ETV Bharat / crime

Child Sexual Abuse: ಅಮ್ಮಾ ನನಗೆ ತುಂಬಾ ನೋವಾಗ್ತಿದೆ.. ಆ ಅಂಕಲ್‌ ಏನೋ ಮಾಡಿದ್ರು..

author img

By

Published : Oct 8, 2021, 5:24 PM IST

Updated : Oct 8, 2021, 7:28 PM IST

child sexual abuse case filed in nirmal district
Child Sexual Abuse: ಅಮ್ಮಾ ನನಗೆ ತುಂಬಾ ನೋವಾಗ್ತಿದೆ...ಆ ಅಂಕಲ್‌ ಏನೋ ಮಾಡಿದ್ರು...

45 ವರ್ಷದ ಕಿರಾತಕನೊಬ್ಬ 3 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ನಡೆಸಿರುವ ಅಮಾನವೀಯ ಘಟನೆ ತೆಲಂಗಾಣದ ನಿರ್ಮಲಾ ಜಿಲ್ಲೆಯಲ್ಲಿ ನಡೆದಿದೆ. ಸಂತ್ರಸ್ತೆ ತನ್ನ ತಾಯಿಗೆ ಕೃತ್ಯದ ಬಗ್ಗೆ ವಿವರಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.

ನಿರ್ಮಲಾ(ತೆಲಂಗಾಣ): ಮೂರು ವರ್ಷದ ಬಾಲಕಿ ಮೇಲೆ ಸ್ಥಳೀಯ ವ್ಯಕ್ತಿಯೊಬ್ಬ ಅತ್ಯಾಚಾರ ಮಾಡಿರುವ ಆರೋಪ ತೆಲಂಗಾಣದ ನಿರ್ಮಲಾ ಜಿಲ್ಲೆಯಲ್ಲಿ ನಡೆದಿದೆ. ಗೋಲ್ಡ್‌ ಫಂಕ್ಷನ್‌ ಹಾಲ್‌ ಸಮೀಪದಲ್ಲಿ ಈ ಅಮಾನವೀಯ ಕೃತ್ಯ ನಡೆದಿದೆ. ಘಟನೆ ಬಳಿಕ ತನ್ನ ತಾಯಿ ಬಳಿ ಹೋದ ಬಾಲಕಿ ಅಮ್ಮ ತುಂಬಾ ನೋವಾಗುತ್ತಿದೆ ಎಂದು ಹೇಳಿದ್ದಾಳೆ. ಇದರಿಂದ ಕಂಗಾಲಾದ ತಾಯಿ ಏನಾಯ್ತು ಎಂದು ಕೇಳಿದಾಗ ಬಾಲಕಿ ನಡೆದ ಘಟನೆಯನ್ನು ವಿವರಿಸಿದ್ದಾಳೆ.

ಫಂಕ್ಷನ್‌ ಹಾಲ್‌ ಬಳಿ ಇಬ್ಬರು ಬಾಲಕಿಯರೊಂದಿಗೆ ಸಂತ್ರಸ್ತೆ ಆಟವಾಡುತ್ತಿದ್ದಾಗ ಅಲ್ಲಿಗೆ ಬಂದ 45 ವರ್ಷದ ನಾರಾಯಣ ಎಂಬ ಆರೋಪಿ, ಚಾಕೋಲೆಟ್‌ ಕೊಡಿಸುವುದಾಗಿ ಅಲ್ಲಿಂದ ಬಾಲಕಿಯನ್ನು ಕರೆದುಕೊಂಡು ಹೋಗಿದ್ದಾನೆ. ನಿರ್ಜನ ಪ್ರದೇಶದಲ್ಲಿ ಅತ್ಯಾಚಾರ ಎಸಗಿದ್ದಾನೆ. ಮಗು ಜೋರಾಗಿ ಅತ್ತಾಗ ಆಕೆಯನ್ನು ಅಲ್ಲೇ ಬಿಟ್ಟು ಪರಾರಿಯಾಗಿದ್ದಾನೆ. ಮನೆ ಸಮೀಪವೇ ಇದ್ದ ಕಾರಣ ಸಂತ್ರಸ್ತ ಬಾಲಕಿ ಮನೆಗೆ ಬಂದಿದ್ದಾಳೆ. ತುಂಬಾ ನೋವಾಗುತ್ತೆ ಎಂದು ಅಳುತ್ತಾ ಬಂದು ತನ್ನ ತಾಯಿಗೆ ನಡೆದ ಘಟನೆಯನ್ನು ಹೇಳಿದ್ದಾಳೆ.

ಕೃತ್ಯದ ಬಗ್ಗೆ ತಿಳಿದ ಬಾಲಕಿಯ ಕುಟುಂಬಸ್ಥರು ಹಾಗೂ ಸಂಬಂಧಿಕರು ಆರೋಪಿಯನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ವಿಷಯ ಎಲ್ಲೆಡೆ ಗೊತ್ತಾಗುತ್ತಿದ್ದಂತೆ ಸ್ಥಳೀಯರು ಪೊಲೀಸ್‌ ಠಾಣೆ ಬಳಿ ಬಂದು ಪ್ರತಿಭಟನೆ ಮಾಡಿದ್ದಾರೆ. ಆರೋಪಿಯನ್ನು ತಮಗೆ ಒಪ್ಪಿಸಬೇಕೆಂದು ಒತ್ತಾಯ ಮಾಡಿದ್ದಾರೆ.

ಪೋಕ್ಸೋ ಪ್ರಕರಣ ದಾಖಲು

ಘಟನೆ ಬಗ್ಗೆ ಮಾಹಿತಿ ನೀಡಿರುವ ನಿರ್ಮಲಾ ಜಿಲ್ಲಾ ಎಸ್ಪಿ ರಾಮ್‌ ರೆಡ್ಡಿ, ಅತ್ಯಾಚಾರ ಎಸಗಿದ ಆರೋಪಿಯನ್ನು ಬಂಧಿಸಿರುವುದಾಗಿ ತಿಳಿಸಿದ್ದಾರೆ. ಆರೋಪಿ ನಾರಾಯಣ ವಿರುದ್ಧ ಪೋಕ್ಸೋದಡಿ ಪ್ರಕರಣ ದಾಖಲಿಸಿ ಆತನನ್ನು ಜೈಲಿಗಟ್ಟಲಾಗಿದೆ. ಸಂತ್ರಸ್ತೆಯ ಕುಟುಂಬಕ್ಕೆ ಎಲ್ಲ ರೀತಿಯ ನ್ಯಾಯ ಒದಗಿಸುವ ಕೆಲ ಸಮಾಡುತ್ತೇವೆ ಎಂದು ಎಸ್ಪಿ ಭರವಸೆ ನೀಡಿದ್ದಾರೆ.

Last Updated :Oct 8, 2021, 7:28 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.