ETV Bharat / crime

ಮಣ್ಣು ಮುಕ್ಕುವ ಹಾವು ಕಳ್ಳಸಾಗಣೆ ಮಾಡುತ್ತಿದ್ದ ನಾಲ್ವರು ಅರೆಸ್ಟ್​

author img

By

Published : Mar 20, 2021, 11:32 AM IST

Four people arrested for smuggling red sand boa snake
ರೆಡ್ ಸ್ಯಾಂಡ್ ಬೋವಾ

ಔಷಧಗಳು ಹಾಗೂ ಸೌಂದರ್ಯವರ್ಧಕಗಳ ತಯಾರಿಕೆಗೆ ಬಳಸುವ ವಿಷಕಾರಿಯಲ್ಲದ ಮಣ್ಣು ಮುಕ್ಕುವ ಹಾವನ್ನ ಕಳ್ಳಸಾಗಣೆ ಮಾಡುತ್ತಿದ್ದ ನಾಲ್ವರು ಅರೆಸ್ಟ್​ ಆಗಿದ್ದಾರೆ.

ರಾಯ್​ಪುರ (ಛತ್ತೀಸ್​ಗಢ): ಅಪರೂಪದ ಜಾತಿಯ 'ಮಣ್ಣು ಮುಕ್ಕುವ ಹಾವು' ಅಥವಾ 'ರೆಡ್ ಸ್ಯಾಂಡ್ ಬೋವಾ' ಹಾವನ್ನು ಕಳ್ಳಸಾಗಣೆ ಮಾಡುತ್ತಿದ್ದ ನಾಲ್ವರನ್ನು ಛತ್ತೀಸ್​ಗಢದ ರಾಯ್​ಪುರ ಪೊಲೀಸರು ಬಂಧಿಸಿದ್ದಾರೆ.

ಆರೋಪಿಗಳು ಕೇರಳ ಮೂಲದವರಾಗಿದ್ದು, ಆಂಧ್ರ ಪ್ರದೇಶದಿಂದ 10 ಲಕ್ಷ ರೂ.ಗೆ ಖರೀದಿಸಿ ಹಾವನ್ನು ತಂದಿದ್ದರು. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಈ ಹಾವಿನ ಬೆಲೆ ಕೋಟಿ ರೂ.ಇದೆ. ಕಾರಿನ ಮೂಲಕ ಸಾಗಿಸಲಾಗುತ್ತಿದ್ದ ಹಾವಿನ ಜೊತೆ, ಐದು ಮೊಬೈಲ್ ಫೋನ್ ಮತ್ತು ಕಾರನ್ನು ಸಹ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಸುರಕ್ಷಿತವಾಗಿ ಹಾವನ್ನು ಅರಣ್ಯ ಇಲಾಖೆಗೆ ಒಪ್ಪಿಸಿದ್ದಾರೆ.

Four people arrested for smuggling red sand boa snake
ಆರೋಪಿಗಳು

ಈ ಹಾವಿನ ವಿಶೇಷತೆ ಏನು?

ಮಣ್ಣು ಮುಕ್ಕುವ ಹಾವನ್ನು ಎರಡು ಮುಖದ ಹಾವು ಎಂದೂ ಕರೆಯುತ್ತಾರೆ. ಎರಡು ಮುಖದ ಹಾವುಗಳು ಅದೃಷ್ಟ, ಸಂಪತ್ತು ತರುತ್ತದೆ ಎಂದು ಜನರು ನಂಬಿದ್ದಾರೆ. ವಿಷಕಾರಿಯಲ್ಲದ ಹಾವು ಇದಾಗಿದ್ದು, ಔಷಧಗಳು ಹಾಗೂ ಸೌಂದರ್ಯವರ್ಧಕಗಳ ತಯಾರಿಕೆಗೆ ಬಳಸುತ್ತಾರೆ. ಕೆಲವರು ಇದನ್ನು ಮಾಟ-ಮಂತ್ರ ಮಾಡಲು ದುರುಪಯೋಗ ಪಡಿಸಿಕೊಳ್ಳುತ್ತಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.