ETV Bharat / crime

ಇಸ್ರೇಲ್ ರಾಯಭಾರ ಕಚೇರಿ ಸ್ಫೋಟದ ಹಿಂದೆ ಇರಾನ್​​ ಕೈವಾಡ ಶಂಕೆ: ಪೊಲೀಸರಿಗೆ ಸಿಕ್ಕ ಪತ್ರದಲ್ಲೇನಿದೆ?

author img

By

Published : Jan 30, 2021, 9:28 AM IST

ID blast near Israel Embassy
ದೆಹಲಿಯ ಇಸ್ರೇಲ್ ರಾಯಭಾರ ಕಚೇರಿ ಬಳಿ ಸ್ಫೋಟದ ಹಿಂದೆ ಇರಾನ್​​ ಕೈವಾಡ?

ಇಸ್ರೇಲ್ ರಾಯಭಾರ ಕಚೇರಿಗೆ ಬಂದಿರುವ ಪತ್ರವೊಂದರಲ್ಲಿ ಹತ್ಯೆಯಾಗಿದ್ದ ಇರಾನ್​​ನ ಇಬ್ಬರು ಹುತಾತ್ಮರ ಹೆಸರುಗಳನ್ನು ಬರೆಯಲಾಗಿದ್ದು, ಸ್ಫೋಟದ ಹಿಂದೆ ಇರಾನ್​​ ಕುತಂತ್ರವಿದೆ ಎಂಬ ಅನುಮಾನಗಳು ಮೂಡಿವೆ.

ನವದೆಹಲಿ: ದೆಹಲಿಯಲ್ಲಿನ ಇಸ್ರೇಲ್ ರಾಯಭಾರ ಕಚೇರಿ ಬಳಿ ಸ್ಫೋಟ ಸಂಬಂಧ ಸ್ಫೋಟಕ ಮಾಹಿತಿಯೊಂದು ಹೊರಬಂದಿದೆ. ದೆಹಲಿ ಪೊಲೀಸರಿಗೆ ಪತ್ರವೊಂದು ಸಿಕ್ಕಿದ್ದು, ಕೃತ್ಯದ ಹಿಂದೆ ಇರಾನ್​ ಕೈವಾಡವಿದೆ ಎಂದು ಹೇಳಲಾಗಿದೆ.

ಇಸ್ರೇಲ್ ರಾಯಭಾರ ಕಚೇರಿಗೆ ಬಂದಿರುವ ಈ ಪತ್ರದಲ್ಲಿ ಇರಾನಿನ ಇಬ್ಬರು ಹುತಾತ್ಮರ ಹೆಸರುಗಳನ್ನು ಬರೆಯಲಾಗಿದೆ. ಇರಾನ್​​ನ ಮೇಜರ್‌ ಜನರಲ್‌ ಕಾಸಿಮ್‌ ಸುಲೇಮಾನಿ ಹಾಗೂ ಪರಮಾಣು ವಿಜ್ಞಾನಿ ಮೊಹ್ಸೆನ್ ಫಕ್ರಿಜಾದ್​ ಹೆಸರಗಳನ್ನು ಬರೆಯಲಾಗಿದೆ. ಪತ್ರದ ಕುರಿತ ಹೆಚ್ಚಿನ ಮಾಹಿತಿಯನ್ನು ನಿರೀಕ್ಷಿಸಲಾಗಿದೆ.

ಇದನ್ನೂ ಓದಿ: ದೆಹಲಿ ಇಸ್ರೇಲ್ ರಾಯಭಾರ ಕಚೇರಿ ಎದುರು ಐಇಡಿ ಸ್ಫೋಟ: 2012ರಲ್ಲೂ ನಡೆದಿತ್ತು ಕೃತ್ಯ

2020ರ ಜನವರಿ 3ರಂದು ಬಾಗ್ದಾದ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಮೆರಿಕದ ಪಡೆಗಳು​ ನಡೆಸಿದ ವೈಮಾನಿಕ ದಾಳಿಯಲ್ಲಿ ಇರಾಕ್​ ಹಾಗೂ ಇರಾನ್​ನ ಹಶೆದ್ ಅಲ್-ಶಾಬಿ ಮಿಲಿಟರಿ ಪಡೆಯ ಮೇಜರ್‌ ಜನರಲ್‌ ಕಾಸಿಮ್‌ ಸುಲೇಮಾನಿ ಹತ್ಯೆಯಾಗಿದ್ದರು. ಕಳೆದ ನವೆಂಬರ್​ನಲ್ಲಿ ಇರಾನ್​ನ ಪರಮಾಣು ಯೋಜನೆಗಳ ಅತ್ಯಂತ ಉನ್ನತ ವಿಜ್ಞಾನಿ ಮೊಹ್ಸೆನ್ ಫಕ್ರಿಜಾದೆ ಅವರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು.

ನಿನ್ನೆ ಸಂಜೆ ದೆಹಲಿಯ ಔರಂಗಾಜೇಬ್​ ರಸ್ತೆಯಲ್ಲಿರುವ ಇಸ್ರೇಲ್ ರಾಯಭಾರ ಕಚೇರಿ ಬಳಿ ಸುಧಾರಿತ ಸ್ಫೋಟಕ (ಐಇಡಿ) ಸಿಡಿದಿದೆ. 4 ರಿಂದ 5 ಕಾರುಗಳಿಗೆ ಹಾನಿಯಾಗಿದ್ದು, ಘಟನೆಯಲ್ಲಿ ಯಾವುದೇ ಪ್ರಾಣಹಾನಿಯಾಗಿಲ್ಲ. ದೆಹಲಿ ಪೊಲೀಸರ ವಿಶೇಷ ತಂಡ ಸ್ಥಳದಲ್ಲೇ ಬೀಡುಬಿಟ್ಟಿದ್ದು ತನಿಖೆ ನಡೆಸುತ್ತಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.