ETV Bharat / crime

ನಕಲಿ ಮದ್ಯ ಸೇವಿಸಿ ಬಿಹಾರದಲ್ಲಿ ಮೂವರು ಸಾವು

author img

By

Published : Feb 6, 2021, 1:26 PM IST

spurious liquor in Bihar
ನಕಲಿ ಮದ್ಯ ಸೇವಿಸಿ ಬಿಹಾರದಲ್ಲಿ ಮೂವರು ಸಾವು

2016ರಲ್ಲೇ ಬಿಹಾರದಲ್ಲಿ ಮದ್ಯ ಮಾರಾಟ ನಿಷೇಧವಾಗಿದ್ದರೂ, ಕೆಲ ಪ್ರದೇಶಗಳಲ್ಲಿ ನಕಲಿ ಮದ್ಯ ಮಾರಾಟವಾಗುತ್ತಿದೆ ಎಂಬ ಆರೋಪವಿದೆ. ಇದೀಗ ನಕಲಿ ಮದ್ಯ ಸೇವಿಸಿ ಮೂವರು ಪ್ರಾಣ ಕಳೆದುಕೊಂಡಿರುವುದಾಗಿ ಶಂಕೆ ವ್ಯಕ್ತವಾಗಿದೆ.

ಕೈಮೂರ್​: ಬಿಹಾರದ ಕೈಮೂರ್ ಜಿಲ್ಲೆಯ ಕುರಸಾನ್​ ಗ್ರಾಮದಲ್ಲಿ ಮೂವರು ಮೃತಪಟ್ಟಿದ್ದು, ಹಲವರು ಅಸ್ವಸ್ಥರಾಗಿದ್ದಾರೆ. ನಕಲಿ ಮದ್ಯ ಸೇವಿಸಿ ದುರಂತ ಸಂಭವಿಸಿದೆ ಎಂದು ಶಂಕಿಸಲಾಗಿದೆ.

2016ರಲ್ಲಿ ಮುಖ್ಯಮಂತ್ರಿ ನಿತೀಶ್​ ಕುಮಾರ್​ ಬಿಹಾರದಲ್ಲಿ ಮದ್ಯ ತಯಾರಿ, ಮಾರಾಟ, ಸಾಗಣೆ, ಸಂಗ್ರಹ ಹಾಗೂ ಸೇವನೆ ರದ್ದು ಮಾಡಿದ್ದರು. ಆದರೂ ಕೆಲ ಪ್ರದೇಶಗಳಲ್ಲಿ ನಕಲಿ ಮದ್ಯ ಮಾರಾಟವಾಗುತ್ತಿದೆ ಎಂಬ ಆರೋಪವಿದೆ.

ಇದನ್ನೂ ಓದಿ: ಕಲಘಟಗಿಯಲ್ಲಿ ವಿದ್ಯಾರ್ಥಿಗೆ ಚಾಕು ಇರಿತ: ಪೊಲೀಸರಿಂದ ತೀವ್ರ ವಿಚಾರಣೆ

ಘಟನೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕುರಸಾನ್​ ಗ್ರಾಮಸ್ಥರೊಬ್ಬರು, ನಮ್ಮ ಹಳ್ಳಿಯಲ್ಲಿ ಮದ್ಯ ಸಿಗುತ್ತಿದ್ದು, ಪೊಲೀಸರು ದಾಳಿ ನಡೆಸುವ ವೇಳೆ ಅಕ್ರಮವಾಗಿ ಮಾರಾಟ ಮಾಡುವವರು ಅಡಗಿಕೊಳ್ಳುತ್ತಾರೆ. ಈ ನಕಲಿ ಮದ್ಯವನ್ನ ಕುಡಿದು ಅಸ್ವಸ್ಥರಾದ ಆರು ಜನರನ್ನು ನಾನೇ ಆಸ್ಪತ್ರೆಯಲ್ಲಿ ದಾಖಲಿಸಿರುವೆ ಎಂದು ಹೇಳಿದ್ದಾರೆ.

ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.