ ತಾಜ್ ಲ್ಯಾಂಡ್ಸ್ ಆ್ಯಂಡ್ ಹೋಟೆಲ್‌ನಲ್ಲಿ ಅದ್ಧೂರಿ ಮದುವೆ ನಡೆಯಲಿದೆ. ಜನವರಿ 6ರಿಂದ 10ರ ನಡುವೆ 2 ರಿಸೆಪ್ಷನ್​ ಪಾರ್ಟಿ ಆಯೋಜಿಸಲಿದ್ದಾರೆ. ದೆಹಲಿ ಮತ್ತು ಜೈಪುರದಲ್ಲಿ ಆರತಕ್ಷತೆ ಸಮಾರಂಭ ನಡೆಯಲಿದ್ದು, ಗಣ್ಯಾತಿಗಣ್ಯರು ಆಗಮಿಸುವ ನಿರೀಕ್ಷೆ ಇದೆ. ಮಗಳ ಮದುವೆಗೆ ಅಮೀರ್​ ಸಾಕಷ್ಟು ಉತ್ಸುಕರಾಗಿದ್ದು, ಬಾಲಿವುಡ್​ ಸ್ನೇಹಿತರನ್ನು ವೈಯಕ್ತಿಕವಾಗಿ ಆಹ್ವಾನಿಸಿದ್ದಾರೆ. ನೂಪುರ್ ಶಿಖರೆ ಅವರ ಸಾಂಸ್ಕೃತಿಕ ಹಿನ್ನೆಲೆಗೆ ಅನುಗುಣವಾಗಿ ಹೆಚ್ಚಿನ ಶಾಸ್ತ್ರಗಳು ನಡೆಯಲಿದೆಯಂತೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.