ETV Bharat / entertainment

ಶಭಾಷ್​ ಮಿಥು ಟ್ರೈಲರ್​ ಬಿಡುಗಡೆ: ತಾಪ್ಸಿ ಪನ್ನು ಹೇಳಿದ್ದು ಹೀಗೆ!

author img

By

Published : Jun 21, 2022, 9:41 AM IST

ಭಾರತ ಮಹಿಳಾ ಕ್ರಿಕೆಟ್ ತಂಡದ ಮಾಜಿ ನಾಯಕಿ 'ಮಿಥಾಲಿ ರಾಜ್' ಅವರ ಜೀವನಾಧಾರಿತ 'ಶಭಾಷ್ ಮಿಥು' ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಜುಲೈ 15 ರಂದು ಥಿಯೇಟರ್‌ಗಳಲ್ಲಿ ಬಿಡುಗಡೆಯಾಗಲಿರುವ ಈ ಚಿತ್ರವು ಬಾಲ್ಯದಿಂದಲೂ ಪುರುಷ ಪ್ರಧಾನ ಕ್ರೀಡೆಯಲ್ಲಿ ತನ್ನ ಸ್ಥಾನವನ್ನು ಗಳಿಸಿದ ಕ್ರಿಕೆಟರ್ ಆಗುವವರೆಗೆ ಮಿಥಾಲಿ ರಾಜ್ ಅವರ ಹೋರಾಟವನ್ನು ಗುರುತಿಸುತ್ತದೆ.
ವShabaash Mithu Trailer Out  taapsee pannu Shabaash mithu trailer release  shabaash mithu story  taapsee pannu movie  indian women cricket team  ಶಭಾಷ್​ ಮಿಥು ಟ್ರೈಲರ್​ ಬಿಡುಗಡೆ  ತಾಪ್ಸಿ ಪನ್ನು ಅಭಿನಯದ ಶಭಾಷ್​ ಮಿಥು ಟ್ರೈಲರ್​ ಬಿಡುಗಡೆ  ಶಭಾಷ್​ ಮಿಥು ಕಥೆ  ಬಾಲಿವುಡ್ ನಟಿ ತಾಪ್ಸಿ ಪನ್ನು ಚಿತ್ರಗಳು  ಭಾರತದ ಮಹಿಳಾ ಕ್ರಿಕೆಟ್​ ತಂಡ
ತಾಪ್ಸಿ ಪನ್ನು ಹೇಳಿದ್ದು ಹೀಗೆ

ಕ್ರಿಕೆಟ್​ ಆಟಗಾರ್ತಿ ಮಿಥಾಲಿ ರಾಜ್ ಅವರ ಜೀವನಾಧಾರಿತ 'ಶಭಾಷ್ ಮಿಥು' ಚಿತ್ರದ ಟ್ರೈಲರ್ ಬಿಡುಗಡೆಯಾಗಿದ್ದು, ಸಖತ್​ ಆಗಿ ಮೂಡಿ ಬಂದಿದೆ. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಮಿಥಾಲಿ ರಾಜ್ 23 ವರ್ಷಗಳ ವೃತ್ತಿಜೀವನವನ್ನು ಹೊಂದಿದ್ದಾರೆ. ಅವರು ಏಕದಿನದಲ್ಲಿ 10,000 ಕ್ಕೂ ಹೆಚ್ಚು ರನ್ ಗಳಿಸಿದ್ದು, ಅನೇಕ ದಾಖಲೆಗಳನ್ನು ಮುರಿದಿದ್ದಾರೆ. ಪುರುಷ ಪ್ರಾಬಲ್ಯದ ಕ್ರೀಡೆಯಾದ ಕ್ರಿಕೆಟ್‌ನಲ್ಲಿ ವೃತ್ತಿಜೀವನ ರೂಪಿಸಲು ತಾಪ್ಸಿ ಪನ್ನು ಅಲಿಯಾಸ್​ ಮಿಥು ತನ್ನ ಪೋಷಕರಿಂದ ಆಯ್ಕೆಗಾರರವರೆಗೆ ಹೇಗೆ ಹೋರಾಡಬೇಕು ಎಂಬುದನ್ನು ಟ್ರೇಲರ್​ನಲ್ಲಿ ತೋರಿಸಲಾಗಿದೆ.

ತಾಪ್ಸಿ ಪನ್ನು ಹೇಳಿದ್ದು ಹೀಗೆ

ಚಿತ್ರದ ಟ್ರೇಲರ್ ಅನ್ನು ಹಂಚಿಕೊಂಡ ತಾಪ್ಸಿ ಪನ್ನು, 'ಈಗಾಗಲೇ ನಿಮಗೆ ಹೆಸರು ತಿಳಿದಿದೆ. ಮಿಥಾಲಿಯವರನ್ನು ಲೆಜೆಂಡ್​ ಆಗಿ ಮಾಡಿರುವ ಅವರ ಹಿಂದಿನ ಕಥೆಯನ್ನು ನೋಡಲು ನೀವು ಸಿದ್ಧರಾಗಿ. ‘ಜಂಟಲ್‌ಮ್ಯಾನ್ಸ್ ಗೇಮ್’ನಿಂದ ಪ್ರಭಾವಿತವಾಗುವ ಮಹಿಳೆಯ ಕಥೆಯನ್ನು ನಿಮ್ಮ ಮುಂದೆ ತರಲು ಮುಂದಾಗಿದ್ದೇವೆ. ಶಭಾಷ್ ಮಿಥು ಜುಲೈ 15 ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

ಓದಿ: ಮಿಥಾಲಿಯಾಗಿ ತೆರೆಗೆ ಅಪ್ಪಳಿಸಲಿದ್ದಾರೆ ತಾಪ್ಸಿ; 'ಶಹಬ್ಬಾಸ್​ ಮಿಥು' ಟ್ರೈಲರ್​ ಬಿಡುಗಡೆ

‘ಶಭಾಶ್ ಮಿಥು’ ಜೀವನಚರಿತ್ರೆಯ ಕ್ರೀಡಾ ನಾಟಕ ಚಲನಚಿತ್ರವಾಗಿದ್ದು, ಶ್ರೀಜಿತ್ ಮುಖರ್ಜಿ ನಿರ್ದೇಶಿಸಿದ್ದಾರೆ. ಈ ಚಿತ್ರವನ್ನು ವಯಾಕಾಮ್ 18 ಸ್ಟುಡಿಯೋಸ್ ನಿರ್ಮಿಸಿದೆ. ಈ ಚಿತ್ರವು ಭಾರತ ಮಹಿಳಾ ರಾಷ್ಟ್ರೀಯ ಕ್ರಿಕೆಟ್ ತಂಡದ ಮಾಜಿ ನಾಯಕಿ ಮಿಥಾಲಿ ರಾಜ್ ಅವರ ಜೀವನವನ್ನು ಆಧರಿಸಿದೆ. ಇದರಲ್ಲಿ ತಾಪ್ಸಿ ಪನ್ನು ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಚಲನಚಿತ್ರ ನಿರ್ಮಾಪಕ ಶ್ರೀಜಿತ್ ಮುಖರ್ಜಿ ನಿರ್ದೇಶಿಸಿದ ಮತ್ತು ಪ್ರಿಯಾ ಅವೆನ್ ಬರೆದಿರುವ ಈ ಚಲನಚಿತ್ರವು ಮಿಥಾಲಿ ರಾಜ್ ಅವರ ಜೀವನದ ಏಳು -ಬೀಳುಗಳು, ವೈಫಲ್ಯಗಳು ಮತ್ತು ಉತ್ಸಾಹದ ಕ್ಷಣಗಳನ್ನು ಒಳಗೊಂಡಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.